ಆಗುಂಬೆ: ಆತಂಕ ಶುರು, ಮಂಗಳೂರು-ಶಿವಮೊಗ್ಗ ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169(ಎ) ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಅಭಿವೃದ್ಧಿಗೆ 180 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಇನ್ನೂ ಆರಂಭವಾಗಿಲ್ಲ. 2022ರ ಜುಲೈಯಲ್ಲಿ ಥಾಟ್ ನ 11ನೇ ತಿರುವಿನಲ್ಲಿ ಕುಪಿತಗೊಂಡ ಕಾರಣ ಸಂಚಾರಕ್ಕೆ ಅಡಚಣೆಯಾಗಿತ್ತು, ಮಳೆಗಾಲದಲ್ಲಿ ಎಲ್ಲ ಘಾಟಿಗಳ ಸಂಚಾರ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಅತೀ ಸಣ್ಣ ಘಾಟಿ ಹೆಗ್ಗಳಿಕೆಯ ಆಗುಂಬೆ ಘಾಟಿ ಹೆದ್ದಾರಿ ಅಗಲೀಕರಣ, ಅಲ್ಲಲ್ಲಿ ತಡೆಗೋಡೆ ದುರಸ್ತಿಗೆ ಹೆದ್ದಾರಿ ಇಲಾಖೆ ಮುಂದಾಗಬೇಕಿದೆ.
ಚಾರ್ಮಾಡಿ: ನೆಟ್‌ವರ್ಕ್ ಸಮಸ್ಯೆ
ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯೂ ತೀರಾ ಅಪಾಯಕಾರಿಯಾಗಿದ್ದು, ಪ್ರತಿವರ್ಷ ಅವರಂಗಳು ಸಂಭವಿಸುತ್ತಿವೆ. ಅವಘಡಗಳ ಸಂದರ್ಭ ಸಂಬಂಧಪಟ್ಟವರ ಸಂಪರ್ಕಿಸಲು ಘಾಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಮರಗಳು, ರೆಂಬೆಗಳು ಬಿದ್ದು ಸಂಚಾರ ವ್ಯತ್ಯಯ ಉಂಟಾಗುತ್ತದೆ. ನಿರಂತರ ಮಳೆ, ಗಾಳಿ ಇದ್ದರೆ ಮರಗಳ ಬುಡ ಸಡಿಲಗೊಂಡು ಉರುಳಿ ಬೀಳುತ್ತವೆ. ನೆಟ್ ವರ್ಕ್ ಸಮಸ್ಯೆ ಕಾರಣ ಅಪಾಯ ಸಂಭವಿಸಿದ ಅರ್ಧ ತಾಸು ಬಳಿಕವೇ ಸಂಬಂಧಪಟ್ಟವರಿಗೆ ಮಾಹಿತಿ ತಲುಪುತ್ತದೆ. ಸಂಪಾಜೆ: ಕುಸಿತ ಭೀತಿ ಜೀವಂತ
ಮಂಗಳೂರು-ಮಡಿಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಘಾಟಿ ಸುಸ್ಥಿತಿಯಲ್ಲಿದ್ದರೂ, 2018ರಲ್ಲಿ ನಡೆದ ಜೋಡುಪಾಲ ದುರಂತದ ಬಳಿಕ ಇಲ್ಲೂ ಘಾಟಿ ಕುಸಿತ ಆತಂಕ ಇನ್ನೂ ಇದೆ. ಘಾಟಿಯುದ್ದಕ್ಕೂ ತಿರುವಿನ ರಸ್ತೆಯಿದ್ದು, ಹೆದ್ದಾರಿಗೆ ಬಾಗಿ ನಿಂತ ಮರಗಳು ಅಪಾಯದ ಮುನ್ಸೂಚನೆ ನೀಡುತ್ತಿವೆ.
ಶಿರಾಡಿ: ಮರಗಳು ಬಾಗಿವೆ
ಶಿರಾಡಿ ಘಾಟಿ ಮೀಸಲು ಅರಣ್ಯದೊಳಗೆ ಸಾಗುತ್ತಿದ್ದು, ಹೆದ್ದಾರಿಗೆ ಬಾಗಿ ನಿಂತ ಮರಗಳು ಅಪಾಯಕಾರಿಯಾಗಿವೆ. ಪ್ರತಿವರ್ಷ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗಳು ಘಾಟಿಯಲ್ಲಿ ಸರ್ವೆ ನಡೆಸಿ ಅಪಾಯಕಾರಿ ಮರಗಳ ತೆರವಿಗೆ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿಗಳಿಗೆ ವರದಿ ನೀಡಬೇಕು.ಆದರೆ ಹೆದ್ದಾರಿ ಪ್ರಾಧಿಕಾರ ಇನ್ನೂ ಅಪಾಯಕಾರಿ ಮರಗಳ ವಿವರ ನೀಡಿದ ಕಾರಣ ಮರಗಳ ತೆರವು.
ಇದನ್ನೂ ಓದಿ:- ನಿಮ್ಮ ಹೊಲಕ್ಕೆ ಕಾಲುದಾರಿ ಮತ್ತು ಬಂಡೆ ದಾರಿ ಎಲ್ಲಿದೆ ತಿಳಿಯಲು ನಿಮ್ಮ ಊರಿನ ನಕ್ಷೆ ಡೌನ್ಲೋಡ್ ಮಾಡಿ
APL ಮತ್ತು BPL ಕಾರ್ಡಿನ ಕುಟುಂಬದ ಯಜಮಾನಿಯು ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಕೂಡಲೇ ಅರ್ಜಿ ಸಲ್ಲಿಸಿ
ಶಕ್ತಿ ಸ್ಮಾರ್ಟ್ ಕಾರ್ಡ್ ಮಾಡಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿ ಸೇವಾ ಸಿಂಧು ಮೂಲಕ ಅರ್ಜಿ
ನಮ್ಮ ಸರ್ಕಾರವು ರೈತರ ಉದ್ದಾರಕ್ಕಾಗಿ ತಾಡಪತಿ ವಿತರಿಸಲು ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ