ಮಹಿಳೆಯರಿಗೆ 5 ಹೊಸ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ. ಕರ್ನಾಟಕ ಹಾಗೂ ಕೆಲ ರಾಜ್ಯಗಳಲ್ಲಿ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಕೇಂದ್ರದಲ್ಲೂ ಇದೇ ಪ್ರಯೋಗಕ್ಕೆ ದೊಡ್ಡ ಮಟ್ಟದಲ್ಲಿ ಕೈಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ‘ಮಹಾಲಕ್ಷ್ಮೀ ಗ್ಯಾರಂಟಿ’ ಯೋಜನೆಯಡಿ ಪ್ರತಿ ವರ್ಷ 1 ಲಕ್ಷ ರು.
ನಗದು ನೀಡುವುದಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಇದರ ಜೊತೆಗೆ, ಕೇಂದ್ರ ಸರ್ಕಾರದ ನೌಕರಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದು, ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಕೇಂದ್ರ ಸರ್ಕಾರದ ವೇತನವನ್ನು ದುಪ್ಪಟ್ಟು ಮಾಡುವುದು, ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಹಾಸ್ಟೆಲ್ ತೆರೆಯುವುದು ಹಾಗೂ ಎಲ್ಲಾ ಪಂಚಾಯ್ತಿಗಳಲ್ಲೂ ಅರೆ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಹೆಸರಿನಲ್ಲಿ ರಾಹುಲ್ ಗಾಂಧಿ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದ ಧುಳೆಯಲ್ಲಿ ಬುಧವಾರ ನಡೆದ ಮಹಿಳಾ ಸಮಾವೇಶದಲ್ಲಿ ರಾಹುಲ್ ಈ ಘೋಷಣೆಗಳನ್ನು ಮಾಡುತ್ತಿದ್ದಂತೆ ಈ ಬಗ್ಗೆ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನಮ್ಮ ಭರವಸೆಗಳು ಬರೀ ಭರವಸೆಗಳಲ್ಲ. ಇವುಗಳನ್ನು ನಾವು ಜಾರಿಗೊಳಿಸುವುದು ಶಿಲಾಶಾಸನದಷ್ಟೇ ಸತ್ಯ. ನಾರಿ ನ್ಯಾಯ ಗ್ಯಾರಂಟಿಗಳೊಂದಿಗೆ ನಮ್ಮ ಪಕ್ಷವು ದೇಶದ ಮಹಿಳೆಯರಿಗಾಗಿ ಹೊಸ ಅಜೆಂಡಾ ನಿಗದಿಪಡಿಸುತ್ತಿದೆ’ ಎಂದು ತಿಳಿಸಿದ್ದಾರೆ.
ಬರದಲ್ಲಿ ಕೂಡ ಜೋಳದ ಬೆಲೆ ದಿಢೀರ್ ಕುಸಿತ ಕಣ್ಣೀರಿಟ್ಟ ರೈತ
ಕಳೆದ ಹತ್ತು ದಿನಗಳಿಂದ ಜೋಳದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಬರುತ್ತಿದ್ದು, ಗದಗ ರೈತರು ಕಂಗಾಲಾಗಿದ್ದಾರೆ. ಮೊನ್ನೆಯಷ್ಟೇ ಬ್ಯಾಡಗಿ ಮೆಣಸಿನಕಾಯಿ ದರ ಕುಸಿತದ ಹಿನ್ನೆಲೆಯಲ್ಲಿ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಇದೀಗ ಬರ ಪರಿಸ್ಥಿತಿಯ ನಡುವೆ ಜೋಳದ ಬೆಳೆಯು ಕುಸಿತ ಕಂಡಿದ್ದು, ರೈತರು ಸತತ ನಷ್ಟ ಎದುರಿಸುವಂತಾಗಿದೆ.
ಜೋಳದ ಬೆಲೆ ಕಳೆದ ತಿಂಗಳು ಕ್ವಿಂಟಲ್‌ಗೆ ಸುಮಾರು 7,000-8,000 ರೂ.ಗಳಿದ್ದರೆ, ಸದ್ಯದ ಬೆಲೆ 2,500-3,500 ರೂ.ಗೆ ಕುಸಿದಿದೆ. ಈ ವರ್ಷ ಅಲ್ಪ ಪ್ರಮಾಣದ ಮಳೆಯಿಂದಾಗಿ ಬೆಳೆ ಗುಣಮಟ್ಟವು ಕಳಪೆಯಾಗಿದ್ದು, ರೈತರು ಹೆಚ್ಚು ಜೋಳವನ್ನು ಮಾರುಕಟ್ಟೆಗೆ ತರುವುದನ್ನು ಮುಂದುವರಿಸಿದ್ದರಿಂದ ಬೆಲೆಗಳಲ್ಲಿ ದಿಢೀರ್ ಕುಸಿತ ಕಾಣುತ್ತಿದೆ. ಸಾಕಷ್ಟು ರೈತರು ಜೋಳದ ಕೃಷಿಗೆ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಬಿಳಿಜೋಳ, ಮೆಣಸಿನಕಾಯಿ ಬೆಳೆ ಬೆಳೆದ ರೈತರು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾರಾಟ ಮಾಡಲು ಮುಂದಾಗಿದ್ದು, ರೈತರಿಗೆ ಲಾಭ ಮಾಡಿಕೊಡದೆ ಅದು ಸಾಗಣೆ ವೆಚ್ಚಕ್ಕಷ್ಟೇ ಸರಿದೂಗಿಸಿದೆ. ಈಮಧ್ಯೆ, ಕೆಲವು ರೈತರು ಭವಿಷ್ಯದಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಜೋಳವನ್ನು ಗೋದಾಮಿನಲ್ಲಿ ಸಂಗ್ರಹಿಸಿದ್ದಾರೆ. ಗದಗದ ರೈತ ಪ್ರಕಾಶ ನೀರಲಗಿ ಮಾತನಾಡಿ, ಜೋಳವನ್ನು ಮಾರಲು ಮಾರುಕಟ್ಟೆಗೆ ಹೋದಾಗ ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯಬಹುದು. ಬರ ಪರಿಸ್ಥಿತಿಗಳು ಅನಿವಾರ್ಯ, ಆದರೆ ಬಿತ್ತನೆ ಮಾಡುವ ಮೊದಲು ರೈತರು ನಮ್ಮನ್ನು ಭೇಟಿ ಮಾಡಿದರೆ ನಾವು ಅವರಿಗೆ ಸಹಾಯ ಮಾಡುತ್ತೇವೆ ಎನ್ನುತ್ತಾರೆ.
ಡೇ ನಲ್ಮ ಯೋಜನೆಯಡಿ ಅರ್ಜಿ ಆಹ್ವಾನ
ಡೇ ನಲ್ಮ ಯೋಜನೆಯ ಬೀದಿ ಬದಿ ವ್ಯಾಪಾರಿಗಳ ಮತ್ತು ಆತ್ಮ ನಿರ್ಭರ ನಿಧಿ ಯೋಜನೆಯಡಿ ಕರ್ನಾಟಕ ಬೀದಿ ಬದಿ ವ್ಯಾಪಾರ ನಿಯಮ -2019 ರಂತೆ ನಗರ ಸ್ಥಳೀಯ ಸಂಸ್ಥೆಯ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳ ಕುಂದುಕೊರತೆ ಸಮಿತಿಗೆ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಧ್ಯಕ್ಷರು : ನಿವೃತ್ತ ಸಿವಿಲ್ ನ್ಯಾಯಾಧೀಶರಾಗಿರಬೇಕು ( 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು). ಸ್ಥಳೀಯ ಸದಸ್ಯರು : ರಾಜ್ಯ ಸರ್ಕಾರದ ನಿವೃತ್ತ ವರ್ಗ-1 ಅಧಿಕಾರಿಯಾಗಿರಬೇಕು. (65 ವರ್ಷಕ್ಕಂತ ಕಡಿಮೆ ವಯಸ್ಸಿನವರಾಗಿರಬೇಕು).
ಸ್ಥಳೀಯ ಪ್ರದೇಶದಲ್ಲಿ ನಿಷ್ಪಾಪ ಸೇವಾ ದಾಖಲೆಯನ್ನು ಹೊಂದಿರಬೇಕು. ಪ್ರಸ್ತಾವಿತ ಸಮಿತಿಯ ಅವಧಿಯು ಬಿಡುಗಡೆಯಾದ ದಿನಾಂಕದಿಂದ ಐದು ವರ್ಷಗಳವರೆಗೆ ಚಲಾವಣೆಯಲ್ಲಿರುತ್ತದೆ. ಅರ್ಜಿಗಳನ್ನು ಪ್ರಕಟಣೆ ಪ್ರಕಟಗೊಂಡ 30 ದಿನಗಳ ಒಳಗಾಗಿ ಮುಖ್ಯಾಧಿಕಾರಿ ಪುರಸಭೆ ಕಾರ್ಯಾಲಯ ನರಗುಂದ ಇವರ ಕಾರ್ಯಾಲಯದ ಡೇ-ನಲ್ಮ ವಿಭಾಗದಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನರಗುಂದ ಪುರಸಭೆ ಮುಖ್ಯಾಧಿಕಾರಿಗಳ ಕಾರ್ಯಾಲಯದ ಡೇ ನಲ್ಮ ವಿಭಾಗದಲ್ಲಿ ಸಂಪರ್ಕಿಸಬಹುದಾಗಿದೆ.