ಕುಸುಬೆ ಹಿಂಗಾರಿನಲ್ಲಿ ಬೆಳೆಯುವ ಮುಖ್ಯವಾದ ಎಣ್ಣೆಕಾಳು ಬೆಳೆಯಾಗಿದೆ. ಇದನ್ನು ಈ ಭಾಗದ ಕಪ್ಪು ಜಮೀನಿನಲ್ಲಿ ವಿಶೇಷವಾಗಿ ಮಳೆಯಾಶ್ರಿತದಲ್ಲಿ ಬೆಳೆಯಲಾಗುತ್ತಿದೆ. ಇದರ ಬೇಸಾಯ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಕುಸುಬೆಯನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರ ವರೆಗೆ ಬಿತ್ತನೆ ಮಾಡಬಹುದು, ಬಿತ್ತನೆಗೆ ಅಣ್ಣಿಗೇರಿ-1 ಮತ್ತು ಅಣ್ಣಿಗೇರಿ-2, ಎಸ್ -144 ಪ್ರಮುಖ ತಳಿಗಳಿವೆ. ಬಿತ್ತನೆ ಪ್ರತಿ ಎಕರೆಗೆ ಮೂರರಿಂದ ಮೂರುವರೆ ಕೆಜಿ ಬೀಜ, 2.5 ಟನ್ ಕೊಟ್ಟಿಗೆ/ ಕಾಂಪೋಸ್ಟ್ ಗೊಬ್ಬರ ಹಾಗೂ 200 ಗ್ರಾಂ ಅಜೋಸ್ಪಿರಿಲಂ ಜೈವಿಕ ಗೊಬ್ಬರ ಬೇಕಾಗುವುದು. ಪ್ರತಿ ಎಕರೆಗೆ 16 ಕೆಜಿ ಸಾರಜನಕ, 16 ಕೆಜಿ ರಂಜಕ, 5 ಕೆಜಿ 12 ಕೆಜಿ ಗಂಧಕ ಮತ್ತು 6 ಕೆಜಿ ಸತುವಿನ ಸಲ್ವೇಟ್ ಬೇಕಾಗುವುದು. ಬಿತ್ತನೆ ಸಮಯದಲ್ಲಿ ಪೂರ್ತಿ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಬೇಕು.
ಶಿಫಾರಿತ ಪ್ರಮಾಣದ ಬೀಜಗಳನ್ನು ಜೋಡು ಸಾಲು ಪದ್ಧತಿ ಅನುಸರಿಸಿ ಬಿತ್ತಬೇಕು. ಸಾಲಿನಿಂದ ಸಾಲಿಗೆ 45 ಸೆಂ.ಮೀ ಬೀಜದಿಂದ ಬೀಜಕ್ಕೆ 30 ಸೆಂ.ಮೀ., ಹಾಗೂ ಎರಡು ಸಾಲು ಬಿತ್ತನೆ ನಂತರ ಒಂದು ಸಾಲು ಹುಸಿ ಬಿಡಬೇಕು. ಬಿತ್ತನೆಯಾದ 25 ರಿಂದ 30 ದಿನಗಳ ನಂತರ ಹುಸಿ ಸಾಲನ್ನು ರೆಂಟೆಯಿಂದ ಹರಿ ಮಾಡುವುದರಿಂದ ಹೆಚ್ಚಿನ ಪ್ರಮಾಣ ಮಳೆ ನೀರು ಸಂಗ್ರಹವಾಗಿ ಅಧಿಕ ಇಳುವರಿ ಪಡೆಯಬಹುದು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಅಣಬೆ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯಿರಿ ಲಕ್ಷಗಟ್ಟಲೆ ಹಣ ಸಂಪಾದಿಸಿ, ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ 🍄🍄🐑🐑
ಹೂವನ್ನು ಬಿಡುವ ಹಂತದಲ್ಲಿ ವಿರಾಟ್ ಬಳಕೆ ಮಾಡಿದರೆ ಪ್ರಯೋಜನ ಏನು? ಬೀಜ ಸಂರಕ್ಷಣೆ ಮಾಡಲು ಈ ವಿರಾಟ್ ಔಷಧಿ ಬಳಕೆ ಹೇಗೆ?
ಮರದ ಗಾಣದಲ್ಲಿ ತಯಾರಿಸಿದ ಎಣ್ಣೆಗಳು ಮತ್ತು ವಿಷಮುಕ್ತ ಆಹಾರ ಪದಾರ್ಥಗಳು ಸಿಗುತ್ತವೆ
ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ