ಸರ್ಕಾರಿ ಅಧಿಸೂಚನೆ NO.TD 193 TDO 2021, ದಿನಾಂಕ: 17.08.2023 ಮತ್ತು 16.11.2023 ರಲ್ಲಿ ದಿನಾಂಕ: 17.08.2023 ಮತ್ತು 16.11.2023 ರಲ್ಲಿ 1ನೇ ಏಪ್ರಿಲ್, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವರ್ಗದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (HSRP) ಅಂಟಿಸುವ ಟೈಮ್‌ಲೈನ್ ಅನ್ನು ದಿನಾಂಕ:2.0 ರಿಂದ ವಿಸ್ತರಿಸಲಾಗಿದೆ. 2024 ರಿಂದ 31.05.2024.
https://www.siam.in/hrspsubmit.aspx?mpgid=91&pgidtrail=91
NO.TD 193 TDO 2021, ದಿನಾಂಕ: 17.08.2023 ರಂದು ತಿಳಿಸಲಾದ ಅಧಿಸೂಚನೆಯಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ Puypa v.s. (ಪುಷ್ಪಾ ವಿ.ಎಸ್.) ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ. ಕಂಪೈಲರ್, ಕರ್ನಾಟಕ ಗೆಜೆಟ್, ಬೆಂಗಳೂರು ಕರ್ನಾಟಕ ಎಕ್ಸ್ಟ್ರಾ ಆರ್ಡಿನರಿ ಗೆಜೆಟ್‌ನಲ್ಲಿ ಪ್ರಕಟಣೆಗಾಗಿ.
ನಕಲಿಸಿ:
1. ಅಕೌಂಟೆಂಟ್ ಜನರಲ್ (ಆಡಿಟ್-1 & 2) / (ಇ ಮತ್ತು ಎಸ್‌ಎಸ್‌ಎ) ಕರ್ನಾಟಕ, ಹೊಸ ಕಟ್ಟಡ, ಆಡಿಟ್ ಭವನ, ಪೋಸ್ಟ್ ಬಾಕ್ಸ್ ಸಂಖ್ಯೆ. 5398 ಮತ್ತು ಅಕೌಂಟೆಂಟ್ ಜನರಲ್ (ಎ&ಇ), ಕರ್ನಾಟಕ ಪಾರ್ಕ್ ಹೌಸ್ ರಸ್ತೆ, ಪೋಸ್ಟ್ ಬಾಕ್ಸ್ ಸಂಖ್ಯೆ. 5359, ಬೆಂಗಳೂರು- 560001.
2. Addl. ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ, ವಿಧಾನಸೌಧ.
3. ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಟಿ.ಟಿ.ಎಂ.ಸಿ. ಕಟ್ಟಡ, ಶಾಂತಿನಗರ, ಬೆಂಗಳೂರು.
4. ಡಿ.ಜಿ. & ಐ.ಜಿ. ಪೊಲೀಸ್, ಕರ್ನಾಟಕ, ನೃಪತುಂಗ ರಸ್ತೆ, ಬೆಂಗಳೂರು.
5. ಸಾರಿಗೆ ಇಲಾಖೆಯ ಎಲ್ಲಾ ACT/JCT/DCT/RTO/ARTO:-ಸಾರಿಗೆ ಆಯುಕ್ತರ ಮೂಲಕ.
6. ಸರ್ಕಾರದ ಅಧೀನ ಕಾರ್ಯದರ್ಶಿ (ZP), ಹಣಕಾಸು ಇಲಾಖೆ (Exp-11), ವಿಧಾನ ಸೌಧ, ಬೆಂಗಳೂರು.
ಮಾಹಿತಿಗಾಗಿ ನಕಲು:
1. ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
2. ಸರ್ಕಾರದ ಕಾರ್ಯದರ್ಶಿಯವರ ವೈಯಕ್ತಿಕ ಕಾರ್ಯದರ್ಶಿ, ಸಾರಿಗೆ ಇಲಾಖೆ.
3. ಸರ್ಕಾರದ ಉಪ ಕಾರ್ಯದರ್ಶಿ, ಸಾರಿಗೆ ಇಲಾಖೆಗೆ ಪಿಎ
ರೈತ ಬಾಂಧವರ ಗಮನಕ್ಕೆ
ಗದಗ : ಮುಂಡರಗಿ ತಾಲ್ಲೂಕಿನ ರೈತ ಬಾಂಧವರಿಗೆ ಮುಂಡರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತಮ್ಮ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಲು ಕೋರಲಾಗಿದೆ. ತಮ್ಮ ಕೃಷಿ ಉತ್ಪನ್ನಗಳನ್ನು ಸಮಿತಿಯ ಪ್ರಾಂಗಣದಲ್ಲಿ (ಎಪಿಎಂಸಿ) ಇ-ಟೆಂಡರ್ ಮೂಲಕ ಮಾರಾಟ ಮಾಡಿ ಸ್ವರ್ಧಾತ್ಮಕ ಬೆಲೆಯನ್ನು ಪಡೆಯಬೇಕು. ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದಾಗ ದಲ್ಲಾಲಿ (ಕಮಿಷನ್) ನೀಡಬೇಡಿ. ಬಿಳಿ ಚೀಟಿಯನ್ನು ತಿರಸ್ಕರಿಸಿ.
ಅಧಿಕೃತ ಲೆಕ್ಕ ತಿರುವಳಿ ಪಟ್ಟಿಯನ್ನು ಕೇಳಿ ಪಡೆಯಿರಿ. ವಿದ್ಯುನ್ಮಾನ (ಎಲೆಕ್ಟ್ರಾನಿಕ್) ತೂಕದ ಯಂತ್ರದ ಮೂಲಕವೇ ಉತ್ಪನ್ನಗಳನ್ನು ತೂಕ ಮಾಡಿಸಬೇಕು. ತಮ್ಮ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಿದ ತಕ್ಷಣವೇ ಹಣವನ್ನು ಕೇಳಿ ಪಡೆಯಬೇಕು. ಮಾರಾಟದ ಪ್ರಕ್ರಿಯೆಯಲ್ಲಿ ಏನಾದರು ಸಮಸ್ಯೆಗಳು ಉದ್ಭವಿಸಿದಲ್ಲಿ ತಕ್ಷಣವೇ ಸಮಿತಿಯಲ್ಲಿನ ಅಧಿಕಾರಿ/ಸಿಬ್ಬಂದಿಯವರನ್ನು ಸಂಪರ್ಕಿಸಬಹುದಾಗಿದೆ.
ವಿವಿಧ ಯೋಜನೆಗಳಿಗೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ
ಫೆಬ್ರವರಿ16 (ಕರ್ನಾಟಕ ವಾರ್ತೆ) : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ಜರುಗಿತು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ದೇವದಾಸಿ ಪುನರ್ವಸತಿ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆ ಯೋಜನೆ, ಧನಶ್ರೀ ಯೋಜನೆ, ಉದ್ಯೋಗಿನಿ ಯೋಜನೆ, ಚೇತನ ಯೋಜನೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಬಂದ ಅರ್ಜಿಗಳನ್ನು ಇಡಲಾಗಿತ್ತು. ಪ್ರತಿ ಯೋಜನೆಗಳಿಗೆ ನೀಡಲಾದ ಗುರಿಗೆ ಅನುಗುಣವಾಗಿ ಲಾಟರಿ ಮೂಲಕ ಚೀಟಿ ಎತ್ತಿ ಫಲಾನುಭವಿಗಳ ಆಯ್ಕೆ ಮಾಡಲಾಯಿತು.
ದೇವದಾಸಿ ಪುನರ್ವಸತಿ ಯೋಜನೆಯಡಿ ಎಲ್ಲ ತಾಲೂಕು ಸೇರಿ ಒಟ್ಟು 54 ಗುರಿಗೆ ಒಟ್ಟು 262 ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ 125 ತಿರಸ್ಕೃತಗೊಂಡಿದ್ದವು. ಧನಶ್ರೀ ಯೋಜನೆಯಡಿ 68 ಗುರಿ ಇದ್ದು, ಒಟ್ಟು 296 ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ 27 ಅರ್ಜಿ ತಿರಸ್ಕೃತಗೊಂಡಿದ್ದವು. ಉದ್ಯೋಗಿನಿ ಯೋಜನೆಯಡಿ ದಮನಿತ ಮಹಿಳೆ 4 ಗುರಿಗೆ 4 ಅರ್ಜಿ, ಎಚ್.ಐವಿ ಸೋಂಕಿತ ಮಹಿಳೆರಿಂದ 4 ಗುರಿಗೆ 5 ಅರ್ಜಿ ಬಂದಿದ್ದು, ಅದರಲ್ಲಿ 2 ಅರ್ಜಿ ತಿರಸ್ಕೃತಗೊಂಡಿದ್ದವರು. ಲಿಂಗತ್ವ ಅಲ್ಪಸಂಖ್ಯಾತರಿಂದ 1 ಗುರಿಗೆ 15 ಅರ್ಜಿ ಬಂದಿದ್ದು, ಅದರಲ್ಲಿ 9 ತಿರಸ್ಕೃತಗೊಂಡಿದ್ದವು. ಚೇತನ ಯೋಜನೆಯಡಿ ಪರಿಶಿಷ್ಟ ಜಾತಿಗೆ 12 ಗುರಿಗೆ ಸ್ವೀಕೃತಗೊಂಡ 401 ಅರ್ಜಿ ಪೈಕಿ 388 ತಿರಸ್ಕೃತಗೊಂಡರೆ, ಪರಿಶಿಷ್ಟ ಪಂಗಡಕ್ಕೆ 7 ಗುರಿಗೆ 46 ಅರ್ಜಿ ಬಂದಿದ್ದು, 46 ಅರ್ಜಿ ತಿರಸ್ಕೃತಗೊಂಡಿದ್ದವು.
ಇತರೆಯಲ್ಲಿ 19 ಗುರಿಗೆ 298 ಅರ್ಜಿಗಳು ಸ್ವೀಕೃತೊಂಡಿದ್ದು, ಅದರಲ್ಲಿ ಒಂದು ಮಾತ್ರ ಸರಿ ಇದ್ದು, ಉಳಿದವು ತಿರಸ್ಕೃತಗೊಂಡಿವೆ. ಒಟ್ಟಾರೆಯಾಗಿ ಈ ಯೋಜನೆಯಡಿ 38 ಗುರಿಗೆ 745 ಅರ್ಜಿಗಳು ಸ್ವೀಕೃತಗೊಂಡು ಅದರಲ್ಲಿ 14 ಸರಿ ಇದ್ದು ಉಳಿದ 731 ಅರ್ಜಿ ತಿರಸ್ಕೃತಗೊಂಡಿದ್ದವು. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ 36 ಗುರಿಗೆ 44 ಅರ್ಜಿ ಸ್ವೀಕೃತಗೊಂಡು ಅದರಲ್ಲಿ 25 ಸರಿ ಇದ್ದು, 19 ತಿರಸ್ಕೃತಗೊಂಡಿದ್ದವು. ವಿವಿಧ ಯೋಜನೆಗಳ ಆಯ್ಕೆ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅಮರೇಶ ಎಚ್. ಸಮಾಜ ಕಲ್ಯಾನ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಪೊಲೀಸ್, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಿಲನ ಸಂಘದ ಸಮೀರ ಕರ್ಜಗಿ, ಚೈತನ್ಯ ಮಹಿಳಾ ಸಂಘದ ಮಧು ನಡುವಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.