ಆತ್ಮೀಯ ರೈತ ಬಾಂಧವರೇ, ಇಲ್ಲಿ ನೀವು ಒಂದು ಉತ್ತಮವಾದ ಸಸಿಗಳನ್ನು ಮಾರಾಟ ಮಾಡುವ ಕಂಪನಿಯ ಬಗ್ಗೆ ತಿಳಿಯೋಣ. ಈ ಕಂಪನಿಯ ಹೆಸರು H. U. GUGLE BIOTECH PVT. LTD. ಈ ಕಂಪನಿಯು ಅಂಗಾಂಶ ಸಂಸ್ಕೃತಿಯನ್ನು ಬಳಸಿಕೊಂಡು ಅತಿ ಉತ್ತಮವಾದ ಸಸಿಗಳನ್ನು ಮತ್ತು ಗಿಡಗಳನ್ನು ಬೆಳೆಯುತ್ತಾರೆ. ಈ ಸಸಿಗಳು ರೈತರಿಗೆ ತುಂಬಾ ಉಪಯುಕ್ತವಾಗುತ್ತವೆ, ಏಕೆಂದರೆ ಇವುಗಳು ರೋಗ ಮತ್ತು ಕೀಟಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಈ ಸಸಿಗಳು ಲ್ಯಾಬ್ನಲ್ಲಿ ಉತ್ತಮವಾಗಿ ಬೆಳೆದ ಕಾರಣ ಹೆಚ್ಚಿನ ಪಸಲನ್ನು ಕೊಡುತ್ತವೆ. ಅದಕ್ಕಾಗಿ ರೈತಬಾಂಧವರು ಈ ಕಂಪನಿಯ ಸಸ್ಯಗಳನ್ನು ಖರೀದಿ ಮಾಡಿ ನಿಮ್ಮ ಹೊಲದಲ್ಲಿ ನೆಟ್ಟು ಯಥೇಚ್ಛವಾದ ಲಾಭವನ್ನು ಪಡೆಯಿರಿ. ಈ ಕಂಪನಿಯ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ.
ಹೆಚ್.ಯು.ಗುಗಳೆ: ಬಯೋಟೆಕ್ 2001ರಲ್ಲಿ ಸ್ಥಾಪನೆಯಾಗಿದ್ದು, ಬಹುದೊಡ್ಡ ಪ್ರಯೋಗಾಲಯ, ಉತ್ಸುವ ತಂತ್ರಜ್ಞಾನ, ಅಪ್ಪುತ್ತಮ ತಂತ್ರರನ್ನು, ಹೊಂದಿದ್ದು 18 ದಶ ಲಕ್ಷಕ್ಕೂ ಹೆಚ್ಚು ಅಂಗಾಂಶ ಕೃಷಿ ಸಸಿಗಳನ್ನು ತಯಾರಿಸುವ ದಕ್ಷತೆಯನ್ನು ಹೊಂದಿರುತ್ತದೆ. ಕಂಪನಿಯು ಎರಡು ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದ್ದು ಒಂದು ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ಮತ್ತೊಂದು ಮಹಾರಾಷ್ಟ್ರದ ಜಾಮ್ ಖಡ್‌ದಲ್ಲಿರುತ್ತದೆ.
H.u.gugle Biotech Private Limited 24 ಜೂನ್ 2003 ರಂದು ಸಂಘಟಿತವಾದ ಖಾಸಗಿ ಸಂಸ್ಥೆಯಾಗಿದೆ. ಇದನ್ನು ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲಾಗಿದೆ ಮತ್ತು ಬೆಂಗಳೂರಿನ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲಾಗಿದೆ. ಇದರ ಅಧಿಕೃತ ಷೇರು ಬಂಡವಾಳ ರೂ. 2,000,000 ಮತ್ತು ಅದರ ಪಾವತಿಸಿದ ಬಂಡವಾಳ ರೂ. 2,000,000. ಇದು ನೈಸರ್ಗಿಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನೆ ಮತ್ತು ಪ್ರಾಯೋಗಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. [ಈ ವರ್ಗವು ನೈಸರ್ಗಿಕ ವಿಜ್ಞಾನಗಳು, ವೈದ್ಯಕೀಯ ವಿಜ್ಞಾನಗಳು, ಕೃಷಿ ಮತ್ತು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಕ್ಷೇತ್ರಗಳಲ್ಲಿ ವ್ಯವಸ್ಥಿತ ಸೃಜನಶೀಲ ಕೆಲಸವನ್ನು ಒಳಗೊಂಡಿದೆ].
H.u.gugle Biotech Private Limited ನ ವಾರ್ಷಿಕ ಸಾಮಾನ್ಯ ಸಭೆ ಅನ್ನು ಕೊನೆಯದಾಗಿ 30 ನವೆಂಬರ್ 2021 ರಂದು ನಡೆಸಲಾಯಿತು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ಅದರ ಬ್ಯಾಲೆನ್ಸ್ ಶೀಟ್ ಅನ್ನು ಕೊನೆಯದಾಗಿ 31 ಮಾರ್ಚ್ 2021 ರಂದು ಸಲ್ಲಿಸಲಾಗಿದೆ.
ಎರಡು ಪ್ರಯೋಗಾಲಯಗಳು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗ ಡಿ.ಬಿ.ಟಿ. ಯಿಂದ ಮಾನ್ಯತೆ ಪಡೆದಿದ್ದು ಎನ್.ಸಿ.ಎಸ್ ಟಿ.ಸಿ.ಪಿ. ನಿಯಮಾನುಸಾರ ಗುಣಮಟ್ಟದ ಸಸಿಗಳನ್ನು ಉತ್ಪತ್ತಿ ಮಾಡಿ ಮಾರಾಟ ಮಾಡುತ್ತಿದ್ದೇವೆ.. ಗುಣಮಟ್ಟದ ಉತ್ಪಾದನೆಗಾಗಿ ಡಿ.ಐ.ಸಿ ಅಹಮದ್ ನಗರ, ಮಹಾರಾಷ್ಟ್ರ ಹಾಗೂ ಈಜೀವಗಾಂಧಿ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2009 ಪಡೆದಿರುತ್ತದೆ.
ನಿರಂತರ ಸಂಶೋಧನೆಯ ಫಲವಾಗಿ ಸಂಸ್ಥೆಯು ಬಾಳೆಯಲ್ಲದೆ ಗುಣಮಟ್ಟದ ಹಾಗೂ ಉತ್ಕೃಷ್ಟ ತಳಿಗಳ ದಾಳಿಂಬೆ, ನಿಂಬೆ, ತೇಗ, ಬಿದಿರು, ಗುಲಾಬಿ, ಜರ್ಬೆರಾ, ಆರ್ಕಿಡ್ಗಳು, ಸ್ವಾತಿಫಿಲಮ್, ಆಂಥೋರಿಯಂ ಮತ್ತು ಇತರೆ ಎಲೆಯ ಜಾತಿಯ ಒಳಾಂಗಣ ಸಸಿಗಳನ್ನು ಸಹ ಅಂಗಾಂಶ ಕೃಷಿ ಮೂಲಕ ಉತ್ಪಾದಿಸುತ್ತಿದೆ. ಹೆಚ್, ಯು, ಗುಗಳೆ ಬಯೋಟೆಕ್ ಸಂಸ್ಥೆಯು ದಾಳಿಂಬೆ ಅಂಗಾಂಶ ಕೃಷಿ ಸಸಿಗಳ ಉತ್ಪಾದನೆಗಾಗಿ ದಾಳಿಂಬೆ ಸಂಶೋಧನೆ ಕೇಂದ್ರ, (ಎನ್.ಆರ್.ಸಿ.ಪಿ) ಸೋಲಾಪುರ ಮತ್ತು ಎಸ್.ಟಿ.ಜಿ. ಮೂಲಕ ನಿಂಬೆ ಸಸಿಗಳ ಉತ್ಪಾದನೆಗಾಗಿ ಕಿತ್ತಳೆ ಸಂಶೋಧನೆ ಕೇಂದ್ರ (ಎನ್.ಆರ್.ಸಿ.ಸಿ.) ನಾಗಪುರ ಮತ್ತು ಬಿದಿರು ಸಸ್ಯಗಳ ಉತ್ಪಾದನೆಗಾಗಿ ಇನ್ಸಿಟ್ಯೂಟ್ ಆಫ್ ಹಿಮಾಲಯನ್ ಬಯೋರಿಸೋರ್ಸ್ ಟೆಕ್ನಾಲಜಿ ಪಲಂಪುರ ಇವರ ಜೊತೆ ತಾಂತ್ರಿಕ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಮರಗಳ ಜಾತಿಯ ತೇಗ ಸಸ್ಯಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ತಮಿಳುನಾಡಿನ ಕೊಯಂಬತ್ತೂರಿನ ಇನ್ಸ್ ಟ್ ಫಾರೆಸ್ಟ್ ಜೆನೆಸ್ಟಿಕ್ಸ್ ಮತ್ತು ಟ್ರಿ: ಬ್ರಿಂಗ್ ಸಂಸ್ಥೆಯೊಂದಿಗೆ ಪರವಾನಿಗೆ ಒಪ್ಪಂದ ಮಾಡಿಕೊಂಡಿದೆ.ಹೆಚ್.ಯು.ಗುಗಳೆ ಬಯೋಟೆಕ್ ಸಂಸ್ಥೆಯು ರೋಗ ಹಾಗೂ ಕೀಟಮುಕ್ತ ತಾಯಿ ಗಿಡಗಳ ಸಸ್ಯಾಗಾರ ಹೊಂದಿದ್ದು ವೈರಸ್ ಮುಕ್ತ ಹಾಗೂ ಪ್ರಾಮಾಣಿಕೃತ ಶುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ.
ಇ-ಮೇಲ್ – hugugleblr@gmail.com
info@hugugle.com
ಮೊಬೈಲ್ ಸಂಖ್ಯೆ – 9980645151 , 9448009717,9423162544
ಇದನ್ನೂ ಓದಿ :- ನಿಮ್ಮ ತಾಯಿಯ ಆಸ್ತಿಯಲ್ಲಿ ನೀವು ಪಾಲನ್ನು ಪಡೆದಿಲ್ಲವೇ ಪಾಲು ಪಡೆಯಬೇಕಾದರೆ ಏನು ಮಾಡಬೇಕು?
ಇದನ್ನೂ ಓದಿ :- ಬೆಳೆವಿಮಾ ಜಮಾ ಆಗಿದೆ ಒಂದೇ ನಿಮಿಷದಲ್ಲಿ ಚೆಕ್ ಮಾಡಿ