ಮಳೆ ಕೊರತೆಯ ಹಿನ್ನೆಲೆಯಲ್ಲಿ ಕಾವೇರಿ ವಿಚಾರದಲ್ಲಿ ಎದುರಾಗಬಹುದಾದ ಸಂಕಷ್ಟದ ಸ್ಥಿತಿಯನ್ನು ಮೊದಲೇ ನಿರೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ ಅದನ್ನು ಎದುರಿಸಲು ಸದ್ದಿಲ್ಲದೆ ಪೂರ್ವತಯಾರಿ ನಡೆಸಿದ್ದರು. ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಯ ಕಾಲುವೆಗಳಿಗೆ ಮೊದಲೇ ನೀರು ಹರಿಸಿ, ಕೆರೆಗಳನ್ನು ತುಂಬಿಸಿದ್ದರು. ಹೇಮಾವತಿ ಡ್ಯಾಂನಿಂದಲೂ ಕಾಲುವೆಗಳ ಮೂಲಕ ಹಾಸನ, ತುಮಕೂರು ಜಿಲ್ಲೆಗಳ ಕೆರೆಗಳಿಗೆ ನೀರು ಹರಿಸಿದ್ದರು.
ಈ ಮೂಲಕ ಆಣೆಕಟ್ಟುಗಳಲ್ಲಿ ನೀರು ಕಡಿಮೆ ಮಟ್ಟದಲ್ಲಿ ಇರುವಂತೆ ನೋಡಿಕೊಂಡಿದ್ದರು. ಇದರಿಂದಾಗಿ ತಮಿಳುನಾಡು ಬೇಡಿಕೆಯನ್ನು ಈಡೇರಿಸಲು ಕಾವೇರಿ ಪ್ರಾಧಿಕಾರ ಕರ್ನಾಟಕದ ಜಲಾಶಯಗಳನ್ನು ಪರಿಶೀಲಿಸಿದಾಗ ಅಲ್ಲಿ ಸಂಗ್ರಹ ಇದ್ದ ನೀರಿನ ಪ್ರಮಾಣ ಕಡಿಮೆ ಇತ್ತು. ಈ ಕಾರಣದಿಂದಾಗಿ 12,000 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಮೊದಲು ಆದೇಶಿಸಿದ್ದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ತನ್ನ ಆದೇಶವನ್ನು 5,000 ಕ್ಯೂಸೆಕ್ಸ್ ಗೆ ಇಳಿಸಿತು.
ರಾಜ್ಯದ ರೈತ ಸಂಘಟನೆಗಳು ಮತ್ತು ಕನ್ನಡ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಿದ್ದರಾಮಯ್ಯನವರು ಬಂದ್- ಪ್ರತಿಭಟನೆಗಳು ಕೈಮೀರಿ ಹೋಗದಂತೆ ನೋಡಿಕೊಂಡದ್ದು ಕೂಡಾ ವಿಶೇಷವಾಗಿತ್ತು. ಮುಖ್ಯಮಂತ್ರಿಗಳು ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ನೇರಾನೇರವಾಗಿ ಉಲ್ಲಂಘಿಸಲು ಹೋಗದೆ ಆದೇಶವನ್ನು ಪಾಲನೆ ಮಾಡುವ ಜೊತೆಯಲ್ಲಿ ರಾಜ್ಯದ ಪ್ರತಿರೋಧವನ್ನು ದಾಖಲಿಸುತ್ತಲೇ ಹೋದರು. ಇದರಿಂದಾಗಿ ಅಂತಿಮವಾಗಿ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 3000 ಕ್ಯುಸೆಕ್ಸ್ ಗೆ ಇಳಿಯುವಂತಾಯಿತು.
ಮೇಲ್ನೋಟಕ್ಕೆ ಇದು ದೊಡ್ಡ ಪ್ರಮಾಣ ಎಂದು ಅನಿಸಿದರೂ ಕರ್ನಾಟಕದ ಜಲಾಶಯಗಳಿಂದ ಹರಿದುಹೋಗುವ ನೀರು ಗರಿಷ್ಠ 500ರಿಂದ 1000 ಕ್ಯುಸೆಕ್ಸ್ ಮಾತ್ರ ಎನ್ನುವುದು ವಾಸ್ತವ. ಕರ್ನಾಟಕ ತನ್ನ ನಾಲ್ಕು ಜಲಾಶಯಗಳಲ್ಲಿ ನೀರನ್ನು ಎಷ್ಟೇ ಸಂಗ್ರಹ ಇಟ್ಟರೂ ಎರಡರಿಂದ ಮೂರು ಸಾವಿರ ಕ್ಯುಸೆಕ್ಸ್ ನಷ್ಟು ನೀರು ಪ್ರತಿದಿನ ನೈಸರ್ಗಿಕವಾಗಿ ಮೆಟ್ಟೂರು ಜಲಾಶಯಕ್ಕೆ ಹರಿದುಹೋಗುತ್ತದೆ. ಇದರಿಂದಾಗಿ ತಮಿಳುನಾಡಿಗೆ ಹರಿಸುವ ನೀರು ಲೆಕ್ಕದಲ್ಲಿ 3000 ಕ್ಯುಸೆಕ್ಸ್ ಇದ್ದರೂ ರಾಜ್ಯದ ಜಲಾಶಯಗಳಿಂದ ಹೋಗುವ ನೀರು 500ಕ್ಯುಸೆಕ್ಸ್ ನಿಂದ ಒಂದು ಸಾವಿರ ಕ್ಯುಸೆಕ್ಸ್ ಮಾತ್ರ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ ಮತ್ತು ಕಾವೇರಿ ಪ್ರಾಧಿಕಾರದ ಆದೇಶವನ್ನು ಉಲ್ಲಂಘಿಸಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರವನ್ನು ಎದುರುಹಾಕಿಕೊಳ್ಳಲಿಲ್ಲ. ಅಲ್ಪಪ್ರಮಾಣದ ನೀರನ್ನು ಬಿಟ್ಟುಕೊಟ್ಟು ರಾಜ್ಯದ ರೈತರ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗಾಗಿ ಕಾವೇರಿಯನ್ನು ಉಳಿಸಿಕೊಂಡು ಕನ್ನಡಿಗರ ಹಿತವನ್ನು ಕಾಯುತ್ತಿದ್ದಾರೆ.
ನರೇಗಾ ಯೋಜನೆ ಅಡಿಯಲ್ಲಿ ದನದ ಶೆಡ್ ನಿರ್ಮಾಣಕ್ಕೆ 57,000 ರೂಪಾಯಿ ಸಹಾಯಧನ