ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ. ಧಾರವಾಡ : ಇ.ಡಿ.ಸಿ.ಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಕರ್ನಾಟಕ ಒನ್ 2 ಕೇಂದ್ರಗಳಿಗೆ ಪ್ರಾಂಜೇಸಿಗಾಗಿ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ (https://www.karnatakaone.gov.in/Public/FranchiseeTerms) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಾಂಚೈಸಿ ಆಯ್ಕೆಗಾಗಿ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ, ಪದವಿ, ಸ್ನಾತ್ತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ, ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಠ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟಡದೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಬಯೋಮೆಟ್ರಿಕ ಡಿವೈಸ್ ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆ ಹಾಗೂ ಈಗಾಗಲೇ ಸರಕಾರದಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಒನ್ ಕೇಂದ್ರದಿಂದ ಅಂತರ 2 ಕಿ.ಮೀ ಹಾಗೂ ಅರ್ಜಿದಾರರು ಕೇಂದ್ರವನ್ನು ಸ್ಥಾಪಿಸಲು ಒಂದಕ್ಕಿಂತ ಹೆಚ್ಚು ಸ್ಥಳಗಳನ್ನು ಗುರುತಿಸಿದಲ್ಲಿ ಜಿಲ್ಲಾ ಕಾರ್ಯಪಡೆಯ ನಿರ್ಣಯ ಅಂತಿಮ ಇರುವ ಮಾನದಂಡಗಳಿಗೆ ಬದ್ಧರಾಗಿರುವವರು ಅರ್ಜಿಯನ್ನು ಜನವರಿ 02, 2014 ರೊಳಗೆ ಸಲ್ಲಿಸಬಹುದಾಗಿದೆ.
ಮಾನದಂಡಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೆಲ್ಸ್ ಡೆಸ್ಕ್ 0 080-49203888, 8904085030 ಸಂಪರ್ಕಿಸಬಹುದು. ಹಾಗೂ ವಲಯ ಕೋಆರ್ಡಿನೇಟರ್ ಆಗಿರುವ ಅನೀಸ್ ಅಹಮದ್ ಅವರನ್ನು-9845220135 amkl@karnataka.gov.in ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಗದಗ : ಗದಗ ಜಿಲ್ಲೆಯಲ್ಲಿ ಗದಗ, ಗಜೇಂದ್ರಗಡ, ಲಕ್ಷ್ಮೀಶ್ವರ ಮುಂಡರಗಿ, ನರಗುಂದ, ರೋಣ ತಾಲ್ಲೂಕುಗಳಲ್ಲಿ ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ https://www.karnatakaone.gov.in/Public/FranchiseeTerm ಮಾತ್ರ ಜನೆವರಿ 2 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರೈತರಿಗೆ ಕೃಷಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ನೀರು ಬಳಕೆಯ ತರಬೇತಿ ಕಾರ್ಯಕ್ರಮ
ಬೆಳಗಾವಿ : ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ, ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಅಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ಇವರ ಸಹಯೋಗದೊಂದಿಗೆ ಕೃಷಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ನೀರು ಬಳಕೆಯ ಕುರಿತು ದಿನಾಂಕ 19 ರಿಂದ 20, ಡಿಸೆಂಬರ 2023 ರವರೆಗೆ ರೈತರಿಗೆ 2 ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿ ಸಲಾಯಿತು. ಡಾ॥ ಶಿವಪ್ರಸಾದ ಗಾಂವಕರ, ಭೂ ಅಭಿವೃದ್ಧಿ ಅಧಿಕಾರಿಗಳು (ಕೃಷಿ) ಕಾಡಾ, ಬೆಳಗಾವಿಇವರು ಕಾರ್ಯಕ್ರಮ ದಉದ್ಘಾಟನೆಯನ್ನು ನೆರವೇರಿಸಿ.
ತಮ್ಮ ಪ್ರಾಧಿಕಾರದ ಇತಿಹಾಸ, ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದುರೈತರಿಗೆ ತಿಳಿಸಿದರು. ಕಾರ್ಯಕ್ರಮದ ಅತಿಥಿಗಳಾದ ಡಾ। ಸುಚೇತಾ ಹೆಬ್ಬಳ್ಳಿ, ಸಹಾಯಕ ಕೃಷಿ ನಿರ್ದೇಶಕರು (ಮ.ಮತ್ತು ಘ.ಯೋ.), ಕೃಷಿ ಮತ್ತು ಸಹಕಾರಿ ಉಪವಿಭಾಗ-1, ಧಾರವಾಡ ಇವರು ಮಣ್ಣಿನ ಪರೀಕ್ಷೆ, ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ ಮಾಡಬೇಕು ಮತ್ತು ಬೆಳೆ ಪರಿವರ್ತನೆ, ಬೆಳೆ ವೈವಿಧ್ಯತೆ, ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಎಸ್.ಎಚ್. ಆದಾಪೂರ, ನಿವೃತ್ತ ವಿಜ್ಞಾನಿಗಳು, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ ಇವರುನೀರು ಬಳಕೆದಾರರ ಸಹಕಾರಿ ಸಂಘಗಳು, ಹಂಚಿಕೆ ಹಾಗೂ ಯೋಜನಾ ಮಟ್ಟದ ಮಹಾಮಂಡಳಗಳ ಪಾತ್ರ, ನೀರಾವರಿರೈತರ ಹಕ್ಕು ಹಾಗೂ ಜವಾಬ್ದಾರಿ, ರೈತರು ಕೃಷಿಯಲ್ಲಿ ಅಂತರ್ಜಾಲ ಬಳಸುವುದು, ಕೃಷಿ ಮಾರುಕಟ್ಟೆ ವಿಧಾನಗಳು, ರೈತರಿಗೆ ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ವಿ.ಡಿ.ವೈಕುಂಠ, ನಿವೃತ್ತ ವಿಜ್ಞಾನಿಗಳು, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರು ನೀರಾವರಿಯಲ್ಲಿ ಕೃಷಿ ಬೆಳೆ ಬೆಳೆಯಲು ಅಳವಡಿಸಿಕೊಳ್ಳ ಬೇಕಾದ ಸಮಗ್ರ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಸುಧಾ ವಿ. ಮಂಕಣಿ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು (ಪ್ರಭಾರಿ), ಕೆ.ಎಚ್.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ ಇವರು ಮಣ್ಣು ಮತ್ತು ನೀರಿನ ಸಂರಕ್ಷಣೆ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳು ಮತ್ತು ಸಿರಿಧಾನ್ಯಗಳನ್ನು ಬೆಳೆಯಿರಿ ಹಾಗೂ ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ಶ್ರೀ ಎನ್.ಎಚ್.ಭಂಡಿ ಸ್ವಾಗತಿಸಿದರು. ಶ್ರೀಮತಿ ಹೇಮಾವತಿ ಹಿರೇಗೌಡರ ವಂದನಾರ್ಪಣೆ ಮಾಡಿದರು ಮತ್ತು ಡಾ.ವಿನಾಯಕ ನಿರಂಜನಇ ವರು ಕಾರ್ಯಕ್ರಮ ನಿರೂಪಿಸಿದರು. ರೋಣ ತಾಲೂಕಿನ ಮೆಣಸಗಿ ಗ್ರಾಮದ50 ಜನ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.