ಕರ್ನಾಟಕ ಜನತೆಗೆ ನಮಸ್ಕಾರ, ಈಗಾಗಲೇ ಗೃಹಲಕ್ಷ್ಮಿ ಹಣ ಜಮಾ ಆಗದೆ ಸುಮಾರು ಮೂರರಿಂದ ನಾಲ್ಕು ತಿಂಗಳಾಯಿತು. ಈ ಬಗ್ಗೆ ಎಚ್ಚೆತ್ತುಕೊಂಡು ಸರ್ಕಾರ ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಪ್ರೆಸ್ ಮೀಟಿಂಗ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ತಿಂಗಳಲ್ಲಿ ಮತ್ತೊಂದು ಕಂಚಿನ ಹಣವನ್ನು ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಬರೋಬ್ಬರಿ 28605 ಬೆನಿಫಿಶಿಯರಿಗಳನ್ನು ಹೊಂದಿರುವ ಯೋಜನೆ.
ಇನ್ನು ಮುಂದಿನ ತಿಂಗಳುಗಳಲ್ಲಿ ಉಳಿದ ಹಣವನ್ನು ಈ ಎಲ್ಲಾ ಬೆನಿಫಿಶರುಗಳಿಗೆ ನೀಡುವಂತೆ ಈಗಾಗಲೇ ಮೈಸೂರಿನಲ್ಲಿ ಪ್ರತಿಭಟನೆಯನ್ನು ಕೂಡ ಮಾಡಿದ್ದು ಈ ಕಾರಣದಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಈ ತಿಂಗಳ ಒಳಗಡೆ ಗೃಹಲಕ್ಷ್ಮಿ ಹಣವನ್ನು ಅವರ ಖಾತೆಗೆ ಡಿಬಿಟಿಯ ಮುಖಾಂತರ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯನ್ನು ಯಾರು ಯಾರಿಗೆ ಕೊಡುತ್ತಾರೆ ಎಂದು ಈ ಕೆಳಗೆ ತಿಳಿಯೋಣ.
ರಾಜ್ಯದ ಮನೆಯ ಯಜಮಾನತೆ ಎಂದರೆ ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಅಂದರೆ ಮಹಿಳೆಯರು ಆಡಳಿತವನ್ನು ಅಥವಾ ಮನೆಯ ಆ ಮಹಿಳೆಯರ ಹೆಸರಿಗೆ ಇದ್ದರೆ ಬಿಪಿಎಲ್ ಅಥವಾ ಎಪಿಎಲ್ ಎಂದು ನೋಡಲಾರದೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಈ ಹಣವನ್ನು ಜಮಾ ಮಾಡಿಕೊಳ್ಳಲಾಗುವುದು. ಆದರೆ ಸರಕಾರಿ ಕೆಲಸವನ್ನು ನಿಭಾಯಿಸುತ್ತಿರುವ ಹೆಣ್ಣು ಮಕ್ಕಳಿಗೆ. ಎಂದರೆ ಯಾವ ಮಹಿಳೆಯರು ಸರ್ಕಾರಿ ನೌಕರರಾಗಿದ್ದಾರೋ ಅವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಸಾವಿರಾರು ರೂಪಾಯಿ ಹಣಗಳು ಜಮಾ ಆಗುವುದಿಲ್ಲ.
ಅರ್ಥ ಸರ್ಕಾರಿ ನೌಕರನ್ನು ಹೊಂದಿರುವ ಮಹಿಳೆಯರನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಹಣವನ್ನು ಜವ ಮಾಡಿಕೊಳ್ಳಲಾಗುತ್ತದೆ. ಈಗ ನೀವು ಎಷ್ಟು ಕಂತಿನ ಹಣವನ್ನು ಜಮಾ ಮಾಡಿಕೊಂಡಿದ್ದೀರಾ ಮತ್ತು ಯಾವ ಖಾತೆಗೆ ನಿಮ್ಮ ವರಲಕ್ಷ್ಮಿ ಹಲವು ಜಮಾ ಆಗಿದೆ ಈ ಎಲ್ಲಾ ಮಾಹಿತಿಗಳನ್ನು ಕೇವಲ ಈ ಒಂದು ಯಾಪ್ ಮೂಲಕ ನೀವು ತಿಳಿದುಕೊಳ್ಳಬಹುದು. ಅದೇ ಡಿಬಿಟಿ ಆ್ಯಪ್.
7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹ
ಈಗಾಗಲೇ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಉಪ ವಿಭಾಗಾಧಿಕಾರಿ ಅವಿನಾಶ ಶಿಂಧೆ ಅವರಿಗೆ ಸಲ್ಲಿಸಿದರು. ರಾಜ್ಯವ್ಯಾಪಿ 6 ಲಕ್ಷ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹ ಸಂಘಟನೆ ನಮ್ಮದಾಗಿದೆ.
ಪ್ರಕೃತಿ ವಿಕೋಪ, ಪ್ರವಾಹ, ಕೋವಿನಂಥ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಜನ ಸಾಮಾನ್ಯರ ಕಲ್ಯಾಣ, ರಾಜ್ಯ ಸರ್ಕಾರದ ಯೋಜನೆಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ನಮ್ಮ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಬಂದಿದ್ದೇವೆ’ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ. ಸಂಕಷ್ಟದಲ್ಲಿ ಆರ್ಥಿಕ ನೆರವು, ಕಡಿಮೆ ನೌಕರರಿದ್ದರೂ ಪ್ರಾಮಾಣಿಕ ಸೇವೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು.
ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಜೊತೆಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಾಲ್ಲೂಕು ಘಟಕ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಪ್ರಧಾನ ಕಾರ್ಯದರ್ಶಿ ಗುರುಸಂಗಯ್ಯ ಗಣಾಚಾರಿ, ಮುಖಂಡರಾದ ಭೀಮಣ್ಣ ನಾಯಕ, ಶರಣಪ್ಪ ಸಾಹುಕಾರ, ಅಮರೇಶಪ್ಪ ಹೂನೂರು, ಡಾ.ರುದ್ರಗೌಡ ಪಾಟೀಲ, ಹನುಮಂತರಾವ್, ಸೋಮಶೇಖರ ನಾಡಗೌಡ್ರ, ಶಿವಪುತ್ರ ಬೆಳ್ಳಿಗನೂರು, ಮಂಜುನಾಥ ಪೂಜಾರಿ, ಪ್ರಭುಲಿಂಗ ಗದ್ದಿ, ಬಸಪ್ಪ ಹಂದ್ರಾಳ, ಚಾರ್ಲೆಸ್, ರಮೇಶ ಸಾಲಗುಂದಿ, ಸಾವಿತ್ರಮ್ಮ, ಶಾರದಾ, ನಾಗರತ್ನ ನೇತೃತ್ವ ವಹಿಸಿದ್ದರು.
ಆರ್ಯ-ವೈಶ್ಯ ನಿಗಮ : ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ
2023- 24ನೇ ಸಾಲಿಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ www.kacdc.karnataka.gov.in ಅಥವಾ ನಿಗಮದ ಸಹಾಯವಾಣಿ 9448451111 ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ತಿಪ್ಪನಗೌಡ ಕುಮಸಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಹುದ್ದೆಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆ
ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ, ಕೇರಳ ಪ್ರದೇಶ) ಬೆಂಗಳೂರು ಇವರು ಖಾಲಿ ಇರುವ ಸಿ.ಬಿ.ಎನ್ ನಲ್ಲಿ ಎಂಟಿಎಸ್ ಮತ್ತು ಹವಾಲ್ದಾರ್ ಸಿ.ಬಿ.ಐ.ಸಿ ನಲ್ಲಿ ಹವಾಲ್ದಾರ್ ಮತ್ತು ಇತರ ಎಂಟಿಎಸ್ ಹುದ್ದೆಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಯು ಅಕ್ಟೋಬರ್-ನವೆಂಬರ್ 2024 ರಲ್ಲಿ ನಡೆಯಲಿದೆ. ಪರೀಕ್ಷೆಯ ನಿಖರ ದಿನಾಂಕವನ್ನು ನಂತರ ಎಸ್‌ಎಸ್‌ಸಿ ವೆಬ್ ಸೈಟ್ ಮೂಲಕ ತಿಳಿಸಲಾಗುವುದು. ವಯೋಮಿತಿ: 01.08.2024ರಂತೆ ಸಿ.ಬಿ.ಎನ್ ನಲ್ಲಿ ಎಂಟಿಎಸ್ ಹುದ್ದೆಗೆ 18 ರಿಂದ 25 ವರ್ಷಗಳು. 01.08.2024 ರಂತೆ ಸಿ.ಬಿ.ಐ.ಸಿನಲ್ಲಿ ಹವಾಲ್ದಾರ್ ಮತ್ತು ಇತರ ಎಂಟಿಎಸ್ ಹುದ್ದೆಗಳಿಗೆ 18 ರಿಂದ 27 ವರ್ಷಗಳು.
ವಿದ್ಯಾರ್ಹತೆ
ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆ ( ಎಸ್‌ಎಸ್ಎಲ್‌ಸಿ/ 10 ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು. ನೇಮಕಾತಿ ವಿಧಾನ: ಎರಡು ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ. (ಹವಾಲ್ದಾರ್ ಹುದ್ದೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ) ಇರುತ್ತದೆ.
ಹುದ್ದೆಗಳ ಸಂಖ್ಯೆ
ಎಮ್.ಟಿ.ಎಸ್-ಸುಮಾರು-4,887 ಮತ್ತು ಹವಾಲ್ದಾರ್ ಸುಮಾರು-3,439 ಅರ್ಜಿ ಸ್ವೀಕರಿಸಲು ಅಂತಿಮ ಜುಲೈ 31 ಆಗಿದ್ದು ಆನ್ ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಂತರ್ಜಾಲ ಮಾಧ್ಯಮದಲ್ಲಿ ಎಸ್‌ಎಸ್‌ಸಿ ಮುಖ್ಯಾಲಯದ ಜಾಲತಾಣ https://ssc.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಮೈಸೂರು, ಶಿವಮೊಗ್ಗ, ಉಡುಪಿ. ಇಲ್ಲಿ ಪರೀಕ್ಷೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಎಸ್ ಎಸ್‌ಸಿ ಮುಖ್ಯ ಕಛೇರಿ ನವದೆಹಲಿಯ ವೆಬ್‌ಸೈಟ್ https://ssc.gov.in ಮತ್ತು ಕರ್ನಾಟಕ-ಕೇರಳದ ಜಾಲತಾಣ www.ssckkr.kar.nic. in ಗಮನಿಸಿ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಕೊಠಡಿ ಸಂ : 215, ಜಿಲ್ಲಾ ಆಡಳಿತ ಭವನ ಗದಗ ಇಲ್ಲಿ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ದೂರವಾಣಿ ಕಛೇರಿ ನಂ : 08372-220609.
ವಿದೇಶದಲ್ಲಿ ಉದ್ಯೋಗ ಅವಕಾಶ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರುರವರು ಸ್ವದೇಶಿ ಅಭ್ಯರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ದಿನಾಂಕ ಜುಲೈ 20 ರಂದು ಬೆಂಗಳೂರಿನಲ್ಲಿ ಮ್ಯಾಸನ್, ಕಾರ್ಪೆಂಟರ್, ಅಲ್ಯುಮಿನಿಯಂ ಫ್ಯಾಬ್ರಿಕೇಟರ್, ಫರ್ನಿಚರ್ ಕಾರ್ಪೆಂಟರ್, ಫರ್ನಿಚರ್ ಪೇಂಟರ್, ಪ್ಲಂಬರ್, ಎಸಿ ಟೆಕ್ನಿಷಿಯನ್. ಹೆಲ್ಪರ್ ಹುದ್ದೆಗಳಿಗಾಗಿ ನೇರ ಸಂದರ್ಶನವನ್ನು ಏರ್ಪಡಿಸಿದ್ದು, ಇಂಗ್ಲೀಷ್ ಅಥವಾ ಹಿಂದಿ ಭಾಷೆಯ ಜ್ಞಾನವನ್ನು ಹೊಂದಿರುವ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ವ್ಯಾಟ್ಸ್ ಆಫ್ 9606492213/9606492214 ಗೆ ವಿದ್ಯಾರ್ಹತೆಯ ಬಯೋಡೆಟಾವನ್ನು ಕಳುಹಿಸಿ ಹಾಗೂ ದೂರವಾಣಿ ಮೂಲಕ ಸಂಪರ್ಕಿಸಿದ ನಂತರವೇ, ಇಂಟರ್ ನ್ಯಾಷನಲ್ ಮೈಗ್ರೇಷನ್ ಸೆಂಟರ್ -ಕರ್ನಾಟಕ, 4 ಮಹಡಿ, ಕಲ್ಯಾಣ ಸುರಕ್ಷಾ ಭವನ, ಐ.ಟಿ.ಐ ಕಾಲೇಜ್ ಕ್ಯಾಂಪಸ್, ಡೈರಿ ಸರ್ಕಲ್, ಭನ್ನೇರುಘಟ್ಟ ಮುಖ್ಯ ರಸ್ತೆ. ಬೆಂಗಳೂರು-560029 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಗದಗ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ. ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಹೊಸ ತಂತ್ರಜ್ಞಾನಗಳ ಮೂಲಕ ಮೀನು ಕೃಷಿ ಲಾಭ ಗಳಿಸಬಹುದು
ರೈತರು ಕೃಷಿಯನ್ನು ಮಾತ್ರ ಅವಲಂಬಿಸದೇ ಪರ್ಯಾಯವಾಗಿ ಹೊಸ ತಂತ್ರಜ್ಞಾನಗಳ ಮೀನು ಕೃಷಿಯನ್ನು ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಮೀನು ಒಂದು ಉತ್ಕೃಷ್ಟ ಆಹಾರವಾಗಿದ್ದು ಪ್ರೋಟೀನ್ ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ತಿಳಿಸಿದರು. ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಶುಕ್ರವಾರ ಮೀನು ಕೃಷಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕೆ ಉಪನಿರ್ದೆಶಕ ಶರಣಪ್ಪ ಬಿರಾದಾರ ಸರ್ವರನ್ನು ಸ್ವಾಗತಿಸಿ ಇಲಾಖೆಯ ಯೋಜನೆಗಳ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ಒದಗಿಸಿದರು. ಮುಂಡರಗಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ವಿನಾಯಕ ಬೇವಿನಹಳ್ಳಿ ಹುಲಕುಂದ, ಚಂದ್ರಶೇಖರ ಕೋಟಿ, ಮಹೇಶ ಹಟ್ಟಿ, ಬಸವರಾಜ ಪವಾರ ಮತ್ತಿತರರು ಇದ್ದರು.
ಕೂಲಿ ಕೆಲಸಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ
ತಾಲೂಕಿನ ಹಳೆಕೋಟೆ ಗ್ರಾಮದ ಕೃಷಿ ಕೂಲಿ ಕಾರ್ಮಿಕರು ನರೇಗಾ ಯೋಜನೆ ಅಡಿ ಕೆಲಸ ನೀಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆದಿದೆ. ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಗೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲವೆಂದು ಮೇಟಿಗಳ ನೇತೃತ್ವದಲ್ಲಿ ಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಕೂಲಿ ಕೆಲಸ ನೀಡಬೇಕು. ಇಲ್ಲದಿದ್ದರೆ ಕೆಲಸ ಅರಸಿ ಮಹಾನಗರಗಳಿಗೆ ವಲಸೆ ಹೋಗಬೇಕಾಗುತ್ತದೆ. ಆದ್ದರಿಂದ ನರೇಗಾ ಯೋಜನೆ ಹರಿಜನ ಅಡಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕೆಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ಹಾಗೂ ತಮಗೆ ಬೇಕಾದ ಮೇಟಿಗಳಿಗೆ ಉದ್ಯೋಗದ ಚೀಟಿ ನೀಡುತ್ತಿದ್ದಾರೆ ಎಂದು ಗ್ರಾಮದ ಮೇಟಿ ಬಿ ಮಲ್ಲಿಕಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒ ರಾಜೇಶ್ವರಿ ಮಾತನಾಡಿ, ನಮ್ಮಗ್ರಾಮ ಪಂಚಾಯಿತಿಯಲ್ಲಿ 1997 ಕುಟುಂಬಗಳು ಜಾಬ್ ಕಾರ್ಡ್ ನೊಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ಶೇಕಡ 87 ರಷ್ಟು ಈಗಾಗಲೇ ಕೂಲಿ ಕೆಲಸ ನೀಡಲಾಗಿದೆ. ಆದರೂ ಕೆಲವು ಮೇಟಿಗಳು ಕಾರ್ಮಿಕರನ್ನು ಪುಸಲಾಯಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಪಿಡಿಓ ರಾಜೇಶ್ವರಿ ತಿಳಿಸಿದ್ದಾರೆ. ಮೇಟಿಗಳಾದ ಶಿವಕುಮಾರ, ಹುಲಗಪ್ಪ, ಜಿ.ಶಿವಕುಮಾರ, ಕಾರ್ಮಿಕರಾದ ಕಾಳಮ್ಮ, ಮಾರೆಮ್ಮ, ಈರಮ್ಮ. ಹನುಮಂತಮ್ಮ, ದುರ್ಗಮ್ಮ, ಮಾಳಮ್ಮ ಇನ್ನಿತರರು ಇದ್ದರು.