Breaking
Thu. Dec 19th, 2024

ರಾಜ್ಯ ಸರ್ಕಾರದಿಂದ ರೈತರಿಗೆ ದೊರೆಯುವ ಎಲ್ಲಾ ಯೋಜನೆಗಳ ಪಟ್ಟಿ

Spread the love

ರೈತರಿಗೆ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ಸಾಲಗಳನ್ನು ಕೊಡಲು ನಿರ್ಧಾರ ಮಾಡಿದೆ ಅಷ್ಟೇ ಅಲ್ಲದೆ ಶೇಕಡಾ 3 ಬಡ್ಡಿ ದರದಲ್ಲಿ 10 ಲಕ್ಷ ಸಾಲವನ್ನು ನೀಡುತ್ತಿದೆ. ಈಗಿನ ಸರಕಾರವು ಈ ಮೂರು ಲಕ್ಷ ಸಾಲವನ್ನು 5 ಲಕ್ಷದವರೆಗೆ ಏರಿಕೆ ಮಾಡಿದೆ.

ಈ ವರ್ಷದಲ್ಲಿ ನಮ್ಮ ರಾಜ್ಯ ಸರ್ಕಾರವು 33 ಲಕ್ಷ ರೈತರಿಗೆ ಸಾಲವನ್ನು ನೀಡಿದೆ. ಇಷ್ಟೇ ಅಲ್ಲದೆ ಈ ವರ್ಷದಲ್ಲಿ ಒಟ್ಟಾರೆ ನಮ್ಮ ಸರ್ಕಾರವು ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಲು ಒಂದು ಯೋಜನೆಯನ್ನು ತಂದು ಅದರಲ್ಲಿ 7900 ಕೋಟಿ ಸಾಲ ಮನ್ನಾವನ್ನು ಮಾಡಿದ್ದಾರೆ.

ಈಗಿನ ಸರ್ಕಾರವು ಅಗ್ರಿ ಇನ್ ಪ್ರಾ ಫಂಡ್ ಯೋಜನೆ ಜಾರಿಗೆ ತಂದು ಅದರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗಳನ್ನು ಸೇವ ಕೇಂದ್ರವನ್ನಾಗಿ ಪರಿವರ್ತನೆ ಮಾಡಲು ಮತ್ತು ರೈತರಿಗೆ ಸಹಾಯಧನವನ್ನು ನೀಡಲು ನಿರ್ಧಾರ ಮಾಡಿ ಈಗಾಗಲೇ ಹಣ ಬಿಡುಗಡೆ ಮಾಡಿದೆ. ನಮ್ಮ ರಾಜ್ಯದಲ್ಲಿರುವ 6,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಟ್ಟು 200 ಕೋಟಿ ವೆಚ್ಚದ ಏಕರೂಪ ತಂತ್ರಾಂಶ ಗಣಕೀಕರಣ ಮಾಡಲು ನಮ್ಮ ಸರ್ಕಾರವು ತುಂಬಾ ಸಹಾಯಧನವನ್ನು ನೀಡಿದೆ.

ಇಷ್ಟೇ ಅಲ್ಲದೆ ನಮ್ಮ ಸರ್ಕಾರವು ಬೂಸಿರಿ ಎಂಬ ಯೋಜನೆ ಅಡಿಯಲ್ಲಿ ಒಟ್ಟು 10 ಲಕ್ಷ ರೈತರಿಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಇದರ ಜೊತೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಕೃಷಿ ಯಂತ್ರಗಳಿಗೆ ಡೀಸೆಲ್ ಅನ್ನು ಹಾಕಿಸಲು 1250 ಹಣವನ್ನು ಅವರ ಖಾತೆಗೆ ಜಮಾ ಮಾಡಲು ಸರ್ಕಾರವು ತೀರ್ಮಾನ ಮಾಡಿ ಈಗಾಗಲೇ ತುಂಬಾ ಹಣವನ್ನು ಜಮಾ ಮಾಡಿದೆ.

ನಮ್ಮ ರಾಜ್ಯದ ರೈತರು ಈ ಯೋಜನೆಗಳ ಲಾಭ ಪಡೆಯಲು ಏನನ್ನು ಮಾಡಬೇಕೆಂದು ತಿಳಿಯಿರಿ?

ರೈತರ ಹತ್ತಿರ ತಮ್ಮ ಹೊಲದ ಪಹಣಿ ಇರಬೇಕು. ರೈತರು ಹಿಂದೆ ಈ ಯೋಜನೆಗಳ ಲಾಭವನ್ನು ಪಡೆದಿರಬಾರದು. ಇಷ್ಟೇ ಅಲ್ಲದೆ ರೈತರ ಹತ್ತಿರ ತಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಬಂದಿರುವ ಮೊಬೈಲ್ ನಂಬರ್ ಅನ್ನು ಅವರು ಚಾಲ್ತಿಯಲ್ಲಿಟ್ಟಿರಬೇಕು. ರೈತರು‌ಫ್ರೂಟ್ಸ್ ಐಡಿ ಹೊಂದುವುದು ತುಂಬಾ ಅವಶ್ಯಕವಾಗಿದೆ. ನಮ್ಮ ರೈತರು ತಮ್ಮ ಹತ್ತಿರದ ಐದು ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆಗಳ ಪರಿಶೀಲನೆ ಮಾಡುವುದು ಅವಶ್ಯಕ.

*ಈ ಆ್ಯಪ್ ಮೂಲಕ ನಿಮಗೆ ಎಷ್ಟು ರೇಷನ್ ಬರುತ್ತದೆ ಎಂದು ತಿಳಿಯಿರಿ*

ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ಈ ಔಷಧಿ ಬಳಸಿ, ಡಾರ್ಮೋಲಿನ್ ಮತ್ತು ಎಕರೆ ಶೀಲ್ಡ್

317.65 ಕೋಟಿ ವೆಚ್ಚದಲ್ಲಿ ಕಾಮಗಾರಿ 4500 ರೈತರು ಇದರ ಫಲಾನುಭವಿಗಳು, ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಕೆ

Related Post

Leave a Reply

Your email address will not be published. Required fields are marked *