Breaking
Tue. Dec 17th, 2024

ನಿಮ್ಮ ಜಮೀನಿನ ಉತಾರಗಳಿಗೆ ಆಧಾರ ಕಾರ್ಡ ಲಿಂಕ್ ಮಾಡಿಸುವುದು ಕಡ್ಡಾಯ

Spread the love

ಗ್ರಾಮ ಆಡಳಿತ ಅಧಿಕಾರಿಗಳ ಪ್ರಕಟಣೆ

ಆತ್ಮೀಯ ರೈತ ಬಾಂದವರೆ, ಈ ಮೂಲಕ ಎಲ್ಲಾ ರೈತ ಬಾಂದವರಿಗೆ ತಿಳಿಸುವುದೇನೆಂದರೆ, ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು, ಬ್ಯಾಂಕ ಸೌಲಭ್ಯಗಳನ್ನು ಪಡೆಯಲು ಮತ್ತು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಲು, ಮತ್ತು ಬೆಳೆ ಪರಿಹಾರ ಪಡೆಯಲು ಜಮೀನಿನ ಉತಾರಗಳಿಗೆ ಆಧಾರ ಕಾರ್ಡ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಕಾರಣ ಎಲ್ಲ ರೈತ ಬಾಂದವರು ತಮ್ಮ ಜಮೀನಿನ ಉತಾರ ಮತ್ತು ಆಧಾರ ಕಾರ್ಡ ತೆಗೆದುಕೊಂಡು ನಿಮ್ಮ ಗ್ರಾಮದ ಗ್ರಾಮ ಒನ್ ಕೇಂದ್ರ, ಆನಲೈನ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿ (ತಲಾಟಿ ಆಫೀಸ) ಗೆ ಬೇಟಿ ನೀಡಬೇಕೆಂದು ಈ ಮೂಲಕ ಎಲ್ಲಾ ರೈತ ಬಾಂದವರಿಗೆ ತಿಳಿಸಿದೆ.

ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ ಲಿಂಕ್ ಮಾಡಿ

ಕೃಷಿ ಸಖಿಯರಿಗೆ ಐದು ದಿನಗಳ ನೈಸರ್ಗಿಕ ಕೃಷಿ ತರಬೇತಿ

ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ವಿಭಿನ್ನವಾಗಿದ್ದು, ಕೆಲವು ಅಂಶಗಳಲ್ಲಿ ಮಾತ್ರ ಸಾಮ್ಯತೆಯಿದೆ. ನೈಸರ್ಗಿಕ ಕೃಷಿಯಲ್ಲಿ ಪಾರಂಪರಿಕ ಪದ್ಧತಿಗಳು ಮತ್ತು ಜೈವಿಕ ಪರಿಕರಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ಹೇಳಿದರು. ವಯವ ಕೃಷಿ ಪದ್ಧತಿಯಲ್ಲಿ ಮುಖ್ಯವಾಗಿ ನಿರ್ದಿಷ್ಟ ಪ್ರಮಾಣೀಕರಣ ಮಾನದಂಡಗಳಿಗೆ ಬದ್ಧವಾಗಿದೆ ಎಂದರು. ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ಮುಖ್ಯಸ್ಥರಾದ ಡಾ.ವಿ.ಗೋವಿಂದಗೌಡ, ರೈತರು ತಮ್ಮ ಜಮೀನನ್ನು ನೈಸರ್ಗಿಕ ಕೃಷಿಗೆ ಪರಿವರ್ತಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ರೈತರು ಮೊದಲು ತಮ್ಮ ಜಮೀನಿನ ಮಣ್ಣಿನ ಆರೋಗ್ಯ ಅರಿತು, ಸ್ಥಳೀಯ ಪದ್ಧತಿಗಳನ್ನು ಅರ್ಥಮಾಡಿಕೊಂಡು ಕ್ರಮೇಣ ರಾಸಾಯನಿಕ ಪರಿಕರಗಳ ಬಳಕೆ ಕಡಿಮೆ ಮಾಡುವುದರ ಮೂಲಕ ಪ್ರಾರಂಭಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರಾದ ಜಗನ್ನಾಥ, ಪ್ರಗತಿ ಪರ ರೈತ ತಡಸೂರು ಯೋಗಾನಂದ ಮೂರ್ತಿ, ತರಬೇತಿ ಸಂಯೋಜಕರಾದ ದರ್ಶನ್, ಕೇಂದ್ರದ ವಿಜ್ಞಾನಿಗಳಾದ ಡಾ. ನಿತ್ಯಶ್ರೀ, ಮನೋಜ್, ಡಾ. ತಸ್ಮಿಯಾ ಕೌಸರ್, ಡಾ. ಕೀರ್ತಿಶಂಕರ್, ಡಾ. ಸತೀಶ್, ಚಿ.ನಾ. ಹಳ್ಳಿಯ ಸಂಜೀವಿನಿ ವಿಭಾಗದ ಭರತ್ ಸೇರಿದಂತೆ 36 ಕೃಷಿ ಸಖಿಯರು | ಭಾಗವಹಿಸಿದ್ದರು.

ಮತ್ಯ ವಾಹಿನಿ ಯೋಜನೆ : ಅರ್ಜಿ ಆಹ್ವಾನ

2023-24 ನೆ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಮತ್ಯ ವಾಹಿನಿ ಯೋಜನೆ ಅಡಿಯಲ್ಲಿ ತ್ರಿಚಕ್ರ ವಾಹನಗಳನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲೆಗೆ ಒಟ್ಟು 3 ಭೌತಿಕ ಗುರಿಗಳಿದ್ದು, ಆಯ್ಕೆಯಾಗುವ ಅರ್ಜಿದಾರರು ಇಲಾಖೆಗೆ ಭದ್ರತಾ ಠೇವಣಿ (ಸಾಮಾನ್ಯ ವರ್ಗದವರು ಒಂದು ಲಕ್ಷ ರೂಪಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು 50 ಸಾವಿರ ರೂಪಾಯಿ) ಮೊತ್ತವನ್ನು ನೀಡಬೇಕಿರುತ್ತದೆ. ಅರ್ಜಿ ಸಲ್ಲಿಸಲು ಮಾ.19 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ವಿಜಯಪುರ, ಮುದ್ದೇಬಿಹಾಳ (9886820761) ಇವರನ್ನು ಸಂಪರ್ಕಿಸಬಹುದು ಎಂದು ವಿಜಯಪುರ ಮೀನುಗಾರಿಕೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Agri jobs

ರೈತರಿಗಾಗಿ ಮೀಸಲಿರುವ ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಿ

ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆಗೊಳಿಸಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ವ್ಯಾಪಾರಕ್ಕೆ ಉತ್ತೇಜನ ನೀಡಿದರೆ ಆದಾಯ ದ್ವಿಗುಣವಾಗುವಾದರೊಂದಿಗೆ ರೈತರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೈತರಿಗಾಗಿ ಮೀಸಲಿಟ್ಟಿದೆ ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬುಧವಾರ ವಿಜಯಪುರ ಹೊರವಲಯ ಹಿಟ್ಟಿನಹಳ್ಳಿಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ 85 ಲಕ್ಷ ರೂಪಾಯಿ ಅನುದಾನದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೈತರ ವಸತಿ ನಿಲಯ ಕಟ್ಟಡದ ಉದ್ಘಾಟನೆ ಯನ್ನು ನೇರವೇರಿಸಿ ಅವರು ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ದೇವಸ್ಥಾನವಿದ್ದಂತೆ. ಇಲ್ಲಿ ಅನೇಕ ಮಾಹಿತಿಗಳು ದೊರೆಯುತ್ತವೆ. ಸರ್ಕಾರ ರೈತರಿಗೆ ನೀಡುವ ಸಹಾಯಧನ, ಬೆಳೆಗಳ ಬಗ್ಗೆ ಮಾಹಿತಿ, ರೋಗ ನಿರ್ವಹಣೆಗಳ ಕುರಿತು ಅನುಸರಿಸಬೇಕಾದ ವೈಜ್ಞಾನಿಕ ನಿರ್ವಹಣೆ, ಆಹಾರ ಸಂಸ್ಕರಣೆಯ ಮಾಹಿತಿ, ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ, ಅನೇಕ ತರಬೇತಿಗಳನ್ನು ನೀಡಲಾಗುತ್ತದೆ. ಇದನ್ನು ರೈತರು ಪಡೆದುಕೊಂಡು ಆದಾಯ ದ್ವಿಗುಣವಾಗುವತ್ತ ಹೆಜ್ಜೆ ಹಾಕಬೇಕು ಎಂದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಆಡಳಿತದ ಸಮನ್ವಯದಿಂದ ರೈತರ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯು ಹಣ್ಣಿನ ಬೆಳೆ ಬೆಳಯಲು ಅನೇಕ ಅನುಕೂಲಗಳನ್ನು ಹೊಂದಿದೆ. ಜಿಲ್ಲೆಯ ನೆಲ. ಬಿಸಿಲು. ನೀರು ಬೆಳೆಗಳು ಬೆಳೆಯಲು ಪೂರಕವಾಗಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ದರ ಹಾಗೂ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಾಗಿದೆ ಎಂದರು. ನಾಗಠಾಣ ಶಾಸಕ ವಿಠಲ ಧೋಂಡಿಬಾ ಕಟಕದೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಎಸ್ಸಿಪಿ, ಎಸ್ಟಿಪಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪೆಟ್ರೋಲ್ ಚಾಲಿತ ಸಿಂಪರಣೆ ಯಂತ್ರಗಳನ್ನು ವಿತರಿಸಲಾಯಿತು. ಅಣಬೆಯ ಮೌಲ್ಯವರ್ಧನೆ ಉತ್ಪನ್ನಗಳ ಹಾಗು ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆ ಮೇಲೆ ಐಸಿಎಆ‌ರ್ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಸೋಧನ ಸಂಸ್ಥೆ ಬೆಂಗಳೂರಿನ ನಿರ್ದೇಶಕರಾದ ಡಾ. ವಿ. ವೆಂಕಟ ಸುಬ್ರಮಣಿಯನ್, ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಜಯಕುಮಾರ ಹೆಚ್, ಶ್ರೀನಿವಾಸ್ ಕೋಟ್ಯಾನ್, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಎಸ್. ಅಂಗಡಿ, ವಿದ್ಯಾಧಿಕಾರಿ ಡಾ. ಭಿಮಪ್ಪ, ಎ. ಸಹ ವಿಸ್ತರಣಾ ನಿರ್ದೇಶಕರಾದ ಡಾ. ಆರ್. ಬಿ. ಬೆಳ್ಳಿ ಉಪಸ್ತಿತರಿದ್ದರು.

Related Post

Leave a Reply

Your email address will not be published. Required fields are marked *