ಸರ್ಕಾರಿ ಹೆಸರಿನಲ್ಲಿರುವ ಜಮೀನುಗಳಲ್ಲಿ ಸಾಲು ಸಾಲಾಗಿ ಸಾಗುವಳಿಯನ್ನು ಮಾಡುತ್ತಿರುವ ಭೂಮಿಯನ್ನು ಹೊಂಡಿಲ್ಲದವರು ಮತ್ತು ಸಣ್ಣ ರೈತರ ಜಮೀನುಗಳನ್ನು ಸಕ್ರಮವಾಗಿ ಮಾಡಿಸಲು ಒಂದು ವರ್ಷ ವಿಸ್ತರಣೆಯನ್ನು ಮಾಡುವ ಬಹುಮುಖ್ಯವಾದ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರ ತೆಗೆದುಕೊಂಡಿದೆ.
ಅರ್ಜಿಯನ್ನು ಸಲ್ಲಿಸುವ ಉದ್ದೇಶ
ಅಕ್ರಮ-ಸಕ್ರಮದ ಕುರಿತಾಗಿ ಕಂದಾಯ ಇಲಾಖೆಯ ತಿದ್ದುಪಡಿ ಗುರಿಯನ್ನು ವಿಧಾನಸಭೆಯಲ್ಲಿ ಅಂಗೀಕರನವನ್ನು ಮಾಡಿದ್ದೂ , 94 ಎ ತಿದ್ದುಪಡಿ ಮೂಲಕ ನಮೂನೆ 57 ರಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರಿ ಭೂಮಿಯಲ್ಲಿ ನಡೆಸುತ್ತಿರುವ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿದೆ. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಅಕ್ರಮ ಸಕ್ರಮ ಯೋಜನೆ ಅಡಿ ಯಾವುದೇ ವ್ಯಕ್ತಿ ತಾನು ಬಹುದಿನಗಳಿಂದ ಒಂದು ಜಾಗದಲ್ಲಿ ಉಳಿಮೆಯನ್ನು ಮಾಡುತ್ತಿದ್ದು ಅದರಿಂದ ಅವನಿಗೆ ಲಾಭವನ್ನು ದೊರೆಸಿಕೊಂದು ಜೀವಿಸುತ್ತಿದ್ದರೆ ಅದನ್ನು ತಮಗೆಯೇ ಸ್ವಂತದ್ದಾಗಿ ಮಾಡಿಕೊಡುವ ಅವಕಾಶವನ್ನು ಕಲ್ಪಿಸುತ್ತದೆ ಹಾಗೂ ತನ್ನ ಜಮೀನಿನ ಮೇಲೆ ಅಧಿಕಾರವನ್ನೂ ಹೊಂದಲು ಸಕ್ರಮ ಮಾಡಿಕೊಳ್ಳುವುದಕ್ಕೆ ಗೊತ್ತುಪಡಿಸಿದ ಅರ್ಹತೆಗಳನ್ನು ಹೊಂದಿದ್ದರೆ ಕಾಯಿದೆ ಜಾರಿಗೆ ಬಂದ ದಿನದಿಂದ ಬರೋಬ್ಬರಿ ಒಂದು ವರ್ಷದ ಅವಧಿಯಲ್ಲಿ ನಿಯಮ 67 ರ ಅನ್ವಯ ಸೂಕ್ತ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಸರ್ಕಾರಿ ಜಮೀನನ್ನು ಅನಧೀಕೃತ ಸಾಗುವಳಿಯನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 (A) ಅನ್ವಯ ಅವಕಾಶ ನೀಡಲಾಗಿದೆ. ನಮೂನೆ 57 ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಮೇ 31 ರ 2023 ರ ವರೆಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಜಮೀನಿನಲ್ಲಿ ಅನಧೀಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ಭೂ ಕಂದಾಯ ಕಾಯ್ದೆ 1964 ರ ಕಲಂ 94 (A), 94 (B), 94(A4) ಅಡಿಯಲ್ಲಿ ನಮೂನೆ 50- 53 ರಲ್ಲಿ ಅರ್ಜಿ ಸಲ್ಲಿಸುವವರಿಗೆ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ :- ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ
ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲರ ಮಕ್ಕಳಿಗೂ ಸಿಗುತ್ತೆ ಸಹಾಯಧನ ಈಗಲೇ ಅರ್ಜಿ ಸಲ್ಲಿಸಿ
ಇದನ್ನೂ ಓದಿ :- ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆ ನಿಮಗೆ ಹಣ ಬಂದಿಲ್ಲ ಎಂದರೆ ಕಾರಣ ಇಲ್ಲಿದೆ ನೋಡಿ