ಪ್ರಿಯ ರೈತ ಬಾಂಧವರೇ,
ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು 2023 ಕರ್ನಾಟಕ ಬಜೆಟ್ಟನ್ನು ಜಾರಿಗೊಳಿಸಿದ್ದಾರೆ ಇದರಿಂದ ರೈತರಿಗೆ ಬಹಳ ಕೊಡುಗೆ ಮತ್ತು ಸಿಹಿ ಸುದ್ದಿಗಳು ಬಂದಿವೆ. ಅವು ಯಾವು ಎಂದು ಇಲ್ಲಿ ತಿಳಿಯೋಣ.
- ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ 3 ಲಕ್ಷ ರೂ. ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಳ, 30 ಲಕ್ಷ ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ.
- ‘ಭೂ ಸಿರಿ’ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ: 50 ಲಕ್ಷ ರೈತರಿಗೆ ಅನುಕೂಲ.
- 56 ಲಕ್ಷ ಸಣ್ಣಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿ.
- ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ತಾಹಿಸಲು 10 ಲಕ್ಷ ರೂ. ವರೆಗಿನ ಬಂಡವಾಳಕ್ಕೆ ಬಡ್ಡಿ ಸಹಾಯಧನ ಸೌಲಭ್ಯ, ಸಿರಿಧಾನ್ಯ ಸಂಸ್ಕರಿಸುವ FPO ಗಳಿಗೆ ಪ್ರಾಶಸ್ತ್ರ.
- ರೈತ ಸಂಪದ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ 100 ಕೋಟಿ ರೂ. ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಹೈ-ಟೆಕ್ ಹಾರ್ವೆಸ್ಟರ್ ಗಳನ್ನು ಒದಗಿಸಲು 50 ಕೋಟಿ ರೂ.
ನೀರಾವರಿ ಕ್ಷೇತ್ರಕ್ಕೆ ಎಷ್ಟು ಹಣ ಬಿಡುಗಡೆ?
- ಯಾದಗಿರಿ ಮತ್ತು ಕಲಬುರಗಿಯಲ್ಲಿ 443 ಕೋಟಿ ರೂ. ವೆಚ್ಚದಲ್ಲಿ 138 ಮೇಲೆ ಸಣ್ಣ ನೀರಾವರಿ ಕಾಮಗಾರಿ ಕೈಗೊಳ್ಳಲು ಕ್ರಮ.
- ಪ್ರಗತಿಯಲ್ಲಿರುವ ತುಂಬಿಸುವ ಯೋಜನೆಗಳು, ಸಸಾಲಟ್ಟಿ ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೀ ಮತ್ತು ಶ್ರೀ ವೆಂಕಟೇಶ್ವರ ಏತ ನೀರಾವರಿ ಯೋಜನೆಗಳು ಮತ್ತು ಮಳವಳ್ಳಿ ಪೂರಿಗಾಲಿ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ,
- ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗೆ 1,000 ಕೋಟಿ ರೂ. ಅನುದಾನ.
- ಪಶ್ಚಿಮ ವಾಹಿನಿ 2 ಹಂತದ ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ 378 ಕೋಟಿ ರೂ.
- ಕೃಷ್ಣಾ ಮೇಲ್ದಂಡೆ ಹಂತ 3ರ ಯೋಜನೆಗೆ 5,000 ಕೋಟಿ ರೂ. ಅನುದಾನ.
- 11,236 ಕೋಟಿ ರೂ. ಅಂದಾಜು ವೆಚ್ಚದ 38 ಯೋಜನೆಗಳ ಅನುಷ್ಠಾನ; 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಸೃಜನೆಯ ಗುರಿ.
- ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಸಿರಿ ಯೋಜನೆಗಳಿಗೆ 75 ಕೋಟಿ ರೂ ಅನುದಾನ. ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸುವ ಜಲನಿಧಿ ಯೋಜನೆ ಜಾರಿ.
ಮೀನುಗಾರಿಕೆ ವಲಯಕ್ಕೆ ಕೊಟ್ಟ ಕೊಡುಗೆ ಎಷ್ಟು?
- ಮೀನು ಉತ್ಪನ್ನಗಳ ಪೂರೈಕೆಗೆ ಪರಿಸರ ಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳ ವಿತರಣೆ ಯೋಜನೆ.
- 10 ಸಾವಿರ ಮೀನುಗಾರರಿಗೆ ವಸತಿ ಸೌಲಭ್ಯ ಮೀನುಗಾರರ ದೋಣಿಗಳ ಸುರಕ್ಷತೆಗೆ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಗೆ 17 ಕೋಟಿ ರೂ. ಅನುದಾನ.
- 20 ಕೋಟಿ ರೂ. ಅನುದಾನದಲ್ಲಿ ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು ಪ್ರೋತ್ಸಾಹ, ಹಾವೇರಿಯಲ್ಲಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ.
- ಮತ್ಸ ಸಂಪದ ಯೋಜನೆಯಡಿ ಕರಾವಳಿ ಜಿಲ್ಲೆಗಳಲ್ಲಿ ಕೃತಕ ಬಂಡೆ ಸಾಲುಗಳ ಸ್ಥಾಪನೆ.
- ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ, ಬೈಂದೂರು ತಾಲ್ಲೂಕು ಕಂಬದಕೋಣೆಯಲ್ಲಿ Sea Food Park ಸ್ಥಾಪನೆ.
- ಸೀಮೆ ಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್ ಆಧಾರಿತ ಮೋಟ ಎಂಜಿನ್ ಅಳವಡಿಕೆಗೆ ಮುಂದಿನ ಎರಡು ವರ್ಷಗಳಲ್ಲಿ 50 ಸಾವಿರ ರೂ. ಸಹಾಯಧನ. 40 ಕೋಟಿ ರೂ. ಅನುದಾನ, ಮುಂದಿನ ಎರಡು ವರ್ಷಗಳಿಗೆ ಸೀಮೆಎಣ್ಣೆ ಸಹಾಯಧನ ಮುಂದುವರಿಕೆ. ಡಿಬಿಟಿ ಮೂಲಕ ವರ್ಗಾವಣೆ, ಮೀನುಗಾರರಿಗೆ ನೀಡುವ ಡೀಸಲ್ ಸಬ್ಸಿಡಿ 2 ಲಕ್ಷ ಕಿಲೋ ಲೀಟರ್ ಗೆ ಏರಿಕೆ.
ರೈತರು ಬೆಳೆಯುವ ಬೆಳೆಗಳಿಗೆ ಕೊಟ್ಟ ಪ್ರೋತ್ಸಾಹ ಎಷ್ಟು?
- ಅಡಿಕೆ ಬೆಳೆಯ ರೋಗ ನಿರ್ವಹಣೆ ಮತ್ತು ಉತ್ಪಾದಕತೆ ಹೆಚ್ಚಿಸುವ ಕುರಿತು ಸಂಶೋಧನೆಗೆ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ನೆರವು.
- ಮೈಸೂರು ಬಿತ್ತನೆ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ 8 ಕೋಟಿ.
- ಕರ್ನಾಟಕ ದ್ರಾಕ್ಷಿ ಮತ್ತು ದಾಕ್ಷಾರಸ ಮಂಡಳಿಯ ಮೂಲಕ 100 ಕೋಟಿ ರೂ. ವೆಚ್ಚದ ವಿಶೇಷ ಯೋಜನೆ.
- ಕಿರುಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತ ಸಿರಿ ಯೋಜನೆಯಡಿ 10 ಸಾವಿರ ರೂ. ಪ್ರೋತ್ಪಾಧನ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯ ಖರೀದಿಗೆ ಸ್ಥಾಪಿಸಿರುವ ಆವರ್ತ ನಿಧಿ 3,500 ಕೋಟಿ ರೂ. ಗಳಿಗೆ ಹೆಚ್ಚಳ. ಇದಕ್ಕಾಗಿ 1500 ಕೋಟಿ ರೂ. ಅನುದಾನ, ರಾಜ್ಯದ ಇತಿಹಾಸದಲ್ಲಿಯೇ ಹೆಚ್ಚಿನ ಗಾತ್ರದ ಆವರ್ತ ನಿಧಿ. - 32 ಸ್ವಯಂ ಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ. ನೆರವು: ಸಾವಿರ ರೇಷ್ಮೆ ಬೆಳೆಗಾರರಿಗೆ ಬ್ರೆಡ್ಡರ್ಸ್ ಒದಗಿಸಲು 12 ಕೋಟಿ ರೂ. ಅನುದಾನ: ರಾಜ್ಯದಲ್ಲಿ 10 ಸ್ಥಳಗಳಲ್ಲಿ Hot Air Conveyor Dryer ಅಳವಡಿಕೆಗೆ 5 ಕೋಟಿ ರೂ. ಅನುದಾನ.
- ಬಳ್ಳಾರಿ ಜಿಲ್ಲೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 2 ಲಕ್ಷ ಲೀ. ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿ ಸ್ಥಾಪನೆ.
- ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಚಿಕಿತ್ಸೆಗೆ ಸಂಚಾರಿ ಚಿಕಿತ್ಸಾಲಯಗಳ ಸ್ಥಾಪನೆ ಸೇರಿದಂತೆ ಪ್ರಾಣಿ ಕಲ್ಯಾಣ ಮಂಡಳಿಯ ವಿವಿಧ ಚಟುವಟಿಕೆಗಳಿಗೆ 5 ಕೋಟಿ ರೂ. ಬೀದಿನಾಯಿಗಳನ್ನು ದತ್ತುಪಡೆಯಲು ಆನ್ ಲೈನ್ ವೇದಿಕೆ ಸೃಜನೆ; ಮುಧೋಳ ಹೌಂಡ್ ಶ್ವಾನ ತಳಿ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ.
ಕೃಷಿ ಮಾರುಕಟ್ಟೆ ಮತ್ತು ಮಹಾವಿದ್ಯಾಲಯಗಳ ನಿರ್ಮಾಣ
- ಶಿಡ್ಲಘಟ್ಟದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ.
- ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ.
- ಚಿಕ್ಕಬಳ್ಳಾಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ, ಬೆಂಗಳೂರು, ಮತ್ತು ಹಾವೇರಿಯಲ್ಲಿ ಹೂವಿನ ಅತ್ಯಾಧುನಿಕ ಚಿಲ್ಲರೆ ಮಾರುಕಟ್ಟೆ ನಿರ್ಮಾಣ.
ಇದನ್ನೂ ಓದಿರಿ :- ಕುರಿ ಸಾಕಾಣಿಕೆ ಹಾಗೂ ಮೇಕೆ ಸಾಕಾಣಿಕೆ ಮಾಡಲು ತಯಾರಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ
ಕುರಿ ಹಾಗೂ ಮೇಕೆ ಖರೀದಿಸಲು ಪ್ರೋತ್ಸಾಹಧನ ಈಗಲೇ ಅರ್ಜಿ ಸಲ್ಲಿಸಿ