ಆತ್ಮೀಯ ರೈತರೇ, ಸರ್ಕಾರವು ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ತಂದಿದೆ. ಅದೇ ರೀತಿ ಜನರಿಗೆ ರೇಷನ್ ಕಾರ್ಡ್ ಕೊಟ್ಟು ಅವರ ಮನೆಗೆ ಉಚಿತವಾಗಿ ರೇಷನ್ ನೀಡುವ ಮೂಲಕ ಸಹಾಯ ಮಾಡುತ್ತಿದೆ. ಈಗಾಗಲೇ ನೀವು ನಿಮ್ಮ ರೇಷನ್ ಕಾರ್ಡಿಗೆ ಅರ್ಜಿಯನ್ನು ನೀಡಿ ಅದು ಸಂಪೂರ್ಣವಾಗಿ ಸರ್ಕಾರದಿಂದ ಮಾನ್ಯತೆ ಪಡೆದು ಬರಲು ತುಂಬಾ ಸಮಯವಾಗುತ್ತದೆ. ಸರ್ಕಾರವು ಈಗಾಗಲೇ ನೀವು ರೇಷನ್ ಕಾರ್ಡಿಗೆ ಅರ್ಜಿ ನೀಡಿದ್ದರೆ, ಯಾರ್ಯಾರಿಗೆ ಈ ರೇಷನ್ ಕಾರ್ಡ್ ಬಂದು ತಲುಪುತ್ತದೆ ಎಂಬುದರ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ತಿಳಿದುಕೊಳ್ಳಬೇಕೆ ಹಾಗಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡ್ ಪಟ್ಟಿಯನ್ನು ನೋಡುವುದು ಹೇಗೆ?
ಜನರೇ ಈಗಾಗಲೇ ಬಿಪಿಎಲ್ ಕಾರ್ಡ್ ಇಲ್ಲದೇ ಇರುವ ಜನರು ಹಲವಾರು ಬಾರಿ ಅರ್ಜಿ ಸಲ್ಲಿಸಿ ಬೇಸತ್ತು ಹೋಗಿದ್ದಾರೆ. ಏಕೆಂದರೆ ಸರ್ಕಾರದ ವೆಬ್ ಸೈಟಿನ ಸರ್ವರ್ ಡೌನ್ ಇರುವ ಕಾರಣ ನಿಮ್ಮ ಅಪ್ಲಿಕೇಶನ್ ಮುಂದೆ ಹೋಗುತ್ತಿಲ್ಲ. ಆದಕಾರಣ ಈ ಬಾರಿ ಸರ್ಕಾರವು ನಿಮ್ಮ ಅಪ್ಲಿಕೇಶನ್ ತೆಗೆದುಕೊಂಡು ಯಾರ್ಯಾರಿಗೆ ರೇಷನ್ ಕಾರ್ಡ್ ಬರುತ್ತದೆಯೋ ಅವರ ಪಟ್ಟಿಯನ್ನು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅದು ನಿಮಗೆ ಪಟ್ಟಿಯು ಕಂಡು ಬಿಡುತ್ತದೆ. ahara.kar.nic.in
ಏನಿದು ಮೇರಾ ರೇಷನ್ ಆ್ಯಪ್?
https://play.google.com/store/apps/details?id=com.nic.onenationonecard
ನಾವು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆ್ಯಪ್ ಡೌನ್ಲೋಡ್ ಮಾಡಿ. ನಮ್ಮ ಸರ್ಕಾರವು ನ್ಯಾಯಬೆಲೆ ಅಂಗಡಿಯಲ್ಲಿ ಇರುವ ಜನರು ಅಕ್ರಮವಾಗಿ ಜನರಿಗೆ ಮೋಸ ಮಾಡುತ್ತಾರೆ ಎಂಬ ದೂರ ದೃಷ್ಟಿಯಿಂದ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ತಿಂಗಳಿಗೊಮ್ಮೆ ನಿಮಗೆ ಎಷ್ಟು ರೇಷನ್ ಬರುತ್ತದೆ, ನೀವು ಎಷ್ಟು ತೆಗೆದುಕೊಂಡಿದ್ದೀರಿ ಎಲ್ಲ ವಿಷಯಗಳನ್ನು ಈ ಆ್ಯಪ್ ನಲ್ಲಿ ಕಂಡುಕೊಳ್ಳಬಹುದು. ನೀವು ಕಳೆದ ಆರು ತಿಂಗಳಲ್ಲಿ ಎಷ್ಟು ರೇಷನ್ ತೆಗೆದುಕೊಂಡಿದ್ದೀರಿ ಎಂದು ಇದರ ಮೂಲಕ ಸುಲಭವಾಗಿ ತಿಳಿಯಬಹುದು ಮತ್ತು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಎಷ್ಟು ರೇಷನ್ ಇದೆ ಮತ್ತು ಎಷ್ಟು ಲೋಡ್ ಬಂದಿದೆ ಎಂದು ಸುಲಭವಾಗಿ ಈ ಆ್ಯಪ್ ನಲ್ಲಿ ತಿಳಿದುಕೊಳ್ಳಬಹುದು. ಇದನ್ನು ಅತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಮತ್ತು ಇದರಲ್ಲಿಯೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ?
ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣ , ಡ್ರೈವಿಂಗ್ ಲೈಸೆನ್ಸ್ , ಮೊಬೈಲ್ ಸಂಖ್ಯೆ, ಭಾವಚಿತ್ರ, ವೋಟರ್ ಐಡಿ, ಇತ್ತೀಚಿಗೆ ತೆಗೆದುಕೊಂಡ ಪಾರ್ಸ್ ಪೋರ್ಟ್ ಅಳತೆಯ, ಸ್ವಯಂ ಘೋಷಿತ ಪ್ರಮಾಣ ಪತ್ರ. ಹೀಗೆ ಇನ್ನೂ ಯಾರೂ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿಲ್ಲ ಅವರು ಕೂಡಲೇ ಅರ್ಜಿ ಸಲ್ಲಿಸಿ ಫಲಾನುಭವಿಗಳು ಆಗಬೇಕು.
ಇದನ್ನೂ ಓದಿ :- ರೈತರು 50 ಶೇಕಡಾ ಸಬ್ಸಿಡಿ ದರದಲ್ಲಿ ನೀರಾವರಿ ಪೈಪ್ ಲೈನ್ ಪಡೆಯಿರಿ ಕೂಡಲೇ ಅರ್ಜಿ ಸಲ್ಲಿಸಿ