ಆತ್ಮೀಯ ರೈತ ಬಾಂಧವರೇ, ರೈತರು ಹೊಂದಿರುವ ಪಂಪ್ ಸೆಟ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿ ಬಿಟ್ಟಿದೆ. ನಮ್ಮ ರಾಜ್ಯದಲ್ಲಿ ನೀರಾವರಿಯಲ್ಲಿ ಕೃಷಿ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಗೆ ಸಂಬಂಧಿಸಿದ ಗ್ರಾಹಕರು ತಮ್ಮ ಆಧಾರ್ ನಂಬರ್ ಗೆ ಜೋಡಣೆ ಮಾಡುವುದು ಅವಶ್ಯ ಮಾಡಿದ್ದಾರೆ. ಇಲ್ಲದಿದ್ದರೆ ಸರ್ಕಾರವು ಈ ಕೃಷಿ ಪಂಪ ಸೆಟ್ ಗಳಿಗೆ ನೀಡುವ ಸಹಾಯಧನವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆದೇಶ ಮಾಡಿದ್ದಾರೆ. ಆದಕಾರಣ ರೈತರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ ಕಾರಣ ರೈತರು 6 ತಿಂಗಳ ಒಳಗಾಗಿ ನಿಮ್ಮ ಪಂಪ್ಸೆಟ್ ಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಮತ್ತು ಸಹಾಯಧನವನ್ನು ಪಡೆಯುತ್ತಾ ಹೋಗಿರಿ.
ಇದರ ವಿರುದ್ಧ ರೈತ ಸಂಘದ ನಾಯಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಸರ್ಕಾರ ಬಂದರೂ ನಾವು ಎಂದಿಗೂ ನಿಮ್ಮ ತೀರ್ಮಾನವನ್ನು ಒಪ್ಪುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಇದು ರೈತರ ಬಸುವ ಕೃಷಿ ಪಂಸತ್ತಿಗಾಗಿ ನೀಡುತ್ತಿರುವ ಉಚಿತ ವಿದ್ಯುತ್ತನ್ನು ಕಸಿದುಕೊಳ್ಳಲು ಒಂದು ಉಪ ಎಂದು ಅವರಿಗೆ ತಿಳಿದಿದೆ. ಒಂದು ವೇಳೆ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದು ನಿಮಗೆ ಇದರಿಂದ ಅಷ್ಟು ನಷ್ಟವಾಗುವುದಿಲ್ಲ. ನಮ್ಮ ರಾಜ್ಯದ ಕಬ್ಬು ಬೆಳೆಗಾರರಿಗಂತು ಇದನ್ನು ತಡೆಯುವುದು ಮುಖ್ಯವಾಗಿಬಿಟ್ಟಿದೆ.
ಸರ್ಕಾರದ ಉದ್ದೇಶವೇನೆಂದರೆ, ರೈತರ ಈ ಪಂಪ್ಸೆಟ್ಟುಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ. ಯಾವ ರೈತರು ಶ್ರೀಮಂತರಿದ್ದಾರೋ ಅವರಿಗೆ ಈ ಸಹಾಯಧನವನ್ನು ರದ್ದು ಮಾಡಬೇಕೆಂಬುದೇ ಅವರ ಇಚ್ಛೆಯಾಗಿದೆ. ಹೀಗೆ ಮಾಡಿ ಅವರಿಂದ ಈ ಸೌಲಭ್ಯಗಳನ್ನು ಕಿತ್ತುಕೊಂಡು ನಂತರ ಅವರಿಗೆ ಮೀಟರ್ ಅನ್ನು ಅಳವಡಿಸಿ ರೈತರಿಂದ ಶುಲ್ಕ ಪಾವತಿಸಿಕೊಳ್ಳಬೇಕೆಂಬುದೇ ಅವರ ಉದ್ದೇಶವಾಗಿದೆ. ಆದಕಾರಣ ರೈತರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಅವಶ್ಯವಾಗಿ ಬಿಟ್ಟಿದೆ. ಸರ್ಕಾರದ ಇನ್ನೊಂದು ದೊಡ್ಡ ಉದ್ದೇಶವೇನೆಂದರೆ, ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಮಾಡುವುದು.