ಪಶುಗಳ ಪಾಲನೆ
ಕರುಗಳ ಪಾಲನೆ
ಕರುಗಳ ಪಾಲನೆ. ಅದು ತಾಯಿಯ
ಹೊಟ್ಟೆಯಲ್ಲಿರುವಾಗಲೇ ಸುರುವಾಗುತ್ತದೆ. ಅಂದರೆ ಗರ್ಭಧರಿಸಿದ ಪಶುಗಳಿಗೆ ಒಳ್ಳೆಯ ಸಮತೋಲನ ಆಹಾರ ಒದಗಿಸುವುದರ ಜೊತೆಗೆ ವೈಜ್ಞಾನಿಕ ನಿರ್ವಹಣೆ ಮಾಡಿದರೆ ಉತ್ತಮ ಕರುಗಳನ್ನು ಪಡೆಯಲು ಸಾಧ್ಯವಿದೆ. ಕರುಗಳು ಹುಟ್ಟಿದ ಮೇಲೆ ಎರಡು ರೀತಿಯಲ್ಲಿ ಪಾಲನೆ ಮಾಡಲಾಗುತ್ತದೆ.
1. ಕರುವಿಗೆ ತಾಯಿಯ ಮೊಲೆ ಹಾಲು ಕುಡಿಯಲು ಬಿಟ್ಟು ಜೊತೆಗೆ ಬೆಳೆಸುವದು (Suckling method).
2. ಕರು ಹುಟ್ಟಿದ ತಕ್ಷಣ ತಾಯಿಯಿಂದ ಬೇರ್ಪಡಿಸಿ ಪತ್ಯೇಕವಾಗಿ ಬೆಳೆಸುವದು (Weaning method).
ಪ್ರತ್ಯೇಕವಾಗಿ ಬೆಳೆಸುವುದರಿಂದಾಗುವ ಲಾಭಗಳು
೧. ತಾಯಿಯು ಎಷ್ಟು ಹಾಲು ಹಿಂಡುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿದೆ.
೨. ಕರುವಿನ ದೇಹದ ತೂಕ ಹಾಗೂ ಬೆಳವಣಿಗೆಗೆ ಅನುಗುಣವಾಗಿ ಬೇಕಾದ ಪ್ರಮಾಣದ ಹಾಲನ್ನು ಕುಡಿಸಬಹುದು. ೩. ಅಕಸ್ಮಾತಾಗಿ ಕರು ಸತ್ತರೆ ತಾಯಿಯಿಂದ ಹಾಲು ಪಡೆಯಲು ತೊಂದರೆಯಾಗುವುದಿಲ್ಲ ಹಾಗೂ ತಾಯಿ ಸತ್ತರೆ ಕರುವನ್ನು ಬೆಳೆಸಲು ತೊಂದರೆಯಾಗುವುದಿಲ್ಲ. ಕರು ಹುಟ್ಟಿದ ಕೂಡಲೇ ಅದರ ಮೂಗು, ಬಾಯಿ ಸ್ವಚ್ಛ ಮಾಡಿ ಅದು ಸರಳವಾಗಿ ಉಸಿರಾಡುವಂತೆ ಮಾಡಬೇಕು. ಕರುವಿನ ಮೈಮೇಲಿನ ಲೋಳೆಯನ್ನು ತೆಗೆದು ಹಾಕಿ ಮೈಯನ್ನು ಬಟ್ಟೆ ಚೀಲದಿಂದ ಚೆನ್ನಾಗಿ ಒರೆಸಿ ಒಣಗಿಸಬೇಕು. ಇದರಿಂದ ಕರುವಿಗೆ ಶ್ವಾಸಕೋಶದ ಯಾವುದೇ ತೊಂದರೆಯಾಗುವುದಿಲ್ಲ. ಕರುವಿನ ಹೊಕ್ಕಳ ಹುರಿಯನ್ನು ದೇಹದಿಂದ ೨-೩ ಅಂಗುಲ ಬಿಟ್ಟು ಒಂದು ತುಕ್ಕುರಹಿತ ಕತ್ತರಿ ಅಥವಾ ಭೇಡಿನಿಂದ ಕತ್ತರಿಸಿ, ಟಿಂಕ್ಚರ್ ದ್ರಾವಣ ಹಚ್ಚಿ. ದಾರದಿಂದ ಕಟ್ಟಬೇಕು. ಇದರಿಂದ ಹೊಕ್ಕಳಕ್ಕೆ ಯಾವುದೇ ತೊಂದರೆಯಾಗುವದಿಲ್ಲ. ಕರು ಹುಟ್ಟಿದ ಒಂದು ತಾಸಿನೊಳಗಾಗಿ ಅದಕ್ಕೆ ಗಿಣ್ಣದ ಹಾಲನ್ನು ಕುಡಿಸಬೇಕು.
ಗಿಣ್ಣದ ಹಾಲಿನ ಮಹತ್ವ
೧. ಗಿಣ್ಣದ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ (ಗ್ಯಾಮಾಗ್ಲೋಬುಲಿನ್) ಇದೆ.
೨. ಗಿಣ್ಣದ ಹಾಲಿನಲ್ಲಿ ಸಸಾರಜನಕ, ಲವಣಗಳು ಹಾಗೂ ಜೀವಸತ್ವಗಳು ಸಮಾನ್ಯ ಹಾಲಿಗಿಂತ ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಇವು ಕರುಗಳು ಚೆನ್ನಾಗಿ ಬೆಳೆಯಲು ಸಹಾಯಕಾರಿಯಾಗುತ್ತವೆ.
೩. ಗಿಣ್ಣದ ಹಾಲಿನಲ್ಲಿ ಜುಲಾಬಿನಾಂಶವಿರುವದರಿಂದ ಅದು ಕರುಳಿನಲ್ಲಿರುವ ಕಲ್ಮಶವನ್ನು ಹೊರಗೆ ಹಾಕಿ ಮುಂದಿನ ಪಚನಕ್ರಿಯೆ ಸರಿಯಾಗಿ ನಡೆಯುವ ಹಾಗೆ ಮಾಡುತ್ತದೆ. ೪. ಗಿಣ್ಣದ ಹಾಲಿನಲ್ಲಿ ಸಕ್ಕರೆ ಅಂಶ ಸಾಮಾನ್ಯ ಹಾಲಿಗಿಂತ ಕಡಿಮೆ ಇರುವದರಿಂದ ಕರುಗಳಿಗೆ ಬೇಧಿಯಾಗುವದನ್ನು ನಿಯಂತ್ರಿಸುತ್ತದೆ.
ಕರುಗಳ ದೇಹದ ತೂಕ ಹಾಗೂ ಬೆಳವಣಿಗೆ ನೋಡಿಕೊಂಡು ಬೇಕಾಗುವ ಪ್ರಮಾಣದ ಗಿಣ್ಣದ ಹಾಲು / ಹಾಲನ್ನು ಕುಡಿಸಬೇಕಾಗುತ್ತದೆ. ಕರುವನ್ನು ತಾಯಿಯಿಂದ ಪ್ರತ್ಯೇಕ ಮಾಡಿ ಬೆಳೆಸಿದಾಗ ಅವುಗಳ ಹಾಲನ್ನು ನಿಪ್ಪಲ್ ಬಾಟಲಿ ಅಥವಾ ಅಗಲವಾದ ಪಾತ್ರೆಯಲ್ಲಿ ತೆಗೆದುಕೊಂಡು ಅವುಗಳಿಗೆ ಕುಡಿಸಲು ರೂಡಿ ಮಾಡಬೇಕಾಗುತ್ತದೆ. ಕರುವಿಗೆ ೨ ವಾರದ ವಯಸ್ಸಾದ ಕೂಡಲೇ ಅದಕ್ಕೆ ದಾಣಿ ಮಿಶ್ರಣ ಹಾಗೂ ಎಳೆ ಹಸಿ ಮೇವು ತಿನ್ನಿಸಲು ರೂಡಿ ಮಾಡಬೇಕು. ಕರು ದಾಣಿ ಮಿಶ್ರಣ ಹಾಗೂ ಮೇವನ್ನು ತಿನ್ನಲು ಸುರು ಮಾಡಿದ ಮೇಲೆ ಕ್ರಮೇಣ ಹಾಲು ಕುಡಿಸುವ ಪ್ರಮಾಣವನ್ನು ಕಡಿಮೆ ಮಾಡುತ್ತ ಹೋಗಿ, ಕರು ೩ ತಿಂಗಳ ವಯಸ್ಸಾದ ನಂತರ ಪೂರ್ತಿ ನಿಲ್ಲಿಸಬಹುದು, ಕರು ಹುಟ್ಟಿದ ಮೊದಲನೇ ವಾರ (ಮೊದಲನೇ ತಿಂಗಳು), ಎರಡನೇ ತಿಂಗಳು, ೩ನೇ ತಿಂಗಳು ಹಾಗೂ ೬ನೇ ತಿಂಗಳಿನಲ್ಲಿ ಹೀಗೆ ೪ ಬಾರಿ ಜಂತಿನ ಔಷಧಿಯನ್ನು ಕುಡಿಸಬೇಕು. ಇದರಿಂದ ಹೊಟ್ಟೆಯಲ್ಲಿರುವ ಜಂತುಗಳು ನಾಶವಾಗಿ ಕರುಗಳು ಚೆನ್ನಾಗಿ ಬೆಳೆಯುತ್ತವೆ. ಕರುಗಳು ಹುಟ್ಟಿ ಒಂದು ತಿಂಗಳಿನಲ್ಲಿ ಅವುಗಳ ಎಡ ಕಿವಿಯಲ್ಲಿ ಅದಕ್ಕೆ ಸಂಬಂಧಪಟ್ಟ ಸಂಖ್ಯೆಯ ಹಚ್ಚೆ ಅಥವಾ ಓಲೆಯನ್ನು ಹಾಕಬೇಕು. ಇದರಿಂದ ಅವುಗಳನ್ನು ಗುರುತಿಸಲು ಸುಲಭವಾಗುತ್ತದೆ. ಅವಶ್ಯವಿದ್ದರೆ ಕರುಗಳ ಕೊಂಬನ್ನು ಒಂದನೇ ತಿಂಗಳಿನಲ್ಲಿ ಸುಡಬಹುದು. ಇದರಿಂದ ಅವು ದೊಡ್ಡದಾದ ಮೇಲೆ ಅವುಗಳನ್ನು ಸರಳವಾಗಿ ಹಿಡಿದು ಹತೋಟಿಗೊಳಿಸಿ ಯಾವುದೇ ತೊಂದರೆ ಆಗದ ಹಾಗೇ ಮಾಡಬಹುದು. ಕರುಗಳು ೩-೪ ತಿಂಗಳ ವಯಸ್ಸಾದ ಮೇಲೆ ಅವುಗಳಿಗೆ ರೋಗ ನಿರೋಧಕ ಲಸಿಕೆಗಳನ್ನು ಪ್ರತಿವರ್ಷ ನಿಯಮಿತವಾಗಿ ಹಾಕಿಸಬೇಕು. ಉಣ್ಣೆಗಳನ್ನು ನಿಯಂತ್ರಿಸಬೇಕು, ಕರುಗಳ ವಯಸ್ಸಿಗನುಗುಣವಾಗಿ ಪ್ರತ್ಯೇಕವಾಗಿ ಅಥವಾ ಗುಂಪಿನಲ್ಲಿ, ಚೆನ್ನಾಗಿ ಗಾಳಿ, ಬೆಳಕು ಬರುವಂತಹ ಸ್ವಚ್ಛವಾದ, ನಿರ್ಮಲವಾದ ಮನೆಗಳಲ್ಲಿ ಇಡಬೇಕು ಹಾಗೂ ದಿನಾಲೂ ಬೆಳಿಗ್ಗೆ ಎಳೆ ಬಿಸಿಲಿನಲ್ಲಿ ೧-೨ ತಾಸುಗಳವರೆಗೆ ಅಡ್ಡಾಡಲು ಬಿಡಬೇಕು. ಸಾಕಷ್ಟು ಸ್ವಚ್ಛ ನೀರನ್ನು ಕುಡಿಸಬೇಕು.
ಮಣಕಗಳ ಪಾಲನೆ
ಮಣಕಗಳನ್ನು ಚೆನ್ನಾಗಿ ಗಾಳಿ ಬೆಳಕು ಬರುವಂತಹ ಸ್ವಚ್ಛ, ಕೊಠಡಿಗಳಲ್ಲಿ ಕಟ್ಟಬೇಕು, ದಿನಾಲು ಬೆಳಿಗ್ಗೆ ೧-೨ ತಾಸು ಹೊರಗೆ ಅಡ್ಡಾಡಲು ಬಿಡಬೇಕು, ಅವುಗಳಿಗೆ ಹೊಟ್ಟೆ ತುಂಬ ಹಸಿರು ಒಣ ಮೇವು ಮೇಯಿಸಬೇಕು ಹಾಗೂ ೧ ರಿಂದ ೧೪ ಕಿಲೋ ದಾಣಿ ಮಿಶ್ರಣವನ್ನು ಪ್ರತಿ ದಿವಸ ತಿನ್ನಿಸಬೇಕು. ಸಾಕಷ್ಟು ಸ್ವಚ್ಛ ನೀರನ್ನು ಕುಡಿಸಬೇಕು, ಜೊತೆಗೆ ಹೆಚ್ಚಾಗಿ ಮೇಯಿಸಿ ಕೊಬ್ಬದಂತೆ ನೋಡಿಕೊಳ್ಳಬೇಕು. ಮಣಕಗಳು ಸರಿಯಾದ ವಯಸ್ಸಿಗೆ ಹಾಗೂ ದೇಹದ ತೂಕವನ್ನು ಹೊಂದಿದಾಗ, ಪ್ರಾಯಕ್ಕೆ ಬಂದು ಬೆದೆಗೆ ಬರಲು ಸುರುವಾಗುತ್ತವೆ, ಮೊದಲನೇ ೨-೩ ಬೆದೆಗಳನ್ನು ಬಿಟ್ಟು ನಂತರದ ಗೆರೆಯಲ್ಲಿ ಅವುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಿ ದಿನಾಂಕವನ್ನು ಬರೆದಿಟ್ಟುಕೊಳ್ಳಬೇಕು. ವರ್ಷಕ್ಕೊಂದು ಸಾರಿ ಅವುಗಳಿಗೆ ಜಂತಿನ ಔಷಧಿ ಹಾಕಿಸಬೇಕು, ಉಣ್ಣೆಗಳನ್ನು ನಿಯಂತ್ರಿಸಬೇಕು ಹಾಗೂ ಎಲ್ಲ ರೋಗನಿರೋಧಕ ಲಸಿಕೆಗಳನ್ನು ನಿಯಮಿತವಾಗಿ ತಪ್ಪದೇ ಹಾಕಿಸಬೇಕು.
ಗರ್ಭಧರಿಸಿದ ಪಶುಗಳಿಗೆ ಪ್ರತ್ಯೇಕವಾದ ಸ್ವಚ್ಛವಾಗಿರುವ. ಚೆನ್ನಾಗಿ ಗಾಳಿ, ಬೆಳಕು ಬರುವಂತಹ ಜಾಗೆ’ಗಳಲ್ಲಿ ಕಟ್ಟಬೇಕಾಗುತ್ತದೆ. ದಿನಾಲೂ ಬೆಳಿಗ್ಗೆ ೧-೨ ತಾಸು ಹೊರಗಡೆ ಅಡ್ಡಾಡಲು ಬಿಡಬೇಕು, ಹೊಟ್ಟೆ ತುಂಬ ಹಸಿರು… ಮೇವು ಹಾಗೂ ನೀರು ಕೊಡಬೇಕು, ಗರ್ಭಧರಿಸಿದ ಮೊದಲ ೬ ತಿಂಗಳು ಪ್ರತಿದಿವಸ ೧೪ – ೨ ಕಿಲೋ ಹಾಗೂ ನಂತರ ಕರು ಹಾಕುವವರೆಗೆ ೨-೩ ಕಿಲೋ ದಾಣಿ ಮಿಶ್ರಣ ಕೊಡಬೇಕು, ಗರ್ಭದ ಅವಧಿ ಆಕಳುಗಳಲ್ಲಿ ೨೭೦ + ೧೦ ದಿವಸ (೯ ತಿಂಗಳು) ಹಾಗೂ ಎಮ್ಮೆಗಳಲ್ಲಿ ೩೦೦ + ೧೦ ದಿವಸ (೧೦ ತಿಂಗಳು) ಇರುತ್ತದೆ. ಅವುಗಳ ಕೃತಕ ಗರ್ಭಧಾರಣೆ ಮಾಡಿಸಿದ ದಿನಾಂಕದ ಮೇಲೆ ಲೆಕ್ಕ ಹಾಕಿ, ಅಂದಾಜು ಕರು ಹಾಕುವ ದಿನಾಂಕವನ್ನು ಬರೆದಿಟ್ಟು ಅದನ್ನು ಗಮನಿಸುತ್ತಿರಬೇಕು. ಗರ್ಭದೊಳಗಿನ ಕರು ಸಾಮಾನ್ಯ ಸ್ಥಿತಿಯಲ್ಲಿದ್ದರೆ ಅದು ಸಹಜ ಹೆರಿಗೆ ಆಗುತ್ತದೆ. ಒಂದು ವೇಳೆ ಏನಾದರೂ ಹೆಚ್ಚು ಕಡಿಮೆಯಾಗಿ ಒಳಗಿನ ಕರು ಅಥವಾ ಅದರ ಯಾವುದೇ ಅಂಗ ಸಾಮಾನ್ಯ ಸ್ಥಿತಿಯಲ್ಲಿರದೆ ಅಡ್ಡವಾಗಿದ್ದರೆ, ಕರು ಹಾಕಲಿಕ್ಕೆ ತೊಂದರೆಯಾಗಿ ಕರು-ತಾಯಿ ಸಾಯುವ ಸಂಭವವಿರುತ್ತದೆ. ತಕ್ಷಣ ಇದನ್ನು ಪಶುವೈದ್ಯ ತಜ್ಞರಿಂದ ಸರಿಪಡಿಸಿ ಹೆರಿಗೆ ಆಗುವ ಹಾಗೇ ಮಾಡಬೇಕಾಗುತ್ತದೆ. ಹೆರಿಗೆ ಆದ ನಂತರ ಸಾಮಾನ್ಯವಾಗಿ ೪೬ ತಾಸುಗಳಲ್ಲಿ ಮಾಸದ ಚೀಲ ಗರ್ಭಕೋಶದಿಂದ ಹೊರಗೆ ಬರುತ್ತದೆ. ಇಲ್ಲದಿದ್ದರೆ ಅದನ್ನು ಪರುವೈದ್ಯ ತಜ್ಞರಿಂದ ಹೊರಗೆ ತಗೆಸಿ ಔಷಧೋಪಚಾರ ಮಾಡಿಸಬೇಕಾಗುತ್ತದೆ. ಇದರಿಂದ ಗರ್ಭಧರಿಸುವ ಯಾವುದೇ ತೊಂದರೆಗಳಿರುವುದಿಲ್ಲ. ಗರ್ಭಧರಿಸಿದ ಮೇಣಕಗಳ ಮೈ, ಕೆಚ್ಚಲು ಹಾಗೂ ಮೊಲೆ ತೊಟ್ಟುಗಳನ್ನು, ಅದು ಕರು ಹಾಕುವ ಸಮೀಪ ಬಂದಾಗ ದಿನಾಲೂ ತೊಳೆದು ಉಜ್ಜಬೇಕು. ಇದರಿಂದ ಮುಂದೆ ಹಾಲು ಹಿಂಡಲು ತೊಂದರೆಯಾಗುವದಿಲ್ಲ.
ಹಾಲು ಹಿಂಡುದ ಪಶುಗಳ ಪಾಲ
ಹಾಲು ಹಿಂಡುವ ಪಶುಗಳನ್ನು ಚೆನ್ನಾಗಿ ಗಾಳಿ, ಬೆಳಕು ಬರುವಂತಹ ಸ್ವಚ್ಛವಾದ ಕೊಠಡಿಗಳಲ್ಲಿ ಕಟ್ಟಬೇಕು. ದಿನಾಲೂ ಬೆಳಿಗ್ಗೆ ೧-೨ ತಾಸು ಹೊರಗಡೆ ಅಡ್ಡಾಡಲು ಬಿಡಬೇಕು. ದಿನಾಲೂ ಹೊಟ್ಟೆ ತುಂಬ ಹಸಿರು ಒಣ ಮೇವು ಅಥವಾ ರಸಮೇವು ಕೊಡಬೇಕು. ದಾಣಿ ಮಿಶ್ರಣವನ್ನು ಪಾಲಿನ ಇಳುವರಿಯ ಶೇ. ೩೦- ೫೦ ರಷ್ಟು ಕೊಡಬೇಕು. (ಉದಾ: ದಿನದ ೧೦ ಲೀಟರ್ ಹಾಲಿಗೆ ೩-೪ ಕಿಲೋ) ಇವುಗಳಿಗೆ ಕುಡಿಯಲು ಹೆಚ್ಚಿಗೆ ನೀರು ಬೇಕಾಗಿರುವದರಿಂದ ಸತತವಾಗಿ ಸ್ವಚ್ಛ ನೀರನ್ನು ಒದಗಿಸಬೇಕು, ಉಣ್ಣೆಗಳನ್ನು ನಿಯಂತ್ರಿಸಬೇಕು. ವರ್ಷಕ್ಕೊಂದು ಸಾರಿ, ಜಂತಿನ ಔಷಧಿಯನ್ನು ಹಾಕಿಸಬೇಕು. ಹಾಗೂ ನಿಯಮಿತವಾಗಿ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸಬೇಕು. ದಿನಾಲೂ ೨ ಸಲ ನಿಯಮಿತವಾದ ಸಮಯಕ್ಕೆ ಹಾಲನ್ನು ಹಿಂಡಬೇಕು. ಹೆಚ್ಚಿಗೆ ಹಾಲು ಹಿಂಡುತ್ತಿರುವ ಮಿಶ್ರತಳಿ ಆಕಳುಗಳನ್ನು ದಿನದಲ್ಲಿ ೩ ಸಲ ಹಿಂಡಬಹುದು, ಹಾಲನ್ನು ಪೂರ್ಣ ಮುಷ್ಟಿ ಪದ್ಧತಿಯಿಂದ ಹಿಂಡಬೇಕು. ಹೆಚ್ಚಿಗೆ ಹಿಂಡುತ್ತಿರುವ ಪಶುಗಳನ್ನು ಹಾಲು ಹಿಂಡುವ ಯಂತ್ರದಿಂದಲೂ ಹಿಂಡಬಹುದು. ಪಶುಗಳು ಸಾಮಾನ್ಯವಾಗಿ ಕರು ಹಾಕಿದ ೪೦-೫೦ ದಿನಗಳಲ್ಲಿ ಬೆದೆಗೆ ಬರಲು ಸುರುವಾಗುತ್ತವೆ, ಕರು ಹಾಕಿ 2 ತಿಂಗಳ ನಂತರ ಅವುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಿದರೆ ಗರ್ಭಧರಿಸಿ ಜೊತೆಗೆ ಹಾಲನ್ನು ಹಿಂಡುತ್ತವೆ. ಇದರಿಂದ ಲಾಭ ಹೆಚ್ಚು ಹಾಲು ಹಿಂಡುವ ಮಿಶ್ರತಳಿ ಆಕಳುಗಳು ಗರ್ಭಧರಿಸಿದಾಗ ಮುಂದೆ ಅವು ಕರು ಹಾಕುವ ೩ ತಿಂಗಳ ಮೊದಲೆ ಹಾಲು ಹಿಂಡುವುದನ್ನು ನಿಧಾನವಾಗಿ ನಿಲ್ಲಿಸಿ ಕೊನೆಗೆ ೨ ತಿಂಗಳ ಪೂರ್ತಿ ವಿಶ್ರಾಂತಿಯನ್ನು ಕೊಡಬೇಕು. ಇದರಿಂದ ಒಳಗಿನ ಕರು ಚೆನ್ನಾಗಿ ಬೆಳೆಯುತ್ತದೆ ಹಾಗೂ ಮುಂದಿನ ಕರು ಹಾಕಿದ ನಂತರ ಪಾಲಿನ ಇಳುವರಿ ಕೂಡ ಚೆನ್ನಾಗಿರುತ್ತದೆ.
Smos wat (Clean milk production)
ಆರೋಗ್ಯವಂತ ಸ್ವಚ್ಛ ಕೆಚ್ಚಲಿನಿಂದ ಹಿಂಡಿದ ಹಾಲಿಗೆ ಹಾಗೂ ಹಾಲಿನಲ್ಲಿ ಯಾವುದೇ ರಾಸಾಯನಿಕ ವಸ್ತುಗಳು ಹಾನಿಕಾರ ಸೂಕ್ಷಾಣು ಜೀವಿಗಳು ಹಾಗೂ ಕಲ್ಮಶಗಳು ಇರದೇ ಇರುವಂತಹ ಹಾಲಿಗೆ ಶುದ್ಧ ಪಾಲೆನ್ನುತ್ತಾರೆ, ಶುದ್ಧ ಹಾಲನ್ನು ವೇಗ ಕೆಡದ ಹಾಗೆ ಬಹಳ ಹೊತ್ತು (೬-೮ ತಾಸು) ಇಡಬಹುದು, ಇದರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಹುದು. ಹಾಗೂ ಸೇವನೆಯಿಂದ ಮನುಷ್ಯರ ಆರೋಗ್ಯವನ್ನು ಕಾಪಾಡಬಹುದು, ರುದ್ಧ ಹಾಲನ್ನು ಉತ್ಪಾದಿಸಲು ಈ ಕೆಳಗಿನ ನಿರ್ವಹಣಾ ಪದ್ಧತಿಗಳನ್ನು ಅವಶ್ಯವಾಗಿ ಆನುಸರಿಸಬೇಕು.
ಹಿಂಡುವ ದನಗಳಿಗೆ ಹಾಗೂ ಮನುಷ್ಯರಿಗೆ ಯಾವುದೇ ಸಾಂಕ್ರಾಮಿಕ ರೋಗವಿರದ ಆರೋಗ್ಯವಾಗಿರಬೇಕು, ೨) ಪಾಲು ಹಿಂಡುವ ಮೊದಲು ದನಗಳ ಮೈ, ಹಾಗೂ ಕಟ್ಟುವ ಜಾಗವನ್ನು ಸ್ವಚ್ಛಗೊಳಿಸಿ. ತೊಳೆಯಬೇಕು. ೩) ಹಾಲು ಹಿಂಡುವ ಮೊದಲು ಹೆಚ್ಚಲು ಹಾಗೂ ಮೊಲೆಗಳನ್ನು ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಬೇಕು, ೪) ಹಾಲು ಹಿಂಡುವಾಗ ಯಾವುದೇ ಜಿಡ್ಡಿನ ಪದಾರ್ಥವನ್ನು ಮೊಲೆಗಳಿಗೆ ಹಚ್ಚಬಾರದು. 1) ಹಾಲನ್ನು ಪೂರ್ಣಮುಷ್ಟಿ ಪದ್ಧತಿ ಅಥವಾ ಮಶಿನ್ ನಿಂದ ೭-೮ ನಿಮಿಷಗಳಲ್ಲಿ ಪೂರ್ತಿ ಹಿಂಡಬೇಕು. ೬) ಹಾಲನ್ನು ಹಿಂಡುವಾಗ ದನಗಳಿಗೆ ಹೆದರಿಸುವುದನ್ನು ಮಾಡಬಾರದು. ೬) ಹಾಲನ್ನು ಶೇಖರಿಸಿ ಸಂಗ್ರಹಿಸಿಡುವ ಪಾತ್ರೆಗಳನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಾರದು ಹಾಗೂ ಸೋಡಾ ಪಾಡಿ ಹಾಕಿದ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಬೇಕು. ೮) ಹಾಲು ಹಿಂಡಿದ ಕೂಡಲೇ ಕಾಯಿಸಿಡಬೇಕು ಅಥವಾ ಮಾರಾಟ ಮಾಡಬೇಕು. ೯) ಹಾಲನ್ನು ಮೇಲಿಂದ ಮೇಲೆ ಪರೀಕ್ಷೆಗೆ ಒಳಪಡಿಸಬೇಕು. ೧೦) .ಹಾಲನ್ನು ಪೂರ್ತಿ ಹಿಂಡಿದ ನಂತರ ಬಿಸಿ ನೀರಿನಿಂದ ಮೊಲೆಗಳನ್ನು ತೊಳೆಯಬೇಕು.
ಬೇಸಿಗೆಯಲ್ಲಿ ಎಮ್ಮೆಗಳ ನಿರ್ವಹಣೆ
ಎಮ್ಮೆಗಳ ಮೈ ಬಣ್ಣ ಕಪ್ಪಾಗಿರುವುದರಿಂದ ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಆಕಳುಗಳಂತೆ ತಡೆದುಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಎಮ್ಮೆಗಳ ದೇಹದ ಶಾರೀರಿಕ ಕ್ರಿಯೆಗಳಲ್ಲಿ ಬದಲಾವಣೆಗಳಾಗಿ ಅವು ಸರಿಯಾಗಿ ಬೆದೆಗೆ ಬರುವುದಿಲ್ಲ. ಗರ್ಭಧರಿಸುವುದಿಲ್ಲ ಹಾಗೂ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಎಮ್ಮೆಗಳನ್ನು ಮಧ್ಯಾಹ್ನದ ಸಮಯದಲ್ಲಿ ನೀರಿನಲ್ಲಿ (ಕೆರೆ, ಹೊಂಡಗಳಲ್ಲಿ) ಬಿಡುವುದು ಉತ್ತಮ ಅಥವಾ ದಿನದಲ್ಲಿ ಎಮ್ಮೆಗಳ ಮೈ ಮೇಲೆ ೪-೫ ಬಾರಿ ನೀರು ಹಾಕಬೇಕು. ಮೇಲಿಂದ ಮೇಲೆ ಸಾಕಷ್ಟು ತಂಪಾದ ನೀರನ್ನು ಕುಡಿಸಬೇಕು. ಎಮ್ಮೆಗಳನ್ನು ತಂಪಾದ ಜಾಗದಲ್ಲಿ ಕಟ್ಟಬೇಕು. ತಂಪತ್ತಿನಲ್ಲಿ (ಬೆಳಗ್ಗೆ ಸಾಯಂಕಾಲ ಹಾಗೂ ರಾತ್ರಿ) ಮೇಯಿಸಬೇಕು. ಇದರಿಂದ ಎಮ್ಮೆಗಳ ದೇಹದ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ.
ಬೀಜದ ಹೋರಿಗಳ ಪಾಲನೆ
ಬೀಜದ ಸಲುವಾಗಿ ಹೋರಿ/ಕೋಣಗಳನ್ನು ಹೆಚ್ಚಿಗೆ ಹಾಲು ಹಿಂಡುತ್ತಿರುವ ಒಳ್ಳೆಯ ದನಗಳಿಂದ ಹುಟ್ಟಿದವುಗಳನ್ನು ಆರಿಸಬೇಕು. ಬೀಜದ ಹೋರಿ/ಕೋಣಗಳನ್ನು ನಿಯಂತ್ರಿಸಲು ಮೂಗುದಾರ ಅಥವಾ ಬಳಿ ಹಾಕಿ ಕಟ್ಟಬೇಕು. ಅವುಗಳನ್ನು ಪ್ರತ್ಯೇಕವಾಗಿ ಚೆನ್ನಾಗಿ ಗಾಳಿ, ಬೆಳಕು ಬರುವಂತಹ ಸ್ವಚ್ಛವಾದ ಜಾಗದಲ್ಲಿ ಕಟ್ಟಬೇಕು. ದಿನಾಲೂ ಬೆಳಿಗ್ಗೆ ೧-೨ ತಾಸು ಹೊರಗೆ ಅಡ್ಡಾಡಿಸಬೇಕು, ಅವುಗಳಿಗೆ ಹೊಟ್ಟೆ ತುಂಬ ಹಸಿರು ಒಣ ಮೇವು, ೨-೩ ಕಿಲೋ ದಾಣಿ ಮಿಶ್ರಣ ಹಾಗೂ ಸತತವಾಗಿ ಕುಡಿಯಲು ನೀರು ಕೊಡಬೇಕು, ದಿನಾಲೂ ಮೈ ಹಾಗೂ ಕೊಠಡಿಯನ್ನು ತೊಳೆದು ಮೈ ಉಜ್ಜುವದು, ಅವುಗಳಿಗೆ ವರ್ಷಕ್ಕೊಮ್ಮೆ ಜಂತಿನ ಔಷಧಿ, ಉಣ್ಣ ನಿಯಂತ್ರಿಸುವದು ಹಾಗೂ ರೋಗನಿರೋಧಕ ಲಸಿಕೆಗಳನ್ನು ಹಾಕಿಸಬೇಕು. ಹೋರಿ ಕೋಣಗಳ ವೃಷಣಗಳು ಸರಿಯಾಗಿರಬೇಕು. ಹೋರಿ/ಕೋಣಗಳು ೩ ವರ್ಷ ವಯಸ್ಸಾದ ನಂತರ ವಾರಕ್ಕೆ ೨-೩ ಸಲ ಮಾತ್ರ – ವೀರ್ಯದಾನಕ್ಕೆ ಉಪಯೋಗಿಸಬಹುದು.
ಎತ್ತುಗಳ ಪಾಲನೆ
ಎತ್ತುಗಳನ್ನು ಚೆನ್ನಾಗಿರುವ ಹೂಡುವ ತಳಿಗಳಿಂದ ಆರಿಸಬೇಕು, ಎತ್ತುಗಳು ಎತ್ತರವಾಗಿ, ಉದ್ದವಾಗಿ ದಪ್ಪವಾಗಿ ಇರಬೇಕು, ಕಾಲುಗಳು, ಹೆಗಲು ಗಟ್ಟಿಯಾಗಿರಬೇಕು, ತಲೆ ಹಾಗೂ ಬಾಲವು ಮೇಲೆ ಎತ್ತಿರಬೇಕು. ಚರ್ಮ, ಕಣ್ಣು, ಕಿವಿ ಚುರುಕಾಗಿರಬೇಕು, ಜೋಡಿ ಎತ್ತುಗಳು ಒಂದೇ ಎತ್ತರ, ಉದ್ದ, ದಪ್ಪ ಗೂ ಚುರುಕುತನ ಹೊ೦ದಿರಬೇಕು, ಹೋರಿ ಕರುಗಳಿಗೆ ೧-೨ ವರ್ಷದೊಳಗೆ ಕಸಿ ಮಾಡಿಸಿ ಮೂಗುದಾರ ಹಾಕಬೇಕು. ಎತ್ತುಗಳ ಪಾಲನೆ ಮಾಡುವವರು ಸಮಾಧಾನವಾಗಿರಬೇಕು, ಅವುಗಳಿಗೆ ಮೇವು ದಾಣಿ ಮಿರ್ಶ ಹಾಗೂ ನೀರಿನ ವ್ಯವಸ್ಥೆ, ಮೈ ತೊಳೆಯುವದು ಹಾಗೂ ಸ್ವಚ್ಛ ಮಾಡುವದು ಮಾಡಿದರೆ ಅವು ಅವರನ್ನು ನಂಬುತ್ತವೆ. ಎತ್ತುಗಳಿಗೆ ಮೊದಲು ಪಾಲಿ ಮೊಗ ಕಟ್ಟಿ ಆಡ್ಡಾಡಿಸಿ ರೂಡಿ ಮಾಡಬೇಕು. ಒಂದೇ ಜೋಡಿ ಎತ್ತುಗಳನ್ನು ಯಾವಾಗಲೂ ಒಂದೆ ಕಡೆ (ಎಡ-ಬಲ) ರೂಢಿ ಮಾಡಬೇಕು, ನಂತರ ನೊಗದ ಮೇಲೆ ಸ್ವಲ್ಪ ಧಾರ ಹಾಕಬೇಕು ಅಥವಾ ಖಾಲಿ ಚಕ್ಕಡಿ ಎಳೆಯಲು ರೂಢಿ ಮಾಡಬೇಕು. ಹೊಲದಲ್ಲಿ ಹೂಡಿ ರೂಢಿ ಮಾಡಬೇಕು. ಎತ್ತುಗಳು ೪ ವರ್ಷಗಳಾದ ಮೇಲೆ ಭಾರದ ಕೆಲಸಕ್ಕೆ ಉಪಯೋಗಿಸಬಹುದು, ಎತ್ತುಗಳನ್ನು ಒಂದು ದಿವಸಕ್ಕೆ ೮ ತಾಸಿಗಿಂತ ಹೆಚ್ಚಿಗೆ ಕೆಲಸಕ್ಕೆ ಉಪಯೋಗಿಸಬಾರದು ಹಾಗೂ ಮಧ್ಯದಲ್ಲಿ ಪತಿ ೧-೨ ತಾಸಿಗೆ ವಿಶ್ವಾಮ ಕೊಡುತ್ತಿರಬೇಕು, ಒಂದು ಒಳ್ಳೆಯ ಜೋಡಿ ಎತ್ತಿನಿಂದ ೧೦-೧೨ ಎಕರೆ ಜಮೀನಿನಲ್ಲಿ ಎಲ್ಲ ಕೆಲಸ ಹಾಗೂ ಸಾಗಾಣಿಕೆಯನ್ನು ಮಾಡಿಸಬಹುದು. ಎತ್ತುಗಳನ್ನು ಚೆನ್ನಾಗಿ ಗಾಳಿ, ಬೆಳಕು ಬರುವಂತಹ ಸ್ವಚ್ಛವಾದ ಜಾಗಗಳಲ್ಲಿ ಕಟ್ಟಬೇಕು, ದಿನಾಲೂ ಮೈ ತೊಳೆದು ಉಜ್ಜಬೇಕು, ಹೊಟ್ಟೆ ತುಂಬ ಹಸಿರು ಒಣ ಮೇವು, ನೀರು ಹಾಗೂ ೧-೨ ಕಿಲೋ ದಾಣಿ ಮಿಶ್ರಣ ಪ್ರತಿದಿನ ಕೊಡಬೇಕು, ಉಣ್ಣೆಗಳನ್ನು ನಿಯಂತ್ರಿಸಬೇಕು. ಪ್ರತಿ ವರ್ಷ ಜಂತಿನ ಔಷಧಿ ಹಾಗೂ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸಬೇಕು.
ದನಗಳ ಸಂತಾನೋತ್ಪತ್ತಿ (Reproduction)
ದನಗಳು ತನ್ನ ಪೀಳಿಗೆ ಬೆಳೆಸುವದಕ್ಕಾಗಿ ಹಾಗೂ ಅವುಗಳಿಂದ ಸಂತಾನೋತ್ಪತ್ತಿಯು ಆತ್ಯವಶ್ಯವಾಗಿದೆ.
ಹಾಲನ್ನು ಪಡೆಯಲು ಋತು ಚಕ್ರ (Estrus cycle) : ದನಗಳು ಪ್ರೌಢಾವಸ್ಥೆಗೆ ಬಂದ ನಂತರ ಅವುಗಳ ಸಂತಾನೋತ್ಪತ್ತಿ ಸುರುವಾಗುತ್ತದೆ, ದನಗಳು ಪ್ರೌಢಾವಸ್ಥೆಗೆ ಬರುವ ಸಮಯ ಅವುಗಳಿರುವ ಹವಾಗುಣ ಹಾಗೂ ಅವುಗಳಿಗೆ ೩ ವರ್ಷಕ್ಕೆ ಮೇಯಿಸುವ ಆಹಾರದ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಮಿಶ್ರತಳಿ ಆಕಳ ಮಣಕಗಳು ೧೪ – ೨ ವರ್ಷಕ್ಕೆ, ಜವಾರಿ ಆಕಳ ಮಣಕಗಳು ೨ – ೨೪ ವರ್ಷಕ್ಕೆ ಹಾಗೂ ಎಮ್ಮೆ ಮಣಕಗಳು ೨೪ – ಬೆದೆಗೆ ಒಂದು ಕಟ್ಟಿಕೊಳ್ಳುತ್ತವೆ. ಪ್ರೌಢಾವಸ್ಥೆಗೆ ಬಂದ ದನಗಳ ಸಂತಾನೋತ್ಪತ್ತಿಯ ವಿವಿಧ ಅಂಗಗಳು ಕ್ರಮಬದ್ಧವಾಗಿ ಬೆಳೆದು ಪುನರಾವೃತ್ತಿಗೊಳ್ಳುತ್ತವೆ. ಇದನ್ನು ಋತುಚಕ್ರ ಅಥವಾ ಲೈಂಗಿಕ ಕಾಲಚಕ್ರ ಎನ್ನುತ್ತೇವೆ. ಈ ಋತು ಚಕ್ರವು ದನವು ಗರ್ಭಧರಿಸುವವರೆಗೆ ಪ್ರತಿ ೨೧ (೧೮-೨೪) ‘ದಿನಕ್ಕೆ ಪುನರಾವೃತ್ತಿಗೊಳ್ಳುತ್ತದೆ. ಗರ್ಭಧರಿಸಿದ ದಿನಗಳಲ್ಲಿ ಇದು ಕಂಡುಬರುವುದಿಲ್ಲ. ಕರು ಹಾಕಿದ ನಂತರ ೪೦-೫೦ ದಿನಗಳವರೆಗೆ ಮತ್ತೆ ಪುನರಾವೃತ್ತಿಗೊಳ್ಳುತ್ತದೆ. ಋತುಚಕ್ರವನ್ನು ೪ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅವುಗಳೆಂದರೆ, ಪೂರ್ವ ಜಿದೆ (೩ ದಿವಸ), ಬೆದೆ (೧ ದಿವಸ), ಉತ್ತರ ಬೆದೆ (೪ ದಿವಸ) ಹಾಗೂ ಅಂತಿಮ ಬೆದೆ (೧೩ ದಿವಸ) ಇವುಗಳಲ್ಲಿ ಬೆದೆಯ ಕಾಲವು’ ಆಕಳು ಅಥವಾ ಎಮ್ಮೆಯು ತೋರಿಸುವ ಲೈಂಗಿಕ ಅಪೇಕ್ಷಣಿಯ ಕಾಲ, ಒಂದು ದಿನದ ಬೆಡೆಯ ಅವಧಿಯನ್ನು ೩ ಭಾಗಗಳಲ್ಲಿ ವಿಂಗಡಿಸಲಾಗಿದೆ. ಅವುಗಳೆಂದರೆ ಮುಂಬೆದೆ (ಮೊದಲು ೮ ತಾಸು), ಮಧ್ಯಬೆಡೆ (ಮಧ್ಯದ ೮ ತಾಸು) ಹಾಗೂ ಹಿಂಬೆದೆ (ಕೊನೆಯ ೮ ತಾಸು), ಮಧ್ಯ ಬೆಳೆಯಲ್ಲಿ ಆಕಳು ಅಥವಾ ಎಮ್ಮೆಗೆ ನೈಸರ್ಗಿಕವಾಗಿ ಅಥವಾ ಕೃತಕವಾಗಿ ಗರ್ಭಧಾರಣೆ ಮಾಡಿಸಿದರೆ ಅದು ಗರ್ಭ ಧರಿಸುವ ಸಂಭವ ಹೆಚ್ಚಾಗಿರುತ್ತದೆ. ಬೆದೆಯ ದಿವಸ ಹೆಣ್ಣು ದನವು ಈ ಕೆಳಗಿನ ಲಕ್ಷಣಗಳನ್ನು ತೋರಿಸುತ್ತದೆ.
ಬೆದೆಯ ಲಕ್ಷಣಗಳು (Heat symptoms)
೧. ಯೋನಿಯಿಂದ ಲೋಳೆ ಪದಾರ್ಥ ಬೀಳುತ್ತಿರುತ್ತದೆ. ಇದು ಮುಂಬೆದೆಯಲ್ಲಿ ನೀರಿನ ಹಾಗೆ ಇರುವದು.
ಮಧ್ಯ ಬೆದೆಯಲ್ಲಿ ಸ್ವಲ್ಪ ಗಟ್ಟಿಯಾಗುವದು, ನಂತರ ಹಿಂಬೆದೆಯಲ್ಲಿ ಪೂರ್ತಿ ಗಟ್ಟಿಯಾಗುವದು.
೨. ಮುಂಬೆದೆಯಲ್ಲಿ ಬೆದೆಗೆ ಬಂದ ದನ ಬೇರೆ ದನಗಳ ಮೇಲೆ ಹತ್ತಲು ಪ್ರಯತ್ನಿಸುತ್ತದೆ, ಆದರೆ ಬೇರೆ ದನಗಳು ಅದರ ಮೇಲೆ ಹತ್ತಲು ಬಂದರೆ ಅದು ಹತ್ತಿಸಿಕೊಡುವುದಿಲ್ಲ. ಮಧ್ಯ ಬೆದೆಯಲ್ಲಿ ಬೇರೆ ದನಗಳು ಬೆದೆ ಬಂದ ದನದ ಮೇಲೆ ಹತ್ತಿದಾಗ ಅದು ಸುಮ್ಮನೆ ನಿಲ್ಲುತ್ತದೆ. ಇದು ಗರ್ಭಧಾರಣೆ ಮಾಡುವ ಸಮಯ,
೩. ದನದ ಯೋನಿಯು ಊದಿಕೊಂಡು, ಒಳಭಾಗ ಕೆಂಪಾಗುತ್ತದೆ ಹಾಗೂ ಮೇಲಿಂದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುತ್ತದೆ.
೪. ದನವು ಮೇವು ನೀರಿನ ಕಡೆ ಲಕ್ಷ್ಯ ಕೊಡುವುದಿಲ್ಲ. ಬೆದೆ ಬಂದ ದಿವಸ ಹಾಲಿನ ಇಳುವರಿ ಸ್ವಲ್ಪ ಕಡಿಮೆಯಾಗುತ್ತದೆ.
೫. ದೇಹದ ಉಷ್ಣಾಂಶ ಸ್ವಲ್ಪ ಹೆಚ್ಚಿಗೆ ಆಗಿರುತ್ತದೆ ಹಾಗೂ ಸತತವಾಗಿ ಒದರುತ್ತ, ಚಡಪಡಿಸುತ್ತಿರುತ್ತದೆ.
ಎಮ್ಮೆಗಳಲ್ಲಿ ಮೂಕ ಬೆದೆ
ಮೇಲಿನ ಎಲ್ಲ ಬೆದೆಯ ಲಕ್ಷಣಗಳು ಆಕಳುಗಳಲ್ಲಿ ಸರಳವಾಗಿ ಕಂಡುಬರುತ್ತದೆ. ಆದರೆ ಎಮ್ಮೆಗಳಲ್ಲಿ ಕಂಡುಬರುವದಿಲ್ಲ. ಇದನ್ನು ಮೂಕಳೆದೆ ಎನ್ನುತ್ತಾರೆ. ಆದ್ದರಿಂದ ಎಮ್ಮೆಗಳಲ್ಲಿ ಬೆದೆಯ ಲಕ್ಷಣಗಳನ್ನು ತಂಪೊತ್ತಿನಲ್ಲಿ ಅಂದರೆ ಬೆಳಿಗ್ಗೆ, ಸಂಜೆ ಹಾಗೂ ರಾತ್ರಿಯಲ್ಲಿ ಅದು ಮಲಗಿದ್ದಾಗ ಯೋನಿ, ಲೋಳೆ ಹಾಗೂ ಮೂತ್ರ ವಿಸರ್ಜನೆ ಗಮನಿಸಿ ಗರ್ಭಧಾರಣೆ ಮಾಡಿಸಲಾಗುತ್ತದೆ.
ಕೃತಕ ಗರ್ಭಧಾರಣೆ
ಸಾಮಾನ್ಯವಾಗಿ ಬೆದೆಯನ್ನು ರಾತ್ರಿ ಗಮನಿಸಿದರೆ ಬೆಳಿಗ್ಗೆ ಹಾಗೂ ಬೆಳಿಗ್ಗೆ ಗಮನಿಸಿದರೆ ಸಂಜೆ ಒಳಗಾಗಿ ದನಗಳಿಗೆ ಗರ್ಭಧಾರಣೆ ಮಾಡಿಸಬೇಕು. ದಿನದಲ್ಲಿ ೨-೩ ಸಲ ಮಾಡಿಸಿದರೆ ಗರ್ಭಧರಿಸುವ ಸಂಭವವು ಹೆಚ್ಚಿಗೆ ಇರುತ್ತದೆ. ಒಳ್ಳೆಯ ಬೀಜದ ಹೋರಿ ಅಥವಾ ಕೋಣಗಳಿಂದ ಕೃತಕವಾಗಿ ವೀರವನ್ನು ಸಂಗ್ರಹಿಸಿ ಗುಣಧರ್ಮ ಪರೀಕ್ಷಿಸಿ, ಪ್ರಮಾಣವನ್ನು ಹೆಚ್ಚಿಸಿ, ೦೨೫ ೧.೫ ಮೀ. ಲೀ. ಗಾತ್ರದ ನಳಿಕೆಗಳಲ್ಲಿ ತುಂಬಿ, ಕ್ರಮೇಣ ತಂಪುಗೊಳಿಸಿ ನಂತರ ದೈವಸಾರಜನಕ (-೧೯೬೫ ಉಷ್ಣಾಂಶ)ದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದನ್ನು ಘನೀಕೃತ ವೀರ ಎನ್ನುತ್ತಾರೆ. ದನವು ಬೆದೆಗೆ ಬಂದಿದ್ದನ್ನು ಖಾತ್ರಿ ಮಾಡಿಕೊಂಡು ದ್ರವ ಸಾರಜನಕದಿಂದ ಘನೀಕೃತ ನಳಿಕೆಗಳನ್ನು ಹೊರತೆಗೆದು ಬೆಚ್ಚಗಿನ (೪೦° ಸೆಂಟಿಗ್ರೇಡ್) ನೀರಿನಲ್ಲಿ ೧/೨ ೧ ನಿಮಿಷ ಇಟ್ಟು ವೀರವನ್ನು ದ್ರವರೂಪಕ್ಕೆ ತಂದು ನಳಿಕೆಯನ್ನು ಕೃತಕ ಗರ್ಭಧಾರಣ ಉಪಕರಣದಲ್ಲಿರಿಸಿ ಬೆದೆಗೆ ಬಂದ ದನದ ಗರ್ಭಕೋಶದಲ್ಲಿ ಕೃತಕವಾಗಿ ಹಾಕುವುದಕ್ಕೆ ಕೃತಕ ಗರ್ಭಧಾರಣೆ ಎನ್ನುತ್ತಾರೆ.
ಕೃತಕ ಗರ್ಭಧಾರಣೆಯ ಮಹತ್ವಗಳು (Advantages) ೧. ಕೃತಕ ಗರ್ಭಧಾರಣೆಯಿಂದ ತಳಿ ಅಭಿವೃದ್ಧಿಯಾಗುತ್ತದೆ.
೨. ಇದರಿಂದ ಒಂದು ದನದಿಂದ ಇನ್ನೊಂದು ದನಕ್ಕೆ ಹರಡುವ ಗರ್ಭಕೋಶದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.
೩. ಒಂದು ಹೋರಿ ಅಥವಾ ಕೋಣದಿಂದ ಒಂದು ಸಲ ಸಂಗ್ರಹಿಸಿದ ವೀರದಿಂದ ಕನಿಷ್ಠ ೮೦-೧೦೦
ದನಗಳಿಗೆ ಕೃತಕ ಗರ್ಭಧಾರಣೆ ಮಾಡಬಹುದು. ೪. ವೀರವನ್ನು ದ್ರವಸಾರಜನಕದಲ್ಲಿ ಬಹಳಷ್ಟು ವರ್ಷಗಳವರೆಗೆ ಕೆಡದಂತೆ ಇಡಬಹುದು.
೫. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಘನೀಕೃತ ವೀರವನ್ನು ಸುಲಭವಾಗಿ ಕ್ಯಾನ್‌ಗಳಲ್ಲಿ ಸಾಗಿಸಬಹುದು.
೬. ರೈತರು ಬೀಜದ ಸಲುವಾಗಿ ಹೋರಿ ಅಥವಾ ಕೋಣವನ್ನು ಸಾಕುವ ಅವಶ್ಯಕತೆ ಇರುವುದಿಲ್ಲ. ಇದರಿಂದಾಗುವ ಹೆಚ್ಚಿನ ಖರ್ಚನ್ನು ನಿಲ್ಲಿಸಬಹುದು.
ಗರ್ಭ ಪರೀಕ್ಷೆ (Pregnancy test)
ದನಗಳಿಗೆ ಗರ್ಭಧಾರಣೆ ಮಾಡಿಸಿದ ೨ ತಿಂಗಳ ನಂತರ ಅದನ್ನು ಪಶುವೈದ್ಯ ತಜ್ಞರಿಂದ ಪರೀಕ್ಷಿಸಿ ಖಾತ್ರಿ ಮಾಡಿಕೊಳ್ಳಬೇಕು. ಗರ್ಭ ಪರೀಕ್ಷೆಯನ್ನು ದನಗಳ ಗುದದಲ್ಲಿ ಕೈ ಹಾಕಿ ಗರ್ಭಕೋಶದಲ್ಲಿ ಭ್ರೂಣ ಬೆಳೆಯುತ್ತಿದೆ ಎಂದು ಖಾತ್ರಿ ಮಾಡಿಕೊಳ್ಳಬೇಕು. ಗರ್ಭ ಪರೀಕ್ಷೆಯನ್ನು ಗರ್ಭಧರಿಸಿದ ದನದ ಮೂತ್ರದಲ್ಲಿ ಹಾಮೋನ್ ಅನ್ನು ಪರೀಕ್ಷಿಸಿ ಖಾತ್ರಿ ಮಾಡಿಕೊಳ್ಳಬಹುದು.
ಗರ್ಭದ ಅವಧಿ
ಗರ್ಭದ ಅವಧಿ ಆಕಳುಗಳಲ್ಲಿ ೨೭೦ + ೧೦ ಹಾಗೂ ಎಮ್ಮೆಗಳಲ್ಲಿ ೩೦೦ + ೧೦ ದಿನಗಳಿರುತ್ತವೆ.
ದನಗಳು ಕರು ಹಾಕುವದು (Calving)
ಕೃತಕ ಗರ್ಭಧಾರಣೆಯ ದಿನಾಂಕವನ್ನು ಹಾಗೂ ಅಂದಾಜು ಕರು ಹಾಕುವ ದಿನಾಂಕವನ್ನು ಬರೆದಿಟ್ಟು ವೀಕ್ಷಿಸುತ್ತಿರಬೇಕು. ಗರ್ಭಕೋಶದೊಳಗೆ ಕರುವಿನ ಸ್ಥಾನವು ಸಾಮಾನ್ಯವಾಗಿ ಗರ್ಭದ ಅವಧಿ ಮುಗಿದ ನಂತರ ಅದು ಸುಲಭವಾಗಿ ಹೊರಗೆ ಬರುತ್ತದೆ. ಒಂದು ವೇಳೆ ಕರು ಅಥವಾ ಅದರ ದೇಹದ ಯಾವುದೇ ಭಾಗ ಅಡ್ಡವಾಗಿದ್ದರೆ ಕರು ಸರಳವಾಗಿ ಹೊರಗೆ ಬರುವದಿಲ್ಲ. ಇದನ್ನು ತಜ್ಞರಿಂದ ಸರಿಪಡಿಸದಿದ್ದರೆ ಕರು ಅಥವಾ ತಾಯಿ ಅಥವಾ ಎರಡು ಸಾಯುವ ಸಂಭವವಿರುತ್ತದೆ. ಕರು ಹಾಕಿದ ನಂತರ ಮಾಸದ ಚೀಲವು ೪-೬ ತಾಸುಗಳ ಒಳಗೆ ಹೊರಗೆ ಬರಬೇಕು. ಇಲ್ಲದಿದ್ದರೆ, ಅದನ್ನು ತಜ್ಞರಿಂದ ಹೊರಗೆ ತೆಗೆಸಿ, ಔಷಧ ಉಪಚಾರ ಮಾಡಿಸಬೇಕು. ಇಲ್ಲದಿದ್ದರೆ, ಮುಂದಿನ ಗರ್ಭಧಾರಣೆ ಸರಿಯಾಗಿ ಆಗುವದಿಲ್ಲ.