ಆತ್ಮೀಯ ನಾಗರಿಕರೇ, ಸರ್ಕಾರವು ನಮ್ಮ ದೇಶದ ನಾಗರಿಕರಿಗೆ ಹಲವಾರು ಯೋಜನೆಗಳನ್ನು ತಂದು ಅವರ ಉದ್ಧಾರಕ್ಕಾಗಿ ಸಾಕಷ್ಟು ಹಣವನ್ನು ವೆಚ್ಚ ಮಾಡಿದೆ. ಅದೇ ರೀತಿ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಜನರ ಉದ್ದಾರಕ್ಕಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಏನಪ್ಪಾ ಈ ಯೋಜನೆ ಹೆಸರು ಏನೆಂದರೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ. ಈ ಯೋಜನೆಯಿಂದ ಯಾರಿಗೆ ಲಾಭವಾಗುತ್ತದೆ? ಎಷ್ಟು ಲಾಭವಾಗುತ್ತದೆ? ಎಂದು ನಾವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯೋಣ.
ಯೋಜನೆ ಲಾಭ ಯಾರಿಗೆ ದೊರೆಯುತ್ತದೆ?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಯಾವ ಜನರು ಉತ್ಪಾದನೆ ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುತ್ತಾರೋ ಅಥವಾ ಯಾರು ಮುಂದೆ ಈ ಸಣ್ಣ ವ್ಯಾಪಾರ ಉದ್ಯಮಗಳನ್ನು ಪ್ರಾರಂಭ ಮಾಡಲು ಇಚ್ಛೆ ಪಡುತ್ತಾರೋ ಅವರಿಗೆ ಈ ಯೋಜನೆಯಿಂದ ಅತಿ ಲಾಭವಾಗಲಿದೆ. ಸರ್ಕಾರ ಅವರಿಗೆ ಏನು ಲಾಭವನ್ನು ಕೊಡುತ್ತದೆ ಎಂದು ನಾವು ಇಲ್ಲಿ ತಿಳಿಯೋಣ. ನಮ್ಮ ಕೇಂದ್ರ ಸರ್ಕಾರವು ಹೊಸ ವ್ಯಾಪಾರ ಮತ್ತು ಉದ್ಯೋಗ ಮಾಡುವ ಜನರಿಗೆ ಸಾಲವನ್ನು ಕೊಡಲು 3000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಜ್ಜಾಗಿದೆ.
ಈ ಸಾಲವನ್ನು ಕೊಡಲು ಸರಕಾರವು ಮೂರು ರೀತಿಯ ವರ್ಗಗಳಾಗಿ ವಿಂಗಡಿಸಿದೆ
ನಮ್ಮ ಕೇಂದ್ರ ಸರ್ಕಾರವು ಎಪ್ರಿಲ್ 8 2015ರಲ್ಲಿ ಈ ಯೋಜನೆಯನ್ನು ಜನರಿಗೆ ನೀಡಲು ಮೂರು ವರ್ಗಗಳಾಗಿ ವಿಂಗಡಿಸಿದೆ. ಇದರಲ್ಲಿ ಶಿಶು, ಕಿಶೋರ್ ಮತ್ತು ತರುಣ್ ಎಂಬ ಮೂರು ವರ್ಗಗಳಿವೆ. ಇದರಲ್ಲಿ ಶಿಶು 50,000 ಮತ್ತು ಕಿಶೋರ್ ಐವತ್ತು ಸಾವಿರದಿಂದ 5 ಲಕ್ಷ ರೂಪಾಯಿ. ಕೊನೆಗೆ ತರುಣ್ 5 ಲಕ್ಷದಿಂದ 10 ಲಕ್ಷ ರೂಪಾಯಿ ಸಾಲವನ್ನು ನೀಡಲು ಈ ಮೂರು ವರ್ಗಗಳನ್ನಾಗಿ ಈ ಯೋಜನೆಯನ್ನು ವಿಂಗಡನೆ ಮಾಡಿದೆ.
ನಮ್ಮ ಜನರು ಈ ವರ್ಗಗಳಿಂದ ಒಂದು ವರ್ಗವನ್ನು ಆಯ್ಕೆ ಮಾಡಿಕೊಂಡು ತಮಗೆ ಬೇಕಾದ ಸಾಲವನ್ನು ಪಡೆಯಬಹುದು. ಜನರು ಸಾರ್ವಜನಿಕ, ಖಾಸಗಿ, ವಲಯ ವಿದೇಶಿ, ಪ್ರಾದೇಶಿಕ ಗ್ರಾಮೀಣ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಈ ಸಾಲವನ್ನು ಅತಿ ಸುಲಭವಾಗಿ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಸರ್ಕಾರವು ಜನರಿಗೆ ಮುದ್ರಾ ಕಾಡನ್ನು ನೀಡಿ ಅವರಿಗೆ ಬೇಕಾದಾಗ ಹಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದಕಾರಣ ನೀವು ನಿಮ್ಮ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಈ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಸಾಲವನ್ನು ತೆಗೆದುಕೊಂಡು, ಹೊಸ ಉದ್ಯೋಗವನ್ನು ಪ್ರಾರಂಭ ಮಾಡಬೇಕೆಂಬುದೇ ನಮ್ಮ ಆಶಯ.
ಇದನ್ನೂ ಓದಿ :- ರೈತರ ಜಮೀನಿನ ಮೇಲೆ ಯಾವ ಕೃಷಿ ಯಂತ್ರೋಪಕರಣ ಇದೆ? ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಇದನ್ನೂ ಓದಿ :- ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಉಚಿತ ಬೋರ್ವೆಲ್. ಈ ಯೋಜನೆಗೆ ಯಾವ ರೈತರು ಅರ್ಜಿ ಸಲ್ಲಿಸಬಹುದು