ಬೆಳೆ ವಿಮೆ ಮಾಡಿಸಿದ ನಂತರ ಯಾವ ರೈತರು ಬೆಳೆ ಹಾಳಾದಾಗ ವಿಮಾ ಕಂಪನಿಗೆ ದೂರು ನೀಡುತ್ತಾರೋ ಆ ರೈತರಿಗೆ ವಿಮೆ ಹಣ ಜಮೆಯಾಗುತ್ತದೆ. ದೂರು ನೀಡಿದ ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮೆ ಹಣ ಪಾವತಿಸಲು ವರದಿ ಕಳಿಸುತ್ತಾರೆ. ಆ ಆಧಾರದ ಮೇಲೆ ರೈತರಿಗೆ ಬೆಳೆ ವಿಮೆ ಹಣ ಪಾವತಿಸಲಾಗುವುದು.
ಬೆಳೆ ವಿಮೆ ಕಟ್ಟಿದ ರೈತರು ಬೆಳೆ ಸಂಪೂರ್ಣ ಹಾಳಾದರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಹೋದರೆ ರೈತರಿಗೆ ನಯಾ ಪೈಸೆ ಜಮೆಯಾಗುವುದಿಲ್ಲ. ಕೆಲವು ಸಲ ಹಳೆ ವಿಮಾ ಆಧಾರದ ಮೇಲೆ ನೂರಕ್ಕೆ ಒಬ್ಬ ರೈತರಿಗೆ ವಿಮೆ ಹಣ ಜಮೆಯಾಗಬಹುದು. ಆದರೆ ವಿಮೆಹಣ ಕಟ್ಟಿದ ನಂತರ ವಿಮಾ ಕಂಪನಿಗೆ ರೈತರು ದೂರು ನೀಡಿದೇ ಹೋದರೆ ವಿಮೆ ಹಣ ಜಮೆಯಾಗುವುದಿಲ್ಲ.
ರೈತರೇ ನೀವು ಕೂಡ ಬೆಳೆಗಳನ್ನು ಪ್ರಕೃತಿ ವಿಕೋಪದ ಕಾರಣದಿಂದ ಹಾಳು ಮಾಡಿ ಕೊಂಡಿರುತ್ತೀರಿ, ಆದರೆ ನಿಮಗೂ ಪರಿಹಾರ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯದ ಎಲ್ಲಾ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಹಣ ಜಮೆಯಾಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದರಲ್ಲಿ ಹಲವಾರು ಕಾರಣಗಳಿಂದ ಬೆಳೆನಾಶದ ಆಧಾರದ ಮೇಲೆ ಕೆಲವು ರೈತರಿಗೆ ಮಾತ್ರ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಇನ್ನೂ ಕೆಲವು ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗುತ್ತದೆ. ಅದಕ್ಕಾಗಿ ಬೆಳೆವಿಮೆ ಹಾಗೂ ಬೆಳೆ ಪರಿಹಾರ ಬಗ್ಗೆ ಮಾಹಿತಿ ಪಡೆಯಬೇಕು.
ಬೆಳೆಹಾನಿ ಪರಿಹಾರ ಎಂದರೆ ಪ್ರಕೃತಿಯಲ್ಲಿ ಹೆಚ್ಚಿನ ಮಳೆ, ಅತೀವೃಷ್ಟಿ, ಭಾರಿ ಪ್ರವಾಹ, ಹಾಗೂ ಬರಗಾಲ ಉಂಟಾಗಿ ಬೆಳೆ ಹಾನಿಯಾಗಿದ್ದರೆ ಪ್ರತಿ ಎಕರೆಗೆ ಬೆಳೆಗಳ ಆಧಾರದ ಮೇಲೆ ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರವು ಪ್ರತಿ ವರ್ಷ ಘೋಷಿಸುತ್ತದೆ. ಹಾಗೂ ಅದು ಬೆಳೆಗಳ ಆಧಾರದ ಮೇಲೆ ವಿಭಜಿಸಿ ಪರಿಹಾರ ನೀಡಲಾಗುವುದು. ರೈತರಿಗೆ ಸಹಾಯ ಮಾಡಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ :- ನಿಮ್ಮ ಜಮೀನಿನ ಪತ್ರ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಪಡೆಯಿರಿ
ಹೊಲದ ಪಹಣಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
ಇದನ್ನೂ ಓದಿ :- ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸ್ವಂತ ವ್ಯಾಪಾರ ಮಾಡಲು 5 ಲಕ್ಷ ಸಾಲ ಸೌಲಭ್ಯ