ಆತ್ಮೀಯ ನಾಗರಿಕರೇ ಸರ್ಕಾರವು ಜನರ ಹಿತ ದೃಷ್ಟಿಯಿಂದ ಅವತ್ತು ಪ್ರಾರಂಭ ಮಾಡಿ ಅವರ ಜೀವನವನ್ನು ನಡೆಸಲು ಹಲವಾರು ಯೋಜನೆಗಳನ್ನು ತಂದಿದೆ. ಈಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಭೋಜನಾಲಯ ಕೇಂದ್ರ ಉದ್ಯೋಗ ಮಾಡಲು ಸಹಾಯಧನ ಮತ್ತು ಸಾಲ ಮತ್ತು ವಿಭೂತಿ ನಿರ್ಮಾಣ ಘಟಕ ನಿರ್ಮಾಣ ಮಾಡಲು ಸಾಲ ಮತ್ತು ಸಹಾಯಧನ ನೀಡಲು ಮುಂದಾಗಿದೆ.
ಭೋಜನಾಲಯ ಕೇಂದ್ರ ಉದ್ಯೋಗ ಮಾಡಲು ಸಹಾಯಧನ ಮತ್ತು ಸಾಲ
ಈ ಸಮುದಾಯದ ಜನರಿಗೆ ಖಾನಾವಳಿಯನ್ನು ಪ್ರಾರಂಭ ಮಾಡಲು ಸರ್ಕಾರವು ಎಷ್ಟು ಸಾಲ ಮತ್ತು ಸಹಾಯಧನವನ್ನು ನೀಡುತ್ತಾರೆ ಎಂದು ತಿಳಿಯೋಣ. ಖಾನಾವಳಿ ಅಥವಾ ಹೋಟೆಲ್ ಪ್ರಾರಂಭ ಮಾಡಲು ನಾವು ಉದ್ಯೋಗಕ್ಕೆ ಬೇಕಾಗಿಲ್ಲ ಘಟಕ ವೆಚ್ಚವನ್ನು ನೀಡಲು ಸರ್ಕಾರ ಮುಂದಾಗಿದೆ. ಹೋಟೆಲ್ ಅಥವಾ ಖಾನಾವಳಿ ಉದ್ಯೋಗ ಕೈಗೊಳ್ಳಲು 5 ಲಕ್ಷ ಇದರಲ್ಲಿ 4,60,000 ರೂಪಾಯಿಗಳ ಸಾಲ ಮತ್ತು 40,000 ರೂಪಾಯಿಗಳ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಈ ಯೋಜನೆಯ ಬದುಪಯೋಗವನ್ನು ಪಡಿಸಿಕೊಳ್ಳಲು ಅವರ ಹತ್ತಿರ 20× 30 ಅಳತೆಯ ಜಾಗವನ್ನು ಹೊಂದಿರಬೇಕು.
ವಿಭೂತಿ ನಿರ್ಮಾಣ ಘಟಕ ನಿರ್ಮಾಣ ಮಾಡಲು ಸಾಲ ಮತ್ತು ಸಹಾಯಧನ
ಈ ಸಮುದಾಯದ ಜನರು ವಿಭೂತಿ ನಿರ್ಮಾಣ ಮಾಡುವಂತಹ ಘಟಕವನ್ನು ಸ್ಥಾಪ ನೆ ಮಾಡಿ ಸರ್ಕಾರವು ನೀಡಲು. ಅರ್ಜಿ ಸಲ್ಲಿಸುವ ಜನರಿಗೆ 18 ರಿಂದ 55 ವಯಸ್ಸು ಆಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯವು 3.5 ಲಕ್ಷ ರೂಪಾಯಿಗಳ ಒಳಗೆ ಇರಬೇಕು. ವಿಭೂತಿ ನಿರ್ಮಾಣವನ್ನು ಮಾಡುವಂತಹ ಘಟಕಕ್ಕೆ 4 ಲಕ್ಷ ರೂಪಾಯಿ ಇದ್ದರೆ ಅದರಲ್ಲಿ 3,60,000 ರೂಪಾಯಿಗಳ ಸಾಲ ಮತ್ತು 40,000 ರೂಪಾಯಿಗಳ ಸಹಾಯಧನ ಶೇ.3 ರ ಬಡ್ಡಿದರದಲ್ಲಿ ನೀಡುತ್ತೇವೆ ಎಂದು ಸರ್ಕಾರವು ಘೋಷಣೆ ಮಾಡಿದೆ.
2023-24ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ನಿಗಮದ ಯೋಜನೆಗಳು ವೀರಶೈವ-ಲಿಂಗಾಯತ ಜಾತಿ ಹಾಗೂ ತಿಗೆ ಸೇರಿದ ಸಮುದಾಯದ ಜನರ (ಪವರ್ಗ-3B) ಅಭಿವೃದ್ಧಿಗಾಗಿ 2013-14ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/10/2023.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://kvldcl.karnataka.gov.in/
ಅಲ್ಲಿ ಬೇಕಾಗುವ ಎಲ್ಲಾ ದಾಖಲಾತಿಗಳನ್ನು ನೀಡಿ. ಅಕ್ಟೋಬರ್ 30ರವರೆಗೆ ಅರ್ಜಿಯನ್ನು ಸಲ್ಲಿಸಿ. ಕೂಡಲೇ ನಿಮ್ಮ ಹತ್ತಿರದ ಸೇವಾ ಸಿಂಧುಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು. ನಿಗಮವು ಅನುಷ್ಠಾನಗೊಳಿಸುವ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಅಧ್ಯಕ್ಷರು/ ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್ ಲೈನ್‌ಲ್ಲಿ ಅರ್ಜಿಯನ್ನು ಸಲ್ಲಿಸುವುದು, ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ. ಕಳೆದ ಮೂರು ವರ್ಷದಿಂದ ಸರ್ಕಾರದ ಯಾವುದೇ ನಿಗಮ/ ಇಲಾಖೆಗಳಲ್ಲಿ ಯೋಜನೆಯ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ https://kvldcl.karnataka.gov.in ಅಥವಾ ನಿಗಮದ ದೂರವಾಣಿ ಸಂಖ್ಯೆ 18022865522, 9000012351 ಅನ್ನು ಸಂಪರ್ಕಿಸುವುದು ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.
📲ಈ ಆಪ್ ಮೂಲಕ ಕೇವಲ ಐದು ನಿಮಿಷದಲ್ಲಿ ನಿಮ್ಮ ಹೊಲವನ್ನು ಎಷ್ಟು ಇದೆ ಎಂದು ಅಳತೆ ಮಾಡಿ*
ನಿಮ್ಮ ಮೊಬೈಲ್ ಕಳೆದುಹೋದರೆ ಮೊದಲು ಏನು ಮಾಡಬೇಕು, ಹೇಗೆ ದೂರು ಕೊಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ*
ಕಾವೇರಿ UPDATE🌊🌊, ಸುಪ್ರೀಂ, ಪ್ರಾಧಿಕಾರಗಳ ಆದೇಶ ಪಾಲಿಸುತ್ತಲೇ ಕಾವೇರಿ ನೀರು ಉಳಿಸಿಕೊಳ್ಳಲು ಸರಕಾರದ ಪ್ರಯತ್ನ*