ಅತ್ಮೀಯ ನಾಗರಿಕರೇ, ಏಪ್ರಿಲ್ 6 ರಿಂದ ಮೂರು ದಿನ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆ ಸುರಿಯಲಿದೆ. ಇನ್ನೂ ಕರಾವಳಿ ಭಾಗದಲ್ಲಿ ಏಪ್ರಿಲ್ 7ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಮಳೆ ಬಂದರೆ, ಮರುದಿನ ಏಪ್ರಿಲ್ 8 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ವರುಣನ ದರ್ಶನವಾಗಲಿದೆ.
ಯಾವ ಜಿಲ್ಲೆಗಳಲ್ಲಿ ಮಳೆ ಆಗುತ್ತೆ ನೋಡಿ?
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ರಾಮನಗರ ಮತ್ತು ಕೋಲಾರ, ಕೊಡಗು, ಮೈಸೂರು ಜಿಲ್ಲೆಗಳ ಹಲವೆಡೆ ದಿನ ಬಿಟ್ಟು ದಿನ ಮುಂದಿನ ಏಪ್ರಿಲ್ 8ರವರೆಗೆ ಮಳೆ ಬರಲಿದೆ. ಇಷ್ಟು ಜಿಲ್ಲೆಗಳಲ್ಲಿ ನಿತ್ಯ ಬಿಸಿಲಿನ ದರ್ಶನವಿದ್ದರೂ ಸಹಿತ ಮಬ್ಬು ವಾತಾವರಣವು ಕಂಡು ಬರಲಿದೆ. ಸಂಜೆ ವೇಳೆಗೆ ಬಿಸಿಲು ಮರೆಯಾಗಿ ಗುಡುಗು ಮಿಂಚು ಸಹಿತ ಜೋರು ಮಳೆ ಅಬ್ಬರಿಸಲಿದೆ. ಗಾಳಿಯು ಸಹ ಈ ಅವಧಿಯಲ್ಲಿ ವೇಗವಾಗಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮಾಹಿತಿ ನೀಡಿದೆ.
ಹಾಗಾದರೆ ಇಂದು (04/04/2023) ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ತಾಪಮಾನ ಇದೆ ಎಂದು ತಿಳಿಯೋಣ
ಬೆಂಗಳೂರು: 32-21
ಬಳ್ಳಾರಿ: 39-23
ಬಾಗಲಕೋಟೆ: 38-23
ಬೆಳಗಾವಿ: 36-19
ಬೀದರ್: 37-23
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 33-21
ಚಿಕ್ಕಮಗಳೂರು: 34-18
ಮಂಗಳೂರು: 32-24
ಶಿವಮೊಗ್ಗ: 37-19
ಮೈಸೂರು: 32-21
ಮಂಡ್ಯ: 33-21
ಮಡಿಕೇರಿ: 29-16
ರಾಮನಗರ: 33-21
ಇದನ್ನೂ ಓದಿ :- ಇ ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ 1000 ರೂಪಾಯಿಗಳು ಅರ್ಜಿ ನೋಂದಣಿ ಮಾಡುವುದು ಹೇಗೆ ?
ಹಾಸನ: 34-19
ಕೋಲಾರ: 32-21
ತುಮಕೂರು: 34-21
ಉಡುಪಿ: 33-23
ಕಾರವಾರ: 33-23
ದಾವಣಗೆರೆ: 37-20
ಹುಬ್ಬಳ್ಳಿ: 37-21
ಚಿತ್ರದುರ್ಗ: 36-20
ಹಾವೇರಿ: 37-19
ಗದಗ: 37-21
ಕೊಪ್ಪಳ: 37-23
ರಾಯಚೂರು: 39-24
ಯಾದಗಿರಿ: 39-25
ವಿಜಯಪುರ: 37-24
ಕಲಬುರಗಿ: 39-24