ಕೃಷಿ ಹೊಂಡ :-
(ಸ್ಥಳದ ಆಯ್ಕೆ, ವಿನ್ಯಾಸ, ಹೊದಿಕೆಗಳು, ನೀರಿನ ಸದ್ಬಳಕೆ, ಪಂಪುಗಳು ಮತ್ತು ಭಾಭವನ ನಿಯಂತ್ರಿಸುವ ಸಾಧನಗಳು)
ಕೃಷಿ ಭೂಮಿಯಿಂದ ಹರಿದು ಬರುವ ಹೆಚ್ಚುವರಿ ನೀರನ್ನು ಸಾಧ್ಯವಿರುವಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ, ಅಲ್ಲಿ ಸಂಗ್ರಹಿಸಿದ ನೀರನ್ನು ಬೆಳೆಗಳಿಗೆ ರಕ್ಷಕ ನೀರಾವರಿಯಂತೆ ಬಳಸುವುದರಿಂದ ಬೆಳೆಗಳಿಗಾಗುವ ಹಾನಿಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು ಮತ್ತು ಈ ರೀತಿ ಪೂರಕ ನೀರಾವರಿಯಿಂದ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಬಹುದು.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಮಳೆಯ ಹಂಚಿಕೆಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಒಟ್ಟು ವಾರ್ಷಿಕ ಮಳೆಯಲ್ಲಿ ಬಹಳ ಬದಲಾವಣೆಯಾಗದಿದ್ದರೂ ಮಳೆಯ ದಿನಗಳು ಕಡಿಮೆಯಾಗಿವೆ, ಬೀಳುವ ಮಳೆಯ ತೀವ್ರತೆ (Rainfall intensity) ಹೆಚ್ಚಾಗಿದೆ, ರಭಸದಿಂದ ಬೀಳುವ ಮಳೆಯ ಪ್ರಮಾಣ ಹೆಚ್ಚಾಗಿರುವದರಿಂದ ಕೊಚ್ಚಗೆ ನೀರು (Runaff) ಸಹ ಹೆಚ್ಚು ಹರಿದು ಹೋಗುತ್ತದೆ. ಈ ರೀತಿ ಹರಿದು ಹೋಗುವ ನೀರನ್ನು ಪೋಲಾಗದಂತೆ ಕೃಷಿ ಹೊಂಡಗಳನ್ನು ನಿರ್ಮಿಸಿ, ಅವುಗಳಲ್ಲಿ ಸಂಗ್ರಹಿಸಬಹುದು. ಹವಾಮಾನ ವೈಪರೀತ್ಯದ ದಿನಮಾನಗಳಲ್ಲಿ ಕೃಷಿ ಹೊಂಡವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇತ್ತೀಚಿನ ದಿನಮಾನಗಳ ಮಳೆ ಹಂಚಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದಾಗ ಮೇ ತಿಂಗಳ ಕೊನೆಯಲ್ಲಿ ಜೂನ ಮೊದಲನೆಯ ಪಕ್ಷದಲ್ಲಿ ಮತ್ತು ಸೆಪ್ಟೆಂಬರ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿ ಕೃಷಿ ಹೊಂಡಗಳು ತುಂಬುವ ಸಾಧ್ಯತೆ ಹೆಚ್ಚಿರುತ್ತದೆ.
ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಕೃಷಿ ಭಾಗ್ಯ ಯೋಜನೆಯಲ್ಲಿ ರಾಜ್ಯದ ಒಣಬೇಸಾಯದ ವಲಯಗಳಲ್ಲಿ ರೈತರ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ರಚಿಸುವದು ಒಂದಾಗಿದೆ. ಈ ವರ್ಷದ ಬೇಸಿಗೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಕೃಷಿ ಹೊಂಡಗಳನ್ನು ರಚಿಸಲಾಗಿದೆ. ವರ್ಷ2019ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು 8000 ದಷ್ಟು ಕೃಷಿ ಹೊಂಡಗಳನ್ನು ರಚಿಸಲಾಗಿದೆ. ಇದೇ ರೀತಿ ಇತರೆ ಜಿಲ್ಲೆಯಲ್ಲಿಯೂ ಕೃಷಿ ಹೊಂಡಗಳನ್ನು ರಚಿಸುವ ಕೆಲಸ ಪ್ರಗತಿಯಲ್ಲಿದೆ. ಕೆಲವು ಜಿಲ್ಲೆಗಳಲ್ಲಿ ಮೇ ತಿಂಗಳ ಎರಡನೇ ಪಕ್ಷದಲ್ಲಿ ಉತ್ತಮ ಮಳೆಯಾಗಿದ್ದರಿಂದ ಸಾಕಷ್ಟು ಕೃಷಿ ಹೊಂಡಗಳು ತುಂಬಿವೆ. ಈ ಲೇಖನದಲ್ಲಿ ಅಧಿಕ ಉತ್ಪಾದನೆಗೆ ಕೃಷಿ ಹೊಂಡದ ನೀರನ್ನು ಹೇಗೆ ಸದ್ಬಳಕೆ ಮಾಡಬೇಕೆಂಬುದನ್ನು ಚರ್ಚಿಸಲಾಗಿದೆ.
ನೀರಿನ ಲಭ್ಯತೆ : ಸಂಶೋಧನೆಗಳ ಫಲಿತಾಂಶ ಪ್ರಕಾರ ಸುಮಾರು 580-650 ಮಿ.ಮೀ. ಮಳೆ ಬೀಳುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿ ಹೆಕ್ಟೇರ ಇಳಿಮೇಡು (Catchment) ಪ್ರದೇಶದಿಂದ 150-200 ಘನ ಮೀ. ಲಭ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ. ನೀರಿನ ಲಭ್ಯತೆಯ ಅನುಗುಣವಾಗಿ ಕೃಷಿ ಹೊಂಡಗಳನ್ನು ರಚಿಸಲಾಗುತ್ತದೆ. ಸಾಮಾನ್ಯವಾಗಿ ಕೃಷಿ ಹೊಂಡಗಳು ವರ್ಷದಲ್ಲಿ ಎರಡು ಸಲ ತುಂಬುವದರಿಂದ ಕೃಷಿ ಹೊಂಡದ ಗಾತ್ರದ ಎರಡರಷ್ಟು ನೀರು ಕೃಷಿ ಉಪಯೋಗಕ್ಕೆ ಲಭ್ಯವಿರುತ್ತದೆ. ಒಟ್ಟು ಲಭ್ಯವಿರುವ ನೀರಿನಲ್ಲಿ ಹ 20-40 ರಷ್ಟು ಆವಿಯಾಗಿ ಅಥವಾ ಬಸಿಯುವಿಕೆಯಿಂದ ನಷ್ಟವಾಗುತ್ತದೆ. ಕೃಷಿ ಭಾಗ್ಯ ಯೋಜನೆಯಲ್ಲಿ ಇಳಿಮೇಡು ಪ್ರದೇಶ ಹಾಗೂ ಮಳೆಯ ಹಂಚಿಕೆಗೆ ಅನುಗುಣವಾಗಿ ಕೆಳಗೆ ಕಾಣಿಸಿದ ಕೋಷ್ಟಕದಂತೆ ಕೃಷಿ ಹೊಂಡದ ಗಾತ್ರವನ್ನು ನಿಗದಿ ಪಡಿಸಿದೆ.
ಕೃಷಿ ಹೊಂಡದ ಸ್ಥಳದ ಆಯ್ಕೆ :-
ಕೃಷಿ ಹೊಂಡದ ಸ್ಥಳವನ್ನು ಆಯ್ಕೆ ಮಾಡಲು ಒಂದಕ್ಕಿಂತಾ ಹೆಚ್ಚು ಸ್ಥಳವನ್ನು ಒಂದೊಂದಾಗಿ ಅಧ್ಯಯ ಮಾಡಿ ಪ್ರಾಯೋಗಿಕವಾಗಿ ಹಾಗೂ ಆರ್ಥಿಕವಾಗಿ ಯಾವುದು ಯೋಗವಿದೆಯೋ ಅಂತಹ ಸ್ಥಳವನ್ನು ತನ್ನ ಮಾಡಬೇಕು. ಇದಲ್ಲದೆ, ಕೃಷಿ ಹೊಂಡದ ಸ್ಥಳವನ್ನು ಆಯ್ಕೆ ಮಾಡುವಾಗ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.
- ನಿರ್ಧರಿಸಿದ ಆಳತೆಯ ಕೃಷಿ ಹೊಂಡದ ಸಾಮರ್ಥ್ಯಕ್ಕೆ ತಕ್ಕಷ್ಟು ಹರಿದು ಪೂರೈಕೆಯಾಗುತ್ತಿರಬೇಕು ಅಥವಾ ಹರಿದು ಬರುವ ನೀರಿನ ಪ್ರಮಾಣಕ್ಕನುಸಾರವಾಗಿ
ಬರುವ ನೀರಿ ಹೊಂಡದ ಗಾತ್ರ ನಿರ್ಧರಿಸಬೇಕು. - ಹೊಂಡದಿಂದ ಕೆಳಗಿನ ಸ್ವಲ್ಪ ಕ್ಷೇತ್ರವನ್ನು ನೈಸರ್ಗಿಕ ಹರಿಯುವಿಕೆಯಿಂದಲೂ (ಗುರುತ್ವಾಕರ್ಷಣೆಯಿಂದ) ಮೇಲಾಗದ ಸ್ವಲ್ಪ ಕ್ಷೇತ್ರಕ್ಕೆ ಪಂಪುಗಳನ್ನು ಉಪಯೋಗಿಸಿ ನೀರಾವರಿ ಮಾಡಲು ಅನುಕೂಲವಿರುವ ಸ್ಥಳ ಆಯ್ಕೆ ಮಾಡಬೇಕು.
- ಆಳವಾದ ಗೋಡು ಮಣ್ಣು ಇರುವ ಸ್ಥಳಗಳನ್ನು ಆಯ್ಕೆ ಮಾಡಬೇಕು. ಏಕೆಂದರೆ ಆ ಮಣ್ಣಿನಲ್ಲಿ ನೀರು ಬಸಿದು ಹೋಗುವ ಸಂಭವ ಕಡಿಮೆ, ತಳದಲ್ಲಿ ಕಲ್ಲು, ಬಂಡೆ, ಗರಸು & ಮಟ್ಟಿಕಲ್ಲು (ಸ್ಲಾಬ್) ಇರಬಾರದ ಹಗುರಾದ ಮತ್ತು ಮಧ್ಯಮ ಆಳದ ಮಣ್ಣಿನಲ್ಲಿ ರಚಿಸುವುದಾದರೆ ಲೈನಿಂಗಮಾಡಬೇಕು.
- ನೀರು ಮಲಿನಗೊಳ್ಳುವ ಸಾಧ್ಯತೆಯಿರುವ ಸ್ಥಳಗಳಿಂದ ಕೃಷಿ ಹೊಂಡ ದೂರದಲ್ಲಿಬೇಕು.
(ಉದಾ: ಚರಂಡಿ, ನೀರು ಇತ್ಯಾದಿ)
- ನೀರು ಹರಿದು ಬರುವ ಮೇಲ್ಬಾಗದ ಕ್ಷೇತ್ರದಲ್ಲಿ ಸುಮಾರು 30 ಮೀಟರ್ ವರೆಗೆ ಹುಲ್ಲು ಹಚ್ಚಿದ ನೀರು ವಾರಿ ನಿರ್ಮಿಸಲು ಅನುಕೂಲವಿರಬೇಕು.
ಕೃಷಿ ಹೊಂಡದ ಹೊದಿಕೆಗಳು :-
ಕೃಷಿ ಹೊಂಡದಲ್ಲಿ ಶೇಖರಿಸಿದ ಹೊಂಡಗಳನ್ನು ಆಳವಾದ ಕಪ್ಪು/ ಸಂಗ್ರಹಿಸಿದ ನೀರು ಇಂಗುವಿಕೆಯನ್ನು ತಡೆಯಲು ಹೊದಿಕೆಗಳು ಅತ್ಯಗತ್ಯ ಕೃಷಿ (ಜೇಡಿ), ಜಮೀನುಗಳಲ್ಲಿ ನಿರ್ಮಿಸುತ್ತಿದ್ದರೆ ಅದಕ್ಕೆ ಹೊದಿಕೆ ಅವಶ್ಯಕತೆ ಇರುವುದಿಲ್ಲ. ಹೊಡೊಕೆಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳೆಂದರೆ ಸಿಗುವಂತಹ ಬೆಲೆ, ಬಾಳಿಕೆ ಬರುವಂತಹ ಮತ್ತು ಆರ್ಥಿಕವಾಗಿ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ
ಸಿಗುವಂತಹ ಹೊದಿಕೆಗೆ ಇರಬೇಕಾದ ಅವಶ್ಯಕತೆಗಳಿಂದಲೇ
1.ನೀರು ಬಸಿವಿಕೆಯುನ್ನು (ಸೋರಿಕೆ) ತಡೆಗಟ್ಟುವುದು.
2.ಬಾಳಿಕೆ ಬರುವಂತದ್ದು.
3.ತಾಪಮಾನದ ಏರುಪೇರಿಗೆ ಹೊಂದಿಕೊಳ್ಳುವಂತದ್ದು
4.ಕಡಿಮೆ ಬೆಲೆಗೆ ದೊರಕುವಂತಹದ್ದು ಸ್ಥಳಿಯವಾಗಿ ಸಿಗುವಂತಹದ್ದಿರಬೇಕು.
ಕೃಷಿ ಹೊಂಡಕ್ಕೆ ಪ್ಲಾಸ್ಟಿಕ ಹೊದಿಕೆ ಹಾಕುವುದರಿಂದಾಗುವ ಉಪಯೋಗಗಳು
1.ಶೇಕಡಾ 95% ರಷ್ಟು ನೀರಿನ ಬಸಿಯುವಿಕೆಯನ್ನು ತಡೆಗಟ್ಟುತ್ತದೆ.
2.ಶೇಖರಣೆಯಾದ ನೀರು ದೀರ್ಘಕಾಲದವರೆಗೆ ಇರುತ್ತದೆ.
3.ಪ್ಲಾಸ್ಟಿಕ ಹೊದಿಕೆ ಹಾಕುವುದರಿಂದ ಕುಡಿಯಲು ಸ್ವಛವಾದ ನೀರು ಸಿಗುವುದು ಹಾಗೆಯೇ ಕೃಷಿ ಹೊಂಡದಲ್ಲಿ ಮೀನು ಸಾಗಾಣಿ : ಮಾಡಬಹುದು, ಸಸ್ಯಗಳಿಗೆ / ಬೆಳೆಗಳಿಗೆ ಜೀವ ಜಲ / ರಕ್ಷಕ ನೀರಾವರಿಯನ್ನು ಒದಗಿಸಬಹುದು.
4.ಪ್ಲಾಸ್ಟಿಕ ಹೊದಿಕೆ ವಿಧಾನವು ಆರ್ಥಿಕವಾಗಿ ಮತ್ತು ಸದೃಡವಾಗಿ ನೀರನ್ನು ಸಂಗ್ರಹಿಸುವ ವಿಧಾನವಾಗಿದೆ. ಬಳಸಲು ಶಿಫಾರಸು ಮಾಡಲಾಗಿದೆ.
ಕೃಷಿ ಹೊಂಡಕ್ಕೆ ಎಚ್ ಡಿ ಪಿ ಇ, ಹೊದಿಕೆ
ಮಳೆ ನೀರಿನ ಪ್ರಮಾಣ : ಸುಮಾರು 580-450 ಮೀ.ಮೀ. ಮಳೆ ಬೀಳುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿ ಹೆಕ್ಟೇರ್ ಪ್ರದೇಶದಿಂದ ಹರಿದು ಬರುವ ಮಳೆಯಿಂದ 110L 200 .ವಿನ ಮೀಟರ್ ನೀರು ಲಭ್ಯವಾತ್ತದೆ ಎಂದು ಅಂದಾಜಿಸಲಾಗಿದೆ. ನೀರಿನ ಲಭ್ಯತೆಯ ಅನುಗುಣವಾಗಿ ಕೃಷಿ ಹೊಂಡಗಳನ್ನು ರಚಿಸಲಾಗುತ್ತದೆ ಒಟ್ಟು ಲಭ್ಯವಿರುವ ನೀರಿನಲ್ಲಿ ಶೇ. 20-40 ರಷ್ಟು ಆವಿಯಾಗಿ ಅಥವಾ ಬಸಿಯುವಿಕೆಯಿಂದ ನಷ್ಟವಾಗುತ್ತದೆ. ಕೃಷಿ ಹೊಂಡದ ನೀರಿನ ಬಳಕೆ:
ಕೃಷಿ ಹೊಂಡಗಳಲ್ಲಿ ನೀರನ್ನು ಸಂಗ್ರಹಿಸಿ, ವಿವಿಧ ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಕೆ/ ಮೊರಕ ನೀರಾವರಿಯನ್ನು ಕೊಡುವದರಿಂದ ವಿವಿಧ ಬೆಳೆಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಬಹುದು. ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರದಲ್ಲಿ ಬೆಳೆಗಳ ಸಂದಿಗ್ಧ ಹಂತದಲ್ಲಿ 5 ಸೆಂ.ಮೀ (200 ಪ್ರಮೀ./ಎಕರೆ) ಅಳ ನೀರು ಕೊಡುವದರಿಂದ ಇಳುವರಿಯಲ್ಲಿ ಆದ ಹೆಚ್ಚಳವನ್ನು ಕೆಳಗಿನ ಕೋಷ್ಠಕದಲ್ಲಿ ಕೊಡಲಾಗಿದೆ.
ಹೊಂಡದಲ್ಲಿ ಸಂಗ್ರಹವಾದ ನೀರು ಅಮೂಲ್ಯವಾದದ್ದು. ಅದನ್ನು ದಕ್ಷತೆಯಿಂದ ಮತ್ತು ಜಾಣತನದಿಂದ ಬಳಸಬೇಕು, ಒಂದು ಹೆಕ್ಟೇರ ಪ್ರದೇಶಕ್ಕೆ -1 ಸೆಂ.ಮೀ ಆಳ ನೀರು ಉಣಿಸಬೇಕಾದರೆ (100x100x0.01m) 100 ಘನ ಮೀಟರ ನೀರು ಬೇಕಾಗುತ್ತದೆ. ಒಂದು ಎಕರೆಗೆ 40 ಘನ ಮೀಟರದಷ್ಟು ನೀರು ಬೇಕು. ಈ ರೀತಿ ಸಂಗ್ರಹವಾದ ನೀರನ್ನು ಉಪಯೋಗಿಸಬೇಕಾದಾಗ ಯಾವಾಗ? ಹೇಗೆ? ಎಷ್ಟು ನೀರು ಕೊಡಬೇಕು? ಮತ್ತು ಯಾವ ಬೆಳೆಯನ್ನು ಬೆಳೆಯಬೇಕು? ಎಂಬ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಯಾವಾಗ : ವಿವಿಧ ಹಂಗಾಮುಗಳಲ್ಲಿ 20-25 ದಿನಗಳ (ಬರ) dry spells ಬಿದ್ದಾಗ ಅಥವಾ ಕೆಳಗೆ ಕೋಷ್ಟಕದಲ್ಲಿ ಪಟ್ಟಿ ಮಾಡಿದಂತೆ ವಿವಿಧ ಬೆಳೆಗಳ ಸಂದಿಗ್ಧ ಹಂತದಲ್ಲಿ ನೀರುಣಿಸಬೇಕು, ಇದಲ್ಲದೆ ಈ ನೀರನ್ನು ಈರುಳ್ಳಿ ಅಥವಾ ತೊಗರಿ ಬೆಳೆಯ ಸಸಿಗಳನ್ನು ಮಾಡಲು/ನರ್ಸರಿ ಮಾಡಲು ಉಪಯೋಗಿಸಬಹುದು. ಮೇ ಜೂನ ತಿಂಗಳಲ್ಲಿ ಮಳೆಯಿಂದ ಕೃಷಿ ಹೊಂಡಗಳು ತುಂಬಿದಾಗ, ಅಂತಹ ಜಮೀನಿನಲ್ಲಿ, ಕೇವಲ ಹಿಂಗಾರಿ ಬೆಳೆಯನ್ನು ಬೆಳೆಯುತ್ತಿದ್ದರೆ, ಕೃಷಿ ಹೊಂಡದ ನೀರು ಆವಿಯಾಗದಂತೆ ಮತ್ತು ಬಸಿದು ಪೋಲಾಗದಂತೆ ನೀರನ್ನು ೭೪ ಜಮೀನಿಗೆ ಹಾಯಿಸಿ ಜಮೀನಿನ ಮಣ್ಣಿನ ತೇವಾಂಶವನ್ನು ಹೆಚ್ಚಿಸಬಹುದು. ಇದು ಹಿಂಗಾರಿ ಬೆಳೆಯನ್ನು ಸಕಾಲಕ್ಕೆ ಬಿತ್ತನೆ ಮಾಡಲು ಹಾಗೂ ಜಮೀನಿನ ಮಣ್ಣಿನಲ್ಲಿ ಕೆಲ ತಿಂಗಳವರೆಗೆ ನೀರು ಸಂಗ್ರಹವಾಗಿರುವದರಿಂದ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು.
ಹೇಗೆ : ಕೃಷಿ ಹೊಂಡದಲ್ಲಿ ನೀರು ಮಿತ ಪ್ರಮಾಣದಲ್ಲಿ ಲಭ್ಯವಿರುವದರಿಂದ ನೀರನ್ನು ದಕ್ಷವಾಗಿ ಒಳಸಬೇಕು, ಆಸ್ಪರಿಂದ, ನೀರನ್ನು ಸೂಕ್ಷ್ಮ (ತುಂತುರು ಅಥವಾ ಸಿಂಚನ) ನೀರಾವರಿ ಮುಖಾಂತರ ಕೊಡಬೇಕು ಸಾಂಪ್ರದಾಯಿಕ ಸಹೃತಿಗಳಾದ ಹಾಯಿ, ನೀರಾವರಿಯಿಂದ ನೀರುಣಿಸುವದರಿಂದ ಬಹಳಷ್ಟು ನೀರು ಪೋಲಾಗುತ್ತದೆ.
ಎಷ್ಟು ? ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯುವ ಅವಧಿಯಲ್ಲಿ 15-20 ದಿನಗಳ ಒಣ ಬರೆ (dry Spells) ಬಂದರೆ ಅಥವಾ ಬೆಳೆಗಳ ಸಂದಿಗ್ಧ ಹಂತಗಳಲ್ಲಿ 3-4 ಸೆಂ.ಮೀ. (120-160 ಘನಮೀಟರ/ಎಕರೆಗೆ). ೨೯ ೩೦ಚಿನ ನೀರಾವರಿ ಮೂಲಕ ಒಂದು ಅಥವಾ ಎರಡು ಪೂರಕ (Supplementary) ನಿರಾವರಿಯನ್ನು ಕೊಡಬೇಕು, ಹಿಂಗಾರು ಹಂಗಾಮಿನಲ್ಲಿ ಒಣ ಬರವಿದ್ದರೆ ಬೆಳೆ ಬೆಳೆದು 30-40 ದಿನಗಳ ನಂತರ ಅಥವಾ ನೀರು ವಿವಿಧ ಬೆಳೆಗಳ ಸಂದಿಗ್ಧ ಹಂತಗಳಲ್ಲಿ 5 ಸೆಂ.ಮೀ. (200 ಘನ ಮೀಟರ ಎಕರೆ) ಅಳೆದ ಲಭ್ಯವಿದ್ದ ಪಕ್ಷದಲ್ಲಿ ನೀರನ್ನು ಒಂದು ಪೂರಕ (ಜೀವರಕ್ಷಕ) ನೀರಾವರಿಯಾಗಿ ಕೊಡಬೇಕು. ಈ ರೀತಿಯಾಗಿ ನೀರಾವರಿಯನ್ನು ಕೊಡುವುದರಿಂದ, ಬೆಳೆಗಳ ಇಳುವರಿ ಶೇ. 25 ರಿಂದ 35 ಪ್ರತಿಶತ ಹೆಚ್ಚಾಗುತ್ತದೆ.
ಇದಲ್ಲದೇ, ಕೆಲ ಸಂದರ್ಭಗಳಲ್ಲಿ ಕೃಷಿ ಹೊಂಡದ ನೀರನ್ನು ಬಿತ್ತನೆ ಪೂರ್ವ ನೀರಾವರಿ ರೂಪದಲ್ಲಿ ಕೊಡುವುದರಿಂದಲೂ ಸಕಾಲದಲ್ಲಿ ಬಿತ್ತನೆ ಮಾಡಲು ಸಾಧ್ಯ ಅಲ್ಲದೆ ಈ ಪದ್ಧತಿಯಿಂದ ವಿವಿಧ ಕೇಂದ್ರಗಳಲ್ಲಿ ನಡೆದ ಸಂಶೋಧನೆಗಳ ಪ್ರಕಾರ ಶೇ. 30 ರಿಂದ ಶೇ. 50 ರಷ್ಟು ಹೆಚ್ಚಿನ ಇಳುವರಿ ದಾಖಲಾಗಿದೆ.
ಯಾವ ಬೆಳೆಯನ್ನು ಬೆಳೆಯಬೇಕು : ಕೃಷಿ ಹೊಂಡದ ನೀರಿನಿಂದ ಹೆಚ್ಚಿನ ಲಾಭವನ್ನು ಪಡೆಯಬೇಕಾದರೆ ಆರ್ಥಿಕವಾಗಿ ಲಾಭದಾಯಕವಾದ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕೃಷಿ ಹೊಂಡದ ನೀರನ್ನು ಜೋಳ,
ಗೋಧಿ ಅಥವಾ ಕಡಲೆಗೆ ಕೊಡುವ ಬದಲು ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಅಂತಹ ಬೆಳೆಗಳಿಗೆ ಕೊಟ್ಟರೆ
ಹೆಚ್ಚಿನ ಲಾಭವನ್ನು ಪಡೆಯಬಹುದು.
ಒಂದು ಅಧ್ಯಯನದ ಪ್ರಕಾರ, ರೈತರ ಜಮೀನಿನಲ್ಲಿ 500 ಘನ ಮೀಟರದಷ್ಟು ನೀರು ಕೃಷಿ ಹೊಂಡದಲ್ಲಿ ಮಳೆಗಾಲ ಮುಕ್ತಾಯದ ನಂತರ (ನವೆಂಬರ ತಿಂಗಳಲ್ಲಿ) ಲಭ್ಯವಿದ್ದರೆ, ನಾಲ್ಕು ತಿಂಗಳ (ನಂವಬರ-ಫೆಬ್ರುವರಿ) ಅವಧಿಯ ಯಾವದಾದರು ತರಕಾರಿ ಬೆಳೆಯನ್ನು ಬೆಳೆದು ಹೆಚ್ಚಿನ ಲಾಭ ಪಡೆಯಬಹುದೆಂದು ತೋರಿಸಿದ್ದಾರೆ. ಸುಮಾರು 20 ಪ್ರತಿಶತ (100 ಘನಮೀಟರ) ದಷ್ಟು ನೀರು ಆವಿ ಬಸಿಯುವಿಕೆಯಿಂದ ಸೋಲಾದರೂ ಸಹ ಲಭ್ಯವಿರುವ 400 ಘನ ಮೀಟರ ನೀರಿನಿಂದ 0.1 ಹೆ (10 ಗುಂಟೆ) ಜಾಗೆಯಲ್ಲಿ ತರಕಾರಿಯನ್ನು ಬೆಳೆದು ಅದಕ್ಕೆ ಲಭ್ಯವಿರುವ ನೀರನ್ನು ತುಂತರು ನೀರಾವರಿ ಮೂಲಕ ನೀರುಣಿಸಿ, ಅತಿ ಹೆಚ್ಚಿನ ಲಾಭಾಂಶವನ್ನು ಪಡೆಯಬಹುದೆಂದು ದಾಖಲಿಸಿದ್ದಾರೆ.
ಕಡಿಮೆ ವೆಚ್ಚದ ಪಂಪು : ಹೊಂಡದಿಂದ ನೀರನ್ನು ಮೇಲೆತ್ತಲು ಇತ್ತೀಚಿಗೆ ಹಗುರಾದ 1.5 ಎಚ್.ಪಿ. (3000 ಆರ್.ಪಿ ಎಮ್) ಪಂಪುಗಳು ಲಭ್ಯವಿರುತ್ತವೆ, ಇವುಗಳಿಂದ 6 ಸಂಕ್ತರಗಳನ್ನು ಉಪಯೋಗಿಸಬಹುದು. ಇವುಗಳು ಪೆಟ್ರೋಲ್ ಚಾಲಿತ ಡಿಸೈಲ್‌ದಿಂದ ಓಡುವ ಪಂಪುಗಳಾಗಿವೆ. ಇವುಗಳು ರೂ. 15,000/- ಕ್ಕೆ ದೊರೆಯುವವು ಮತ್ತು ಇವುಗಳ ತೂಕ 17 ಕೆಜಿಯಷ್ಟಿರುತ್ತದೆ.
ಸೌರ ಚಾಲಿತ ಪಂಪುಗಳು : ಕೃಷಿ ಹೊಂಡದಿಂದ ನೀರನ್ನು ಎತ್ತಲು ಒಂದು ಕಿಲೋವ್ಯಾಟ ಸಾವರ್ಥ್ಯದ ಸೌರ ಫಲಕಗಳನ್ನು ಹೊಂದಿದ ಹಾಗೂ ಡಿ ಸಿ ದಿಂದ ಎಸಿ ಪರಿವರ್ತಕ ಸೌಲಭ್ಯವುಳ್ಳ 1.2 ಎಚ್.ಪಿ ವಿ.ಎಫ್.ಡಿ ಪಂಪನ್ನು ಉಪಯೋಗಿಸಿ 6-8 ಸ್ಪಿಂಕ್ಲರಗಳನ್ನು ನಡೆಸಬಹುದು.
ನೀರು ಆವಿರೂಪದಲ್ಲಿ ನಷ್ಟವಾಗದಂತೆ ತಡೆಯುವ ಕ್ರಮಗಳು: ಸ್ಟರೋಲ್ ಆಲೋಹಾಲನ್ನು ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಪ್ರತಿ ಚದರು ಮೀಟರಿಗೆ 2 ಮೀ.ಲೀ, ದಂತೆ ಹಾಕುವುದರಿಂದ ಶೇ. 50 ರಷ್ಟು ಹಾಗೂ ದೇವಿನ ಎಣ್ಣೆಯನ್ನು ಸಹ ನೀರಿನ ಮೇಲೆ ಹರಡುವುದರಿಂದ ನೀರು ಆವಿಯಾಗುವುದನ್ನು ಕಡಿಮೆ ಮಾಡಬಹುದು.
ಕೃಷಿ ಹೊಂಡದ ಇತರೆ ಉಪಯೋಗಗಳು :-
- ನೀರನ್ನು ಮನೆ ಉಪಯೋಗಕ್ಕಾಗಿ ದನಕರುಗಳಿಗೆ ಕುಡಿಯಲು ಉಪಯೋಗಿಸಬಹುದು.
- ಒಣಬೇಸಾಯದ ಪ್ರದೇಶಗಳಲ್ಲಿ ದೂರದೂರದ ಜಮೀನುಗಳಲ್ಲಿ ನೀರಿನ ಲಭ್ಯತೆ ಅತಿ ವಿರಳ. ಅಂತಹ ಸ್ಥಳಗಳಲ್ಲಿ ಈ ಕೃಷಿ ಹೊಂಡದ ನೀರನ್ನು ಔಷಧದ ಮಿಶ್ರಣತಯಾರಿಸಿ ಕಡಲೆ/ತೊಗರಿ/ಮೆಣಸಿನಕಾಯಿ ಗಿಡಗಳಿಗೆ ಸಿಂಪಡಿಸಲು ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಕೆಲರೈತರು ಕೃಷಿ ಹೊಂಡದ ನೀರನ್ನು ಮೇಲಿನ ಉದ್ದೇಶಕ್ಕಾಗಿ ಮಾರಾಟ ಮಾಡುತ್ತಾರೆ.
- ನೀರು ನಾಲ್ಕು ತಿಂಗಳಿಗಿಂತಲೂ ಹೆಚ್ಚಿಗೆ ಲಭ್ಯವಿದ್ದರೆ, ಮೀನುಗಾರಿಕೆಗೆ ಈ ನೀರನ್ನು ಬಳಸಬಹುದು.