ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಡೆಯಿಂದ ಬಿಡುಗಡೆ ಆದ ವೆಬ್ಸೈಟ್ ಇದೆ. ರೈತರು ಭೂಮಿ( Bhoomi) ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ರೈತರಿಗೆ ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಹಾಗೂ ಅದೇ ರೀತಿ https://landrecords.karnataka.gov.in/. ಈ ಲಿಂಕ್ ಮೂಲಕ ಕೂಡ ಮಾಹಿತಿ ಪಡೆಯಬಹುದು.
ಬನ್ನಿ ಹಾಗಾದರೆ ನಿಮ್ಮ ಜಮೀನಿನ ಆಧಾರದ ಮೇಲೆ ಎಷ್ಟು ಲಕ್ಷದವರೆಗೆ ಸಾಲ ಇದೆ ಎಂದು ನೋಡೋಣ.
ಮೊದಲಿಗೆ ಭೂಮಿ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿ.
ಅಥವಾ Https://landrecords.karnataka.gov.in/ ಈ ಲಿಂಕ್ ಹಾಕಿ ಸರ್ಚ್ ಮಾಡಿ.
ಈ ವೆಬ್ ಸೈಟಿಗೆ ಹೋದ ನಂತರ ಏನು ಮಾಡಬೇಕು?
ನಂತರ ಅಲ್ಲಿ ಪಹಣಿ ನಂಬರ್ ಹಾಗೂ ಜಿಲ್ಲಾ, ತಾಲೂಕು,ಗ್ರಾಮ ಹಿಸ್ಸಾ ನಂಬರ್ ಹೀಗೆ ಮಾಹಿತಿ ಕೇಳುತ್ತದೆ.
ನಂತರ ಅಲ್ಲಿ ಎಲ್ಲಾ ಮಾಹಿತಿ ಹಾಕಿದ ನಂತರ ಮುಂದೆ ಹೋಗಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.ಇದೆಲ್ಲ ಆದ ನಂತರ ಅಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ ದೊರೆಯುತ್ತದೆ. ನಂತರ ಅಲ್ಲಿ ವಿವ್ ಆರ್ ಟಿ ಸಿ (view rtc) ಎಂಬುದರ ಮೇಲೆ ಕ್ಲಿಕ್ ಮಾಡಬೇಕು.ನಂತರ ಅಲ್ಲಿ ನಿಮ್ಮ ಜಮೀನಿನ ಪಹಣಿ ದೊರೆಯುತ್ತದೆ ಅದರಲ್ಲಿ ನಿಮ್ಮ ಜಮೀನಿನ ಆಧಾರದ ಮೇಲೆ ಇರುವ ಸಾಲದ ಮೊತ್ತದ ಮಾಹಿತಿ ದೊರೆಯುತ್ತದೆ.
ಪಹಣಿ ಡೌನ್ಲೋಡ್ ಮಾಡುವುದು ಹೇಗೆ?
ಮೊದಲಿನಂತೆ ಕಛೇರಿಗೆ ಹೋಗಿ ಪಹಣಿ ತಗೆದುಕೊಳ್ಳುವ ಕಾಲ ಹೋಗಿದೆ ಈಗ ಏನಿದ್ದರೂ ಆನ್ಲೈನ್ ಕಾಲ. ಈಗ ನೀವು ನಿಮ್ಮ ಮೊಬೈಲ್ ನಲ್ಲಿಯೇ ಪಹಣಿ ಡೌನ್ಲೋಡ್ ಮಾಡಿಕೊಳ್ಳಬಹುದು .https://landrecords.karnataka.gov.in/. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅವರು ಕೇಳಿದ ಮಾಹಿತಿ ಹಾಕಿದರೆ ನಿಮಗೆ ಪಹಣಿ ಕೋತಲ್ಲಿಯೆ ದೊರೆಯುತ್ತದೆ. ನಿಮಗೆ ನಿಮ್ಮ ಹೋಲದ ಪಹಣಿ ಪಡೆಯಬೇಕಿದ್ದರೇ, ಮೊದಲಿನಂತೆ ನಾಡ ಕಚೇರಿಗೆ ಹೋಗಿ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ಅತೀ ಸುಲಭವಾಗಿ ಹೋಲದ RTC ಉತಾರ/ ಪಹಣಿಯನ್ನು ನೀವು ಪಡೆಯಬಹುದಾಗಿದೆ. ಹಾಗೆಯೇ ಪಹಣಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಹ ಅವಕಾಶವಿದೆ.
ಕಟ್ಟುನಿಟ್ಟಾಗಿ ಹೇಳುವುದಾದರೆ, ಖಾತಾ ಪ್ರಮಾಣಪತ್ರ ಅಥವಾ ಖಾತಾ ಸಾರವು ಹೇಳಿದ ಆಸ್ತಿಯ ಮೇಲೆ ಆಸ್ತಿ ತೆರಿಗೆ ಪಾವತಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಯಾರ ಹೆಸರಿನಲ್ಲಿದೆಯೋ ಆ ವ್ಯಕ್ತಿಗೆ ಆಸ್ತಿಯ ಯಾವುದೇ ಮಾಲೀಕತ್ವವನ್ನು ನೀಡುವುದಿಲ್ಲ.
ಇದನ್ನೂ ಓದಿರಿ :- ಕೀಟನಾಶಕಗಳಿಗೆ ತುಂಬಾ ಹಣ ಖರ್ಚು ಮಾಡುತ್ತಿರುವಿರಿ ಅಲ್ಲವೇ ಹಾಗಾದರೆ ಈ ಯಂತ್ರವನ್ನು ಹೊಲದಲ್ಲಿ ಸ್ಥಾಪಿಸಿದರೆ ಸಾಕು 5 ರಿಂದ 6 ವರ್ಷದವರೆಗೆ ಕೀಟನಾಶಕ ಬಳಸುವ ಅವಶ್ಯಕತೆ ಇಲ್ಲ. https://bhoomisuddi.com/self-powered-solar-pesticides-are-now-available-in-the-market/
ಇದನ್ನೂ ಓದಿರಿ :- ರೇಷ್ಮೆ ಕೃಷಿಯ ತರಬೇತಿ ಉಚಿಚವಾಗಿ ಕೊಡುತ್ತಿದ್ದಾರೆ. ಎಲ್ಲಿ,ಯಾವಾಗ ಎಂದು ತಿಳಿಯಿರಿ
ಅವರ ಮೊಬೈಲ್ ಸಂಖ್ಯೆ ಹಾಗೂ ಸಂಪರ್ಕಿಸುವ ಎಲ್ಲಾ ಮಾಹಿತಿ ನಿಮಗಾಗಿ https://bhoomisuddi.com/providing-free-training-to-sericulture-farmers-how-to-contact-them-where-they-are-offering-know-that/