ಆತ್ಮೀಯ ರೈತ ಬಾಂಧವರೇ,
2014-15 ನೇಯ ಸಾಲಿನಲ್ಲಿ ಶುರುವಾದ ಕೃಷಿ ಭಾಗ್ಯ ಯೋಜನೆ ಈಗ ಮತ್ತೆ ಮರು ಪ್ರಾರಂಭಗೊಂಡಿದೆ. 2023-24 ನೆಯ ಸಾಲಿನ ಬಜೆಟ್ ನಲ್ಲಿ ರೂ.100 ಕೋಟಿ ಗಳನ್ನು ಕೃಷಿ ಭಾಗ್ಯ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರವು ಮೀಸಲಿಟ್ಟಿದೆ ಹಾಗಾಗಿ ಈ ಯೋಜನೆ ಮರು-ಪ್ರಾರಂಭಿಸಲಾಗಿದೆ.
ಈ ಯೋಜನೆಯ ಮರು ಪ್ರಾರಂಭಗೊಳಿಸುವ ಪ್ರಮುಖ ಉದ್ದೇಶ:
ರಾಜ್ಯದಲ್ಲಿ ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರ ಕೃಷಿಯಿಂದ ಸುಸ್ಥಿರ ಕೃಷಿಗೆ ಸುಧಾರಿಸಲು ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸಲು. ಈ ಸುಧಾರಣೆಗೊಳಿಸಲು ಹಂತ ಹಂತವಾಗಿ ರೈತರಿಗೆ ನೆರವಾಗಲೆಂದು ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಬೀಜವನ್ನು ಬಿತ್ತನೆ ಮಾಡುವ ವಿಧಾನದಿಂದ ಹಿಡಿದು ಆ ಸಸ್ಯಗಳನ್ನು ನೋಡಿಕೊಳ್ಳಲು ಗೊಬ್ಬರಗಳನ್ನು ಕ್ರಮಯೋಚಿತವಾಗಿ ಹಾಕಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಆಯಾ ಮಣ್ಣು ಹಾಳಾಗದಂತೆಯೂ ರೈತರಿಗೆ ಮುಂದಿನ ಅವಧಿಗಳಲ್ಲಿ ಸಹಾಯವಾಗಲೆಂದು ಹಾಗೂ ಆ ದಳದ ಬೆಳಗನನ್ನು ರಾಶಿ ಮಾಡುವ ಸಮಯದವರೆಗೂ ಈ ಕೃಷಿ ಭಾಗ್ಯ ಯೋಜನೆ ಹಂತ ಹಂತದಲ್ಲಿಯೂ ನೆರವಾಗಲಿದೆ.
ಇದನ್ನು ಓದಿ:-
ನನ್ನ ಖಾತೆಗೆ ನಿನ್ನೆ 4800 ರೂಪಾಯಿ ಬೆಳೆ ಪರಿಹಾರ ಹಣ ಜಮಾ ಆಗಿದೆ.
ಎಷ್ಟೋ ಜಿಲ್ಲೆಗಳಲ್ಲಿ ಈ ವರ್ಷದ ಬಿಸಿಲಿನಿಂದ ರೈತರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ ಭೂಮಿಯ ಒಳಗಡೆ ನೀರು ಕೂಡ ಎಂದರೆ ಬೋರ್ವೆಲ್ ನಲ್ಲಿ ನೀರು ಬಾರದೆ ಬತ್ತು ಹೋಗಿರುವ ಕಾರಣದಿಂದ ರೈತರು ನೀರಿಗಾಗಿ ಪರದಾಡುವಂತಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ತೆಲೆಯಲ್ಲಿಟ್ಟುಕೊಂಡು ಮತ್ತೆ ಕೃಷಿ ಭಾಗ್ಯ ಯೋಜನೆಯನ್ನು ಮರು ಪ್ರಾರಂಭಿಸಿ ರೈತರಿಗೆ ನೆರವನ್ನು ಮಾಡಿಕೊಡುತ್ತಿದೆ ನಮ್ಮ ರಾಜ್ಯ ಸರ್ಕಾರ. ಅದುವೇ ಕೃಷಿ ಹೊಂಡ ನಿರ್ಮಾಣ, ಜೆಸಿಬಿ ಗಳಿಂದ ತೆಕ್ಕನ್ನು ನೋಡುವುದು ಹಾಗೂ ತಾಡಪಾಲ್ ಗಳ ವಿತರಣೆಯನ್ನು ಮಾಡಿ ಕೃಷಿ ಹೊಂಡ ನಿರ್ಮಿಸಿ ಎಂದರೆ ಹೊಲದಲ್ಲಿಯೇ ಚಿಕ್ಕದೊಂದು ಕೆರೆಯನ್ನು ನಿರ್ಮಾಣ ಮಾಡಿಸಲು ಎಲ್ಲಾ ಸವಲತ್ತುಗಳನ್ನು ಈ ಯೋಜನೆ ಅಡಿಯಲ್ಲಿ ನೀಡುತ್ತಿದ್ದಾರೆ. ಆ ಕೃಷಿ ಹೊಂಡದ ಸುತ್ತಳತೆಯೂ 30×30 ಹಾಗು 50×50 ಹೊಂದಿದ್ದರೆ ಒಂದು ಸಾರಿ ನಿಮ್ಮ ಬೋರ್ವೆಲ್ ನಲ್ಲಿ ಸ್ವಲ್ಪ ನೀರು ಬರುತ್ತಿದ್ದರು ಕೂಡ ಈ ಕರೆಯನ್ನು ತುಂಬಿಸಿದರೆ ಅದು ಮುಂದೆ ಬಾರಿ ಪ್ರಮಾಣದಲ್ಲಿ ಉಪಯೋಗವನ್ನು ಮಾಡಿಕೊಳ್ಳಬಹುದು.
ಈ ಯೋಜನೆಯು ರಾಜ್ಯದ 5 ಕೃಷಿ-ಹವಾಮಾನ ಒಣ ವಲಯಗಳ 24 ಮಳೆ-ಆಧಾರಿತ ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ (ಅವಿಭಜಿತ) 7423 ಕೃಷಿ ಭಾಗ್ಯ ಪ್ಯಾಕೇಜ್ ಘಟಕಗಳ ಅನುಷ್ಠಾನದ ಗುರಿಯನ್ನು ಹೊಂದಿದೆ. ಹಾಗಾಗಿ ಸದ್ಯದಲ್ಲಿಯೇ ಈ ಕೃಷಿ ಹೊಂಡಗಳನ್ನು ನಿರ್ಮಾಣಿಸಲು ಮತ್ತು ಕೃಷಿಭಾಗ್ಯ ಯೋಜನೆಯಡಿ ಯಾವುದೇ ಸಹಾಯವನ್ನು ಅಥವಾ ಸಹಾಯಧನವನ್ನು ನೀಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ರಿಸಲ್ಟ್ ಬಂದಮೇಲೆ ಈ ಯೋಜನೆಯ ಅಡಿ ಅರ್ಜಿಗಳನ್ನು ಕರೆಯಬಹುದಾಗಿದೆ.
ರಾಜ್ಯವನ್ನು ಹಂಚಿಕೆ ಮತ್ತು ಮಳೆಯ ಶೇಕಡಾವಾರು, ಮಣ್ಣಿನ ಗುಣಮಟ್ಟ, ಸಮುದ್ರದಿಂದ ಎತ್ತರ ಮತ್ತು ಪ್ರಮುಖ ಬೆಳೆಗಳ ಆಧಾರದ ಮೇಲೆ 10 ಕೃಷಿ-ಹವಾಮಾನ ವಲಯಗಳಾಗಿ ವಿಂಗಡಿಸಲಾಗಿದೆ ಮೂರು ಕೃಷಿ ಬೆಳೆಗಳ ಸರಾಸರಿ ಪ್ರದೇಶ (2018-19 ರಿಂದ 2022-23) ಋತುಗಳು’ ಅಂದರೆ. ಖಾರಿಫ್ (81.22 ಲಕ್ಷ ಹೆ.), ರಬಿ (24.29 ಲಕ್ಷ ಹೆ.) & ಬೇಸಿಗೆ (6.41 ಲಕ್ಷ ಹೆ.) 111.92 ಲಕ್ಷ ಹೆಕ್ಟೇರ್.
ಈಶಾನ್ಯ ಪರಿವರ್ತನೆ ವಲಯ, ಈಶಾನ್ಯ ಒಣ ವಲಯ, ಉತ್ತರ ಒಣ ವಲಯ,ಕೇಂದ್ರ ಒಣ ವಲಯ,ಕಠೋರ ಒಣ ವಲಯ,ನಂತರ ಒಣ ವಲಯ,ನಂತರ ಪರಿವರ್ತನೆ ವಲಯ,ಹೆಮ್ ಪರಿವರ್ತನೆ ವಲಯ. ಈ ರೀತಿಯಾಗಿ ನಮ್ಮ ಕರ್ನಾಟಕದ ಭಾಗವನ್ನು ವಿಂಗಡಿಸಲಾಗಿದೆ. ಇದರಲ್ಲಿ ಜೋನ್ 3 ಹಾಗೂ ಝೋನ್ 6 ಹಾಗೂ ಜೋನ್ 2 ನೀರನ ಅಂಶವನ್ನು ಕಡಿಮೆ ಹೊಂದಿರುತ್ತದೆ. ಇಡೀ ರಾಜ್ಯದಲ್ಲಿಯೇ ಈ ಭಾಗದ ರೈತರು ತುಂಬಾ ಬರದಿಂದ ಪರದಾಡುತ್ತಿದ್ದಾರೆ.
ಇದನ್ನು ಓದಿ :- ಬೆಳೆಹಾನಿ ಪರಿಹಾರ ಖಾತೆಗೆ ಜಮಾ ಆಗದಿದ್ದರೆ ಈ ಕಚೇರಿಗೆ ಅಹವಾಲು ಸಲ್ಲಿಸಿ
Crop loss compensation
ಹಾಗಾಗಿ ರೈತರು ಕೃಷಿ ಹೊಂಡ ನಿರ್ಮಾಣ ಮಾಡುವ ಯೋಜನೆಯನ್ನು ತಲೆಯಲ್ಲಿ ಇಟ್ಟುಕೊಂಡಿದ್ದರೆ ಅದಕ್ಕೆ ಸರ್ಕಾರದ ಬೆಂಬಲವೂ ಕೂಡ ನಿಮಗೆ ಸಿಗುತ್ತದೆ. ಹಾಗಾಗಿ ಅವರು ಅರ್ಜಿ ಸಲ್ಲಿಸಲು ಸಮಯವನ್ನು ನಿಗದಿ ಮಾಡುವ ವರಗೆ ನಾವು ಕಾಯಬಹುದಾಗಿದೆ.
2017-20 ರವರೆಗೆ ಕೃಷಿ ಭಾಗ್ಯದ ಅಡಿ ಹಲವಾರು ಕೃಷಿ ಹೊಂಡಗಳನ್ನು ನಿರ್ಮಿಸಿ ಹಾಗೆಯೇ ಮಳೆಯ ನೀರನ್ನು ಸ್ಟೋರ್ ಮಾಡಿ ಇಡುವಂತಹ ಹಲವಾರು ತಂತ್ರಜ್ಞಾನಗಳನ್ನು ಈಗಾಗಲೇ ಬಳಸಿದ್ದನ್ನು ನಾವು ನೋಡಿದ್ದೇವೆ. ಅಂತೆಯೇ ಈ ವರ್ಷದಲ್ಲಿಯೂ ಕೂಡ ಇನ್ನು ಹಲವು ಹೊಸ ಹೊಸ ತಂತ್ರಜ್ಞಾನಗಳು ನಿಮ್ಮ ಹೊಲಕ್ಕೆ ಅಳವಡಿಸಲು ಇದು ಸೂಕ್ತವಾದ ಸಮಯ. ಯಾಕೆಂದರೆ ನಮ್ಮ ಭೂಮಿಯ ಉಷ್ಣಾಂಶ ದಿನೇ ದಿನ ಹೆಚ್ಚಾಗುತ್ತಿದ್ದು ನೀರಿನ ಅಂಶ ಕಡಿಮೆ ಆಗುತ್ತಾ ಹೋಗುತ್ತಿದೆ. ಮುಂದಿನ ವರ್ಷದಲ್ಲಿ ನೀರು ಈ ವರ್ಷಕ್ಕಿಂತ ಕಡಿಮೆ ಯಾಗುವುದು ಎಂದು ಹಲವಾರು ಮೂಲದಿಂದ ತಿಳಿದು ಬಂದಿದೆ. ಹಾಗಾಗಿ ನೀರನ್ನು ಸುಸ್ಥಿರವಾಗಿ ಉಳಿಸುವ ಹಾಗೂ ಬಳಿಸುವ ಕರ್ತವ್ಯ ನಮ್ಮ ನಿಮ್ಮೆಲ್ಲರ ದಾಗಿದೆ. ಈ ವರ್ಷ ನಾವು ನೀವು ಎಲ್ಲರೂ ನೋಡಿದ ಹಾಗೆ ಹೊಲದಲ್ಲಿರುವ ಬೆಳೆಗಳು ಬಿಸಿಲಿನ ಹೊಡೆತದಿಂದ ಹಲವಾರು ರೋಗಗಳು ಬಂದು ಅಥವಾ ಗಿಡಗಳೆಲ್ಲವೂ ನಾಶವಾಗಿ ಹೋಗುತ್ತಿದೆ.
ಪುತ್ತೂರು, ಮೇ 3: ತಾಪಮಾನ ತೀವ್ರ ಏರಿಕೆ ಕಂಡಿರುವ ಕಾರಣ ಅಡಿಕೆ ತೋಟಗಳಲ್ಲಿ ನಳ್ಳಿ (ಎಳೆ ಅಡಿಕೆ) ಉದುರುತ್ತಿದ್ದು ಅರ್ಧಕ್ಕರ್ಧ ಫಸಲು ನಷ್ಟವಾಗುವ ಭೀತಿ ಎದುರಾಗಿದೆ.
ಸಾಮಾನ್ಯವಾಗಿ ಅಡಿಕೆ ತೋಟಗಳು 35 ರಿಂದ 36 ಡಿಗ್ರಿ ಸೆ. ತನಕದ ಉಷ್ಣಾಂಶ ವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ 10 ದಿನಗಳಿಂದ ತಾಪ ಮಾನ 38, 40, 42 ಡಿಗ್ರಿ ಸೆ.ನಷ್ಟು ದಾಖಲಾಗಿದ್ದು, ಪರಿಣಾಮ ನೇರವಾಗಿ ಅಡಿಕೆಯ ಮೇಲಾಗಿದೆ. ಕೆಲವು ತೋಟಗಳಲ್ಲಿ ಅಡಿಕೆ ಮರದ ಬುಡದಲ್ಲಿ ಎಳೆಯ ನಳ್ಳಿಗಳು ರಾಶಿಯಾಗಿ ಬಿದ್ದಿವೆ.
ಬಿಸಿ ವಾತಾವರಣ
ಅಡಿಕೆ ತೋಟದ ಒಳಗೆ ತಂಪು ವಾತಾವರಣ ಇರುತ್ತದೆ. ಆದರೆ ಈಗ ಬಿಸಿ ವಾತಾವರಣ ಇದೆ. ಅಡಿಕೆ ಮರದ ಬುಡಕ್ಕೆ ಎಷ್ಟೇ ನೀರು ಹಾಯಿಸಿದರೂ ಬುಡ ಮಾತ್ರ ತಂಪಾಗುತ್ತಿದೆ ವಿನಾ ಕೊಂಬೆಗೆ ತಾಕುವ ಬಿಸಿಲಿನಿಂದ ಇಡೀ ಮರವೇ ಸುಟ್ಟಂತಾಗುತ್ತಿದೆ. ಹೆಚ್ಚಿನ ತೋಟಗಳಲ್ಲಿ ಹಿಂಗಾರ ಕರಟಿ ಗುತ್ತಿಗಾರಿನ ತೋಟವೊಂದರಲ್ಲಿ ಉದುರಿರುವ ಎಳೆ ಕಾಯಿ ಅಡಿಕೆ ಹೋಗಿ ಫಸಲೇ ಶೂನ್ಯವಾಗಿದೆ. ದಿನಕ್ಕೆ ಆರೇಳು ತಾಸು ನೀರು ಹಾಯಿಸುವ ತೋಟಗಳಲ್ಲೂ ಹಿಂಗಾರ ಸುಡುತ್ತಿದ್ದು ಎಳೆಕಾಯಿ ಉದುರುತ್ತಿದೆ. ಈಗಾಗಲೇ ಶೇ. 50ಕ್ಕೂ ಹೆಚ್ಚು ನಳ್ಳಿ ಉದುರಿದೆ. ಮುಂದಿನ ವರ್ಷ ಅರ್ಧದಷ್ಟು ಇಳುವರಿ ಸಿಗಲಾರದು ಎನ್ನುತ್ತಾರೆ ಪುತ್ತೂರಿನ ಕೃಷಿಕ ಶಿವಪ್ಪ ಪೂಜಾರಿ.
ತಾಪಮಾನವೇ ಕಾರಣ ಸಾಮಾನ್ಯವಾಗಿ ಆರು ಕಾರಣಗಳಿಂದಾಗಿ ನಳ್ಳಿ ಉದುರುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಉಷ್ಣ ತಾಪಮಾನ, ಮರಗಳ ಶಕ್ತಿ ಸಾಮರ್ಥ್ಯ, ಕೀಟಬಾಧೆ, ಶಿಲೀಂಧ್ರಗಳು, ಬಹುತೇಕ ತೋಟಗಳಲ್ಲಿ ಅಡಿಕೆ ಕಾಯಿ ಗಟ್ಟುತ್ತಿ ರುವ ನಳ್ಳಿಗಳು ಉದುರುತ್ತಿವೆ. ಹಿಂಗಾರ ಒಣಗಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಶೇ. 50ರಷ್ಟು ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ವಾತಾವರಣದಲ್ಲಿ ಪರಿಸ್ಥಿತಿ ತಿಳಿಯಾದರೆ ಮಾತ್ರ ಇದಕ್ಕೆ ಪರಿಹಾರ.
- ಮಹೇಶ್ ಪುಚ್ಚಪ್ಪಾಡಿ, ಅಧ್ಯಕ್ಷರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ
ರೋಗರುಜಿನ, ಪೋಷಕಾಂಶಗಳ ಕೊರತೆ. ಈ ಬಾರಿ ತಾಪಮಾನವೇ ನೇರ ಕಾರಣ, ರೋಗ ರುಜಿನಗಳಿಗೆ ಔಷಧ ಸಿಂಪಡಿಸಿ ಆದರೂ ಪರಿಹಾರ ಕಂಡುಕೊಳ್ಳಬಹುದು. ಆದರೆ ಬಿಸಿಲಿನ ಧಗೆಗೆ ಪರಿಹಾರ ಇಲ್ಲದಿರುವುದರಿಂದ ಬೆಳೆಗಾರ ಕೈಕಟ್ಟಿ ಕೂರುವ ಸ್ಥಿತಿಯಿದೆ. ಈ ಕುರಿತಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈ ತನಕ ಬೆಳೆಗಾರರಿಂದ ದೂರು ಬಂದಿಲ್ಲ ಎನ್ನುವ ಮೂಲಕ ಅಡಿಕೆ ತೋಟಕ್ಕೆ ಇಲಾಖೆ ಇಳಿದೇ ಇಲ್ಲ ಅನ್ನುವ ಸಂಗತಿಯನ್ನು ಸ್ಪಷ್ಟಪಡಿಸಿದಂತಿದೆ.
ಮಳೆ ಬಂದರೆ ಎಲ್ಲವೂ ಧರೆಗೆ ಮಳೆ ಬಂದರೆ ನೀರಿನ ಅಭಾವ ಇರುವ ತೋಟಗಳಲ್ಲಿ ತತ್‌ಕ್ಷಣಕ್ಕೆ ಮಳೆ ಬಂದರೆ ಎಳೆ ಕಾಯಿ ಉದುರುವ ಸಾಧ್ಯತೆ ಇದೆ. ಬಿಸಿಲಿನ ತಾಪಮಾನ ಹೆಚ್ಚಿದ್ದು ನೀರಿನ ವ್ಯವಸ್ಥೆ ಇರುವ ತೋಟಗಳಿಗೆ ಸಮಸ್ಯೆ ಆಗದು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
-ಮಂಜುನಾಥ, ಡಿ.ಡಿ., ತೋಟಗಾರಿಕಾ ಇಲಾಖೆ, ದ.ಕ.ಜಿಲ್ಲೆ
ಪರಿಹಾರ ಸಿಗಬಹುದೇ ಎನ್ನುವ ಪ್ರಶ್ನೆಗೆ ರೈತರು ಹೇಳುವುದೇನೆಂದರೆ … ಮಳೆ ಬಂದರೆ ಈಗ ಉಳಿದಿರುವ ಎಲ್ಲ ಎಳೆ ಅಡಿಕೆಯೂ ಧರೆಗೆ ಉದುರಲಿವೆ.
ಒಂದು ವೇಳೆ ನಿರಂತರ ಮಳೆಯಾದರೆ ಮಾತ್ರ ಅಡಿಕೆ ಗಿಡಗಳಿಗೆ ತಂಪು ಆಗಬಹುದು. ಮಳೆ-ಬಿಸಿಲಿನ ಆಟ ನಡೆದರೆ ಅಡಿಕೆಯ ಆಸೆ ಬಿಡುವುದೇ ಉತ್ತಮ ಅನ್ನುತ್ತಾರೆ.
ಕೆಲವು ತೋಟಗಳಲ್ಲಿ ನೀರಿನ ಆಭಾವ ಇದೆ. ವಾರಕ್ಕೊಮ್ಮೆ ನೀರು ಹಾಯಿಸಲಾಗುತ್ತಿರುವ ತೋಟಗಳು ಇವೆ. ಹೀಗಾಗಿ ಒಂದೆಡೆ ನೀರಿಲ್ಲದೆ, ತಾಪಮಾನ ತಾಳಲಾರದೆ ಅಡಿಕೆ ಮರಗಳು ಬಳಲಿ ಬೆಂಡಾಗಿವೆ. ಈ ರೀತಿ ಎಲ್ಲ ಸಮಸ್ಯೆಗಳನ್ನು ಅನುಭವಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಆದಷ್ಟು ಬೇಗ ಇನ್ನಷ್ಟು ಬೆಳೆ ಹಾನಿ ಪರಿಹಾರದ ಹಣವನ್ನು ಜಮಾ ಮಾಡಲಿ ಎಂದು ನಾವು ನೀವೆಲ್ಲರೂ ಕೇಳಿಕೊಳ್ಳುತ್ತಿದ್ದೇವೆ. ಈಗಾಗಲೇ ಹಲವಾರು ರೈತರಿಗೆ ಬೆಳೆ ಹಾನಿ ಪರಿಹಾರ ಜಮವಾಗಿದ್ದು ಅದನ್ನು ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ.
ಹಾಗಾದರೆ ನಿಮಗೆ ಹಣ ಜಮವಾಗಿದೆಯೋ ಇಲ್ಲವೋ ಎಂದು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹಣದ ಸ್ಟೇಟಸ್ ಅನ್ನು ಕೂಡಲೇ ತಿಳಿಯಿರಿ. ನಿಮ್ಮ ಸ್ಟೇಟಸ್ ನಲ್ಲಿ ಹಣವು ಅಪ್ರೋವ್ ಎಂದು ತೋರಿಸಿದರು ನಿಮ್ಮ ಅಕೌಂಟ್ ನಲ್ಲಿ ಹನ ಜಮಾವಾಗದಿದ್ದಲ್ಲಿ ಕೂಡಲೇ ಆಧಾರ್ ಕಾರ್ಡನ್ನು ತೆಗೆದುಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ನಿಮ್ಮ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ.
https://parihara.karnataka.gov.in/service92/
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ಮೇಲೆ ನಿಮಗೆ ಮೊಬೈಲ್ ಸ್ಕ್ರೀನ್ ಮೇಲೆ ಅಥವಾ ಲ್ಯಾಪ್ಟಾಪ್ ಮೇಲೆ ಈ ಪುಟವು ಕಾಣಿಸುತ್ತದೆ.
ವರ್ಷ ಇದ್ದಲ್ಲಿ 2023-24, ಸೀಸನ್ ಇದ್ದಲ್ಲಿ ಮುಂಗಾರು, ವಿಪತ್ತಿನ ವಿಧ ಇದ್ದಲ್ಲಿ ಬರ ಎಂದು ಆಯ್ಕೆ ಮಾಡಿ ಮತ್ತು ಅದರ ಪಕ್ಕದಲ್ಲಿ ಕಾಣಿಸುತ್ತಿರುವ ನೀಲಿ ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ನಾಲ್ಕು ಬಹುವಾಕ್ಯಗಳನ್ನು ನಿಮಗೆ ನೀಡಿರುತ್ತಾರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಆಧಾರ್ ಎಂದು, ಮೊಬೈಲ್ ಸಂಖ್ಯೆ ಇದ್ದರೆ ಮೊಬೈಲ್ ನಂಬರ್ ಎಂದು, ಎಫ್ ಐಡಿ ಸಂಖ್ಯೆ ಇದ್ದರೆ ಎಫ್ ಐ ಡಿ ಎಂದು, ನಿಮ್ಮ ಬಳಿ ಈ ಮೇಲಿನ ಯಾವುದೂ ಇರದಿದ್ದರೆ ಸರ್ವೇ ನಂಬರ್ ಎಂದು ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲಾದ ನಂಬರ್ ಗಳನ್ನು ಟೈಪ್ ಮಾಡಿ. ಇಲ್ಲಿ ನಾನು ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡುತ್ತಿದ್ದೇನೆ ನಿಮ್ಮ ಬಳಿ ಕೂಡ ಮೊಬೈಲ್ ಸಂಖ್ಯೆ ಇದ್ದರೆ ಅದಕ್ಕೆ ಟೈಪ್ ಮಾಡಿರಿ ಮತ್ತು ಪಕ್ಕದಲ್ಲಿ ಕಾಣುತ್ತಿರುವ ಹಸಿರು ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಈ ರೀತಿ ನಿಮಗೆ ತೋರಿಸುತ್ತದೆ.
ಇದರಲ್ಲಿ ನಿಮಗೆ ಯಾವ ಬೆಳೆ ಹಾನಿ ಪರಿಹಾರದ ಎಂದರೆ ಯಾವ ಹೊಲದ ಪರಿಹಾರವನ್ನು ತಿಳಿಯಲು ಬಯಸುತ್ತಿರೋ ಅದರ ಮೇಲೆ ಕ್ಲಿಕ್ ಮಾಡಿ.
ಕ್ಲಿಕ್ ಮಾಡಿದ ನಂತರ ಈ ಕೆಳಗಿನಂತೆ ನಿಮಗೆ ತೋರಿಸುತ್ತಿದ್ದರೆ ನಿಮಗೆ ಇನ್ನೂ ಹಣ ಬಂದಿಲ್ಲ ಎಂದು ಅರ್ಥ. ಎಂದರೆ ನಿಮ್ಮ ಸ್ಟೇಟಸ್ ಇನ್ನು ತಹಶೀಲ್ದಾರರಿಂದ ವೆರಿಫೈ ಆಗಿಲ್ಲ. ಅದು ಆಗುವವರೆಗೂ ಕಾಯಬೇಕು ಅಥವಾ ಏನೆಂದು ವಿಚಾರಿಸಬೇಕು.