ತೊಗರಿಯಲ್ಲಿ ಬಲೆ ಕಟ್ಟುವ ಕೀಟ ಹತೋಟಿ. ತೊಗರಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಬೆಳೆಯಲ್ಲಿ ಸಾಮಾನ್ಯವಾಗಿ ಬಲೆ ಕಟ್ಟುವ ಹುಳುವಿನ ಬಾಧೆ ಎಲ್ಲೆಡೆ ಕಂಡು ಬಂದಿದ್ದು, ಇದರ ನಿರ್ವಹಣೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಹೆಣ್ಣು ಪತಂಗವು ಹಳದಿ ಬಣ್ಣದ ಗುಂಡಾಗಿರುವ ತತ್ತಿಗಳನ್ನು ಬಿಡಿ ಬಿಡಿಯಾಗಿ ಹೂ ಮೊಗ್ಗು ಮತ್ತು ಕುಡಿ ಭಾಗದಲ್ಲಿ ಇಡುತ್ತದೆ.
ತತ್ತಿಯಿಂದ 2-3 ದಿನಗಳಲ್ಲಿ ಹೊರಬರುವ ಮರಿ ಕೀಡೆಗಳು ಹಸಿರು ಬಣ್ಣದ್ದಾಗಿರುತ್ತವೆ. ಕೀಡೆಗಳು ಎಲೆ, ಮೊಗ್ಗು ಒಟ್ಟುಗೂಡಿಸಿ ಅದರೊಳಗಿದ್ದು ತಿನ್ನುತ್ತವೆ.
ಬಲೆಕಟ್ಟುವ ಹುಳು ಹತೋಟಿಗಾಗಿ ಪ್ರೊಫೆನೋಪಾಸ್ 2 ಮೀಲಿ. ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಸಿಪೇಟ್ 1 ಗ್ರಾಂ ಅಥವಾ 1.7 ಮಿ.ಲೀ ಡೈಮಿಥೋಯೆಟ್ ಅಥವಾ ಮೋನೋಕ್ರೋಟೋಪಾಸ್ 1 ಮಿಲೀ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಈ ಕೀಟದ ಹಾವಳಿ ಮತ್ತೆ ಕಂಡ ಕೂಡಲೇ 15 ದಿನಗಳ ಅಂತರದಲ್ಲಿ ಎರಡು ಸಲ ಸಿಂಪರಣೆ ಕೈಗೊಳ್ಳಬೇಕು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
*ಬೆಳೆಗಳಲ್ಲಿ ಕೀಟಪೀಡೆ ಹೆಚ್ಚಾಗಲು ಕಾರಣಗಳು, ಇಲ್ಲಿದೆ ಸಂಪೂರ್ಣ ಮಾಹಿತಿ*
*ಕೇವಲ ಆರು ತಿಂಗಳಿಗೆ ಎರಡು ಕೆಜಿ ಬರುವಂತಹ ಮೀನು ಮರಿಗಳು ಇವರ ಬಳಿ ಸಿಗುತ್ತದೆ*