ಬಾಳೆಹಣ್ಣಿನ ಬೇಸಾಯದ ತಾಂತ್ರಿಕತೆ. ಬಾಳೆ ವಾಣಿಜ್ಯ ಬೆಳೆಯಾಗಿದೆ. ಬಾಳೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಇವೆ. ಬಾಳೆ ಬೇಸಾಯದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಬಾಳೆ ನಾಟಿ ಮಾಡಬೇಕೆಂದಿರುವ ಪ್ರದೇಶವನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ ಕಸಕಡ್ಡಿಗಳನ್ನು ಆರಿಸಿ ತೆಗೆದು ಭೂಮಿ ಹದ ಮಾಡಿಟ್ಟುಕೊಳ್ಳಬೇಕು. ನಂತರ ತಳಿಗಳಿಗನುಸಾರವಾಗಿ, ಶಿಫಾರಸು ಮಾಡಿದ ಅಂತರದಲ್ಲಿ 45X45X45 ಘನ ಸೆಂ.ಮೀ. ಗಾತ್ರದ ಕುಣಿಗಳನ್ನು ತೆಗೆಯಬೇಕು.
ಈ ಕುಣಿಗಳಲ್ಲಿ ಚೆನ್ನಾಗಿ ಸಮಪ್ರಮಾಣದಲ್ಲಿ ಬೆರೆಸಿದ ಕೊಟ್ಟಿಗೆ ಗೊಬ್ಬರ ಕಾಂಪೋಸ್ಟ್ ಮತ್ತು ಮೇಲ್ಮಣ್ಣಿನ ಮಿಶ್ರಣವನ್ನು ಹಾಕಿ ತುಂಬಬೇಕು. ನಾಟಿ ಮಾಡಲು ಕೇವಲ ಕತ್ತಿ ಆಕಾರದ, ಸಮ ವಯಸ್ಸಿನ ಕಂದುಗಳನ್ನು ಬಳಸಬೇಕಲ್ಲದೆ, ಬಂಚಿಟಾಪ್ ನಂಜುರೋಗಮುಕ್ತ ತಾಯಿ ಗಿಡದಿಂದ ಕಂದುಗಳನ್ನು ಆಯ್ಕೆ ಮಾಡಬೇಕು.
ನಾಟಿ ಮಾಡಿದ ಕೂಡಲೇ ನೀರುಣಿಸಬೇಕು. ನಂತರ ಮಣ್ಣು ಮತ್ತು ಹವಾಗುಣಕ್ಕನುಸರಿಸಿ ಪ್ರತಿ 4-5 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಇದಲ್ಲದೆ, ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಗಡುಸುತನ ಹೊಂದಿರುವ ಎರಡು ತಿಂಗಳು ವಯಸ್ಸಿನ ಸಸಿಗಳನ್ನು ನಾಟಿಗೆ ಬಳಸಬಹುದಾಗಿದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಟ್ಯಾಕ್ಸಿ, ಗೂಡ್ಸ್ , ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿ ಮಾಡಲು 3 ಲಕ್ಷ ಸಹಾಯಧನ, ಸ್ವಾವಲಂಬಿ ಸಾರಥಿ ಯೋಜನೆ
ಗೃಹಲಕ್ಷ್ಮಿ ಹಣದ ಜಮಾ ಮೆಸೇಜ್ ಬಂದಿದೆಯಾ? ಜಮಾ ಸ್ಟೇಟಸ್ ಚೆಕ್ ಮಾಡಿ*
ರಾಜ್ಯ ಸರ್ಕಾರದಿಂದ ರೈತರಿಗೆ ದೊರೆಯುವ ಎಲ್ಲಾ ಯೋಜನೆಗಳ ಪಟ್ಟಿ