ಕರ್ನಾಟಕ ಸರ್ಕಾರ ಕೃಷಿ ಇಲಾಖೆ. ಕೃಷಿ ಇಲಾಖೆಯಲ್ಲಿನ ಕಾರ್ಯಕ್ರಮಗಳ ಹಾಗೂ ಪ್ರಗತಿಯ ಪಕ್ಷಿನೋಟ, 2024-25 ಸಾಲಿನ ಘೋಷಿಸಿರುವ ನೂತನ ಯೋಜನೆಗಳು.
ನೂತನ ಯೋಜನೆಗಳು.
• ಕರ್ನಾಟಕ ರೈತ ಸಮೃದ್ಧಿ ಯೋಜನೆ.
• ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ.
• ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ.
• ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹಾಗೂ ಮಾರುಕಟ್ಟೆಗೆ ನಮ್ಮ ಮಿಲ್ಲೆಟ್ ಕಾರ್ಯಕ್ರಮ.
• ಬೆಂಗಳೂರಿನ ಆರ್.ಕೆ. ಶಾಲಾದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ತಾಂತ್ರಿಕತೆಗಳ ಪಸರಿಸುವ ಜ್ಞಾನ ಕೇಂದ್ರದ ಅಭಿವೃದ್ಧಿ.
• ರಾಜ್ಯವ್ಯಾಪಿ ಇ ಸ್ಯಾಪ್ ತಂತ್ರಾಂಶದ ವಿಸರಣೆ.
ಗುಣಮಟ್ಟದ ಬಿತ್ತನೆ ಬೀಜದ ವಿತರಣೆ
• 6.12 ಲಕ್ಷ ಕ್ವಿಂಟಲ್
• 13.09 ಲಕ್ಷ ಫಲಾನುಭವಿಗಳು
• ರೂ 155.36 ಕೋಟಿ ಸಹಾಯಧನ.
ಕೃಷಿ ಯಾಂತ್ರೀಕರಣ
• 64,059 ಯಂತ್ರೋಪಕರಣಗಳ ವಿತರಣೆ
• ರೂ.441.97 ಕೋಟಿ ಸಹಾಯಧನ.
ಸೂಕ್ಷ್ಮ ನೀರಾವರಿ
•2.34 ಲಕ್ಷ ರೈತರಿಗೆ ರೂ.502 ಕೋಟಿ ಸಹಾಯಧನ.
ಬೆಳೆವಿಮೆ
ಬೆಳೆ ನಷ್ಟ ಹೊಂದಿದ 8 ಲಕ್ಷ ರೈತರಿಗೆ ರೂ.600 ಕೋಟಿ ಪರಿಹಾರ ಈಗಾಗಲೆ ನೀಡಿದ್ದು, ಇನ್ನೂ ಹೆಚ್ಚಿನ ರೈತರಿಗೆ ಪರಿಹಾರ ನೀಡಲಾಗುವುದು.
ಕೃಷಿ ಭಾಗ್ಯ ಯೋಜನೆ
• 10,000 ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ.
ಹೈಟೆಕ್ ಹಾರ್ವೆಸ್ಟರ್ ಹಬ್
• 100 ಹೈಟೆಕ್ ಹಾರ್ವೆಸ್ಟರ್ ಹಬ್ ಗಳ ಸ್ಥಾಪನೆಗೆ ರೂ.50 ಕೋಟಿ
ತೊಗರಿ ನೆಟ್ ರೋಗ
• ಕಲಬುರಗಿ, ಬೀದರ್, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ 2.98 ಲಕ್ಷ ರೈತರಿಗೆ ರೂ.223 ಕೋಟಿ ಪರಿಹಾರ ನೀಡಿದೆ.
ಅಂತರರಾಷ್ಟ್ರೀಯ ಸಿರಿದಾನ್ಯ ಮತ್ತು ಸಾವಯವ ಮೇಳ-2024
• 2 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರ ಭೇಟಿ, 41 ಒಡಂಬಡಿಕೆಗಳು, ರೂ.150 ಕೋಟಿ ಒಪ್ಪಂದ.
ಕೃಷಿ ನವೋದ್ಯಮ
• 48 ನವೋದ್ಯಮಗಳ ಸ್ಥಾಪನೆಗೆ ರೂ.10 ಕೋಟಿ.
ರೈತಸಿರಿ
• 8500ಕ್ಕೂ ಹೆಚ್ಚಿನ ರೈತರಿಗೆ ರೂ.8.56 ಕೋಟಿ ಪ್ರೋತ್ಸಾಹ ಧನ.
ತರಬೇತಿ
• 1ಲಕ್ಷಕ್ಕೂ ಹೆಚ್ಚಿನ ರೈತರಿಗೆ ಕೃಷಿ ತಾಂತ್ರಿಕತೆಗಳ ತರಬೇತಿ.
ಹುದ್ದೆಗಳ ಭರ್ತಿ
• ಕೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಲು 750 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ.
ರೈತ ಕರೆ ಕೇಂದ್ರ ಸ್ಥಾಪನೆ
• ಪರಿಕರಗಳ ವಿತರಣೆಯಲ್ಲಿ QR Code ಅಳವಡಿಕೆ
100 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಚಿಂತನೆ
ರಾಜ್ಯದ ಎಲ್ಲಾ ಶಾಸಕರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಒತ್ತಡ ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರದಿಂದ 100 ಹೊಸ ಹಿಂದುಳಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.
ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರದ ವಿಧಾನಸಭಾ ಪ್ರಶ್ನಿತರ ಕಲಾಪದ ವೇಳೆ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು. ಬಳಹಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದೆ ಹಾಗೆ ಉಳಿಯುತ್ತಾರೆ. ಹಾಗಾಗಿ ಈ ಬಾರಿ ವಿದ್ಯಾರ್ಥಿ ನಿಲಯಗಳ ಸಂಖ್ಯಾ ಬಲದ ಶೇ.25 ರಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾಸಿರಿ ಯೋಜನೆಯನ್ನು ಜಾರಿ ಮಾಡಿದೆ. ಪ್ರಸಕ್ತ ವರ್ಷದಲ್ಲಿ ರೂ.38 ಕೋಟಿಗಳನ್ನು ವಿದ್ಯಾಸಿರಿಯಡಿ ನೀಡಲಾಗಿದೆ ಎಂದರು. ಉಡುಪಿ ಜಿಲ್ಲೆಯಲ್ಲಿ 18 ಮೆಟ್ರಿಕ್ ಪೂರ್ವ, 25 ಮೆಟ್ರಿಕ್ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 4684 ವಿದ್ಯಾರ್ಥಿಗಳಿಗೆ ಪ್ರವೇಕಾಶ ಕಲ್ಪಿಸಲಾಗಿದೆ. ಜುಲೈ ತಿಂಗಳಿನಲ್ಲಿ ಉಡುಪಿ ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲಿ 125 ಸಂಖ್ಯಾಬಲದ ಮೆಟ್ರಿಕ್ ನಂತರ ಬಾಲಕಿರ ವಿದ್ಯಾರ್ಥಿನಿಲಯ ಮಂಜೂರು ಮಾಡಲಾಗಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಡಿ ಅವರ ಪ್ರಶ್ನೆಗೆ ಸಚಿವ ಶಿವರಾಜ್ ಎಸ್ ತಂಗಡಗಿ ಉತ್ತರಿಸಿದರು.
ಶಾಸಕ ಧೀರಜ್ ಮುನಿರಾಜು, ಪುಟ್ಟರಂಗಶೆಟ್ಟಿ, ಎಂ.ಚಂದ್ರಪ್ಪ ಮಾತನಾಡಿ ನಿಗಮ ಮಂಡಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದರು. ಕಳೆದ ಸರ್ಕಾರದ ಅವಧಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 10 ಹೊಸ ನಿಗಮಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ಆದರೆ ಈ ನಿಗಮಗಳಿಗೆ ಅನುದಾನವನ್ನು ನೀಡಿರಲಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದೆನೆ. ಮುಂದಿನ ವರ್ಷದಲ್ಲಿ ಈ ನಿಗಮಗಳಿಗೆ ಅನುದಾನ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.