Breaking
Tue. Dec 17th, 2024

ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆಗೆ ಸಾಲ ಸೌಲಭ್ಯ

Spread the love

KCC ನರೇಗಾ ಯೋಜನೆ ಅಡಿ ಸೌಲಭ್ಯಗಳು?

• ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಮಾಡುವ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳ ಬ್ಯಾಂಕ್‌ಗಳಿಂದ ಆರ್ಥಿಕ ನೆರವು.
• 3 ಲಕ್ಷ ರೂ ಗಳವರೆಗೆ ಸಾಲದ ಮೊತ್ತಕ್ಕೆ ಶೇ. 2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ.
• ಸದರಿ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ವಾರ್ಷಿಕ ಶೇ2 ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ.

ಯಾವ ಪ್ರಾಣಿಗಳಿಗೆ ಎಷ್ಟು ಸಾಲ ಸೌಲಭ್ಯ?

• ಸುಧಾರಿತ ತಳಿಯ ಎಮ್ಮೆ ಘಟಕ (2ಕ್ಕೆ ಸೀಮಿತ): – ಒಂದು ಎಮ್ಮೆ ನಿರ್ವಹಣೆಗೆ ಗರಿಷ್ಠ ರೂ. 10500/- ಹಾಗೂ ಇದಕ್ಕೆ ಸಾಲದ ಪ್ರಮಾಣ 42,000 /-
• ಮಿಶ್ರತಳಿ ಹಸು ಘಟಕ (2ಕ್ಕೆ ಸೀಮಿತ): – ಒಂದು ಹಸು ನಿರ್ವಹಣೆಗೆ ಗರಿಷ್ಠ ರೂ. 9000/- ಈ ಕಾರ್ಯಕ್ಕೆ ಸಾಲದ ಪ್ರಮಾಣ 36,000/-
• ದೇಸಿ ತಳಿಯ ಹಸು ಘಟಕ : – ಒಂದು ಹಸು ನಿರ್ವಹಣೆಗೆ ಗರಿಷ್ಠ ರೂ. 3500/- 14,000 /-
• ಮೊಲ ಸಾಕಾಣಿಕೆ ಮಾಡಲು 50,000 ರೂಪಾಯಿ ಸಾಲ
• ಕೋಳಿ ಸಾಕಾಣಿಕೆ ಮಾಡಲು 80000 ದಿಂದ ರೂ.1,80,000
• ಹಂದಿ ಸಾಕಾಣಿಕೆ ಮಾಡಲು 60ಸಾವಿರ
• ಮೇಕೆ ಸಾಕಾಣಿಕೆ ಮಾಡಲು 14 ಸಾವಿರ ರಿಂದ 57,000
• ಕುರಿ ಸಾಕಾಣಿಕೆ ಮಾಡಲು 14 ಸಾವಿರ ರಿಂದ 57,000

ಅರ್ಜಿ ಎಲ್ಲಿ ಸಲ್ಲಿಸಬೇಕು ಬೇಕಾಗುವ ದಾಖಲಾತಿಗಳು?

ಭರ್ತಿಮಾಡಿದ ಅರ್ಜಿ ನಮೂನೆ, ಬ್ಯಾಂಕ್ ಖಾತೆ ವಿವರ, ಆರ್.ಬಿ.ಸಿ. ಆಧಾರ್ ಕಾರ್ಡ್, ಭಾವಚಿತ್ರ. K. ಸಿ. ಸಿ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಒದಗಿಸುವ ಅಭಿಯಾನವು ದಿನಾಂಕ 31-3-2024 ವರೆಗೆ ಮುಂದುವರೆಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಸಹಾಯವಾಣಿ: ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277 100 200 ಸಂಖ್ಯೆಯನ್ನು ಸಂಪರ್ಕಿಸಿ.

ಬಡ್ಡಿ ಸಮೇತ ವಿಮೆ ಹಣ ನೀಡಲು ಆದೇಶ

ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ಬಸವರಾಜ ಜಗನ್ನಾಥ ಭಗವತಿ ತಮ್ಮ ಹಿರೋ ಸ್ಪೆಂಡರ್ ಪ್ಲಸ್ ಮೋಟರ ಸೈಕಲ್ ವಾಹನನ್ನು ನ್ಯೂಚರ್ ಜನರಲ್ ಇನ್ಸೂರನ್ಸ್ ಕಂಪನಿ ಹುಬ್ಬಳ್ಳಿ ಇವರಲ್ಲಿ 15 ಲಕ್ಷ ರೂ.ಗಳಿಗೆ ವೈಯಕ್ತಿಕ ಅಪಘಾತ ವಿಮೆ ಮಾಡಿಸಿದ್ದರು.

ಕಳೆದ ವರ್ಷ ಎಪ್ರಿಲ್ 8 ರಂದು ಸುಭೋದಯ ಶಾಲೆ ಕಮತಗಿ ಹತ್ತಿರ ಮೋಟರ್ ಸೈಕಲ್ ಅಪಘಾತಕ್ಕಿಡಾಗಿ ಮೃತ ಪಟ್ಟಿದ್ದರು. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಪತ್ನಿ ವಿದ್ಯಾಶ್ರೀ ಹಾಗೂ ಇಬ್ಬರು ಮಕ್ಕಳು ಪರಿಹಾರ ಕೋರಿ ದಾಖಲೆಗಳೊಂದಿಗೆ ಇನ್ನೂರನ್ಸ್ ಕಂಪನಿಗೆ ಮನವಿ ಮಾಡಿದ್ದರು. ದಾಖಲೆ ಸರಿಯಾಗಿ ಇಲ್ಲವೆಂದು ಕುಂಟು ನೆಪ ಹೇಳಿ ಪರಿಹಾರ ನೀಡಲು ನಿರಾಕರಿಸಿದ್ದರು. ನೊಂದ ಮೃತ ಕುಟುಂಬಸ್ಥರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಕುರಿತು ಆಯೋಗದಿಂದ ಇನ್ನೂರನ್ನ ಕಂಪನಿಗೆ ನೋಟಿಸ್ ನೀಡಿದರು ವಕೀಲರ ಮೂಲಕ ಹಾಜರಾಗಿ ಪುನಃ ಪರಿಹಾಋ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಪರಿಹಾರ ಕೊಡದೇ ಸೇವಾ ನ್ಯೂನ್ಯತೆ ತೋರಿದ ಕಂಪನಿಗೆ 15 ಲಕ್ಷ ರೂ.ಗಳ ಪರಿಹಾರದ ಜೊತೆಗೆ ಶೇ.9 ರಷ್ಟು ಬಡ್ಡಿ ಸಮೇತ ದೂರು ದಾಖಲಾದ ದಿನದಿಂದ 2 ತಿಂಗಳೊಳಗಾಗಿ ನೀಡುವಂತೆ ತೀರ್ಪು ನೀಡಿದೆ. ಅಲ್ಲದೇ ಅನಾವಶ್ಯಕವಾಗಿ ಆಯೋಗಕ್ಕೆ ಅಲೆದಾಡಿದ ವಿಶೇಷ ಪರಿಹಾರ 10 ಸಾವಿರ ರೂ. ಹಾಗೂ ಪ್ರಕರಣದ ಖರ್ಚು 5 ಸಾವಿರ ರೂ.ಗಳನ್ನು ಕೊಡಲು ಆಯೋಗದ ಅಧ್ಯಕ್ಷರಾದ ಡಿ.ವೈ.ಬಸಾಪೂರ, ಮಹಿಳಾ ಸದಸ್ಯೆ ಸಿ.ಎಚ್.ಸಮೀಉನ್ನಿಸ್ ಅಬ್ರಾ‌ರ್ ಮತ್ತು ಕಮಲಕಿಶೋರ ಜೋಶಿ ಒಳಗೊಂಡ ಪೀಠವು ಮಹತ್ವ ತೀರ್ಪು ನೀಡಿದೆ.

ಕೃಷಿ ವಿಶ್ವವಿದ್ಯಾನಿಲಯದಲ್ಲಿ ಭರ್ತಿಯಾಗದೇ ಉಳಿದಿರುವ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ವರ್ಷ 2023-24ನೇ ಸಾಲಿನ ಪ್ರಥಮ ವರ್ಷದ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಎನ್‌ಆರ್‌ಐ ಕೋಟಾದಡಿ ಭರ್ತಿಯಾಗದೇ ಉಳಿದಿರುವ ಸೀಟುಗಳಿಗೆ ಜನವರಿ 11ರವರೆಗೆ ಅರ್ಜಿಗಳನ್ನು ಕರೆಯಲಾಗಿದ್ದು, ಜನವರಿ 13 ರಂದು ಕೌನ್ಸಲಿಂಗ್ ಆಯ್ಕೆ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುವುದು.

ಕೌನ್ಸಲಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮತ್ತು ಪೂರ್ಣ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಅಧಿಕೃತ ಅಂತರ್ಜಾಲದಿಂದ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಂಬಂಧಪಟ್ಟ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ದೃಡೀಕರಿಸಿ ಜನವರಿ 11 ರ ಸಂಜೆ 4 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರಿಗೆ ಕಛೇರಿಯ ಸಮಯದೊಳಗೆ ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು. ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

2023-24ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಧ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಟಾಕಿಂಗ್ ಲ್ಯಾಪ್‌ಟಾಪ್, ಅಂಧ ವಿದ್ಯಾರ್ಥಿಗಳಿಗೆ ನೀಡುವ ಬೈಕಿಟ್, ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ, ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ-ಉದ್ಯೋಗಕ್ಕಾಗಿ ನೀಡುವ ಹೊಲಿಗೆ ಯಂತ್ರ, ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆ ಯೋಜನೆಗಳಡಿ ವಿಕಲಚೇತನ ಫಲಾನುಭವಿಗಳು ಆನ್‌ಲೈನ್ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜನೆವರಿ 30 ರೊಳಗಾಗಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಸಲ್ಲಿಸಿದ ಪ್ರತಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಹಾರ್ಡ ಪ್ರತಿಯನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವವಿ.ಆ‌ರ್.ಡಬ್ಲ್ಯೂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಯು.ಆರ್.ಡಬ್ಲ್ಯೂ ಹಾಗೂ ತಾಲ್ಲೂಕ ಪಂಚಾಯತಿಯಲ್ಲಿರುವ ಎಮ್.ಆರ್.ಡಬ್ಲ್ಯೂಗಳಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ತಾಲ್ಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಮ್.ಆರ್.ಡಬ್ಲ್ಯೂಗಳಾದ ಖಾಜಾಹುಸೇನ ಕಾತರಕಿ, ತಾಲ್ಲೂಕ ಪಂಚಾಯತ, ಗದಗ 8867556465, ಬಸವರಾಜ ಓಲಿ, ತಾಲ್ಲೂಕ ಪಂಚಾಯತ, ರೋಣ 9741615926, ಶಶಿಕಲಾ ವಡ್ಡಟ್ಟಿ, ತಾಲ್ಲೂಕ ಪಂಚಾಯತ, ಮುಂಡರಗಿ 9611922445, ಭಾರತಿ ಮುರಶಿಳ್ಳಿ, ತಾಲ್ಲೂಕ ಪಂಚಾಯತ, ಶಿರಹಟ್ಟಿ -8951128679, ಶಿವಾನಂದ ಹಾದಿಮನಿ, ತಾಲ್ಲೂಕ ಪಂಚಾಯತ, ನರಗುಂದ 9591679022 ಹಾಗೂ ವಿಕಲಚೇತನರ ಹಾಗೂ – ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ಕೊಠಡಿ ದೂರವಾಣಿ ಸಂಖ್ಯೆ: 08372220419 ಮೂಲಕ ಸಂಪರ್ಕಿಸಬಹುದಾಗಿದೆ.

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ

ಸಮಾಜ ಕಲ್ಯಾಣ ಇಲಾಖೆಯಿಂದ 2023- 24ನೇ ಸಾಲಿನಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ ಎಎಪಿ ಪೋರ್ಟಲ್‌ನಲ್ಲಿ ಡಿಬಿಟಿ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ. 2023-24ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್‌ನಲ್ಲಿ ನಿಗಧಿತ ಸಮಯದಲ್ಲಿ ಅರ್ಜಿ ಸಲ್ಲಿಸದೇ ಇರುವ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಸಹಾಯಕ . ,0836-2447201, 2278066, 08370-284159, 08304-290464,08380- 229937 ಗೆ ಸಂಪರ್ಕಿಸಹುದೆಂದು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *