Breaking
Tue. Dec 17th, 2024

ನ್ಯಾನೋ ಯೂರಿಯಾ ಬಳಸುವ ವಿಧಾನ ಮತ್ತು ಅದರ ಉಪಯೋಗಗಳು

By mveeresh277 Sep1,2023 #iffco #nano uriya
Spread the love

ನ್ಯಾನೋ ಯೂರಿಯಾದ ಉಪಯೋಗಗಳು :

ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ (20-50nm) ಬಳಸುವುದರಿಂದ ಬೆಳೆಗೆ ಶೇಕಡಾ 8೦ ರಷ್ಟು ಉಪಯೋಗವಾಗುತ್ತದೆ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಮತ್ತು ಬೇರು ಬೆಳವಣಿಗೆಯಾಗುತ್ತದೆ. ಇದು ಸಸ್ಯಗಳೊಳಗಿನ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಸಂಯೋಚಿಸುವ ಮಾರ್ಗಗಳನ್ನು ಪ್ರಚೋದಿಸುತ್ತದೆ.

ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಸಾಮಾನ್ಯವಾಗಿ ಯೂರಿಯಾ ಬಳಕೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ರೈತರು ಇದನ್ನು ಸುಲಭವಾಗಿ ಶೇಖರಿಸಿ, ಸಾಗಾಣಿಕೆ ಮಾಡಬಹುದು. ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವುದರಲ್ಲಿ ಸಹಕರಿಸುತ್ತದೆ.

ನ್ಯಾನೋ ಯೂರಿಯಾದ ಗುಣಲಕ್ಷಣಗಳು:

ಇದು ನೀರಿನಲ್ಲಿ ಸಮವಾಗಿ ಹರಡಿದ ಶೇಕಡಾ 4 ರಷ್ಟು ಒಟ್ಟು ಸಾರಜನಕವನ್ನು ಹೊಂದಿರುತ್ತದೆ. ನ್ಯಾನೊ ಸಾರಜನಕ ಕಣದ ಗಾತ್ರವು 20 ರಿಂದ 50 ನ್ಯಾನೋ ಮೀಟರ್ ವರೆಗೆ ಇರುತ್ತದೆ ನ್ಯಾನೊ ಯೂರಿಯಾದಲ್ಲಿನ ಸಾರಜನಕವು ಸಸ್ಯದೊಳಗೆ ಹೈಡೋಅಸಿಸ್ ಆಗಿ ಅಮೋನಿಯಾಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ.

ಆಗಸ್ಟ್ ತಿಂಗಳಿನ ಅನ್ನ ಭಾಗ್ಯ ಹಣ ಜಮಾ ಆಗಿದೆ, ಕೂಡಲೇ ಸ್ಟೇಟಸ್ ಚೆಕ್ ಮಾಡಿ, 25 ಲಕ್ಷ ಹೆಚ್ಚುವರಿ ಬಿಪಿಎಲ್ ಕಾರ್ಡ್ ಗಳಿಗೆ ಜಮಾ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಗೆ ಮಾಡುವುದು ಹೇಗೆ?, ಇಲ್ಲಿದೆ ಸಂಪೂರ್ಣ ಮಾಹಿತಿ

ಗೃಹಲಕ್ಷ್ಮಿ ಹಣದ ಜಮಾ ಮೆಸೇಜ್ ಬಂದಿದೆಯಾ?, ಜಮಾ ಸ್ಟೇಟಸ್ ಚೆಕ್ ಮಾಡಿ*

ಟ್ಯಾಕ್ಸಿ, ಗೂಡ್ಸ್ , ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿ ಮಾಡಲು 3 ಲಕ್ಷ ಸಹಾಯಧನ, ಸ್ವಾವಲಂಬಿ ಸಾರಥಿ ಯೋಜನೆ

Related Post

Leave a Reply

Your email address will not be published. Required fields are marked *