ಕೃಷಿ ಇಲಾಖೆಯಿಂದ ರೈತ ಉತ್ಪಾದಕರ ಸಂಸ್ಥೆಗಳ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದಿಂದ 2023-24 ನೇ ಸಾಲಿನ ಆಯವ್ಯದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ ರೂ. 20 ಲಕ್ಷ ವರೆಗಿನ ಸಾಲಕ್ಕೆ ಶೇ 4% ರ ಬಡ್ಡಿ ಸಹಾಯಧನ ನೀಡಲಾಗುವುದು ಎಂದು ಘೋಷಿಸಲಾಗಿರುತ್ತದೆ ಹಾಗೂ ಅನುಮೋದನೆ ನೀಡಲಾಗಿರುತ್ತದೆ. ವಿಜಯನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತ ಉತ್ಪಾದಕರ ಸಂಸ್ಥೆಗಳು ಈ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿ.18 ಕೊನೆಯ ದಿನವಾಗಿರುತ್ತದೆ.
ಸ್ವೀಕೃತವಾದ ಅರ್ಜಿಗಳಿಗೆ ನಿಯಮಾನಸಾರ ಬಡ್ಡಿ ಸಹಾಯಧನವನ್ನು ಸಂಬಂಧಿಸಿದ ರೈತ ಉತ್ಪಾದಕರ ಸಂಸ್ಥೆಗಳ ಸಾಲದ ಖಾತೆಗೆ ಪಾವತಿಸಲಾಗುವುದು. ಜಿಲ್ಲೆಯ ರೈತ ಉತ್ಪಾದಕರ ಸಂಸ್ಥೆಗಳು ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಾಗೂ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರಿಗೆ 24 ಗಂಟೆಯಲ್ಲಿ ಟಿಸಿ -ಹಣ ಸಂದಾಯ ಮಾಡುವಂತಿಲ್ಲ
ಕಲಾದಗಿ ಶಾಖೆಗೆ ಬಂತು ವಿದ್ಯುತ್ ಪರಿವರ್ತಕ ಬ್ಯಾಂಕ್. ಇದುವರೆಗೂ ರೈತರಿಗೆ ಟ್ರಾನ್ಸ್‌ಪಕ್ಟರ್ (ಟಿ.ಸಿ) ಉಪವಿಭಾಗದಿಂದ ದೊರೆಯುತ್ತಿತ್ತು ಇಂದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಾದಗಿ ಶಾಖಾ ಕಚೇರಿಯಿಂದ ವಿದ್ಯುತ್ ಪರಿವರ್ತಕ (ಟಿ.ಸಿ ಬ್ಯಾಂಕ್ ) ದೊರಕಲಿದ್ದು, ಈ ಸೇವೆ ಐದು ಗ್ರಾಮ ಪಂಚಾಯಿತಿಗೆ ಸೀಮಿತವಾಗಿರುತ್ತದೆ. ಈ ಕುರಿತು ರವಿವಾರ ಕಲಾದಗಿಯ ಹೆಸ್ಕಾಂ ಕಚೇರಿಯಲ್ಲಿ ಟಿ.ಸಿ ಬ್ಯಾಂಕ್ ಗೆ ಚಾಲನೆ ನೀಡಿ ಮಾತನಾಡಿದ ಬೀಳಗಿ ಶಾಸಕ ಜೆ.ಟಿ ಪಾಟೀಲ್ ಅವರು, ಕಳೆದ ನಾಲ್ಕು ತಿಂಗಳಿಂದ ಹೆಸ್ಕಾಂ ಅಧಿಕಾರಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ ಭಾಗದ ರೈತರ ಹಿತಕ್ಕಾಗಿ ಮತ್ತು ಕೃಷಿ ಚಟುವಟಿಕೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಇನ್ನು ಮುಂದೆ ರೈತರ ಟಿ.ಸಿ ಸುಟ್ಟರೆ 24 ಗಂಟೆಯೊಳಗಾಗಿ ಸುಟ್ಟ ಟಿ.ಸಿ ಮರಳಿಸಿ ಹೊಸ ಟಿಸಿ ಕೂಡಿಸಿ ಕೊಡಲಾಗುವುದು. ಇದಕ್ಕಾಗಿ ಯಾವ ಸಿಬ್ಬಂದಿಗೂ ಹಣ ನೀಡಬೇಕಾಗಿಲ್ಲ ಎಂದರು. ಸತತವಾಗಿ ಈ ಯೋಜನೆ ನಾಲ್ಕು ವರ್ಷಗಳ ವರೆಗಾದರೂ ಚಲವಣೆಯಲ್ಲಿ ಇರಬೇಕು. ಒಂದು ವೇಳೆ ತೋಂದರೆಯಾದರೇ ನಾನೇ ರೈತರ ಜೊತೆ ಸೇರಿ ಪ್ರತಿಭಟಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಈ ಹಿಂದೆ ಟಿ.ಸಿ ಸುಟ್ಟರೆ 20 ರಿಂದ 30 ಸಾವಿರ ರೂ ಕೊಡಬೇಕಾಗುತ್ತಿತ್ತು. ಅಲ್ಲದೆ, ಆ ಟಿ.ಸಿ ಆವಲಂಬಿತರೆಲ್ಲರು ಸೇರಿ ಹಣ ಕೂಡಿಸಿ ಕೊಡಬೇಕಾಗುತ್ತಿತ್ತು. ಆದರೆ ಇಂದು ಅಧಿಕಾರಿಗಳೇ ಹೇಳುತ್ತಾ ಇದ್ದಾರೇ ಟಿ.ಸಿ ಸುಟ್ಟ 24 ಗಂಟೆಯಲ್ಲಿಯೇ ಬದಲಾಯಿಸಲಾಗುವುದ ಎಂದು. ಅದಕ್ಕಾಗಿ ರೈತರ ಪರವಾಗಿ ಅವರಿಗೆ ಅಭಿನಂದಿಸುವೆ ಎಂದರು.
ಬರುವ ಡಿ. 20 ರೊಳಗಾಗಿ ಉಪವಿಭಾಧಿಕಾರಿ ತಹಶಿಲ್ದಾರ್ ಗ್ರಾಮ ಲೆಕ್ಕಾಧಿಕಾರಿ ಪಿ.ಡಿ.ಓ ಗಳ ಸಭೆ ಕರೆದು ಸರಕಾರದ ಗ್ಯಾರಂಟಿ ಯೋಜನೆಗಳ ಕುರಿತು ಸಭೆ ನಡೆಸಿ ಅವಕಾಶ ವಂಚಿತರಿಗೆ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುವುದ ಎಂದರು. ಬೆಳಗಾವಿಯ ವಿಭಾಗಿ ಹೆಸ್ಕಾಂ ಎಂ ಡಿ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲಾದಗಿ ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಚಿಕ್ಕ ಸೆಲ್ಲಿಕೇರಿ ಗ್ರಾಪಂ ಅಧ್ಯಕ್ಷೆ ಗೀತಾ ನಾಯಕರ್ ಉಪಧ್ಯಕ್ಷರಾದ ಪಕೀರಪ್ಪ ಮಾದರ ಶಾಸಪ್ಪ ಗುಡಿ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಖಲಿಂ ಹಮ್ಮದದ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಬಾಲಚಂದ್ರ ಹಲಗತ್ತಿ ಶಾಖಾಧಿಕಾರಿಗಳಾದ ಚಂದ್ರು ಚಲವಾದಿ, ಗದಿಗೆಪ್ಪ ಛಬ್ಬಿ ಸೇರಿದಂತೆ ಇತರರು ಇದ್ದರು.
ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಪರಿಹಾರ ನೀಡದ ಜೀವ ವಿಮಾ ನಿಗಮಕ್ಕೆ ರೂ.6 ಲಕ್ಷಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸಿ ದೂರುದಾರರಿಗೆ ಪರಿಹಾರ ನೀಡಲು ಆದೇಶ
ಹುಬ್ಬಳ್ಳಿಯ ಲಲಿತಾ ನಾಕೋಡ ಹಾಗೂ ಧಾರವಾಡದ ಪ್ರವೀಣ ಕಲ್ಲಟ್ಟಿ ಎಂಬುವವರು ಎದುರುದಾರ ಕರ್ನಾಟಕ ಬ್ಯಾಂಕ್ ಮತ್ತು ಜೀವ ವಿಮಾ ನಿಗಮದ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದರು. ಆ ದೂರಿನಲ್ಲಿ ಅವರು ತಮಗೆ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯನ್ವಯ ಬರಬೇಕಾದ ಮೊತ್ತವನ್ನು ಕೊಡದೇ ಸತಾಯಿಸುತ್ತಿದ್ದಾರೆ ಎಂದು ದೂರಿದ್ದರು. ಎದುರುದಾರರ ಈ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಆಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರರು 5:02/01/2023 0 ದಿ:29/03/2023 ರಂದು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಪ್ರತ್ಯೇಕ ಫಿರ್ಯಾದುಗಳನ್ನು ಸಲ್ಲಿಸಿದ್ದರು.
1ನೇ ಪ್ರಕರಣದಲ್ಲಿ ಲಲಿತಾ ಅವರ ಪತಿ ರಮೇಶ ನಾಕೋಡ ಎದುರುದಾರ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು ಮತ್ತು ಸದರಿ ಕಿಒಎಎಃಜಿ ಸ್ಟೀಮಿನಲ್ಲಿ 2015 ರಲ್ಲೇ ತಮ್ಮ ಹೆಸರನ್ನು ನೋಂದಾಯಿಸಿ ಎದುರುದಾರರ ಬ್ಯಾಂಕಿನವರು ಪ್ರತಿ ವರ್ಷ ಪ್ರಿಮಿಯಮ್ ಹಣ ರೂ.330/- ಕಡಿತ ಮಾಡಿಕೊಂಡಿದ್ದರು. ದೂರುದಾರರ ಪತಿ ರಮೇಶ ನಾಕೋಡ ದಿ:22/04/2021 ರಂದು ಮೃತ ಪಟ್ಟಿದ್ದರು. ಅದೇ ರೀತಿ 2ನೇ ದೂರುದಾರ ಪ್ರವೀಣ ಕಲ್ಲಟ್ಟಿ ಅವರ ತಾಯಿ ಎದುರುದಾರ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಸದರಿ ಕಒಎಎಃಜ ಸ್ಟೀಮಿನಲ್ಲಿ 2015 ರಲ್ಲೇ ತಮ್ಮ ಹೆಸರನ್ನು ನೋಂದಾಯಿಸಿ ಎದುರುದಾರರ ಬ್ಯಾಂಕಿನವರು ಪ್ರತಿ ವರ್ಷ ಪ್ರಿಮಿಯಮ್ ಹಣ ರೂ.330/- ಕಡಿತ ಮಾಡಿಕೊಂಡಿದ್ದರು. ದೂರುದಾರರ ತಾಯಿ ಅಮಿತಾ :24/11/2020 ಪಟ್ಟಿದ್ದರು.
ಇಬ್ಬರೂ ವಿಮಾದಾರರು ಸತ್ತ ಮೇಲೆ ಅವರಿಗೆ ಸಂಬಂಧಿಸಿದ ತಲಾರೂ. 2 ಲಕ್ಷ ವಿಮಾ ಮೊತ್ತವನ್ನು ಎದುರುದಾರ ಬ್ಯಾಂಕ್ ಹಾಗೂ ಎಲ್.ಆಯ್.ಸಿ.ಆಪ್ ಇಂಡಿಯಾದವರು ವಿಮಾ ಮೊತ್ತವನ್ನು ಕೊಡದೇ ನಿರ್ಲಕ್ಷಿಸಿದ್ದಾರೆ ಅಂತಾ ತಮ್ಮ ದೂರಿನಲ್ಲಿ ಕಾಣಿಸಿದ್ದರು. ಸದರಿ ದೂರುಗಳಿಗೆ ಆಕ್ಷೇಪಣೆ ಎತ್ತಿದ ಕರ್ನಾಟಕ ಬ್ಯಾಂಕ್ ತಮ್ಮಿಂದ ದೂರುದಾರರಿಗೆ
ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲ ನಾವು ನಿಯಮಿತವಾಗಿ ದೂರುದಾರರ ಸಂಬಂಧಿಗಳ ಮೃತರ ಬ್ಯಾಂಕ್ ಖಾತೆಯಿಂದ ಕಒಎಎಜಿ ಯೋಜನೆಯ ವಿಮಾ ಮೊತ್ತ ರೂ.330/- ಕಡಿತಗೊಳಿಸಿ ಎಲ್.ಆಯ್.ಸಿ.ಆಪ್ ಇಂಡಿಯಾ 350 :02/01/2020 ವರ್ಗಾಯಿಸಿರುವುದಾಗಿ ಹೇಳಿ ತಮ್ಮ ಮೇಲಿನ ದೂರನ್ನು ವಜಾ ಮಾಡುವಂತೆ ಆಕ್ಷೇಪಿಸಿದ್ದರು. ಅದೇ ರೀತಿ ಎದುರುದಾರ/ ಎಲ್.ಆಯ್.ಸಿ. ಅವರು ಸದರಿ ದೂರುಗಳಿಗೆ ಆಕ್ಷೇಪಣೆ ಎತ್ತಿ ಕಒಎಎಃಜ ಯೋಜನೆಯ ಅಡಿ ಬ್ಯಾಂಕಿನವರು ವಿಮಾ ಮೊತ್ತ ರೂ.330/- ಪಾವತಿಸಲು ಪ್ರತಿ ವರ್ಷ ಜೂನ್-1 ನೇ ತಾರೀಖು ಅಂತಿಮ ದಿನವಾಗಿರುತ್ತದೆ. ಆದರೆ ಈ 2 ಪ್ರಕರಣಗಳಲ್ಲಿ ವಿಮಾ ಮೊತ್ತವನ್ನು 1ನೇ ತಾರೀಖಿನ ಬದಲು ಜೂನ್ 2ನೇ ತಾರೀಖು ಬ್ಯಾಂಕಿನವರು ಪಾವತಿಸಿದ್ದು ಅದು ತಡವಾಗಿರುವ ಕಾರಣ ತಾವು ವಿಮೆ ಹಣಕೊಡಲು ಬದ್ದರಲ್ಲ ಅಂತಾ ವಿಮಾ ಕಂಪನಿಯವರು ಆಕ್ಷೇಪಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ
ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಮೇಲಿನ ಎರಡು ಪ್ರಕರಣಗಳಲ್ಲಿ ದೂರುದಾರರ ಸಂಬಂಧಿಕರ ಉಳಿತಾಯ ಖಾತೆಯಿಂದ ಪ್ರತಿ ವರ್ಷ ಯೋಜನೆಯ ವಿಮೆ ಮೊತ್ತ ಪಡೆದುಕೊಂಡು ಅವರ ನಿಧನದ ನಂತರ ವಿಮಾ ಮೊತ್ತವನ್ನು ಪಾವತಿಸುವುದು ಎದುರುದಾರ/ ಎಲ್.ಆಯ್.ಸಿ.ಅವರ ಕಾನೂನು ಬದ್ಧ ಕರ್ತವ್ಯವಾಗಿರುತ್ತದೆ. ಸದರಿ ಬ್ಯಾಂಕು ಮತ್ತು ಜೀವ ವಿಮಾ ನಿಗಮದ ನಡುವೆ ಆಗಿರುವ ಒಪ್ಪಂದ ಪ್ರಕಾರ ಪ್ರತಿ ವರ್ಷ ಜೂನ್- 30 ರೊಳಗಾಗಿ ಬ್ಯಾಂಕಿನವರು ಪ್ರಿಮಿಯಮ್ ಮೊತ್ತವನ್ನು ವಿಮಾ ಕಂಪನಿಗೆ ಕಳಿಸಬೇಕು ಅಂತಾ ಒಡಂಬಡಿಕೆಯಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಜೂನ್-2ನೇ ತಾರೀಖು ಬ್ಯಾಂಕಿನವರು ವಿಮಾ ಕಂಪನಿಗೆ ವಿಮಾ ಪ್ರಿಮಿಯಮ್ ಹಣ ಕಳಿಸಿದ್ದಾರೆ ಅದರು ನಿಯಮ ಬದ್ಧವಾಗಿದೆ. ಕಾರಣ ತಲಾ ರೂ.2 ಲಕ್ಷ ವಿಮಾ ಮೊತ್ತದ ಹಣ ವಿಮಾದಾರರಿಗೆ ಕೊಡಲು ಜೀವವಿಮಾ ನಿಗಮದವರು ಬದ್ಧರಿದ್ದಾರೆ. ಆದರೆ ಅವರು ಆ ವಿಮಾ ಹಣ ನೀಡದೇ ದೂರುದಾರರಿಗೆ ಸತಾಯಿಸುತ್ತಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಇಬ್ಬರೂ ದೂರುದಾರರಿಗೆ ತಲಾ 2 ಲಕ್ಷ ರೂಪಾಯಿ ವಿಮಾ ಮೊತ್ತ ಮತ್ತು ಅವರ ವಿಮಾ ಅರ್ಜಿ ತಿರಸ್ಕಾರ ಮಾಡಿದ ದಿನಾಂಕದಿಂದ ಪೂರ್ತಿ ಹಣ ಸಂದಾಯ ಮಾಡುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಒಬ್ಬರಿಗೆ ರೂ.2.37.332/- ಮತ್ತು ಇನ್ನೊಬ್ಬ 2.2.43,997/- ನೀಡುವಂತೆ ಜೀವ ವಿಮಾ ನಿಗಮಕ್ಕೆ ಆಯೋಗ ನಿರ್ದೇಶಿಸಿದೆ. ಇಬ್ಬರೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ 2.50,000/- ಪರಿಹಾರ ಮತ್ತು ಪ್ರಕರಣದ 2,10,000/- ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಎದುರುದಾರ ಎಲ್. ಆಯ್.ಸಿ.ಗೆ ಆಯೋಗ ಆದೇಶಿಸಿದೆ. ಎರಡು ಪ್ರಕರಣಗಳಲ್ಲಿ ಎದುರುದಾರ ಕರ್ನಾಟಕ ಬ್ಯಾಂಕ್ ವಿರುದ್ಧದ ದೂರನ್ನು ವಜಾಗೊಳಿಸಲಾಗಿದೆ.