ಆತ್ಮೀಯ ಜನರೇ ಇಲ್ಲಿ ನಾವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಗ್ಗೆ ತಿಳಿಯೋಣ. ಮೊದಲು ಈ ಯೋಜನೆಯ ಸೇವೆಯನ್ನು ಪಡೆಯಲು ಉದ್ಯೋಗ ಚೀಟಿಯನ್ನು ಹೊಂದಲೇಬೇಕು. ಉದ್ಯೋಗ ಚೀಟಿಯನ್ನು ಪಡೆಯಲು ಯಾವ ಯಾವ ದಾಖಲೆಗಳು ಬೇಕು ಮತ್ತು ಹೇಗೆ ಅರ್ಜಿಯನ್ನು ಹಾಕಬೇಕು ಎಂದು ತಿಳಿಯೋಣ. ಈ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಲ್ಲಿ ಪುರುಷ ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶ ನೀಡಲಾಗುವುದು. ಇಲ್ಲಿ ನಾವು ಒಂದು ದಿನದ ದಿನಗೂಲಿ ಎಷ್ಟು ಎಂದು ತಿಳಿಯೋಣ ಮತ್ತು ಅಲ್ಲಿ ಮಾಡುವ ಕೆಲಸಗಳು ಯಾವು ಎಂದು ತಿಳಿಯಿರಿ.
ಉದ್ಯೋಗ ಚೀಟಿ ಪಡೆಯಲು ಬೇಕಾದ ಅಗತ್ಯ ದಾಖಲೆಗಳು
- ಹದಿನೆಂಟು ವರ್ಷ ಮೇಲ್ಪಟ್ಟ ಅರ್ಹ ಕುಟುಂಬದ ಸದಸ್ಯರ ಭಾವಚಿತ್ರ-3
- ಆಧಾರ್ ಕಾರ್ಡ್ ಪ್ರತಿ (ಎಲ್ಲಾ ಸದಸ್ಯರ) > ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಎಲ್ಲಾ ಸದಸ್ಯರ)
- ರೇಶನ್ ಕಾರ್ಡ್ ಪ್ರತಿ
ಕಾಮಗಾರಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು
- ಉದ್ಯೋಗ ಚೀಟಿ
- ಜಮೀನಿನ ಆಟಿ.ಸಿ ಪ್ರತಿ
- ಪಡಿತರ ಚೀಟಿ ಪ್ರತಿ
- ಪ.ಜಾತಿ, ಪ.ಪಂಗಡ ಜಾತಿ ಪ್ರಮಾಣ
- ಸಣ್ಣ ಮತ್ತು ಅತಿ ಸಣ್ಣ ರೈತರು ಪತ್ರ
ಯಾವುದೇ ಅರ್ಹ ಫಲಾನುಭವಿಯು ಜೀವಿತಾವಧಿಯಲ್ಲಿ
ರೂ. 2.5 ಲಕ್ಷಗಳ ಮಿತಿಯೊಳಗೆ ಮೈಯಕ್ತಿಕ ಕಾಮಗಾರಿಗಳನ್ನು ಪಡೆಯಲು ನಿಯಮಾನುಸಾರ ಕೂಲಿ ಮೊತ್ತ.
ಉಚಿತ ಸಹಾಯವಾಣಿ ಸಂಖ್ಯೆ: 1800 425 9666
ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ:-
ದಿನಗೂಲಿ ರೂ-309
ಅಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಉದ್ಯೋಗವನ್ನು ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘ ಕಾಲ ಬಾಳಿಕೆ ಬರುವ ಅಸ್ತಿಗಳನ್ನು ಸೃಜಿಸುವುದು, ಮತ್ತು ಗ್ರಾಮೀಣ ಬಡವರ ಜೀವನೋಪಾಯ ಮಾರ್ಗಗಳನ್ನು ಬಲಪಡಿಸುವುದು.
ಈ ಕೆಳಕಂಡ ವರ್ಗಗಳ ಫಲಾನುಭವಿಗಳು ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಲು ಅರ್ಹರು.
- ಪರಿಶಿಷ್ಟ ಜಾತಿ
- ಪರಿಶಿಷ್ಟ ಪಂಗಡ
- ಅಲೆಮಾರಿ ಬುಡಕಟ್ಟು ಜನಾಂಗ
- ಜ.ಪಿ.ಎಲ್ ಕುಟುಂಬಗಳು
- ಅಧಿಸೂಚನೆಯಿಂದ ಕೈ ಬಿಟ್ಟ ಬುಡಕಟ್ಟುಗಳು
- ಮಹಿಳಾ ಪ್ರಧಾನ ಕುಟುಂಬಗಳು
- ಭೂ ಸುಧಾರಣಾ ಪಲಾನುಭವಿಗಳು
- ಅರಣ್ಯ ಹಕ್ಕುಗಳ ಕಾಯ್ದೆ 2006ರ ಫಲಾನುಭವಿಗಳು
- ವಸತಿ ಯೋಜನೆಯಡಿ ಫಲಾನುಭವಿಗಳು
- ಸಣ್ಣ ಮತ್ತು ಅತಿ ಸಣ್ಣ ರೈತರು
ಕಾರ್ಯವಿಧಾನ
ಅರ್ಹ ಕುಟುಂಬದ ವಯಸ್ಕ ಕೂಲಿ ಕಾರ್ಮಿಕರು ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗೆ ಅಕುಶಲ ಉದ್ಯೋಗವನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುವುದು. ಕೂಆ ಮೊತ್ತವನ್ನು 15 ದಿನಗಳ ಒಳಗೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಪಾವತಿಸಲಾಗುವುದು. ತ್ವರಿತ ಕೂಲಿ ವೇತನಕ್ಕಾಗಿ ಪ್ರತಿಯೊಬ್ಬ ಕೂಲಿಕಾರರ ಬ್ಯಾಂಕ್ ಖಾತ ಮತ್ತು ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿರುತ್ತದೆ.
ಯೋಜನೆಯಡಿ ಕೈಗೊಳ್ಳಬಹುದಾದಸಾರ್ವಜನಿಕ ಸಮುದಾಯ ಕಾಮಗಾಲಿಗಳು
ಸಾರ್ವಜನಿಕ ಸಮುದಾಯ ಕಾಮಗಾಲಿಗಳು
- ಕೆರೆ ಅಭಿವೃದ್ಧಿ ಕಾಲುವೆ ಅಭಿವೃದ್ಧಿ ಕಲ್ಯಾಣ ಪುನಶ್ವೇತನ 2. ಚೆಕ್ ಡ್ಯಾಂ ನಿಮಾಣ ಗೋ ಕಟ್ಟಿ ನಿರ್ಮಾಣ,
- ಬೋರ್ ವೆಲ್ ರಿಚಾರ್ಜ್ ಪಿಟ್
- ಜಲ ಮೂಲಗಳ ಪುನಶ್ವೇತನ ಕಾಮಗಾರಿಗಳನ್ನು
- ಆಟದ ಮೈದಾನದ ಅಂಕಣಗಳು
- ಸ್ಮಶಾನ ಅಭಿವೃದ್ಧಿ
- ಕೊಳವೆ ಬಾವಿ ಮರುಪೂರಣ ಘಟಕ
- ಗೋದಾಮು ಕಟ್ಟಡ
- ಅಂಗನವಾಡಿ ಕಟ್ಟಡ
10.ಸಂಪರ್ಕ ರಸ್ತೆ
11.ಕಿಂಡಿ ಅಣೆಕಟ್ಟು
12.ಇಂಗು ಗುಂಡಿ ನಿರ್ಮಾಣ
13.ಸಂತೆ ಮಾರುಕಟ್ಟೆ
14.ಎನ್‌ಆರ್‌ಎಲ್‌ಎಂ, ವರ್ಕ್ ಶೆಡ್
15.ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೋಯ್ತು - ಶಾಲಾ ಶೌಚಾಲಯ ನಿರ್ಮಾಣ
- ಶಾಲಾ ಬಿಸಿಊಟದ ಅಡುಗೆ ಕೋಣೆ ನಿರ್ಮಾಣ
18.ಶಾಲಾ ಆವರಣದ ಗೋಡೆ ನಿರ್ಮಾಣ - ಗ್ರಾಮೀಣ ಉದ್ಯಾನವನ
20.ಶಾಲೆ / ಅಂಗನವಾಡಿಗಳಲ್ಲಿ ಪೌಷ್ಟಿಕ ತೋಟ
21.ಮೀನು ಸಾಕಾಣಿಕಾ ಹೊಂಡ
ಇದನ್ನೂ ಓದಿ :- ಕೃಷಿ ಯಂತ್ರೋಕರಣಗಳನ್ನು ಖರೀದಿಸಲು 90% ಸಬ್ಸಿಡಿ ಈಗಲೇ ಅರ್ಜಿ ಸಲ್ಲಿಸಿ
ಇದನ್ನೂ ಓದಿ :- ಬಡ್ಡಿ ರಹಿತ ಸಾಲ ಪಡೆಯುವ ಮೊದಲು ಈ ಕೆಲವು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ