ಆತ್ಮೀಯ ಮಹಿಳೆಯರೇ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈಗಾಗಲೇ ಅರ್ಜಿ ಸಲ್ಲಿಸಿ ಕೆಲವು ಫಲಾನುಭವಿಗಳ ಖಾತೆಗೆ ಇನ್ನೂ 2 ಸಾವಿರ ರೂ. ಜಮಾ ಆಗಿದೆ ಮತ್ತು ಕೆಲವರ ಖಾತೆಗೆ ಹಣ ಜಮೆಯಾಗಿಲ್ಲ.
ಹಣ ಜಮಾ ಆಗದೆ ಇರುವ ಫಲಾನುಭವಿಗಳು ತಮ್ಮ ಫಲಾನುಭವಿ ಖಾತೆ ಹೊಂದಿದ ಬ್ಯಾಂಕ್ ಗೆ ತೆರಳಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದಿಯೋ ಇಲ್ಲವೋ ಚೆಕ್ ಮಾಡಿಸಿ, ರೇಷನ್ ಕಾಡ್‌ರ್ಗೆ ಇ-ಕೆವೈಸಿ ಆಗಿದಿಯೋ ಇಲ್ಲವೋ ಚೆಕ್ ಮಾಡಿಸಿ, ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮಾಡಿಸಿ ಮಾಹಿತಿಯನ್ನು ಜೋಡಣೆ ಮಾಡಿದ ಪ್ರತಿಯನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸುವಂತೆ ಎಲ್ಲಾ ಜಿಲ್ಲೆಗಳ ಅಧಿಕಾರಿಗಳು ಸೂಚಿಸಿದ್ದಾರೆ ಅಥವಾ ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಇಲಾಖೆಯ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕೆಳಗೆ ಫೋಟೋ ಮುಖಾಂತರ ನೀಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಬಹುದು.
ಇನ್ನಿತರ ಕಾರಣ :-
ಅರ್ಜಿ ಸಲ್ಲಿಸಿದ ಹಲವಾರು ಗೃಹಣಿಯರ ಅರ್ಜಿಯನ್ನು ಸರ್ಕಾರ ರದ್ದುಗೊಳಿಸಿದೆ ಕಾರಣ ರೇಷನ್ ಕಾಡ್‌ರ್ಗೆ ಇ-ಕೆವೈಸಿ ಮಾಡಿಸಿರಲಾರದ್ದು, ಬ್ಯಾಂಕ್ ಖಾತೆಯನ್ನು ಮೊಬೈಲ್ ಮತ್ತು ಆಧಾರ್ ಸಂಖ್ಯೆಗೆ ಅನುಗುಣವಾಗಿ ಲಿಂಕ್ ಮಾಡಿಸಲಾರದ ಕಾರಣ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿರುತ್ತದೆ. ಹಾಗಾದರೆ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಮತ್ತು ನೀವು ಫಲಾನುಭವಿಗಳು ಹೌದೋ ಅಲ್ಲವೋ ಎಂದು ತಿಳಿಯುವುದು ಹೇಗೆ?
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
ನಂತರ ನಿಮ್ಮ ಮೊಬೈಲ್ ನ ಎಡ ಭಾಗದಲ್ಲಿರುವ ಡ್ಯಾಶ್ ಬಾರ್ ಮೇಲ್ ಕ್ಲಿಕ್ ಮಾಡಿ. ಆಗ ನಿಮ್ಮ ಸ್ಕ್ರೀನ್ ಮೇಲೆ ಈ ಚಿತ್ರ ಕಾಣುತ್ತದೆ.ಅಲ್ಲಿ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ತಾಲೂಕು ಗ್ರಾಮ ಪಂಚಾಯತಿ ಮತ್ತು ಊರನ್ನು ಆಯ್ಕೆ ಮಾಡಿರಿ.
ಆಯ್ಕೆ ಮಾಡಿದ ನಂತರ ನಿಮಗೆ ಫಲಾನುಭಿಗಳ ಪಟ್ಟಿ ದೊರೆಯುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮಗೆ ಹಣ ದೊರೆಯುವುದಿಲ್ಲ ಮತ್ತು ನೀವು ಗೃಹಲಕ್ಷ್ಮೀ ಯೋಜನೆಯ ಫಲಾನುಭಿ ಅಲ್ಲ ಎಂದು ಖಚಿತಗೊಳ್ಳುತ್ತದೆ.
ಇದನ್ನೂ ಓದಿ :- ಈ ಎಲ್ಲಾ ಬರ ಪೀಡಿತ ತಾಲೂಕುಗಳಿಗೆ ಬೆಳೆ ಪರಿಹಾರ ನೀಡಲು ಸರ್ಕಾರದ ಯೋಚನೆ
ಇದನ್ನೂ ಓದಿ :- 3 ಹಣ್ಣಿಗೆ 100 ರೂಪಾಯಿ ಇರುವ ಕೀವಿ ಹಣ್ಣನ್ನು ಬೆಳೆಯುವುದು ಹೇಗೆ?