ಆತ್ಮೀಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಬಹಳ ಜನರು ಕೃಷಿ ಅವಲಂಬನೆ ಇರುವ ಕಾರಣ ಸರ್ಕಾರವು ರೈತರಿಗೆ ಹಲವಾರು ಯೋಜನೆಗಳನ್ನು ತಂದು ಅವರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಲೇಖನದಲ್ಲಿ ನಾವು ಪಿಎಂ ಕಿಸಾನ್ 13ನೇ ಕಂತು ಯಾವ ಯಾವ ರೈತರಿಗೆ ಜಮಾ ಆಗಿದೆ ಎಂದು ತಿಳಿಯೋಣ. ಪಿಎಂ ಕಿಸಾನ್ ಯೋಜನೆಯು ರೈತರಿಗೆ ಸಾವಿರ ರೂಪಾಯಿ ಹಾಗೆ ಮೂರು ಕಂತುಗಳಾಗಿ ಅಂದರೆ ಒಟ್ಟಾರೆ 6,000ಗಳನ್ನು ರೈತರ ಖಾತೆಗೆ ಡಿಬಿಟಿ ಮೂಲಕ ಜಮಾ ಆಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಫೆಬ್ರವರಿ 27 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್) 13 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2000 ರೂ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 16,800 ಕೋಟಿ ರೂ. ಕಳೆದ ವರ್ಷ ಮೇ ಮತ್ತು ಅಕ್ಟೋಬರ್‌ನಲ್ಲಿ ಈ ಯೋಜನೆಯಡಿ 11 ಮತ್ತು 12 ನೇ ಕಂತುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ನಾವು ನಿಮಗೆ ಹೇಳೋಣ.
ಎಷ್ಟು ಕಂತು ಹಣ ಜಮವಾಗಿದೆ ಎಂದು ಹೇಗೆ ತಿಳಿಯುವುದು?
ಈಗ ನಮ್ಮ ನಾಡ ರೈತರು ಮನೆಯಲ್ಲೇ ಕುರಿತು ತಮ್ಮ ಮೊಬೈಲ್ ನಲ್ಲಿ ಯಾರಿಗೆ ಎಷ್ಟು ಹಣ ಜಮವಾಗಿದೆ ಎಂದು ನೋಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಈಗ ನೀವು ಕಂಪ್ಯೂಟರ್ ಅಂಗಡಿಗೆ ಹೋಗಿ ನೋಡುವ ಅವಶ್ಯಕತೆ ಇಲ್ಲ. ಈಗ ಕೆಲವು ನಿಮಿಷಗಳಲ್ಲಿ ನಿಮ್ಮ ಖಾತೆಗೆ ಎಷ್ಟು ಪಿಎಂ ಕಿಸಾನ್ ಹಣ ಜಮವಾಗಿದೆ ಎಂದು ನೀವು ಈ ಕೆಳಗಿನ ಹಂತಗಳನ್ನು ನೋಡುತ್ತಾ ಕಲಿಯಿರಿ. ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://pmkisan.gov.in/BeneficiaryStatus.aspx
ನಿಮ್ಮ ಆಧಾರ್ ನಂಬರ್ ಮೊಬೈಲ್ ಹಾಕಿದರೆ ಸಾಕು ನಿಮಗೆ ಎಷ್ಟು ಕಂತು ಹಣ ಜಮವಾಗಿದೆ ಎಂದು ತಿಳಿಯಿರಿ.
ಯೋಜನೆ ಅಡಿಯಲ್ಲಿ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2000 ರೂ. ಅಂತೆ ವಾರ್ಷಿಕವಾಗಿ 6000ರೂ. ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗಿದೆ.ಈಗಾಗಲೇ ಯೋಜನೆಯಡಿಯಲ್ಲಿ 12 ನೇ ಕಂತಿನ ವರೆಗೆ ಹಣ ವರ್ಗಾವಣೆ ಆಗಿದ್ದು,13 ನೇ ಕಂತಿನ ಹಣಕ್ಕಾಗಿ ಕಾದಿದ್ದು ಸಾಕು. ದಿನಾಂಕ 27/02/2023 ರಂದು ಮಧ್ಯಾನ 3 ಕ್ಕೇ ರೈತರ ಖಾತೆಗೆ 2000 ರೂಪಾಯಿ ಜಮಾ ಆಗಿದೆ.
ಇದನ್ನೂ ಓದಿ :- ಇ ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ 1000 ರೂಪಾಯಿಗಳು ಅರ್ಜಿ ನೋಂದಣಿ ಮಾಡುವುದು ಹೇಗೆ ?