ಮ್ಯಾಂಗೋಸ್ಟಿನ್ ಒಂದು ಉಷ್ಣವಲಯದ ಸಸ್ಯವಾಗಿದ್ದು, ಇದನ್ನು ಜನಪ್ರಿಯವಾಗಿ ಉಷ್ಣವಲಯದ ಹಣ್ಣಿನ ರಾಣಿ ಎಂದು ಕರೆಯುತ್ತಾರೆ. ಈ ಸಸ್ಯವು ಸಿಹಿಯಾದ, ರುಚಿಯಾದ, ರಸಭರಿತವಾದ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣಾಗಿದೆ. ಇದರ ಬೇಸಾಯ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ. ಇದು ಉಷ್ಣವಲಯದ ಹಣ್ಣಾಗಿದ್ದು, ಇದರ ಗಾತ್ರವು ಸಣ್ಣ ಕಿತ್ತಳೆ ಹಣ್ಣಿನಂತಿರುತ್ತದೆ. ಇದರ ಚರ್ಮ ನೇರಳೆ ಮತ್ತು ಅದರ ತಿರುಳು ಬಿಳಿಯಾಗಿರುತ್ತದೆ.
ಈ ಹಣ್ಣಿನ ಮರಗಳಿಗೆ ಫಲವತ್ತಾದ ಭೂಮಿ ಬೇಕು. ಮಣ್ಣಿನಲ್ಲಿ ಸಾಕಷ್ಟು ತೇವ ಹಿಡಿಯುವ ಅಲ್ಲದೆ, ನೀರು ನಿಲ್ಲದೆ ಬಸಿದು ಹೋಗುವ ಗುಣವಿರಬೇಕು. ಇದಕ್ಕೆ ಗೋಡು ಮಣ್ಣಿನ ಭೂಮಿ ಬಹುವಾಗಿ ಹಿಡಿಸುತ್ತದೆ. ಇದನ್ನು ನಾಟಿ ಮಾಡಲು ಭೂಮಿಯನ್ನು ಒಂದೆರಡು ಸಾರಿ ಆಳವಾಗಿ ಉಳುಮೆ ಮಾಡಿ ಭೂಮಿಯನ್ನು ಸಮ ಮಾಡಬೇಕು. 10 ಮೀಟರ್ ಅಂತರದಲ್ಲಿ 1 ಮೀ. X1. ಮೀ. X 1ಮೀಟರ್ ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು.
ಪ್ರತಿ ಗುಂಡಿಗೆ 2 ಕೆ.ಜಿ ಕೊಟ್ಟಿಗೆ ಗೊಬ್ಬರ, 250 ಗ್ರಾಂ ಸಾರಜನಕ, 250 ಗ್ರಾಂ ರಂಜಕ ಮತ್ತು 775 ಗ್ರಾಂ ಪೋಟ್ಯಾಷ್ ಗೊಬ್ಬರ ಹಾಕಿ 10X10 ಮೀಟರ್ ಅಂತರದಲ್ಲಿ 1-2 ವರ್ಷ ವಯಸ್ಸಿನ ಕಸಿ ಮಾಡಿದ ಸಸಿಗಳನ್ನು ನಾಟ ಮಾಡಬೇಕು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಪಲ್ಸ್ ಮ್ಯಾಜಿಕ್ ಹೂ ಮತ್ತು ಕಾಯಿ ಉದುರುವುದನ್ನು ಕಡಿಮೆ ಮಾಡುತ್ತದೆ*ಊ
ಕೇವಲ 1.5 ಲಕ್ಷದಲ್ಲಿ ಸ್ವರಾಜ್ ಕೋಡ್ ಬೈಕ್ ಟ್ಯಾಕ್ಟರ್*
ತೋಟಗಾರಿಕಾ ಇಲಾಖೆಯಿಂದ ಜೇನು ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನ*
Electric tractor ಅತಿ ಕಡಿಮೆ ಖರ್ಚಿನಲ್ಲಿ ಬಹಳ ಲಾಭದಾಯಕ ಬಳಕೆ ಮತ್ತು ಮೈಲೇಜ್*