ನಮ್ಮ ರಾಜ್ಯದ ಆತ್ಮೀಯ ರೈತರಿಗೆ ಕುರಿ ಸಾಕಾಣಿಕೆ ಮಾಡುವುದು ಅತಿ ಪ್ರಾಮುಖ್ಯತೆ ಮತ್ತು ಲಾಭದಾಯಕ ವಾದಂತಹ ಉದ್ಯೋಗವಾಗಿದ್ದು ಇದರಿಂದ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಒಂದು ಸುಲಭ ಮಾರ್ಗವಾಗಿದೆ. ಆದಕಾರಣ ಸರಕಾರವು ಈ ಕುರಿ ಸಾಕಾಣಿಕೆ ಮಾಡಲು ಅತಿ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಕುರಿ ಮೇಕೆ ಕೊಟ್ಟಿಗೆಯನ್ನು ನಿರ್ಮಾಣ ಮಾಡಿ ಅವುಗಳನ್ನು ಸುರಕ್ಷಿತವಾಗಿ ಅದರಲ್ಲಿ ಇಡಲು ಸರ್ಕಾರವು ರೈತರಿಗೆ ಉಪಯುಕ್ತವಾದ ಯೋಜನೆಗಳನ್ನು ತಂದು ಅವರಿಗೆ ಸಹಾಯಧನವನ್ನು ನೀಡಿ ಉಪಯುಕ್ತವಾಗುವಂತ ಕೆಲಸವನ್ನು ಮಾಡುತ್ತಿದೆ.
ಕುರಿ ಸಾಕಾಣಿಕೆಯಿಂದ ಎಷ್ಟು ಲಾಭ ಇದೆ?
ಆತ್ಮೀಯ ರೈತರಿಗೆ ನೀವು ಈ ಕುರಿ ಸಾಕಾಣಿಕೆಯಿಂದ ಒಂದು ವರ್ಷಕ್ಕೆ ಲಕ್ಷ ಲಕ್ಷ ರೂಪಾಯಿಗಳನ್ನು ಗಳಿಸಲು ಸುಲಭ ಮಾರ್ಗವಿದೆ. ನಿಮ್ಮ ಹತ್ತಿರ ಕೇವಲ 20 ಕುರಿಗಳಿದ್ದರೆ ಸಾಕು. ಮುಂದಿನ ವರ್ಷದಲ್ಲಿ ಅವುಗಳು ನೂರು ಮರಿಗಳನ್ನು ಹಾಕಿ ನಿಮ್ಮ ಕುರಿಗಳ ಸಂಖ್ಯೆ ನೂರಕ್ಕೆ ಹೆಚ್ಚಾಗುತ್ತದೆ. ಆದಕಾರಣ ಸರ್ಕಾರವು ಈ ಕುರಿ ಸಾಕಾಣಿಕೆ ಮಾಡುವಂತಹ ಘಟಕ ಸ್ಥಾಪನೆ ಮಾಡಲು ಸಹಾಯಧನವನ್ನು ನೀಡುತ್ತಿದೆ.
ಯಾವ ಜಿಲ್ಲೆ ಜನರು ಈ ಕುರಿ ಸಾಕಾಣಿಕೆ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು?
ಈ ಕುರಿ ಘಟಕ ಸ್ಥಾಪನೆ ಮಾಡಲು ನಿಮ್ಮ ಜಿಲ್ಲೆಯಲ್ಲಿರುವ ಗುರಿ ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೀವು ಸದಸ್ಯತ್ವವನ್ನು ಹೊಂದಿರಬೇಕಾಗುತ್ತದೆ. ಮೊದಲು ನೀವು ನಿಮ್ಮ ಜಿಲ್ಲೆಯಲ್ಲಿರುವ ಕುರಿ ಮತ್ತು ಉಣ್ಣೆ ನಿಗಮಕ್ಕೆ ಹೋಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಪಡೆದುಕೊಳ್ಳಬೇಕಾಗುತ್ತದೆ. ನಂತರ ನೀವು ವಿಶೇಷ ಘಟಕ ಗಿರಿಜನ ಉಪ ಯೋಜನೆ ಅಡಿಯಲ್ಲಿ ಈ ಘಟಕವನ್ನು ಸ್ಥಾಪನೆ ಮಾಡಿಕೊಳ್ಳುವುದು ಸರ್ಕಾರ ನಿಮಗೆ ಅವಕಾಶ ಮಾಡಿಕೊಡುತ್ತದೆ.
ಈಗ ನಮ್ಮ ರಾಜ್ಯದಲ್ಲಿ ತುಮಕೂರು ಜಿಲ್ಲೆಯಲ್ಲಿ ಬರುವಂತಹ ಎಲ್ಲಾ ತಾಲೂಕಿನ ಜನರು ಈ ಯೋಜನೆಯಿಂದ ಲಾಭವನ್ನು ಪಡೆದುಕೊಳ್ಳಬಹುದು. ಈ ಸೌಲಭ್ಯವನ್ನು ಪಡೆದುಕೊಳ್ಳಲು ನೀವು ಜುಲೈ 16ರ ವರೆಗೆ ಅರ್ಜಿ ಸಲ್ಲಿಸುವುದು ಅವಶ್ಯವಾಗಿದೆ. ನಿಮ್ಮ ಜಿಲ್ಲೆಯಲ್ಲಿ ಈ ಯೋಜನೆ ಜಾರಿಯಲ್ಲಿದೆ ಎಂದು ತಿಳಿಯಲು ನಿಮ್ಮ ಜಿಲ್ಲೆಯ ಕುರಿ ಮತ್ತು ನಿಗಮಕ್ಕೆ ಭೇಟಿ ಕೊಡುವುದು ಅವಶ್ಯವಾಗಿದೆ. ಮುಖ್ಯವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮಗೆ 18 ರಿಂದ 60 ವಯಸ್ಸಿನ ಒಳಗಿರಬೇಕು ಮತ್ತು ಕುರಿ ಮತ್ತು ನಿಗಮದ ಸದಸ್ಯ ಆಗುವುದು ಮುಖ್ಯವಾಗಿರುತ್ತದೆ.
*ಉತ್ತಮ ತಳಿಯ ಮೀನು ಮರಿಗಳು ಕಡಿಮೆ ದರದಲ್ಲಿ ಮಾರಾಟ, ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮೀನು ಖರೀದಿಸಿ☎️
ಕೂಡಲೇ ಅರ್ಜಿ ಸಲ್ಲಿಸಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆಯಿರಿ
ಅಡಿಕೆ, ಮಾವು, ದಾಳಿಂಬೆ ಮತ್ತು ಇತರ ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಕೆ
ಕೃಷಿಯಲ್ಲಿ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ