ಆತ್ಮೀಯ ರೈತ ಬಾಂಧವರೇ,
ಇಂದು ಕರ್ನಾಟಕದ ಬಜೆಟ್ ಮಂಡನೆ ಆಗಿದೆ. ನಮ್ಮ ಮುಖ್ಯಮಂತ್ರಿಯವರು ಕೃಷಿ ವಲಯಕ್ಕೆ ಕೊಟ್ಟ ಕೊಡುಗೆಗಳೇನು ಏನು ಎಂದು ತಿಳಿಯೋಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಉದ್ಧಾರಕ್ಕಾಗಿ ಕೃಷಿ ಹಾಗೂ ತೋಟಗಾರಿಕಾ ವಲಯಕ್ಕೆ ಒಟ್ಟು 9,456 ಕೋಟಿ ಅನುದಾನ ನೀಡಿದ್ದಾರೆ. ಮೊದಲು ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ ಮತ್ತು ರಾಜ್ಯ ಸರ್ಕಾರದಿಂದ 4,822 ಕೋಟಿ ರೂ. ಅಂದರೆ ಒಟ್ಟಾರೆ 15,752 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಇನ್ನು ರೈತರ ಬಿತ್ತನೆ ಖರ್ಚು ವೆಚ್ಚವನ್ನು ಕಡಿಮೆ ಮಾಡಲು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ 962 ಕೋಟಿ ರೂ ವೆಚ್ಚ ಮಾಡಲಾಗಿದೆ.ತೀರ್ಥಹಳ್ಳಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಅಡಕೆಯಲ್ಲಿ ಕೀಟ ಬಾಧೆ ನಿಯಂತ್ರಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಲು 10 ಕೋಟಿ ರೂ. ನೀಡಿದ್ದಾರೆ.
ನೀರಾವರಿ ಮತ್ತು ಕೃಷಿ ಉಪಕರಣಗಳಿಗೆ ಎಷ್ಟು ಬಜೆಟ್ ಮಂಡನೆ?
ನಮ್ಮ ಮುಖ್ಯಮಂತ್ರಿ ಬೊಮ್ಮಾಯಿಯವರು ಕೃಷಿ ಮತ್ತು ತೋಟಗಾರಿಗೆ ವಲಯದ ಹನಿ ನೀರಾವರಿಗಾಗಿ 2,900 ಕೋಟಿ ರೂ. ಅನುದಾನ ಮಾಡಿದ್ದಾರೆ. ಕೃಷಿಯಲ್ಲಿ ಬಳಸುವ ಯಂತ್ರೋಪಕರಣಗಳ ಉತ್ತೆಜಿಸಲು 2,037 ಕೋಟಿ ರೂ. ನೀಡಿದ್ದಾರೆ.ಹಿಂದಿನ ವರ್ಷ ಘೋಷಿಸಿದ ಡಿಸೇಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ರೂ. ಬದಲಾಗಿಸಿದೆ. ಇನ್ನು ನೀರಾವರಿ ಗೆ ಪ್ರೋತ್ಸಾಹ ನೀಡಲು ನೀರಾವರಿ ಪಂಪ್‌ಸೆಟ್‌ಗಳಿಗೆ 52,590 ಕೋಟಿ ರೂ. ವಿದ್ಯುತ್ ಸಹಾಯಧನವನ್ನು ಮಂಡನೆ ಮಾಡಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಭತ್ತ, ರಾಗಿ ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ರೂ. ನೀಡಿದ್ದಾರೆ.
ಇನ್ನು ಬೆಳೆ ವಿಮೆಗೆ ಎಷ್ಟು ಹಣವನ್ನು ನೀಡಿದ್ದಾರೆ?
ಫಸಲ್ ಭೀಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ 4900 ಕೋಟಿ ರೂ. ಪ್ರೀಮಿಯಂ ನೀಡಿದ್ದಾರೆ.ಇನ್ನು ಹತ್ತು ಹಲವಾರು ಕೃಷಿಗೆ ಉಪಯುಕ್ತವಾಗುವಂತಹ ಯೋಜನೆಗಳಿಗೆ ಸಹಾಯಧನವನ್ನು ನೀಡಿದ್ದಾರೆ.
ಇದನ್ನೂ ಓದಿ :- ಕೇವಲ ಈ ಒಂದು ಕಾರ್ಡ್ ಇದ್ದರೆ ಸಾಕು 5000 ರೂಪಾಯಿ ಇಂದ 75000 ರೂಪಾಯಿ ಸಹಾಯಧನ ಪಡೆಯಬಹುದು
ಇದನ್ನೂ ಓದಿ :- ಪುರುಷರು ತಿರುಗಿ ನೋಡುವಂತೆ ಸಾಧನೆ ಮಾಡಿದ ರೈತ ಮಹಿಳೆ
ಇದನ್ನೂ ಓದಿ :- ಸರ್ವೇ ನಂಬರ್ ಹಾಕಿ ಬೆಳೆ ಹಾನಿ ಪರಿಹಾರ ಚೆಕ್ ಮಾಡಿ