ಮುಂದಿನ ಭಾನುವಾರ (ಜೂನ್ 11)ದಿಂದಲೇ ರಾಜ್ಯದ ಎಲ್ಲ ಮಹಿಳೆಯರು ರಾಜ್ಯ ಸಾರಿಗೆ ಬಸ್ ಗಳಲ್ಲಿ ‘ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿ, ಸರಕಾರ ಆದೇಶ ಹೊರಡಿಸಿದ್ದು ಅದಕ್ಕಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ ಮಾಡಲಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಪಡೆದು ಮುಂದಿನ ತಿಂಗಳೊಳಗೆ ಸ್ಟಾರ್ಟ್ ಕಾರ್ಡ್ ವಿತರಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಕೇಂದ್ರ, ರಾಜ್ಯ ಸರಕಾರದ ಇಲಾಖೆಗಳು ಅಥವಾ ಸರಕಾರಿ ಸ್ವಾಮ್ಯದ ಕಚೇರಿಗಳು ವಿತರಿಸಿರುವ ಭಾವಚಿತ್ರ ಹಾಗೂ ವಾಸ ಸ್ಥಳದ ವಿವರವಿರುವ ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸರಕಾರದ ಮಾರ್ಗಸೂಚಿಗಳೇನು?
ವಿದ್ಯಾರ್ಥಿನಿಯರು ಸೇರಿ ಎಲ್ಲ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ಈ ಉಚಿತ ಬಸ್ ಪ್ರಯಣದ ಸೌಲಭ್ಯಕ್ಕೆ ಅರ್ಹರು. # ಸಾಮಾನ್ಯ (ಕೆಂಪು ಬಸ್), ನಗರ ಸಾರಿಗೆ ಹಾಗೂ ವೇಗದೂತ ಬಸ್‌ಗಳಲ್ಲಿ ಪ್ರಯಾಣಕ್ಕೆ ಅನ್ವಯ.
ಯಾವ ಬಸ್‌ಗೆ ಅನ್ವಯವಾಗಲ್ಲ?
ರಾಜಹಂಸ, ಹವಾ ನಿಯಂತ್ರಿತ ಇಲ್ಲದ ಇರುವ ಸೀಪ, ವಜ್ರ, ವಾಯು ವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಗ್ರೀಮ್ ಕ್ಲಾಸ್, ಅಂಬಾರಿ ಉತ್ಸನ್, ಫ್ಟ್ ಬಸ್, ಇವಿ ಪವ ಪ್ಲಸ್ (ಎಸಿ ಬಸ್) ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಇಲ್ಲ.
ಈ ಯೋಜನೆಯಡಿ ಮಹಿಳೆಯರಿಗೆ ಹಣ ಪಡೆಯದೆಯೇ ಪ್ರಯಾಣದ ಟಿಕೆಟ್ ವಿತರಿಸ ಲಾಗುವುದು, ಈ ಶೂನ್ಯ ಟಿಕೆಟ್ ಹಾಗೂ ಸ್ಮಾರ್ಟ್ ಕಾರ್ಡ್ ದತ್ತಾಂಶ ಆಧರಿಸಿ ಸಾರಿಗೆ ನಿಗಮಗಳಿಗೆ ತಗಲುವ ವೆಚ್ಚವನ್ನು ಸರಕಾರ ಭರಿಸಲಿದೆ. ಈ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಆಸಕ್ತ ಮಹಿಳೆಯರಿಂದ ‘ಸೇವಾ ಸಿಂಧು’ ಮೂಲಕ ಅರ್ಜಿ ಪಡೆದು ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲಾಗುವುದು. 4 ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಅಧ್ಯಕ್ಷ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಅಧ್ಯಕ್ಷರಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ನೇಮಿಸಿರುವ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ಸೇವಾ ಸಿಂಧು ಮೂಲಕ ಅರ್ಜಿ
ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಹಾಗೂ ವಿದ್ಯುತ್ ಮೀಟರ್‌ನ ಆರ್ ಆ ನಂಬರ್ ಗೆ ಆಧಾರ್ ಜೋಡಿಸಿ ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ.
ಇದನ್ನೂ ಓದಿ :- ಮೊಬೈಲ್ ಕಳೆದಾಗ ಈ ರೀತಿ ಮಾಡಿ ನಿಮ್ಮ ಮೊಬೈಲ್ ಹುಡುಕಿಕೊಳ್ಳಿ ಹೇಗೆ ಮಾಡಿದರೆ ಕಳೆದ ಮೊಬೈಲ್ ಸಿಗುತ್ತೆ