ಆತ್ಮೀಯ ರಾಜ್ಯದ ರೈತರೇ, ಸರ್ಕಾರವು ರೈತರ ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ತಂದು ಅದರಿಂದ ರೈತರಿಗೆ ತುಂಬಾ ಉಪಯುಕ್ತಕರವಾದ ಲಾಭಗಳು ದೊರೆತಿವೆ. ಸರ್ಕಾರವು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ಹಲವಾರು ಯೋಜನೆಗಳನ್ನು ತಂದಿದೆ. ಈ ಯೋಜನೆಗಳನ್ನು ಪಡೆಯಲು ನಿಮಗೆ ನಿರ್ದಿಷ್ಟವಾದ ಸಮಯ ಮತ್ತು ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಹೊಂದಿಸುವುದು ತುಂಬಾ ಮುಖ್ಯವಾಗಿರುತ್ತದೆ. ರೈತರು ನಾವು ತಿಳಿಸುವ ಒಂದು ಪತ್ರ ನಿಮ್ಮ ಹತ್ತಿರ ಇದ್ದರೆ ಸಾಕು. ನೀವು ಅತಿ ಸುಲಭವಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಬರುವ ಎಲ್ಲ ಲಾಭವನ್ನು ಪಡೆಯಬಹುದು. ಏನಿದು ಪತ್ರ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಈ ಪತ್ರದ ಹೆಸರು ನೀರಾಕ್ಷೇಪಣಾ ಪತ್ರ. ಈ ಪತ್ರವನ್ನು ನೀವು ಹೊಂದಿದ್ದರೆ ಸಾಕು ಇಲಾಖೆಯಲ್ಲಿ ನೀಡುವ ಎಲ್ಲ ಸೌಲಭ್ಯಗಳು ನಿಮಗೆ ದೊರೆಯುತ್ತವೆ. ಈ ಪತ್ರವನ್ನು ಪಡೆಯಲು ತುಂಬಾ ಸುಲಭ ವಿಧಾನವಿದೆ. ಅದು ಹೇಗೆ ಅಂದು ನಾವು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ಈ ಪತ್ರಕ್ಕೆ ಇಂಗ್ಲಿಷ್ನಲ್ಲಿ no objection certificate ಎಂದು ಕರೆಯುತ್ತಾರೆ. ಅಂದರೆ ಯಾವುದೇ ಆಕ್ಷೇಪಣೆ ಇಲ್ಲದೆ ಎಲ್ಲಾ ಸೌಲಭ್ಯವನ್ನು ಪಡೆಯಬಹುದು ಎಂದರ್ಥ. ಈ ಪತ್ರವು ಬರೀ ಸಹಾಯಧನ ಪಡೆಯಲು ಮಾತ್ರವಲ್ಲ ಮತ್ತಲ್ಲದೆ ನೀವು ಯಾವುದಾದರೂ ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕಿಕೊಂಡರೆ ನೀವು ಈ ಪತ್ರವನ್ನು ತೋರಿಸಿ ನಿಮ್ಮ ಉತ್ತರವನ್ನು ಉತ್ತೀರ್ಣಗೊಳಿಸಿಕೊಳ್ಳಬಹುದು. ನೀವು ಈ ಪತ್ರವನ್ನು ಹೊಂದಿದ್ದರೆ ತುಂತುರು ನೀರಾವರಿ ಘಟಕ ಮತ್ತು ಬೇರೆ ಉಪಕರಣಗಳನ್ನು ಅತಿ ಸುಲಭವಾಗಿ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಎಲ್ಲಿ ಸಲ್ಲಿಸಬೇಕು?
ರೈತನ ಆಧಾರ್ ಕಾರ್ಡ್, ರೈತನ ಜಮೀನ ಪತ್ರ, ರೈತನ ಮೊಬೈಲ್ ಸಂಖ್ಯೆ, ರೈತನ ಫ್ರೂಟ್ಸ್ ಐಡಿ ಮತ್ತು ಅರ್ಜಿಯನ್ನು ತೆಗೆದುಕೊಂಡು ರೈತರು ತಮ್ಮ ಹಲ್ಲಿ ಯಾವ ಹೋಬಳಿಗೆ ಸೇರುತ್ತದೆಯೋ ಅಲ್ಲಿ ಇರುವ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಬೇಕಾಗುತ್ತದೆ. ನಂತರ ನೀವು ಅಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅಲ್ಲಿ ನೀವು ಅರ್ಜಿ ನಮೂನೆಯಲ್ಲಿ ಎಲ್ಲಾ ಸೂಕ್ತ ವಿಷಯಗಳನ್ನು ತುಂಬಿ ನಂತರ ಅಲ್ಲಿ ಇರುವ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಅಲ್ಲಿರುವ ತಾಂತ್ರಿಕ ಅಧಿಕಾರಿಗಳು ಅದನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ತಮ್ಮ ಮೇಲಿರುವ ಅಧಿಕಾರಿಗಳಿಗೆ ಅದನ್ನು ವರ್ಗಾಯಿಸುತ್ತಾರೆ. ಇಷ್ಟು ಮಾಡಿದ್ರೆ ಸಾಕು ನಿಮಗೆ ನೀರಾಕ್ಷೇಪಣಾ ಪತ್ರ ದೊರೆಯುತ್ತದೆ.