ಆತ್ಮೀಯ ರೈತ ಬಾಂಧವರೇ, ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡುವುದರಿಂದ ಅವರಿಗೆ ಅಷ್ಟೇನೂ ಲಾಭವಾಗುವುದಿಲ್ಲ. ಇದರ ಬದಲಿಗೆ ಅವುಗಳನ್ನು ಶೇಖರಣೆ ಮಾಡಿ ಸಂರಕ್ಷಣೆ ಮಾಡಿ ಅವುಗಳನ್ನು ತಮ್ಮ ಸ್ವಂತ ಬ್ರಾಂಡಿನಲ್ಲಿ ಮಾರಾಟ ಮಾಡುವುದರಿಂದ ಅವರಿಗೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಆದಕಾರಣ ಅವರು ತಮ್ಮ ಸ್ವಂತ ಬೆಳೆಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಆರ್ಥಿಕವಾಗಿ ನೆರವು ನೀಡಲು ನಮ್ಮ ಪ್ರಧಾನಮಂತ್ರಿಯವರು ಈ ಯೋಜನೆಯನ್ನು ತೆರೆದಿದ್ದಾರೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಕ್ಕೆ ಘಟಕಗಳ ಉದ್ದಾರಕ್ಕಾಗಿ ರೈತರಿಗೆ ಈ ಯೋಜನೆ ಅಡಿಯಲ್ಲಿ ಶೇಕಡಾ 35 ಪ್ರತಿಶತ ಸಬ್ಸಿಡಿಯನ್ನು ನೀಡಿ ಅದರ ಜೊತೆ ಹದಿನೈದು ಲಕ್ಷ ರೂಪಾಯಿ ಸಹಾಯಧನವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರು ಯೋಜನೆಗೆ ಅರ್ಜಿ ಸಲ್ಲಿಸಬಹುದು? ಎಲ್ಲರ್ಜಿ ಸಲ್ಲಿಸಬೇಕು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲು ಒಬ್ಬ ವ್ಯಕ್ತಿಗೆ 18 ವರ್ಷದ ಮೇಲ್ಪಟ್ಟು ವಯಸ್ಸಾಗಿರಬೇಕು ಮತ್ತು ಅವನು ಈ ಯೋಜನೆಯಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಥವಾ ಖಾಸಗಿ ಬ್ಯಾಂಕಿನಲ್ಲಿ 15 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯಲು ಅವನು ಅರ್ಹನಾಗುತ್ತಾನೆ. ಸಹಕಾರಿ ಸಂಸ್ಥೆ ಸ್ವ ಸಹಾಯ ಸಂಘಗಳು ಅಂದರೆ self help groups, ರೈತ ಉತ್ಪಾದಕ ಕಂಪನಿ ಆದರೆ (FPO) ಮತ್ತು ಆ ವ್ಯಕ್ತಿಯು ವೈಯಕ್ತಿಕವಾಗಿ ಈ ಸಾಲವನ್ನು ಪಡೆದುಕೊಳ್ಳಬಹುದು.
ಈ ಯೋಜನೆಗೆ ಅರ್ಜಿ ಎಲ್ಲಿ ಸಲ್ಲಿಸಬೇಕು?
ರೈತರು ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಬೇಕು ಮತ್ತು ಅಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕೆಂಬ ಸಂಬಂಧ ಪಟ್ಟ ಮಾಹಿತಿಯನ್ನು ಅಲ್ಲಿರುವ ಅಧಿಕಾರಿಗಳಿಂದ ತೆಗೆದುಕೊಂಡು ಅದಕ್ಕೆ ಬೇಕಾಗುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು.
ಬೇಕಾಗುವ ದಾಖಲಾತಿಗಳು
ಪಾನ್ ಕಾರ್ಡ್, ಆಧಾರ್ ಕಾರ್ಡ್, ರೇಷನ್ ಕಾರ್ಡ್/ವಿದ್ಯುತ್ ಬಿಲೆ, ಯಂತ್ರೋಪಕರಣಗಳ ಕೋಟೆಷನ್, ಪಂಚಾಯತ ಪರವಾನಿಗೆ ಪತ್ರ, ಉದ್ಯಮ ನಡೆಸುವ ಸ್ಥಳದ ಬಾಡಿಗೆ ಒಪ್ಪಂದದ ಪತ್ರ, ಉದ್ಯಮ ಆಧಾರ ಮತ್ತು ನಿಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ಜೆರಾಕ್ಸ್ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇಷ್ಟೇ ಅಲ್ಲದೆ ಸರ್ಕಾರವು CFTRI ಸಂಸ್ಥೆ ಇಂದ ಉತ್ಪನ್ನಗಳ ಮಾರುಕಟ್ಟೆ ಮತ್ತು ಅವುಗಳ ಸಂರಕ್ಷಣೆ ಮಾಡಲು ತಾಂತ್ರಿಕವಾಗಿ ತರಬೇತಿಗಳನ್ನು ನೀಡಲು ತಯಾರಾಗಿದೆ. ಆದಕಾರಣ 30 ಜನ ರೈತರು ಕೂಡಿ ಈ ಉದ್ಯೋಗಗಳನ್ನು ಪ್ರಾರಂಭ ಮಾಡಿದರೆ ಅತಿ ಸುಲಭವಾಗಿ ಲಾಭದಾಯಕ ಮಾರುಕಟ್ಟೆಯನ್ನು ನಿರ್ಮಾಣ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ. https://cftri.res.in/kweb/
*ಮುಂಗಾರಿನ ಯಾವ ಬೆಳೆಗೆ ಎಷ್ಟು ಬೆಳೆವಿಮೆ ತುಂಬಬೇಕು ಮತ್ತು ಕೊನೆ ದಿನಾಂಕ ಯಾವುದು?, FID ಹೊಂದುವುದು ಏಕೆ ಅವಶ್ಯಕ?*
*ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?*
*ಅನುಗ್ರಹ ಯೋಜನೆ ಮರುಜಾರಿ, ಮೃತಪಟ್ಟ ಕುರಿ, ಮೇಕೆಗೆ 5000 ಮತ್ತು ಹಸು, ಎಮ್ಮೆ, ಎತ್ತಿಗೆ 10000 ಪರಿಹಾರ ಧನ*
*ಕೃಷಿ ಯಂತ್ರಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಮೊಬೈಲ್ ನಿಂದ ಅರ್ಜಿ, K KISAN PORTAL ನಲ್ಲಿ ಅರ್ಜಿ ಸಲ್ಲಿಸಿ*