ಆತ್ಮೀಯ ನಾಗರಿಕರೇ ಈಗ ನಿಮ್ಮ ಎಲ್ಲಾ ದಾಖಲಾತಿಗಳಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅವಶ್ಯಕತೆವಾಗಿದೆ. ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ನೀವು ಲಿಂಕ್ ಮಾಡಿದರೆ ಮಾತ್ರ ನಿಮಗೆ ಅದರಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಹೇಗೆ ಮಾಡುವುದು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಆಧಾರ್ ಕಾರ್ಡಿಗೆ ರೇಷನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/lpg/ Lises ನೇರವಾಗಿ ಆಧಾರ್ ಜೊತೆಗೆ ರೇಷನ್ ಕಾರ್ಡನ್ನು ಲಿಂಕ್ ಮಾಡುವ ಒಂದು ವೆಬ್ ಸೈಟ್ ಗೆ ಕರೆದುಕೊಂಡು ಹೋಗುತ್ತದೆ. ನೀವು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಭೇಟಿಕೊಡುತ್ತೀರಿ. ಅಲ್ಲಿ ನೀವು ಕಂದಾಯ ವಲಯವಾರು ಮೂರು ಭಾಗಗಳನ್ನು ನೋಡುತ್ತಿರಿ. ಆ ಮೂರು ಭಾಗದಲ್ಲಿ ನಿಮ್ಮ ಜಿಲ್ಲೆ ಯಾವ ಭಾಗದಲ್ಲಿ ಬರುತ್ತದೆಯೋ ಅದು ನೀವು ಆಯ್ಕೆ ಮಾಡಿಕೊಂಡು ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಒಂದು ಪುಟ ತೆರೆಯುತ್ತದೆ. ಅಲ್ಲಿ ನೀವು UID Linking for RC Members ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಮುಂದೆ ಒಂದು ಪುಟವು ತೆರೆಯುತ್ತದೆ. ಇಷ್ಟದ ಮೇಲೆ ನೀವು ಅಲ್ಲಿ ನಿಮಗೆ ಕಾಣುವ ಎರಡು ಆಯ್ಕೆಗಳನ್ನು ನೋಡುತ್ತೀರಿ. ಆಯ್ಕೆಗಳು Aadhaar Number ಮತ್ತು Virtul Id ಇರುತ್ತವೆ. ಅದರಲ್ಲಿ ನೀವು ಆಧಾರ್ ಕಾರ್ಡ್ ಮೇಲೆ ಟಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದನೆ ಮಾಡಬೇಕು. ಕೊನೆಗೆ GO ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು.
ಇಷ್ಟೆಲ್ಲಾ ಆದಮೇಲೆ ಅಲ್ಲಿ ನಿಮಗೆ OTP ಎಂಬ ಆಯ್ಕೆಯು ಕಂಡುಬರುತ್ತದೆ. ಆ OTP ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲಿಗೆ ಒಂದು OTP ಬರುತ್ತದೆ. ಆ OTPಯನ್ನು ಅಲ್ಲಿ ನಮೂದಿಸಿ GO ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ Aadhar card number linked successfully ಎಂಬ ಸಂದೇಶವು ನಿಮಗೆ ಬರುತ್ತದೆ. ಆಗ ಸಂಪೂರ್ಣವಾಗಿ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಒಂದಕ್ಕೊಂದು ಲಿಂಕ್ ಆಗುತ್ತದೆ.
*ಬಿಪಿಎಲ್ ಕಾರ್ಡ್ ಇರುವ ಜನರಿಗೆ 170 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ*
*ಉದ್ಯೋಗ ಖಾತ್ರಿ ಯೋಜನೆ ಅಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನ*
*ನಿಮ್ಮ ಹೊಲದ ಸರ್ವೆ ನಂಬರ್ ಇಂದ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಿರಿ*
*ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ಕಿಟ್ ಗಳನ್ನು ನೀಡುತ್ತಿದ್ದಾರೆ*