2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರವನ್ನು ಜಿಲ್ಲೆಯ 1,13,328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಜಮೆ ಆಗಿರುತ್ತದೆ. ಈಗಾಗಲೇ ಜಮೆ ಆದ ರೈತ ಫಲಾನುಭವಿಗಳಿಗೆ ಪರಿಹಾರದ ಬಾಕಿ ಮೊತ್ತವನ್ನು ಜಮೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.
ಈ ಜಿಲ್ಲೆಯಲ್ಲಿ ಯಾವ ರೈತರಿಗೆ ಮೊದಲನೇ ಹಂತದ ಬರ ಪರಿಹಾರದ ಮೊತ್ತವು ಈ ವರೆಗೂ ಜಮೆ ಆಗಿರುವುದಿಲ್ಲವೋ ಅವರು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ತೆರೆಯಲಾದ ಹೆಲ್ಸ್ ಡೆಸ್ಕ್‌ಗೆ ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎಂ ಆಗಲು ಆತುರ ಬೇಡ, ತರಾತುರಿ ನಿರ್ಧಾರದಿಂದ ಹಿನ್ನಡೆಯಾಗುವ ಸಾಧ್ಯತೆ : ಡಿಕೆ ಶಿವಕುಮಾರ್‌ಗೆ ವಿ ಸೋಮಣ್ಣ
ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅನಿವಾರ್ಯವಾಗಿದ್ದು, ಅವರಿಬ್ಬರ ಆಪ್ತರು ಪಕ್ಷಾತೀತವಾಗಿ ಇದು ಅನಗತ್ಯ ಎಂದು ಭಾವಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನೊಳಗಿನ ಒಕ್ಕಲಿಗ ನಾಯಕರ ನಡುವಿನ ಜಟಾಪಟಿಯಿಂದಾಗಿ ಸಮಸ್ಯೆ ಉಲ್ಬಣಗೊಂಡಿದೆ. ಈ ವಿಷಯದಲ್ಲಿ ಕುಮಾರಸ್ವಾಮಿ ಅಥವಾ ಶಿವಕುಮಾರ್ ಅವರ ಪರವಾಗಿ ಬಲವಾಗಿ ಕೆಲವು ನಾಯಕರು ನಿಂತಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಹಳೇ ಮೈಸೂರು ಭಾಗದ ಕೆಲವು ಬಿಜೆಪಿ ನಾಯಕರು ಸೇರಿದಂತೆ ಕೆಲವು ಒಕ್ಕಲಿಗೇತರ ನಾಯಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಿದ್ದಾರೆ.
ವೀರಶೈವ ಲಿಂಗಾಯತ ಸೋಮಣ್ಣ ಅವರು ಡಿಕೆ ಶಿವಕುಮಾರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದನ್ನು ಇಲ್ಲಿ ಗಮನಿಸಬಹುದು. ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಡಿಕೆ ಶಿವಕುಮಾರ್ ಅವರ ವಿರುದ್ದ ಹಳೇ ಮೈಸೂರು ಭಾಗದಾದ್ಯಂತ ಜೆಡಿಎಸ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಶಿವಕುಮಾರ್ ಅವರು ದೇವೇಗೌಡರ ಕುಟುಂಬವನ್ನು ಪ್ರಜ್ವಲ್ ಸಾಲಿಗೆ ಎಳೆದು ತರುವುದನ್ನು ಮುಂದುವರಿಸಿದರೆ, ಜೆಡಿಎಸ್ ತನ್ನನ್ನು ಪುನರ್ ಸಂಘಟಿಸಿಕೊಳ್ಳಲು ಇದನ್ನು ಅವಕಾಶವಾಗಿ ಬಳಸಿಕೊಳ್ಳುತ್ತದೆ. ಲೋಕಸಭಾ ಚುನಾವಣೆಯ ಫಲಿತಾಂಶವು ಪ್ರಾದೇಶಿಕ ಪಕ್ಷದ ಭವಿಷ್ಯದ ನಿರೀಕ್ಷೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಸಭೆ ನಡೆಸಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಜುಲೈನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮುನ್ನ ಪಕ್ಷ ಸಂಘಟನೆಯನ್ನು ಬಲಪಡಿಸಲು ಸದಸ್ಯತ್ವ ಅಭಿಯಾನವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು. ಮಂಡ್ಯ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನದಲ್ಲಿ ಜೆಡಿಎಸ್ ಪಕ್ಷ ಇನ್ನೂ ಶಕ್ತಿಯುತವಾಗಿದ್ದು, ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳ ಕೊರತೆ ಇಲ್ಲ ಎಂದು ತುಮಕೂರು ಮಾಜಿ ಮೇಯರ್ ಟಿಆರ್ ನಾಗರಾಜು ಹೇಳಿದರು.
ಬಡತನದಲ್ಲಿ ಪ್ರತಿಭಾ ಸಾಧನೆ, ಶೇ 97.28 ಅಂಕ
ಅಳವಂಡಿ : ಗ್ರಾಮಿಣ ಭಾಗದಲ್ಲಿ ಅನೇಕ ಮೂಲ ಸೌಕರ್ಯಗಳ ಕೊರತೆ ನಡುವೆ ಹಾಗೂ ಬಡತನವನ್ನು ಮೆಟ್ಟಿ ನಿಂತು ವಿದ್ಯಾರ್ಥಿನಿಯೊಬ್ಬರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಳವಂಡಿ ಗ್ರಾಮದ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರತಿಭಾ ಕಂಬಳಿ ಶೇ 97.28 ಅಂಕ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ.
ಕೊಪ್ಪಳ ತಾಲ್ಲೂಕಿನ ಗಟ್ಟೂರು ಗ್ರಾಮದ ರೇಣಪ್ಪ ಹಾಗೂ ನೀಲಮ್ಮ ದಂಪತಿಯ ಪುತ್ರಿ ಪ್ರತಿಭಾ ಕಂಬಳಿ, ಈಕೆಯ ಪಾಲಕರು ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ನಂಬಿ ಜೀವನ ಸಾಗಿಸುತ್ತಿದ್ದಾರೆ. 1ರಿಂದ 7ನೇ ತರಗತಿಯಲ್ಲಿ ಗಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ನಂತರ ಅಳವಂಡಿಯ ಬಾಲಕಿಯರ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದಾರೆ. ಪ್ರತಿಭಾ ವಸತಿ ನಿಲಯದಲ್ಲಿ ಇದ್ದು ಅಭ್ಯಾಸ ಮಾಡಿದ್ದಾರೆ. ಪ್ರತಿಭಾ ಅವರ ಮನೆಯಲ್ಲಿ ಅತ್ಯಂತ ಬಡತನ ಇದ್ದರು ಕೂಡ ಪ್ರತಿಭಾಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅವರ ಸಂಬಂಧಿಕರಾದ ಶಿಕ್ಷಕ ನಿಂಗಪ್ಪ ಕಂಬಳಿ, ಸುರೇಶ ಕಂಬಳಿ ಹಾಗೂ ಶಾಲೆಯ ಶಿಕ್ಷಕರು ಪ್ರತಿಭಾ ಶಿಕ್ಷಣಕ್ಕೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿರೇನಗನೂರು ಸರಕಾರಿ ಪ್ರೌಢಶಾಲೆ ಶೇಕಡ 62.96% ವೀರಪುರ ವಲಯಕ್ಕೆ ಪ್ರಥಮ.
ಲಿಂಗಸಗೂರು : ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಸರಕಾರಿ ಪ್ರೌಢಶಾಲೆಯ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡಿ ವೀರಾಪುರ ವಲಯದಲ್ಲಿಯೇ ಪ್ರಥಮ ಸ್ಥಾನ ಗಳಿಸುವಂತೆ ಮಾಡಿದ್ದಾರೆ. ಒಟ್ಟು ಶಾಲೆಯ ಫಲಿತಾಂಶ 62.96% ಆಗಿದ್ದು. ಶಾಲೆಯ ವಿದ್ಯಾರ್ಥಿನಿ ಸುಸನ್ನ ತಂದೆ ನಾಗಪ್ಪ ಬಂಡೆಬಾವಿ 79.04% ಪ್ರಥಮ ಸ್ಥಾನ.ಶಶಿಕಲಾ ತಂದೆ ಶಿವರಾಜ್ 76.80% ದ್ವಿತೀಯ ಸ್ಥಾನ.ಮತ್ತು ಬಸವರಾಜ ಸಿದ್ದಪ್ಪ 71.36% ಅಂಕ ಗಳಿಸಿ ಹಿರೇನಗನೂರು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಮುಖ್ಯಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರಿನ ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಮತ್ತು ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿ ಹರ್ಷ ವ್ಯಕ್ತ ಪಡಿಸಿದರು.
ಕಳೆದ ಸಾಲಿನಲ್ಲಿಯೂ ಹಿರೇನಗನೂರು ಸರಕಾರಿ ಪ್ರೌಢಶಾಲೆಯು ತಾಲೂಕಿನಲ್ಲಿಯೇ ದ್ವಿತೀಯ ಸ್ಥಾನ ಗಳಿಸಿತ್ತು.ಎಂದು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ತಿಳಿಸಿದರು.