ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಜನರು ಕೃಷಿ ಮಾಡಲು ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಈಗ ಅಂಚೆ ಕಚೇರಿಯಲ್ಲಿಯೇ ರೈತರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕೃಷಿ ಸಾಲಗಳು ಸಿಗುತ್ತದೆ. ಈಗ ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ಅಂಚೆ ವೃತ್ತವು ರೈತರಿಗೆ ಸಾಲ ಸೌಲಭ್ಯ ನೀಡುತ್ತಿದೆ. ದೂರದ ಹಳ್ಳಿಗಳ ಅನೇಕ ರೈತರಿಗೆ ಅಂತಹ ಸಾಲಗಳು ಲಭ್ಯವಿವೆ ಎಂದು ತಿಳಿದಿರುವುದಿಲ್ಲ ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಸ್ಥಳೀಯ ಅಂಚೆ ಕಚೇರಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂಚೆ ಕಚೇರಿಯಲ್ಲಿಯೇ ಮಾಹಿತಿ ಸಿಗುವುದರಿಂದ ಮಧ್ಯವರ್ತಿಗಳ ಕಾಟವಿಲ್ಲದೇ ರೈತರು ನೆರವು ಪಡೆಯಬಹುದು. ನಿಮಗೆ ತಿಳಿದಿರಬಹುದು ಅಂಚೆ ಇಲಾಖೆಯ ಹಲವಾರು ಉಳಿತಾಯ ಯೋಜನೆಗಳು, ವಿಮಾ ಯೋಜನೆಗಳಿಗೆ ಪ್ರಸಿದ್ಧ ಆಗಿದೆ.
ಯಾವ ಯಾವ ಸಾಲಗಳು ಲಭ್ಯ ಇವೆ?
ಟ್ರಾಂಕ್ಟರ್ ಸಾಲ, ವಾಗ್ದಾನ ಸಾಲ-ಉಗ್ರಾಣ ರಶೀದಿ, ಚಿಲ್ಲರೆ ಕೃಷಿ ಸಾಲಗಳು, ಕಿಸಾನ್ ಗೋಲ್ಡ್ ಕಾರ್ಡ್, ಹೆಚ್‌ಡಿಎಫ್‌ಸಿ ಸಣ್ಣ ಕೃಷಿ ವ್ಯಾಪಾರ ಸಾಲ, ಹೆಚ್‌ಡಿಎಫ್‌ಸಿ ಬೆಳೆಸಾಲ, ಹೆಚ್‌ಡಿಎಫ್‌ಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ಎಮ್ಮೆ ಸಾಕಣೆಕೆ , ಮೇಕೆ ಸಾಕಾಣಿಕೆ, ಹಂದಿ ಸಾಕಣೆಕೆ, ಕೋಳಿ ಸಾಕಣೆಕೆ, ತೋಟಗಾರಿಕೆ, ಕೃಷಿಗೆ ಸಾಲ ನೀಡುವರು. ರೈತರು ಪಡೆದ ಸಾಲದ ಕಂತುಗಳನ್ನು ಸಹ ಅಂಚೆ ಕಚೇರಿಯಲ್ಲಿ ಪಾವತಿಸಬಹುದು.
ಬ್ಯಾಂಕ್ ಸಾಲದ ಇಎಂಐಯನ್ನು ಇ-ಪೇಮೆಂಟ್ ಮೂಲಕ ಕಟ್ಟಲು ಅವಕಾಶ ಇದೆ. ಅಂಚೆ ಕಚೇರಿಯಲ್ಲಿ ಈ ಮಾದರಿಯಲ್ಲಿ ಪಾವತಿ ಮಾಡಲು ವ್ಯವಸ್ಥೆ ಇದೆ.ಇದು ಮೂಲಭೂತ ಅರ್ಹತಾ ಮಾನದಂಡಗಳ ಪ್ರಕಾರ ವಿವಿಧ ಕೃಷಿ, ಸಂಬಂಧಿತ ಮತ್ತು ಸಂಬಂಧಿತ ಸಾಲಗಳಿಗೆ ಪ್ರಮುಖ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. HDFC ಬ್ಯಾಂಕ್ ಬ್ಯಾಂಕಿನ ನೀತಿಗಳ ಪ್ರಕಾರ ಧನಾತ್ಮಕ ಮುನ್ನಡೆಗಳನ್ನು ನಿರ್ಣಯಿಸುತ್ತದೆ ಮತ್ತು ಸಾಲಗಾರರಿಗೆ ಸಾಲಗಳನ್ನು ವಿತರಿಸುತ್ತದೆ. ಅಂಚೆ ಕಚೇರಿಯು ರೈತರ ಸಾಲ ಮರುಪಾವತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ ಎಂದರು. ಈಗ ನೀವು ಬ್ಯಾಂಕಿನ ಕೃಷಿ ಸಾಲ ಪಡೆಯಲು ಅರ್ಜಿಗಳನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದು.
ಆತ್ಮೀಯ ರೈತರೆ ನಿಮಗೆ ಯಾವುದೇ ರೀತಿಯ ಯೋಜನೆ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಗ್ರಾಹಕ ಸೇವಾ ಕಾರ್ಯ ನಿರ್ವಾಹಕರು- 18002583838 ಎಲ್ಲ ರೈತ ಬಾಂಧವರು ಈ ಯೋಜನೆಯ ಸೌಲಭ್ಯವನ್ನು ಪಡೆಯ ಬೇಕಾಗಿ ವಿನಂತಿ.
ಇದನ್ನೂ ಓದಿ :- ಬೆಳೆವಿಮಾ ಜಮಾ ಆಗಿದೆ ಒಂದೇ ನಿಮಿಷದಲ್ಲಿ ಚೆಕ್ ಮಾಡಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?