Breaking
Sun. Dec 22nd, 2024

ಕರ್ನಾಟಕ ಸಿಎಂ 1 ಲಕ್ಷ ವಸತಿ ಯೋಜನೆ ಈಗಲೇ ಅರ್ಜಿ ಸಲ್ಲಿಸಿ

Spread the love

ಅತ್ಮೀಯ ನಾಗರಿಕರೇ, ಕರ್ನಾಟಕದಲ್ಲಿ ವಸತಿ ಯೋಜನೆಯನ್ನು ನೀಡಲು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಲು ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಮೊದಲು ಈ ಯೋಜನೆಯ ಹೆಸರು ಏನೆಂದರೆ ಕರ್ನಾಟಕ ಸಿಎಂ 1 ಲಕ್ಷ ವಸತಿ ಯೋಜನೆ ನಮೂನೆ 2023 ashray.karnataka.gov.in ಕರ್ನಾಟಕ ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಯೋಜನೆ ಯನ್ನು ಜಾರಿಗೊಳಿಸಿದ್ದಾರೆ. ಈಗ ಕರ್ನಾಟಕ ರಾಜ್ಯ ಸರ್ಕಾರ ಒಂದು ಲಕ್ಷ ಬೆಂಗಳೂರು ವಸತಿ ಯೋಜನೆಯನ್ನು ಪಡೆಯಲು ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದೆ.

ಈಗ ಬೆಂಗಳೂರಿನಲ್ಲಿ 20,000 ಮನೆಗಳನ್ನು ನಿರ್ಮಾಣ ಮಾಡಲು ಯೋಚಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮಗೆ ಬೇಕಾದ ಮನೆಯನ್ನು ಆಯ್ಕೆ ಮಾಡಿ ತಮಗೆ ಬೇಕಾದ ಮನೆಯನ್ನು ತೆಗೆದುಕೊಳ್ಳಬಹುದು. ಈ ವರ್ಷ 5,000 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದ್ದು, ಇನ್ನು ಹೆಚ್ಚುವರಿ ದುಡ್ಡು ಖರ್ಚಾದರೆ ಅದನ್ನು ಒದಗಿಸಲಾಗುವುದೆಂದು ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳನ್ನು ಮರು ನಿರ್ಮಾಣಕ್ಕಾಗಿ ಈ ಯೋಜನೆಯು ಸಾಕಷ್ಟು ಸಹಾಯಧನವನ್ನು ನೀಡಲು ಸಜ್ಜಾಗಿ ನಿಂತಿದೆ. ವಿವಿಧ ವರ್ಗಗಳ ಜನರಿಗೆ ಕಳೆದ ನಾಲ್ಕು ವರ್ಷಗಳಲ್ಲಿ 3800 ಮನೆಗಳನ್ನು ಪುನರ್ ನಿರ್ಮಾಣಕ್ಕೆ ಸಾಕಷ್ಟು ಸಹಾಯಧನವನ್ನು ಬಳಸಲಾಗಿದೆ. ಅದಕ್ಕಾಗಿ 2600 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟಾರೆ ಎರಡು ಸಾವಿರ ಎಕರೆ ಜಮೀನನ್ನು ಸಂಗ್ರಹಿಸಿ, ಅಂದಾಜು ರೂ.30,000 ಮನೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧಾರ ಮಾಡಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಟ್ಟು ನೂರು ಮನೆಗಳನ್ನು ವಿತರಿಸಲು ಹೇಳುತ್ತಾರೆ.

ನಮ್ಮ ಮಾನ್ಯ ಮುಖ್ಯಮಂತ್ರಿಗಳು ಒಂದು ಲಕ್ಷ ಮನೆ ಬೆಂಗಳೂರು ಸಬ್ಸಿಡಿ 1,75,000 ರೂಪಾಯಿಗಳನ್ನು ಪ್ರತಿಷ್ಠಿತ ಜಾತಿ ಅವರಿಗೆ ನೀಡಿದ್ದಾರೆ. ಇನ್ನು ಇತರರಿಗೆ ಮನೆಯ ನಿರ್ಮಾಣಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಕೇಂದ್ರ ವಸತಿ ಯೋಜನೆ ಅಡಿ 72,000 ರೂಪಾಯಿಗಳನ್ನು ಅಂದರೆ 60% ಮತ್ತು 48000ಗಳನ್ನು ರಾಜ್ಯ ಸರ್ಕಾರದಿಂದ ಅಂದರೆ 40%. ನೀವು ಇನ್ನೂ ಒಂದು ಯೋಜನೆ ಬಗ್ಗೆ ತಿಳಿದಿರಬಹುದು ರಾಜ್ಯ ಸರ್ಕಾರದ ಡಾಕ್ಟರ್ ಬಿಆರ್ ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜ್ ಅರಸ್ ಆವಾಸ್ ಯೋಜನೆ ಮತ್ತು ವಾಜಪೇಯಿ ನಗರ ಅವಾಸ್ ಯೋಜನೆ ಅಡಿಯಲ್ಲಿ ನಿರ್ಮಿತ ಗೊಳ್ಳುವ ಮನೆಗಳಾಗಿ 6200 ಕೋಟಿ ರೂಪಾಯಿಗಳನ್ನು ನೀಡಲು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಸಭೆಯಲ್ಲಿ ಘೋಷಣೆಯನ್ನು ಮಾಡಿದ್ದಾರೆ.

ಕರ್ನಾಟಕ ಸಿಎಂ 1 ಲಕ್ಷ ವಸತಿ ಯೋಜನೆ ಅರ್ಜಿಯ ಬಗ್ಗೆ ತಿಳಿಯೋಣ?


ಮೊದಲು ನೀವು ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ಇದು ಮುಖ್ಯವಾಗಿ ಬಡವರಿಗೆ ಮೀಸಲಿಟ್ಟ ಯೋಜನೆಯಾಗಿದೆ. ತಮ್ಮ ಅತಿಯಾದ ಬಡತನದಿಂದ ಸ್ವಂತ ಮನೆಯನ್ನು ಕಟ್ಟಿಕೊಳ್ಳಲಾಗದವರು, ಅಥವಾ ಮನೆಯನ್ನು ನವೀಕರಣಸಲು ಹಣಕಾಸಿನ ಸಮಸ್ಯೆ ಇರುವ ನಾಗರಿಕರು, ಆದಕಾರಣ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಎಲ್ಲ ವಿವರಗಳನ್ನು ಸುಲಭವಾಗಿ ಪರಿಶೀಲನೆ ಮಾಡಿ ಮತ್ತು ಈ ಯೋಜನೆ ಲಾಭವನ್ನು ಪಡೆಯಲೇಬೇಕೆಂದು ಹೇಳಲಾಗುತ್ತದೆ. ಇದಲ್ಲದೆ ಸಂಬಂಧಪಟ್ಟ ಇಲಾಖೆ ನೀಡುವ ಫಲಾನುಭವಿಗಳ ಪಟ್ಟಿಯನ್ನು ಆ ಪ್ರದೇಶದ ವಾರ ಈ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಪಟ್ಟಿ ನಗರ ಮತ್ತು ಗ್ರಾಮೀಣ ಭಾಗವನ್ನು ಕೂಡ ಕರ್ನಾಟಕ ರಾಜ್ಯದ ಎಲ್ಲ ಜನರು ಅಧಿಕೃತವಾಗಿ ವೆಬ್ಸೈಟ್ಗೆ ಭೇಟಿ ಕೊಟ್ಟು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಲ್ಲ ಎಂದು ಪರಿಶೀಲನೆ ಮಾಡಬೇಕು.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?

ಮೊದಲು ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದವರು ಆಗಿರಬೇಕು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಒಂದು ವರ್ಷದ ಆದಾಯವು 87,000 ಗಳನ್ನು ದಾಟಿರಬಾರದು. ಇದಲ್ಲದೆ ನಮ್ಮ ರಾಜ್ಯದಲ್ಲಿ ಅವರು ಕಾಯಂ ವಿಳಾಸವನ್ನು ಮತ್ತು ನಿವಾಸಿಯಾಗಿರಬೇಕು. ಇಷ್ಟೇ ಅಲ್ಲದೆ ನಂತರ ಅವರು ಹಿಂದಿನ ಐದು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ವಾಸವಾಗಿರಬೇಕು. ಮೊದಲು ಯಾರು ಈ ಅರ್ಜಿಯನ್ನು ಸಲ್ಲಿಸುತ್ತಾರೋ ಅವರಿಗೆ ಆದ್ಯತೆಯನ್ನು ನೀಡುವುದು ಸರ್ಕಾರದ ಉದ್ದೇಶ. ಮೊದಲು ಅರ್ಜಿಯನ್ನು ಸಲ್ಲಿಸುವ ಒಂದು ಲಕ್ಷ ಅಭ್ಯರ್ಥಿಗಳಿಗೆ ಈ ಯೋಜನೆಯ ಲಾಭವನ್ನು ಪಡೆಯಲು ಅವಕಾಶ ಇದೆ. ನೀವು ಹಿಂದೆ ಯಾವುದಾದರು ಈ ವಸತಿ ಯೋಜನೆಯ ಲಾಭವನ್ನು ಪಡೆದಿದ್ದರೆ ಯಾವುದಾದರೂ ಯೋಜನೆಯಲ್ಲಿ ನೀವು ಭಾಗಿಯಾಗಿ ಸಹಾಯಧನವನ್ನು ಪಡೆದಿದ್ದರೆ ಈ ಯೋಜನೆಗೆ ನೀವು ಅರ್ಹರ ಆಗುವುದಿಲ್ಲ.

ಯಾವ ಅಗತ್ಯವಾದ ದಾಖಲೆಗಳು ಬೇಕು?


ಪಡಿತರ ಚೀಟಿ, ಮತದಾರ ಚೀಟಿ, ಕಟ್ಟಡ ಕಾರ್ಮಿಕರ ಚೀಟಿ, ಕಾರ್ಮಿಕ ಇಲಾಖೆಯ ನೊಂದಣಿ ಸಂಖ್ಯೆ, ಮೊಬೈಲ್ ನಂಬರ್, ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಗಳು, ಶಾಶ್ವತ ನಿವಾಸ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣ ಪತ್ರ

Related Post

Leave a Reply

Your email address will not be published. Required fields are marked *