ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾವಯವ ನೈಸರ್ಗಿಕ ವಿಧಾನದಿಂದ ಅಂದರೆ ಗಿಡ ಮೂಲಿಕೆಗಳಿಂದ ಕೀಟ ಮತ್ತು ರೋಗ ನಿಯಂತ್ರಣ ಮಾಡುವ ವಿಧಾನಗಳ ಕುರಿತು, ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
• ಬೆಳೆಗಳಲ್ಲಿ ಕಾಂಡ ಕೊರಕ ಮತ್ತು ಕಾಯಿ ಕೊರಕ ಕೀಟಗಳ ಹತೋಟಿಗಾಗಿ, ಗಿಡಮೂಲಿಕೆಗಳಾದ ನಾಲ್ಕು ಕೆಜಿ ಲೋಳೆಸರ, 500 ಮಿಲಿ ಬೇವಿನ ಎಣ್ಣೆ, 500 ಗ್ರಾಂ ತಂಬಾಕಿನ ಎಲೆ ಬೇಕಾಗುತ್ತವೆ.
• ಮೇಲೆ ತಿಳಿಸಿದ ಮೂರರ ಮಿಶ್ರಣವನ್ನು ಇಪ್ಪತ್ತು ಲೀಟರ್ ನೀರಿನಲ್ಲಿ 5 ಲೀಟರ್ ಆಗುವವರೆಗೂ ಚೆನ್ನಾಗಿ ಕುದಿಸಬೇಕು.• 5 ಲೀಟರ್ ಮಿಶ್ರಣ ತಣ್ಣಗಾದ ನಂತರ, ಇದಕ್ಕೆ 50 ಗ್ರಾಂ ಅಂಟವಾಳಕಾಯಿ ಪುಡಿ ಮತ್ತು 150 ಗ್ರಾಂ ಸೋಪಿನ ಪುಡಿಯನ್ನು ಬೆರೆಸಬೇಕು.
• ನಂತರ ಈ ಮಿಶ್ರಣವನ್ನು 15 ಲೀಟರ್ ನೀರಿನೊಂದಿಗೆ ಬೆರೆಸಿದರೆಗಿಡಮೂಲಿಕೆಗಳ ಕಷಾಯ ತಯಾರಾಗುತ್ತದೆ.
• ಇದರಿಂದ 10 ಮಿಲಿ ತೆಗೆದುಕೊಂಡು ಅದನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ, ಬೆಳೆಗೆ ತಗಲುವ ಕಾಂಡಕೊರಕ ಮತ್ತು ಕಾಯಿ ಕೊರಕ ಕೀಟಗಳು ನಿಯಂತ್ರಣವಾಗುತ್ತವೆ.ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
*ಮೆಣಸಿನಕಾಯಿ ಮತ್ತು ಉಳ್ಳಾಗಡ್ಡಿಗೆ ಬೆಳೆ ವಿಮೆ ತುಂಬಲು ಅಗಸ್ಟ್ 16 ಕೊನೆಯ ದಿನಾಂಕ*
*ಕುರಿ ಹಾಗೂ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ*