Breaking
Tue. Dec 17th, 2024

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ದಿನಗೂಲಿಯಲ್ಲಿ 357 ರೂ ಹೆಚ್ಚಳ

By mveeresh277 May1,2023 ##govtscheme
Spread the love

ಆತ್ಮೀಯ ನಾಗರೀಕರೇ, ಪ್ರಸಕ್ತ ಆರ್ಥಿಕ ವರ್ಷದಲ್ಲಿ (2023-24) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ – ಉದ್ಯೋಗ ಖಾತ್ರಿ ಯೋಜನೆ (ಎಂ- ನರೇಗಾ) ಅಡಿಯಲ್ಲಿನ ಕಾರ್ಮಿಕರಿಗೆ ದಿನಗೂಲಿವನ್ನು ಹೆಚ್ಚಳ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕಕ್ಕೆ ಕೇವಲ 17 ಹೆಚ್ಚಳ ಮಾಡಲಾಗಿದೆ.ರಾಜ್ಯದಲ್ಲಿ 2022-23ರಲ್ಲಿ ನರೇಗಾ ದಿನಗೂಲಿ 309 ನಿಗದಿಯಾಗಿತ್ತು. 2023-24ಕ್ಕೆ ಅದನ್ನು 316ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಶೇಕಡ 2.27ರಷ್ಟು ಮಾತ್ರ ಹೆಚ್ಚಳ ಇದೆ. ಮಾಡಲಾಗಿದೆ. ದಿನಗೂಲಿ – ಕನಿಷ್ಠ ಪ್ರಮಾಣದಲ್ಲಿ ಹೆಚ್ಚಳ ವಾದ ಪಟ್ಟಿಯಲ್ಲಿ ಗೋವಾ (ಶೇ 2.22) ಇದ್ದರೆ, ಅದರ ನಂತರದ ಸ್ಥಾನದಲ್ಲೇ ಕರ್ನಾಟಕ ಇದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿ ವಾಲಯವು ಇದೇ 24ರಂದು ನರೇಗಾ ಯೋಜನೆಯಡಿಯಲ್ಲಿನ ಕೂಲಿಯ ದರವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. 7- 26 ರೂಪಾಯಿ ರ ತನಕ ವೇತನ ಹೆಚ್ಚಳವಾಗಿದೆ.ರಾಜಸ್ಥಾನದಲ್ಲಿ ವೇತನ ಪ್ರಮಾಣ ಶೇ 10.39ರಷ್ಟು ಹೆಚ್ಚಳ ಮಾಡಲಾಗಿದೆ. ಇದು ದೇಶದಲ್ಲೇ ಗರಿಷ್ಠ. ಆದರೆ ರಾಜಸ್ಥಾನದಲ್ಲಿ ದಿನಗೂಲಿ 255 ರೂಪಾಯಿ ರಷ್ಟೇ ಇದೆ.

ಹೆಚ್ಚಿನ ಮಾಹಿತಿಗಾಗಿ ಈ ಸರ್ಕಾರಿ ವೆಬ್ ಸೈಟ್ ಗೆ ಭೇಟಿ ನೀಡಿ :- https://nrega.nic.in/netnrega/mgnrega_new/Nrega_home.aspx

ಹರಿಯಾಣದಲ್ಲಿ ದೇಶದಲ್ಲೇ ಗರಿಷ್ಠ ಪ್ರಮಾಣದ ದಿನಗೂಲಿ 357 ರೂಪಾಯಿ ದೇಶದಲ್ಲೇ ಅತ್ಯಂತ ಕನಿಷ್ಠ ದಿನಗೂಲಿ ಇರುವ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಇವೆ. ಎರಡೂ, ರಾಜ್ಯಗಳಲ್ಲಿ 1221 ಮಾತ್ರ ಇದೆ. ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ ವರ್ಷ 1 204 ವೇತನವಿತ್ತು. ಈ ವರ್ಷ ಶೇ 17ರಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದು ವೇತನದರವು 3221 ಆಗಿದೆ.ಬಿಹಾರ ಮತ್ತು ರಾಜ್ಯಗಳಲ್ಲೂ ವೇತನ ದರವು ಕಳೆದ ವರ್ಷಕ್ಕಿಂತ ಶೇ 8ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ರಾಜ್ಯಗಳಲ್ಲಿ ದಿನಕ್ಕೆ 210 ರೂಪಾಯಿ ವೇತನವಿತ್ತು. ಇದೀಗ 228 ರೂಪಾಯಿ ಕ್ಕೆ ವೇತನ ಹೆಚ್ಚಳವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ನರೇಗಾಕ್ಕೆ ತೆಗೆದಿರಿಸಿದ ಮೊತ್ತವನ್ನು 60 ಸಾವಿರ ಕೋಟಿಗೆ ಮಿತಿಗೊಳಿಸಲಾಗಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮೊತ್ತವಾಗಿದೆ.

ಇದನ್ನು ಓದಿ :- https://bhoomisuddi.com/nutrient-management-of-iron-and-zinc-in-crops-useful-information-from-agricultural-researchers/ಬೆಳೆಗಳಲ್ಲಿ ಕಬ್ಬಿಣ ಮತ್ತು ಸತುವಿನ ಪೋಷಕಾಂಶ ನಿರ್ವಹಣೆ ಮಾಡುವುದು ಹೇಗೆ?ಡಾ.ಆರ್.ಬಿ.ಬೆಳ್ಳಿ ಅವರಿಂದ ರೈತರಿಗೆ ಮಹತ್ವದ ಮಾಹಿತಿ

Related Post

Leave a Reply

Your email address will not be published. Required fields are marked *