Breaking
Wed. Dec 18th, 2024

ಕುರಿ ಹಾಗೂ ಮೇಕೆ ಖರೀದಿಸಲು ಪ್ರೋತ್ಸಾಹಾಧನ

Spread the love

ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ ಜಮೀನುಗಳಲ್ಲಿ ಮೇಯಿಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಏಕೆಂದರೆ ಇವುಗಳನ್ನು ಕಟ್ಟಿ ಮೇಯಿಸುವುದಾಗಲಿ ಹಟ್ಟಿಗಳಲ್ಲಿ ಕೂಡಿ ಮೇಯಿಸುವುದಾಗಲಿ ಸಾಧ್ಯವಾಗುವುದಿಲ್ಲ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿಯಮಿತ ಸಹಾಯಕ ನಿರ್ದೇಶಕ ಡಾ.ಬಸಯ್ಯ ಸ್ವಾಮಿ ಮಾತನಾಡಿ, ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ ಮೂಲಕ ಕುರಿಗಳನ್ನು ಹಾಗೂ ಮೇಕೆಗಳನ್ನು ಪಡೆಯಲು ಅರ್ಜಿಗಳನ್ನು ಅಭಾನಿಸಲಾಗಿದೆ ಎಂದು ತಿಳಿಸಿದರು.

ಯಾರು ಅರ್ಹರು :-

ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಯಾರಾದರೂ ಸರಿ
ವಯಸ್ಸಿನ ವಯೋಮಿತಿ :- 18 ರಿಂದ 60 ವರ್ಷದೊಳಗಿನ ನೊಂದಣಿ ಮಾಡಿರುವ ಅಭ್ಯರ್ಥಿಗಳು.
ನೋಂದಾಯಿತ ಸಂಸ್ಥೆ ಇಲ್ಲದಿರುವ ತಾಲ್ಲೂಕುಗಳಲ್ಲಿ ಕುರಿ ಸಾಕಣೆದಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :-

1.ತಾಲ್ಲೂಕು ಅಥವಾ ಹೋಬಳಿ ಕುರುಬರ ಸಹಕಾರ ಸಂಘ ಅಥವಾ ಅವರ ಫ್ರೂಟ್. ಐಡಿ , ಅರ್ಜಿದಾರರಿಗೆ ಅಗತ್ಯವಾಗಿದೆ.
2.ಆಧಾರ್ ಕಾರ್ಡ್‌ ಝೆರಾಕ್ಸ್
3.ಬ್ಯಾಂಕ್ ಖಾತೆ ಪಾಸ್ ಬುಕ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ವಾಸಸ್ಥಳದ ಪ್ರಮಾಣ ಪತ್ರ
6.ಮತದಾರರ ಗುರುತಿನ
7.ಮಳೆ ಕಾರ್ಡ್ ದಾಖಲಾತಿ ಅದರ ಜೊತೆಗೆ ಸೇವಾ ವಲಯದ 8.ಬ್ಯಾಂಕ್‌ನಿಂದ ಸಾಲ ಮಂಜೂರಾತಿ ಪತ್ರ.

ಪರಿಶಿಷ್ಟ ಜಾತಿ 3, ಪರಿಶಿಷ್ಟ ಪಂಗಡ 4, ಸಾಮಾನ್ಯ 22 ಕ್ಕೆ ಸೇರಿದಂತೆ ಒಟ್ಟು 29 ಘಟಕ ಜಿಲ್ಲಾವಾರು ಗುರಿಗಳನ್ನು ನಿಗದಿಪಡಿಸಿದ್ದು. ಅರ್ಹ ಕುರಿಗಳ ಮಾಲೀಕರು ವಿಜಯನಗರ ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಪಶು ಆಸ್ಪತ್ರೆಗೆ ಅಗತ್ಯ ಅರ್ಜಿ ಸಾಮಗ್ರಿಗಳನ್ನು ಮೇಲ್ ಮೂಲಕ ತಲುಪಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- 7892285129

ಇದನ್ನೂ ಓದಿ :- ಕೇವಲ ಈ ಒಂದು ಕಾರ್ಡ್ ಇದ್ದರೆ ಸಾಕು 5000 ರೂಪಾಯಿ ಇಂದ 75000 ರೂಪಾಯಿ ಸಹಾಯಧನ ಪಡೆಯಬಹುದು ಈಗಲೇ ಅರ್ಜಿಯನ್ನು ಸಲ್ಲಿಸಿರಿ ಹಾಗೂ ಸಹಾಯಧನವನ್ನು ಪಡೆಯಿರಿ

ಇದನ್ನೂ ಓದಿ :- ಅಂಗೈಯಲ್ಲಿ ನೀವು ನಿಮ್ಮ ಜಮೀನಿನ ಪಹಣಿಯನ್ನು ಮುದ್ರಿಸಬಹುದು ಮೊಬೈಲ್ ನಲ್ಲಿ ಹೇಗೆ ಪಹಣಿ ಡೌನ್ಲೋಡ್ ಮಾಡುವುದು.

ಇದನ್ನೂ ಓದಿ :- ಸರ್ವೆನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಬೆಳೆ ಸಾಲ ಎಷ್ಟಿದೆ ಎಂದು ಚೆಕ್ ಮಾಡಿ

Related Post

Leave a Reply

Your email address will not be published. Required fields are marked *