ಆತ್ಮೀಯ ರೈತ ಬಾಂಧವರಿಗೆ, ನಮ್ಮ ದೇಶವು ಕೃಷಿ ಮೇಲೆ ಬಹಳ ಅವಲಂಬನೆ ಆದಕಾರಣ ಸರ್ಕಾರವು ರೈತರಿಗೆ ಹಲವಾರು ಯೋಜನೆಗಳನ್ನು ಬಿಡುಗಡೆ ಮಾಡಿ ಸಹಾಯ ಮಾಡುತ್ತಲೇ ಬಂದಿದೆ. ಅದೇ ತರಹ ಇನ್ನೊಂದು ಹೊಸ ಯೋಜನೆಯನ್ನು ತಂದಿದ್ದು ಈ ಸರ್ತಿ ರೈತರಿಗೆ ಬಹಳ ಉಪಯುಕ್ತವಾದ ಯೋಜನೆಯನ್ನು ಜಾರಿಗೆ ತಂದಿದೆ. ಏನಿದು ಯೋಜನೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಸರ್ಕಾರವು ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಮೊದಲು ಇದು ಬೇರೆ ಬೇರೆ ಕೃಷಿ ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿತ್ತು, ಆದರೆ ಈಗ ಅದನ್ನು ಪಶು ಪಾಲನೆ ಕ್ಷೇತ್ರಕ್ಕೆ ವಿಸ್ತರಣೆಯನ್ನು ಮಾಡಿದ್ದಾರೆ. ಈ ಕಿಸಾನ್ ಕ್ರೆಡಿಟ್ ಕಾಲನ್ನು ಹೊಂದುವುದರಿಂದ ರೈತರಿಗೆ ಏನು ಲಾಭವಿದೆ ಎಂದು ನೀವು ಪ್ರಶ್ನಿಸಬಹುದು? ಈ ಕಿಸಾನ್ ಕ್ರೆಡಿಟ್ ಕಾರ್ಡನ್ನು ಹೊಂದಿದ್ದರೆ ನಿಮಗೆ ಮೂರು ಲಕ್ಷ ರೂಪಾಯಿಯ ಸಹಾಯಧನವನ್ನು ಸಾಲದ ರೂಪದಲ್ಲಿ ನೀಡುತ್ತಾರೆ. ನೀವು ಕುರಿ, ಕೋಳಿ, ಮೇಕೆ, ಹಸು ಮತ್ತು ಮೀನು ಸಾಕಾಣಿಕೆ ಮಾಡಬೇಕೆಂಬ ಉದ್ದೇಶವನ್ನು ಹೊಂದಿದ್ದರೆ ಕೂಡಲೇ ನೀವು ಈ ಕಾರ್ಡನ್ನು ಮಾಡಿಸಿಕೊಳ್ಳುವುದು ಅವಶ್ಯವಾಗಿದೆ.
ಯಾವ ಪ್ರಾಣಿಗೆ ಎಷ್ಟು ಸಾಲವನ್ನು ನೀಡುತ್ತಾರೆ?
ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ರೈತರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲವನ್ನು ನೀಡಲಾಗುತ್ತಿದ್ದು. ಇದರಲ್ಲಿ ಒಂದುವರೆ ಲಕ್ಷ ರೂಪಾಯಿ ಸಾಲವನ್ನು ಯಾವುದೇ ಗ್ಯಾರೆಂಟಿ ಇಲ್ಲದೆ ಕೊಡಲು ಈ ಯೋಜನೆ ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಕುರಿಗೆ 4000 ರೂಪಾಯಿ, ಕೋಳಿಗೆ 700 ರೂಪಾಯಿ, ಒಂದು ಹಸುವಿಗೆ 40,000 ರೂಪಾಯಿ, ಒಂದು ಎಮ್ಮೆಗೆ 60,000ಗಳನ್ನು ಕೊಡಲು ನಿರ್ಧಾರ ಮಾಡಿದೆ. ರೈತರು ಕೇವಲ ನಾಲ್ಕು ಪ್ರತಿಶತ ಬಡ್ಡಿ ದರವನ್ನು ತುಂಬಿ ಈ ಸಾಲವನ್ನು ಪಡೆದು ತಮ್ಮ ವೃತ್ತಿಯನ್ನು ಇನ್ನು ಚೈತನ್ಯಗೊಳಿಸಬೇಕು.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಮತ್ತು ಎಲ್ಲಿ ಸಲ್ಲಿಸಬೇಕು?
ರೈತನು ತನ್ನ ಆಧಾರ್ ಕಾರ್ಡ್, ತನ್ನ ಪಾನ್ ಕಾರ್ಡ್, ತನ್ನ ಒಂದು ಪಾಸ್ಪೋರ್ಟ್ ಫೋಟೋ ಮತ್ತು ತನ್ನ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ಹೋಗಿ ತಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಬೇಕು. ಅಲ್ಲಿ ಯಾವುದಾದರೂ ಒಂದು ರಾಷ್ಟ್ರೀಕೃತ ಬ್ಯಾಂಕಿನ ಬಿಸೈಟಿಗೆ ಭೇಟಿ ನೀಡಿ ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಆಯ್ಕೆಯನ್ನು ಆಯ್ದುಕೊಂಡು ಅಲ್ಲಿ ನಿಮಗೆ ದೊರಕುವ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ತುಂಬಬೇಕು. ನಂತರ ಅದಕ್ಕೆ ಅರ್ಜಿ ಸಲ್ಲಿಸಿ. ಆಮೇಲೆ ಬ್ಯಾಂಕಿನವರು ನಿಮ್ಮನ್ನು ಸಂಪರ್ಕಿಸಿ ನಿಮಗೆ ಈ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಸಿ ನಿಮಗೆ ಈ ಹಣವನ್ನು ದೊರಕಿಸಿಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಮೀನುಗಾರಿಕೆ ಇಲಾಖೆ ಅಥವಾ ಪಶು ಪಾಲನಾ ಇಲಾಖೆಗೆ ಭೇಟಿ ನೀಡಿ.