ಆತ್ಮೀಯ ನಾಗರಿಕರೇ ನಿಮ್ಮ ಮಕ್ಕಳನ್ನು ನೀವು ವಿದೇಶಕ್ಕೆ ಕಳಿಸಿ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಲು ಸರ್ಕಾರವು ನಿಮಗೆ ಒಂದು ಅವಕಾಶವನ್ನು ಕಲ್ಪಿಸಿ ಅಂತಹ ವಿದ್ಯಾರ್ಥಿಗಳಿಗೆ ಸಾಲವನ್ನು ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಹೆಸರು ವಿದೇಶ ವ್ಯಾಸಂಗಕ್ಕಾಗಿ ಸಾಲ ಯೋಜನೆ. ವಿದೇಶದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಾಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು?
ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧಿಸ್, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು). ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಕನಿಷ್ಠ 60% ಅಂಕವನ್ನು ಪಡೆದಿರಬೇಕು. ವಿದೇಶ ವಿಶ್ವವಿದ್ಯಾಲಯದಿಂದ ಆಫರ್ ಲೆಟರ್ ಪಡೆದಿರಬೇಕು. ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುವುದು ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಷ್ಟು ಮತ್ತು ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 03/ಅಕ್ಟೋಬರ್/2023. ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://kmdconline.karnataka.gov.in/Portal/login ಅಲ್ಲಿ ಕೇಳುವ ಎಲ್ಲ ದಾಖಲಾತಿಗಳನ್ನು ಕೊಡಿ ಮತ್ತು ಎಲ್ಲ ವಿಷಯಗಳನ್ನು ಅಲ್ಲಿ ಬರೆಸಿ. ಇಲ್ಲವಾದರೆ ನಿಮ್ಮ ಹತ್ತಿರವಿರುವ ಸೇವಾ ಸಂದಿಗೆ ಭೇಟಿ ನೀಡಿ ಕೂಡಲೇ Oct-2023 ಒಳಗೆ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ಪ್ರಸ್ತುತ ಅಧ್ಯಯನ ಪ್ರಮಾಣಪತ್ರ, ಕಾಲೇಜು ಶುಲ್ಕ ರಚನೆ, ಪಾಸ್ಪೋರ್ಟ್ ನಕಲು, ವೀಸಾ ನಕಲು, ಮಾರಾಟದ ಪತ್ರಗಳು ಮತ್ತು ತಾಯಿಯ ಪತ್ರ, ಖಾತಾ ಸಾರ ಮತ್ತು ಖಾತಾ ಪ್ರಮಾಣಪತ್ರ ಅಥವಾ ರೂಪಾಂತರ, ಪ್ರಸ್ತುತ ಅಧ್ಯಯನ ಪ್ರಮಾಣಪತ್ರ, ಕಾಲೇಜು ಶುಲ್ಕ ರಚನೆ, ಫಲಾನುಭವಿಯ ಪ್ರಮಾಣ ಪತ್ರ, ಫಲಾನುಭವಿ ಮತ್ತು ಜಾಮೀನುದಾರರ ಜಂಟಿ ಪ್ರಮಾಣ ಪತ್ರ, ಪ್ರಾಮಿಸರಿ ಜೊತೆಗೆ ಡಿ ಪಿ ನೋಟ್ ಡೆಲಿವರಿ ಲೆಟರ್, ನವೀಕೃತ ತೆರಿಗೆ ಪಾವತಿಸಿದ ರಸೀದಿ ಸೂಕ್ತ, ಪ್ರಾಧಿಕಾರದಿಂದ ಮಾರ್ಗದರ್ಶನ ದರ ಜಿಲ್ಲಾ ವ್ಯವಸ್ಥಾಪಕರಿಂದ ಆಸ್ತಿಯ ಸ್ಥಳ ಪರಿಶೀಲನೆ ವರದಿ, ನಮೂನೆ ನಂ.15 ರಲ್ಲಿ ನಿಲ್ ಎನ್ನಂಬರೆನ್ಸ್ ಪ್ರಮಾಣಪತ್ರ.
ನಾಳೆ ಕೊನೆಯ ದಿನಾಂಕ ಕೂಡಲೇ ಅರ್ಜಿ ಸಲ್ಲಿಸಬೇಕಾಗಿ ವಿನಂತಿ*
ಸರ್ಕಾರಿ ಜಮೀನು ಒತ್ತುವರಿಗೆ ಬ್ರೇಕ್ ಹಾಕಿದ ಸರ್ಕಾರ*
ಜೀವ ಜಲ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಲು 3 ಲಕ್ಷ ಸಹಾಯಧನ*