ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ತಿಳಿದಿರಬಹುದು ಪ್ರಧಾನಮಂತ್ರಿ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನಿಮಗೆ ಒಂದು ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಪ್ರಧಾನಮಂತ್ರಿಯವರಿಂದ ನಿಮಗೆ ದೊರೆಯುತ್ತಿತ್ತು. ಈಗ ನಮ್ಮ ಮೋದಿಜಿಯವರು ರೈತರಿಗೆ ಬರಗಾಲ ಬಂದ ಕಾರಣ ಅವರಿಗೆ ಸಹಾಯವನ್ನು ಮಾಡುವ ದೃಷ್ಟಿಯಿಂದ ಈ 6,000ಗಳನ್ನು ರೂ.8000ಗಳಿಗೆ ಏರಿಕೆ ಮಾಡಬೇಕೆಂಬ ನಿರ್ಧಾರವನ್ನು ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರದಿಂದ ಈ ನಿರ್ಧಾರ
ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಪೂರಕವಾಗಿ ರೈತರ ಬೆಂಬಲ ಕ್ರೋಡೀಕರಿಸುವ ಉದ್ದೇಶದಿಂದ ಈಗ ಸಣ್ಣ ಹಿಡುವಳಿದಾರರಿಗೆ ನೀಡುತ್ತಿರುವ ನಗದು ನೆರವನ್ನು ಮೂರನೇ ಒಂದರಷ್ಟು ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿರುವ ವಾರ್ಷಿಕ 6,000 ರೂಪಾಯಿ ಮೊತ್ತವನ್ನು 8,000 ರೂಪಾಯಿಗೆ ಏರಿಸಲು ಸರ್ಕಾರ ಚಿಂತನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗಾಗಿ ಎಷ್ಟು ಕೋಟೆ ಹೆಚ್ಚಿಗೆ ಮೀಸಲು
ಒಂದು ವೇಳೆ ಈ ಅನು ಮೋದನೆ ಸಿಕ್ಕರೆ ಸರ್ಕಾರದ ಬೊಕ್ಕ ಸಕ್ಕೆ ಹೆಚ್ಚುವರಿಯಾಗಿ 22 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ. ದೇಶದ 140 ಕೋಟಿ ಜನಸಂಖ್ಯೆಯ ಅಂದಾಜು ಶೇ. 65ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಈ ರೈತರು ನರೇಂದ್ರ ಮೋದಿ ಬೆಂಬಲದ ನಿರ್ಣಾಯಕ ಭಾಗವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಆದಕಾರಣ ಕೇಂದ್ರದ ಬೊಕ್ಕಸಕ್ಕೆ 22,000 ಕೋಟಿ ಹೆಚ್ಚುವರಿ ಹೊರೆ, ಸಣ್ಣ ರೈತರಿಗೆ ಇನ್ನೂ ಹೆಚ್ಚು ನಗದು ಬೆಂಬಲ. 8000ಗಳನ್ನು ಪಡೆಯಲು ನೀವು ಅರ್ಹತೆಯನ್ನು ಹೊಂದುವುದು ತುಂಬಾ ಮುಖ್ಯವಾಗಿದೆ. ಈಗಾಗಲೇ 6000 ರುಪಾಯಿಗಳನ್ನು ತೆಗೆದುಕೊಳ್ಳುವ ಎಲ್ಲಾ ರೈತರಿಗೆ 8000 ಪಕ್ಕ ಬಂದೇ ಬರುತ್ತದೆ. ಕೆಲವೊಂದು ರೈತರಿಗೆ PM kisan ಹಣ ಯಾವುದೋ ಕಾರಣದಿಂದ ಬಂದಿರುವುದಿಲ್ಲ ಅದನ್ನು ಬೇಗನೆ ಸರಿಪಡಿಸಿಕೊಂಡು ಈ 8,000ಗಳನ್ನು ಪಡೆಯಬೇಕಾಗಿ ವಿನಂತಿ.
✅ಕೈಮಗ್ಗ ಮತ್ತು ಜವಳಿ ನೇಕಾರರಿಗೆ ಸಾಲ ಸೌಲಭ್ಯ*💸💸
ಕಬ್ಬಿನ ತೂಕದ ಬಗ್ಗೆ ಅನುಮಾನ ಬಂದಲ್ಲಿ ಈ ಸಂಖ್ಯೆ ಕರೆ ಮಾಡಿ, ✅ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸಿಹಿ ಸುದ್ದಿ*
🐓ಕೋಳಿ ಫಾರ್ಮ್ ಪ್ರಾರಂಭಕ್ಕೆ 50% ಸಾಲ ಸೌಲಭ್ಯ, ✅ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಹಣ ಪಡೆಯಿರಿ*
ಇನ್ನು ಯಾರು ಯಾರಿಗೆ ಬಂದಿಲ್ಲ ನೀವು ಈ ಕೆಲಸ ಮಾಡಿ ಹಾಗೂ ಹಣ ಪಡೆಯಿರಿ, ಸ್ಟೇಟಸ್ ಚೆಕ್ ಮಾಡಿ*