ಇದೀಗ ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ ಎಂದು ಹೇಳಿದೆ. ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಿದೆ. ಈ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು.
ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ
ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಪ್ರಮುಖ ಗುರುತಿನ ದಾಖಲೆಯಾಗಿದೆ. ಭಾರತದ ವಿಶಿಷ್ಟ ಗುರುತಿನ ದಾಖಲೆಯಿಂದ ನೀಡಲಾದ ಈ ಕಾರ್ಡ್, ಎಲ್ಲಾ ಸರ್ಕಾರಿ ಕೆಲಸಗಳಿಗೂ ಬೇಕಾಗುವ ಅಗತ್ಯ ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಇತರ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಸರ್ಕಾರ ಪದೇ ಪದೇ ಸೂಚಿಸುತ್ತಿರುತ್ತದೆ. ಇದೀಗ ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ ಎಂದು ಹೇಳಿದೆ. ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಿದೆ.
ಈ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು.
ಈ ಸಂಬಂಧ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಭೂ ದಾಖಲೆಗಳನ್ನು ಡಿಜಿಟಲ್ ಆಗಿ ಇರಿಸಲು ಐಪಿ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುವುದು. ಇಂತಹ ಡಿಜಿಟಲ್ ಭೂ ದಾಖಲೆಗಳಿಂದ ಜನರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎನ್ನಲಾಗಿದೆ. ಇದನ್ನು 3C ಸೂತ್ರದ ಅಡಿಯಲ್ಲಿ ವಿತರಿಸಲಾಗುವುದು. ಇದರ ಅಡಿಯಲ್ಲಿ ಸೆಂಟ್ರಲ್ ಆಫ್ ರೆಕಾರ್ಡ್, ಕಲೆಕ್ಷನ್ ಆಫ್ ರೆಕಾರ್ಡ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಭೂಮಿ ನೋಂದಣಿಯಲ್ಲಿ 14 ಅಂಕಿಗಳ ULPIN ಸಂಖ್ಯೆಯನ್ನು ನೀಡಲಾಗುವುದು. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಇದು ನಿಮ್ಮ ಜಮೀನಿನ ಆಧಾರ್ ಸಂಖ್ಯೆಯಾಗಿರುತ್ತದೆ. ಈ ಭೂಮಿ ಆಧಾರ್ ಸಂಖ್ಯೆಯೊಂದಿಗೆ ಒಂದೇ ಕ್ಲಿಕ್‌ನಲ್ಲಿ ನಿಮ್ಮ ಭೂಮಿ ಸಂಬಂಧಿತ ಎಲ್ಲಾ ದಾಖಲೆಗಳನ್ನು ಮನೆಯಿಂದಲೇ ಪರಿಶೀಲಿಸಬಹುದು. ಇದಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಅನೇಕ ಯೋಜನೆಗಳಿಗೆ ಈ ULPIN ಅನ್ನು ಬಳಸಬಹುದು. ಮತ್ತು ULPIN ಸಂಖ್ಯೆಯೊಂದಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಭೂಮಿಯನ್ನು ಖರೀದಿಸುವ ಮತ್ತು ಮಾರಾಟ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಈ ULPIN ಸಂಖ್ಯೆಯ ಮೂಲಕ ಜಮೀನು ಖರೀದಿದಾರ ಮತ್ತು ಮಾರಾಟಗಾರರ ಬಗ್ಗೆ ಎಲ್ಲಾ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮ್ಮಲ್ಲಿರುವ ಜಮೀನು ವಿಭಜನೆಯಾದರೆ ಆಗ ಅದರ ಆಧಾರ್ ಸಂಖ್ಯೆ ಕೂಡಾ ಬೇರೆಯಾಗಲಿದೆ.
ಇದನ್ನೂ ಓದಿ :- ಹೆಣ್ಣು ಮಕ್ಕಳಿಗೆ ಸಿಗಲಿದೆ 1.6 ಲಕ್ಷ ರೂಪಾಯಿ
ಸುಕನ್ಯಾ ಸಮೃದ್ಧಿ ಯೋಜನೆಯ ಅಡಿ ಅರ್ಜಿ ಸಲ್ಲಿಸಲು ನೀವು ಹೀಗೆ ಮಾಡಿದರೆ ಸಾಕು
250 ರೂಪಾಯಿ ಹೂಡಿಕೆ ಮಾಡಿ ಮತ್ತು ಲಕ್ಷ ಲಕ್ಷ ಲಾಭ ಪಡೆಯಿರಿ
ಇದನ್ನೂ ಓದಿ :- ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ
ಆ ಜಮೀನು ಈಗ ನಿಮ್ಮ ಹೆಸರಿಗೆ ಕೂಡಲೇ ಅರ್ಜಿ ಸಲ್ಲಿಸಿ