ಆತ್ಮೀಯ ರೈತ ಬಾಂಧವರೇ,
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಗೋವು ಗ್ರಾಮೀಣ ಆರ್ಥಿಕತೆಯ ಪ್ರಮುಖ ಅಂಶವೂ. ಗೋವು ಭಾರತೀಯ ಸಂಪ್ರದಾಯ ಹಾಗೂ ಸಂಸ್ಕೃತಿಯ ಪ್ರಮುಖ ಭಾಗವೂ ಹೌದು. ಈ ಗೋವು ಸಂರಕ್ಷಣೆಗೆ ಪಶು ಸಂಗೋಪನಾ ಇಲಾಖೆ ವಿನೂತನ ಯೋಜನೆಯೊಂದನ್ನು ರೂಪಿಸಿ ಸಾರ್ವಜನಿಕ ಸಹಭಾಗಿತ್ವವನ್ನೂ ಪಡೆಯುವಲ್ಲಿ ಯಶಸ್ಸು ಕಾಣುತ್ತಿದೆ.’ಪುಣ್ಯಕೋಟಿ ದತ್ತು’ ಹೆಸರಿನಲ್ಲಿ ದೇಶದಲ್ಲಿ ಅನನ್ಯ ಕಾರ್ಯಕ್ರಮವೊಂದನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ನಿರ್ಧಾರ ಮಾಡಿದೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆಯುವುದು ಅವಶ್ಯ. ಪುಣ್ಯಕೋಟಿ ದತ್ತು ಯೋಜನೆ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು 11 ಗೋವುಗಳನ್ನು ದತ್ತು ಪಡೆದು ಗೋಸಂಕುಲ ಸಂರಕ್ಷಣೆಗೆ ಕರೆ ನೀಡಿ ಎಲ್ಲರಿಗೂ ಮಾದರಿ ಆಗಿದ್ದಾರೆ. ಅಷ್ಟೇ ಅಲ್ಲ, ಜಿಲ್ಲೆಗೊಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 31 ಗೋವುಗಳನ್ನು ಬೊಮ್ಮಾಯಿ ಮತ್ತು ಪಡೆದು ಎಲ್ಲರಿಗೂ ಮಾದರಿಯಾದರೂ.
ಗೋಶಾಲೆಗಳಲ್ಲಿರುವ ಜಾನುವಾರುಗಳ ನಿರ್ವಹಣೆ ಮಾಡಲು ಮತ್ತು ರಾಜ್ಯದ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸುವ ಸಲುವಾಗಿ ಪುಣ್ಯಕೋಟಿ ದತ್ತು ಯೋಜನೆಯಲ್ಲಿ ಸಾರ್ವಜನಿಕರ ಸಹಕಾರ ಪಡೆಯಲು ಪಶುಸಂಗೋಪನೆ ಇಲಾಖೆ ಪೋರ್ಟಲ್ ಒಂದನ್ನು ರೂಪಿಸಿ ಆ ಮೂಲಕ ದೇಣಿಗೆಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೆ, ಈ ಯೋಜನೆಗೆ ರಾಯಭಾರಿಯನ್ನೂ ನೇಮಕ
ಮಾಡಿಕೊಂಡಿದೆ. ಚಿತ್ರನಟ ಸುದೀಪ್ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ. ರಾಯಭಾರತ ಒಪ್ಪಿಕೊಂಡ ಸುದೀಪ್ 31 ಗೋವು ದತ್ತು ಪಡೆದು ಮಾದರಿಯಾಗಿದ್ದಾರೆ. ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದಾರೆ.
ಗೋ ಶಾಲೆಯ ಉತ್ಪನ್ನಗಳು:
ಗೋ ಶಾಲೆಗಳಲ್ಲಿ ಉತ್ಪತ್ತಿಯಾಗುವ ಸೆಗಣಿ, ಗಂಜಲ ಮತ್ತು ಇತರೆ ಉತ್ಪನ್ನ ಬಳಸಿ ಪರಿಸರ ಸ್ನೇಹಿ ಸೆಗಣಿ ,ಕಟ್ಟಿಗೆ, ಧೂಪ, ಫಿನಾಯಿಲ್, ಗಣಪತಿ ಗೊಂಬೆ, ಪಂಚಗವ್ಯ, ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಲು ಈ 31 ಖಾಸಗಿ ಗೋ ಶಾಲೆಗಳಿಗೆ ಆರ್ಥಿಕ ನೆರವು ಮಾಡಿಕೊಟ್ಟಿದೆ. ‘ಆತ್ಮ ನಿರ್ಭರ ಗೋಶಾಲೆ’ ಎಂದು ಹೆಸರಿಸಲಾಗಿದೆ.
ದ್ರವ ಸಾವಯವ ಗೊಬ್ಬರ: ಗೋ ತ್ಯಾಜ್ಯ ಬಳಸಿ ದ್ರವ ಸಾವಯವ ಗೊಬ್ಬರ ತಯಾರಿಸಲು ಪ್ರಾರಂಭಿಸಿದ್ದಾರೆ. ಅಭಿವೃದ್ಧಿಪಡಿಸಿದ ತಾಂತ್ರಿಕತೆ ಬಳಸಿ ರೈತರ ಮಟ್ಟದಲ್ಲಿ ಉತ್ಪಾದಿಸಿ ಸಾವಯವ ಕೃಷಿಗೆ ಒತ್ತು ನೀಡಿದೆ. ಈ ಸಂಬಂಧ ರೈತರಿಗೆ ಪ್ರಾತ್ಯಕ್ಷಿಕೆ ನೀಡಿ ಬಳಕೆ, ವಿಶ್ಲೇಷಣೆ ಮಾಹಿತಿ ನೀಡಿದೆ.
ಗೋ ಉತ್ಪನ್ನಗಳ ಅಧ್ಯಯನ, ಸಂಶೋಧನೆ:
ಸಗಣಿ ಮತ್ತು ಗಂಜಲದಿಂದ ‘ಅನೇಕ ಉತ್ಪನ್ನಗಳನ್ನು ತಯಾರಿಸಲು ಗೋ ಶಾಲೆಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ. ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಕೂಡ ಚಿಂತನೆ ನಡೆದಿದೆ. ಹೈನುಗಾರಿಕೆ ಜತೆಗೆ ಗೋಪಿನ ಉಪ ಉತ್ಪನಗಳಾದ ಸಗಣಿ ಮತ್ತು ಗೋ ಮೂತ್ರ ಅಧರಿಸಿದ ಸಾರ್ಟ್‌ಅಪ್‌ಗಳಿಗೂ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಗೋವು ಆಧಾರಿತ ಉದ್ಯಮಶೀಲತೆಗೆ ಯುವಕರನ್ನು ಪ್ರಚೋದನೆ ಉದ್ದೇಶವನ್ನೂ ಸರ್ಕಾರ ಹೊಂದಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ 100 ಸರ್ಕಾರಿ ಗೋಶಾಲೆ ಸ್ಥಾಪಿಸಿದ್ದಾರೆ. ರಾಷ್ಟ್ರದಲ್ಲಿಯೇ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಆಗಿದೆ. ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಕೇಂದ್ರ, ಪಶು ಸಂಜೀವಿನಿ ಆಂಬುಲೆನ್ಸ್, ಗೋಮಾತಾ ಸಹಕಾರ ಸಂಘ ಆತ್ಮ ನಿರ್ಭರ ಗೋಶಾಲೆ ಸ್ಥಾಪನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಯಶಸ್ವಿಯಾಗಿ ಜಾರಿಗೊಳಿಸುವ ಪ್ರಯತ್ನದಲ್ಲಿದ್ದಾರೆ.
ಆತ್ಮ ನಿರ್ಭರ ಗೋಶಾಲೆ,
ಗೋ ಶಾಲೆಗಳನ್ನು ಆತ್ಮನಿರ್ಭರಗೊಳಿಸುವ ದೃಷ್ಟಿಯಿಂದ ಸರ್ಕಾರ ಗೋವಿನ ಸಾಂಪ್ರದಾಯಿಕ ಉತ್ಪನ್ನಗಳ ಜತೆ ಹೊಸ ಹೊಸ ಉಪ ಉತ್ಪನ್ನಗಳ ತಯಾರಿಕೆಗೆ ಸರ್ಕಾರ ಹಲವು ಹತ್ತು ಕಾರ್ಯಕ್ರಮ ರೂಪಿಸಿದ್ದಾರೆ. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಫಲಾನುಭವಿಗಳಿಗೆ ಸಹಾಯಧನ, ಸಾಲದ ನೆರವು, ಪ್ರೋತ್ಸಾಹ ಧನ, ಘಟಕ ವೆಚ್ಚ ಮತ್ತಿತರ ಪ್ರೋತ್ಸಾಹ ನೀಡುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಸರ್ಕಾರ 31 ಖಾಸಗಿ ಗೋ ಶಾಲೆಗಳಿಗೆ 7.75 ಕೋಟಿ ರೂ ಆರ್ಥಿಕ ನೆರವು ನೀಡುತ್ತಿದ್ದಾರೆ.
80 ಜಿ ಆದಾಯ ತೆರಿಗೆ ವಿನಾಯಿತಿ
ಜಾನುವಾರುಗಳ ದತ್ತು ಯೋಜನೆಯಡಿ ಪುಣ್ಯಕೋಟಿ ಮತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ 11,000 ರೂಪಾಯಿಗಳನ್ನು ಜಾನುವಾರುಗಳಿಗಾಗಿ ಆಹಾರ ಪೂರೈಕೆಗೆ ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ ರಾಸುಗಳಿಗೆ ಒಂದು ದಿನಕ್ಕೆ 70 ರೂ, ಗೋಶಾಲೆಗಳಿಗೆ ದೇಣಿಗೆ ಮತ್ತು ಗೋಶಾಲೆ ನಿರ್ವಹಣೆ ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಟ 10 ರೂ.ಗಳಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ಸಲ್ಲಿಸಬಹುದು. ಈ ಯೋಜನೆಗೆ 80 ಜಿ ಆದಾಯ ತೆರಿಗೆ ವಿನಾಯಿತಿ ನೀಡಿದೆ.
ನಿಯಮ ಉಲ್ಲಂಘನೆ ಪೆಟ್ ಶಾಪ್ ವಿರುದ್ಧ ಕ್ರಮ
ಸಾಕು ಪ್ರಾಣಿ ಮಾರಾಟಗಾರರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದೆ ಪೆಟ್ ಶಾಪ್ ತೆರೆದಿದ್ದರೆ ಯಾವುದೇ ಮುನ್ಸೂಚನೆ ನೀಡದೆ
ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ನಾಯಿ ಸಾಕಣಿ ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್‌ಶಾಪ್ ನಿಯಮಗಳು 2018 ರ ಅಡಿಯಲ್ಲಿ ರೂಪಿಸಲಾದ ವಿವಿಧ ನಿಯಮಗಳನ್ನು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳು ಸ್ಪಷ್ಟವಾಗ
ಉಲ್ಲಂಘಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅನೇಕ ಕಡೆ ದಾಳಿ ಕೂಡ ಮಾಡಿದ್ದಾರೆ.
ಸರ್ಕಾರ ಜಾರಿಗೊಳಿಸಿದ ಪ್ರಮುಖ ಕಾರ್ಯಕ್ರಮಗಳು ಯಾವುವು ಎಂದು ತಿಳಿದುಕೊಳ್ಳಿ
- ಗೋಹತ್ಯೆ ನಿಷೇಧ ಕಾಯ್ದೆ ಜಾರಿ/ಪರಿಣಾಮಕಾರಿ ಅನುಷ್ಠಾನ.
- ಕುರಿಗಾರರು, ಸಾಕಾಣಿಕೆದಾರರ ಆರ್ಥಿಕ ಅಭಿವೃದ್ಧಿಗಾಗಿ ಸುಮಾರು 350 ಕೋಟಿ ರೂ. ಮೀಸಲಿಟ್ಟು ಅಮೃತ ಯೋಜನೆ ಜಾರಿ, ಈ ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ 3ರಿಂದ 6 ತಿಂಗಳ ವಯಸ್ಸಿನ ಕುರಿ, ಮೇಕೆಗಳಿಗೆ ನೀಡುವ ಪರಿಹಾರ ಧನ 2,500 ರಿಂದ 3,500 ರೂ.ಗೆ ಹೆಚ್ಚಳ ಮಾಡಿದ್ದಾರೆ.
- ಜಾನುವಾರುಗಳಿಗೆ ಚರ್ಮಗಂಟು ಲಸಿಕೆ ನೀಡಿಕೆ ಯಶಸ್ವಿ, ಆ ಮೂಲಕ ರೋಗ ನಿಯಂತ್ರಣ ಮಾಡುವುದು.
- ಈ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ 17 ಸಾವಿರ ಜಾನುವಾರು ಮೃತಪಟ್ಟಿದ್ದು, ಮೃತಪಟ್ಟ ಜಾನುವಾರುಗಳಿಗೆ ನೀಡಲು 30 ಕೋಟಿ ರೂ. ಪರಿಹಾರ ಧನ ಮೀಸಲಿಟ್ಟಿದ್ದಾರೆ.
- ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರುಗಳ ರೋಗಗಳ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಚರ್ಮಗಂಟು ರೋಗ ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಕ್ಯಾಪೀಪಾಕ್ಸ್ ವೈರಾಣುವಿನಿಂದ ಬರುತ್ತದೆ . ಸದರಿ ಖಾಯಿಲೆಯು ದನ, ಎಮ್ಮೆ, ಮಿಶ್ರತಳಿ ರಾಸುಗಳು ಹಾಗೂ ಕರುಗಳಲ್ಲಿ ಅತೀ ಹೆಚ್ಚಾಗಿ ಕಾಣಿಸಿ ಕೊಂಡಿದೆ. ಖಾಯಿಲೆಯಿಂದ ಬಳಲುತ್ತಿರುವ ರಾಸುಗಳಲ್ಲಿರುವ ಸೊಳ್ಳೆ, ನೊಣ, ಉಣ್ಣೆಗಳು ಆರೋಗ್ಯದ ರಾಸುಗಳನ್ನು ಕಚ್ಚುವುದರಿಂದ ಬಹುಬೇಗ ಹರಡಿಕೊಳ್ಳುತ್ತಿದೆ.
ರೋಗಕಾರಕ ವೈರಸ್ ಶೀಪಾಕ್ಸ್‌ಗೆ ಸಂಬಂಧಿಸಿದೆ. ಲಂಪಿ ಚರ್ಮದ ಕಾಯಿಲೆಯು ಸಾಂಕ್ರಾಮಿಕವಾಗಿ / ಸಾಂದರ್ಭಿಕವಾಗಿ ಕಾಣಿಸಿಕೊಳ್ಳುತ್ತದೆ. ಆರಂಭಿಕ ಏಕಾಏಕಿ ದೂರವಿರುವ ಪ್ರದೇಶಗಳಲ್ಲಿ ಸೋಂಕಿನ ಹೊಸ ಫೋಸಿಗಳು ಕಾಣಿಸಿಕೊಳ್ಳುತ್ತವೆ. ಬೇಸಿಗೆಯ ವಾತಾವರಣದಲ್ಲಿ ಇದರ ಸಂಭವವು ಹೆಚ್ಚಾಗಿರುತ್ತದೆ, ಆದರೆ ಇದು ಚಳಿಗಾಲದಲ್ಲಿ ಸಂಭವಿಸಬಹುದು. ನೀರಿನ ಹರಿವುಗಳಲ್ಲಿ ಮತ್ತು ತಗ್ಗು ನೆಲದ ಮೇಲೆ ಹೆಚ್ಚು ಪ್ರಚಲಿತವಾಗಿದೆ.ಈ ಸೋಂಕಿನ ಹರಡುವಿಕೆಯನ್ನು ಮಿತಿಗೊಳಿಸಲು ವಿನ್ಯಾಸಗೊಳಿಸಲಾದ ಕ್ವಾರಂಟೈನ್ ನಿರ್ಬಂಧಗಳು ಸಾಮಾನ್ಯವಾಗಿ ವಿಫಲಗೊಳ್ಳುವುದರಿಂದ, ಕಚ್ಚುವ ಕೀಟಗಳನ್ನು ಯಾಂತ್ರಿಕ ವಾಹಕಗಳೆಂದು ಶಂಕಿಸಲಾಗಿದೆ, ಆದಾಗ್ಯೂ, ಕೀಟಗಳನ್ನು
ಪ್ರಾಯೋಗಿಕವಾಗಿ ಹೊರಗಿಡಬಹುದಾದ ಪರಿಸ್ಥಿತಿಗಳಲ್ಲಿ ಏಕಾಏಕಿ ಸಂಭವಿಸುತ್ತಿದೆ. ಪ್ರಾಯೋಗಿಕವಾಗಿ, ಆಫ್ರಿಕಾದಲ್ಲಿ ಕಂಡುಬರುವ ಮೂರು ಜಾತಿಯ ಹಾರ್ಡ್ ಉಣ್ಣಿಗಳು ಜೈವಿಕವಾಗಿ ವೈರಸ್ ಅನ್ನು ಹರಡುತ್ತವೆ ಎಂದು ತೋರಿಸುತ್ತಿದ್ದಾರೆ. ಸೋಂಕಿತ ಲಾಲಾರಸದಿಂದ ರೋಗವು ಪ್ರಾಯೋಗಿಕವಾಗಿ ಹರಡಬಹುದಾದ ಕಾರಣ, ಸಂಪರ್ಕ ಸೋಂಕು ಸೋಂಕಿನ ಮತ್ತೊಂದು ಸಂಭಾವ್ಯ ಮಾರ್ಗ. ಆಫ್ರಿಕನ್ ಎಮ್ಮೆಗಳು ಆಫ್ರಿಕಾದಲ್ಲಿ ನಿರ್ವಹಣೆ ಹೋಸ್ಟ್‌ಗಳೆಂದು ಶಂಕಿಸಲಾಗಿದೆ, ಇತರ ವನ್ಯಜೀವಿ ಪ್ರಭೇದಗಳು ಸಹ ಭಾಗಿಯಾಗಬಹುದು.
ಪರಿಹಾರ ಧನವನ್ನು ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗೆ RTGS/NEFT ಮುಖಾಂತರ ನೇರವಾಗಿ ಪಾವತಿ.
ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುವಿನ ಸೂಕ್ತ ಛಾಯಚಿತ್ರಗಳು/ ಯುಐಡಿ ಇಯರ್ ಟ್ಯಾಗ್ ಆಗಿರಬೇಕು.
ಆಗಸ್ಟ್ 1ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಚರ್ಮಗಂಟು ರೋಗದಿಂದ ಮರಣಿಸಿದ ಜಾನುವಾರುಗಳ ಛಾಯಚಿತ್ರಗಳು ಲಭ್ಯವಿರಬೇಕು. ಈ ಮೇಲಿನ ಎಲ್ಲಾ ದಾಖಲಾತಿಗಳನ್ನ ಮೂರು ಜನ ಸ್ಥಳೀಯ ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಬೇಕು. ನಿಮ್ಮ ಪಂಚಾಯತಿಯ ಸದಸ್ಯರನ್ನು ಭೇಟಿ ಮಾಡಿ ದಾಖಲಾತಿ ಪರಿಶೀಲಿಸದ ನಂತರ ನಿಮ್ಮ ಹತ್ತಿರದ ಪಶವೈದ್ಯಾಧಿಕಾರಿಗಳ ಬಳಿ ಕೊಟ್ಟು ಅರ್ಜಿ ಸಲ್ಲಿಸಿ.
ಸಂಶೋಧನೆಗಳು
ಈ ರೋಗದಿಂದ ಸೋಂಕಿತ ಜಾನುವಾರುಗಳು ಜ್ವರ, ಲ್ಯಾಕ್ರಿಮೇಷನ್, ಮೂಗು ಸೋರುವಿಕೆ ಮತ್ತು ಹೈಪರ್ಸಲೈವೇಶನ್ ಅನ್ನು ಅಭಿವೃದ್ಧಿಪಡಿಸುತ್ತವೆ, ನಂತರ 50% ಒಳಗಾಗುವ ಜಾನುವಾರುಗಳಲ್ಲಿ ಚರ್ಮ ಹಾಗೂ ದೇಹದ ಇತರ ಭಾಗಗಳ ಮೇಲೆ ವಿಶಿಷ್ಟವಾದ ಸ್ಫೋಟಗಳು ಕಂಡುಬರುತ್ತವೆ.
ರೋಗದ ಲಕ್ಷಣಗಳು :
- ಅತೀಯಾದ ಜ್ವರ ಮತ್ತು ನಿಶ್ಯಕ್ತಿ
- ಕಾಲು ಊತ ಮತ್ತು ಕುಂಟುವುದು
- ಕಣ್ಣುಗಳಿಂದ ನೀರು ಸೋರುವುದು
- ರಾಸುಗಳ ಚರ್ಮದ ಮೇಲೆ ಗುಳ್ಳೆ ಕಾಣಿಸಿಕೊಂಡು ನಂತರ ಗುಳ್ಳೆಯು ಒಡೆದು ಗಾಯವಾಗುವುದು.
- ಹಾಲು ಇಳುವರಿ ಕಡಿಮೆಯಾಗುವುದು ಹಾಗೂ ಕೆಲ ಸಂದರ್ಭಗಳಲ್ಲಿ ಗರ್ಭಪಾತವಾಗುವುದು . ರಾಸುಗಳಲ್ಲಿ ಈ ಮೇಲಿನ ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಲ್ಲಿ ರಾಸುಗಳು ಮರಣ ಹೊಂದುವುದನ್ನು ತಪ್ಪಿಸಬಹುದು .
ರೋಗ ಹರಡುವಿಕೆ :
- ಸೊಳ್ಳೆ, ನೊಣ ಉಣ್ಣೆ ಮತ್ತು ಇತರೇ ರಕ್ತ ಹೀರುವ ಕೀಟಗಳಿಂದ 2. ಕಲುಷಿತ ನೀರು ಮತ್ತು ಆಹಾರದಿಂದ 3. ರೋಗಗ್ರಸ್ತ ರಾಸುಗಳು ಹಾಗೂ ಆರೋಗ್ಯಕರ ರಾಸುಗಳೊಂದಿಗಿನ ಸಂಪರ್ಕದಿಂದ ಹರಡುತ್ತದೆ
ರೋಗ ತಡೆಗಟ್ಟುವಿಕೆ :
- ಪಶುವೈದ್ಯಕೀಯ ಇಲಾಖೆಯ ವತಿಯಿಂದ ರಾಸುಗಳಿಗೆ ಪಾಕ್ಸ್‌ವೈರಸ್ ಲಸಿಕೆ ಹಾಕಿಸಬೇಕು.
- SODIUM HYPOCHLORITE SODA ರಾಸಾಯನಿಕವನ್ನು ಉಪಯೋಗಿಸಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು.
- ರಾಸುಗಳ ಮೇಲೆ ಸೊಳ್ಳೆ ನೋಣ ಮತ್ತು ಉಣ್ಣೆ ಕೂರದಂತೆ ನೋಡಿಕೊಳ್ಳಬೇಕು.
- ರೋಗಗ್ರಸ್ತ ರಾಸುಗಳಿಂದ ಆರೋಗ್ಯಕರ ರಾಸುಗಳನ್ನು ಬೇರ್ಪಡಿಸಬೇಕು.
- ರೋಗಗ್ರಸ್ತ ರಾಸುಗಳಿಗೆ ಉಪಯೋಗಿಸಿದ ಮೇವು, ಪಶು ಆಹಾರ ಮತ್ತು ಇತರೇ ಪರಿಕರಗಳನ್ನು ಸ್ವಚ್ಛಗೊಳಿಸಬೇಕು.
- ಅತೀ ಮುಖ್ಯವಾಗಿ ಖಾಯಿಲೆಯು ಹರಡಿದ ಪ್ರದೇಶದಿಂದ ರಾಸುಗಳನ್ನು ಖರೀದಿ ಮಾಡದೇ ಇರಬೇಕು.
ಚಿಕಿತ್ಸೆ ವಿಧಾನ :
- ಈ ಖಾಯಿಲೆಯು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ . ಆದ್ದರಿಂದ ಖಾಯಿಲೆ ಬಂದ ರಾಸುಗಳಿಗೆ ನುರಿತ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವುದು.
- ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಷಿಯಂ ಪರಮಾಂಗನೇಟ್ ದ್ರಾವಣದಿಂದ ತೊಳೆದು ಯಾವುದೇ ಗಾಯದ ಮುಲಾಮು ಲೇಪಿಸಬೇಕು.
- ರಾಸುವನ್ನು ತಂಪಾದ ಜಾಗದಲ್ಲಿ ಇರಿಸಬೇಕು.
- ಸ್ವಚ್ಛವಾದ ನೀರು, ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣವನ್ನು ನೀಡುವುದು . 5. ಅತೀ ಮುಖ್ಯವಾಗಿ ರಾಸುವಿನ ದೇಹದ ಮೇಲೆ ಸೊಳ್ಳೆ, ನೊಣ ಮತ್ತು ಉಣ್ಣೆಗಳಿದ್ದಲ್ಲಿ ಅವುಗಳನ್ನು ತೆರವುಗೊಳಿಸಿ, ಕೀಟಗಳನ್ನು ನಿಯಂತ್ರಿಸಲು ಕೊಟ್ಟಿಗೆಗೆ ಹಸಿಬೇವು ಸೊಪ್ಪಿನ ಹೊಗೆ ಹಾಕುವುದು.
ಔಷಧದ ಸೂತ್ರ:
1) ಬಾಜುಯ ಮುಖಾಂತರ ನೀಡಬಹುದಾದ ಔಷಧಿ
ತಯಾರಿಕೆ ಪದಾರ್ಥಗಳು :
- ವೀಳ್ಯದ ಎಲೆ- 10 ಎಲೆಗಳು
- ಕರಿಮೆಣಸು -10 ಗ್ರಾಂ, + ಉಪ್ಪು -10 ಗ್ರಾಂ + ಬೆಲ್ಲ ಎಲ್ಲಾ ಪದಾರ್ಥಗಳನ್ನು ಬೆರೆಸಿ, ಅಗತ್ಯವಿದ್ದಷ್ಟು ಬೆಲ್ಲ ಹಾಕಿ ಪೇಸ್ಟನ್ನು ತಯಾರಿಸಿ ಮೊದಲ ದಿನಕ್ಕೆ ಪ್ರತಿ ಮೂರು ಗಂಟೆಗಳಿಗೊಮ್ಮೆ/ ಎರಡನೇ ದಿನದಿಂದ ಎರಡು ವಾರಗಳವರೆಗೆ ಪ್ರತಿ ದಿನ ಮೂರು ಬಾರಿ ಸಣ್ಣ ಸಣ್ಣ ಪ್ರಮಾಣದಲ್ಲಿ ತಿನ್ನಿಸಿರಿ . ಪ್ರತಿ ಬಾರಿ ಔಷಧಿಯನ್ನು ಹೊಸದಾಗಿ ತಯಾರಿಸಿಕೊಳ್ಳುವುದು.
2) ಗಾಯ ಇದ್ದಲ್ಲ ಲೇಪನೆಗೆ.
ಚರ್ಮಗಂಟು ರೋಗಕ್ಕೆ ಪರಿಹಾರ
ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರು ಮಾಲೀಕರಿಗೆ ಪ್ರತಿ ಹೈನು ರಾಸುಗಳಿಗೆ ಗರಿಷ್ಠ 20,000 ಮತ್ತು ಎತ್ತುಗಳಿಗೆ 30,000 ಹಾಗೂ ಪ್ರತಿ ಕರುವಿಗೆ 5000 ರೂ.ಪರಿಹಾರ ನೀಡಲಾಗುತ್ತಿದೆ.