Breaking
Wed. Dec 18th, 2024
Spread the love

ಆರ್ಟಿಕಲ್ 32 ರ ಅಡಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೇ ರಿಟ್‌ ಅರ್ಜಿ ಸಲ್ಲಿಸಿತ್ತು. ಸಿದ್ಧರಾಮಯ್ಯ 18,172 ಕೋಟಿ ಬರ ಪರಿಹಾರ ನೀಡಬೇಕು ಎಂದು ಮೋದಿ ಅವರಿಗೆ ಮನವಿ ಮಾಡಿದ್ದರು. ಮೋದಿ 3454 ಕೋಟಿ ರೂ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ.

https://parihara.karnataka.gov.in/service89/PaymentDetailsReport.aspx

ರೈತರಿಂದ ಸಾರ್ವಜನಿಕರಿಗೆ ಉಚಿತ ಈರುಳ್ಳಿ ವಿತರಣೆ

ಕಳೆದ ಹತ್ತುವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಯವುದೇ ತರಹದ ಅನುಕೂಲ ಮಾಡಿಕೊಟ್ಟಿಲ್ಲ. ನಾವು ಸ್ವಾಮಿನಾಥನ್ ವರದಿಯನ್ನು ಯಾಕೆ ಜಾರಿ ಮಾಡಬೇಕು ಎಂದು ಸುದೀರ್ಘ ಹೋರಾಟವನ್ನು ರೈತರು ಮಾಡುತ್ತಿದ್ದಾರೆ. ಈರುಳ್ಳಿ ಬೆಲೆ ಕಡಿಮೆ ಯಾದೊಡನೆ “ಪಾಕಿಸ್ಥಾನ”ದಿಂದ ಈರುಳ್ಳಿ ತರಿಸುತ್ತಾರೆ, ಇದು ಕೇವಲ ಕಮಿಷನ್ ಪಡೆಯಲು ಮಾತ್ರ ಎಂಬುದು ನಮಗೆ ಮನವರಿಕೆ ಯಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ‘ವೀರಸಂಗಯ್ಯ’ ಕೇಂದ್ರ ಸರ್ಕಾರದ ರೈತ ವಿರೋದಿ ನೀತಿಯನ್ನು ಟೀಕಿಸಿದರು.

ಅವರು ಗುರುವಾರ ಪುನಿತ ರಾಜಕುಮಾರ್ ವೃತ್ತದಲ್ಲಿ ರೈತರು ಬೆಳೆದ ಈರುಳ್ಳಿ ಬೆಲೆ ಕಡಿಮೆಯಾಗಿದ್ದು ಅದಕ್ಕೆ ಬೆಂಬಲ ಬೆಲೆ ನೀಡದ ಕೇಂದ್ರ ಸರ್ಕಾರದ ನೀತಿಯನ್ನು ವಿರೋದಿಸಿ ಮಾತನಾಡಿ ಎಂ.ಎಸ್.ಪಿ ಯನ್ನು ನಿಗದಿ ಪಡಿಸಲು ಕೇಳಿದರು ಅದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ, ಕಳೆದ ಹಲವಾರು ವರ್ಷಗಳಿಂದ ಸ್ವಾಮಿನಾಥನ್ ವರದಿ ಕಲ್ಪಿಸಲ್ಲ ಎಂಬುದು ಖಾತ್ರಿಯಾಗಿದೆ ಎಂದು ಹೇಳುತ್ತಾ ನಾವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೆ, ಆಂದ್ರದಲ್ಲಿ ಒಂದು ಕರ್ನಾಟಕದಲ್ಲಿ ಒಂದು ಬೆಲೆ ಸರಿ ಅಲ್ಲ. ಸಾಲಮಾಡಿ ರೈತರು ಪ್ರತಿದಿನ ಮೂರು -ನಾಲ್ಕು ಜನ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರತಿವರ್ಷ ಒಂದು ಲಕ್ಷ ಎಪ್ಪತ್ತೈದು ಸಾವಿರ (175000) ರೈತರು ಸಾವುಗೀಡಾಗುತ್ತಿದ್ದಾರೆ.

ಏ.25 ಮತ್ತು 26 ರಂದು ನೋಂದಾಯಿತ 1853 ಮತದಾರರಿಂದ ಮನೆಯಿಂದ ಮತದಾನ

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನಕ್ಕೆ ನೋಂದಾಯಿಸಿಕೊಂಡಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40 ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಕಲಚೇತನ ಮತದಾರರು ನಾಳೆ చిట్రలో 25 మత్తు ఎప్రిల్ 26 ರಂದು ಮನೆಯಿಂದ ಮತದಾನ ಮಾಡಲಿದ್ದಾರೆ. ಈ ಕುರಿತು ಮಾಹಿತಿಯನ್ನು ನೋಂದಾಯಿತ ಮತದಾರರಿಗೆ ತಲುಪಿಸಲಾಗಿದ್ದು, ಸಿಬ್ಬಂದಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ತಪ್ಪದೇ ಪಾಲಿಸಿಬೇಕು.

ಮತದಾನದ ಗೌಪ್ಯತೆ ಕಾಪಾಡಬೇಕು ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು (ಏ.24) ಬೆಳಿಗ್ಗೆ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸೆಕ್ಟರ್ ಅಧಿಕಾರಿಗಳಿಗೆ, ಅಂಚೆಮತಪತ್ರದ ನೋಡಲ್ ಅಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ, ಭದ್ರತೆಗೆ ನಿಯೋಜಿತ ಪೊಲೀಸ್ ಹಾಗೂ ಬಿಎಓಗಳಿಗೆ ಆಯೋಜಿಸಿದ್ದ ಮನೆಯಿಂದ ಮತದಾನ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ, ಮಾತನಾಡಿದರು. ಏ.25 ಮತ್ತು 26 ರಂದು ಅಧಿಕಾರಿಗಳು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾರನ ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕಾರ್ಯವನ್ನು ಕೈಗೊಳ್ಳಲಿದ್ದಾರೆ.

ಅಧಿಕಾರಿಗಳು ಬ್ಯಾಲೇಟ್ ಪೇಪರದೊಂದಿಗೆ ಮತದಾರನಿಗೆ ಮುಂಚಿತವಾಗಿ ತಿಳಿಸಿರುವ ಸಮಯಕ್ಕೆ. ಅವರ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳುತ್ತಾರೆ. ನೋಂದಾಯಿತ ಮತದಾರ ತಮಗೆ ನೀಡಿದ ಸಮಯಕ್ಕೆ ಸರಿಯಾಗಿ ಮನೆಯಲ್ಲಿ ಇದ್ದು, ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಅವರು ಹೇಳಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಿ, ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಮತದಾನದ ಪೂರ್ಣ ಪ್ರಕ್ರಿಯೆಯನ್ನು ನಿಯಮದಂತೆ ವಿಡಿಯೋ ಚಿತ್ರಿಕರಣ ಮಾಡಬೇಕು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಮನೆಯಿಂದ ಮತದಾನಕ್ಕೆ 1853 ಜನ ನೋಂದಣಿ: ಜಿಲ್ಲೆಯಲ್ಲಿ ಮನೆಯಿಂದ ಮತದಾನಕ್ಕಾಗಿ ಈಗಾಗಲೇ ನವಲಗುಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 156, ವಿಕಲಚೇತನ 83 ಸೇರಿ ಒಟ್ಟು 239 ಮತದಾರರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಕುಂದಗೋಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 69. ವಿಕಲಚೇತನ 32 ಸೇರಿ ಒಟ್ಟು 101 ಮತದಾರರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಧಾರವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 276. ವಿಕಲಚೇತನ 92 ಸೇರಿ ಒಟ್ಟು 368 ಮತದಾರರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಒಟ್ಟು 155 ಮತದಾರರು ಮನೆಯಿಂದ ಮತದಾನಕ್ಕೆ నందాయి నిండిదారీ. ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 203, ವಿಕಲಚೇತನ 32 ಸೇರಿ ಒಟ್ಟು 235 ಮತದಾರರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 272, ವಿಕಲಚೇತನ 46 ಸೇರಿ ಒಟ್ಟು 318 ಮತದಾರರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಕಾರ್ಯಾಗಾರದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಪ್ರಿಯಾಂಗ ಎಂ. ಡಾ.ಈಶ್ವರ ಉಳ್ಳಾಗಡ್ಡಿ, ವಿನೋದಕುಮಾರ ಹೆಗ್ಗಳಗಿ, ರುದ್ರೇಶ ಗಾಳಿ, ದೇವರಾಜ ಆರ್. ಶಾಲಂ ಹುಸೇನ್‌, ತಹಸಿಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ದೊಡ್ಡಪ್ಪ ಹೂಗಾರ, ಬಸವರಾಜ ಬೆಣ್ಣಿಶಿರೂರ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕೈಗೊಳ್ಳಲು ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.

ಭಾರತ ಚುನಾವಣಾ ಆಯೋಗ ಅಂತಮವಾಗಿ ಏಪ್ರಿಲ್ 19, 2024 ರಂದು ಪ್ರಕಟಿಸಿರುವ ಮತದಾರ ಪಟ್ಟಿಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,926 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಗಳು 0 2 18,31.975 ಮತದಾರರಿದ್ದು, ಇವರೆಲ್ಲರೂ ಮೇ 7 ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 47,204 ಜನ ಹೊಸದಾಗಿ ನೋಂದಾಯಿತ ಯುವ ಮತದಾರರು, ವಿಕಲಚೇತನರಾದ 25,787 2 18,626 & 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಮತದಾರ ಪಟ್ಟಿಯಲ್ಲಿದ್ದಾರೆ. ಧಾರವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 25,005 ಯುವಕರು, 22,194 ಯುವತಿಯರು ಮತ್ತು ತೃತೀಯಲಿಂಗ 5 ಸೇರಿ ಒಟ್ಟು 47,204 ಮತದಾರರು ನೋಂದಾಯಿತರಾಗಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 25,787 ವಿಕಲಚೇತನ ಮತದಾರರು: 11-ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 25787 ವಿಕಲಚೇತನ ಮತದಾರರು ನೊಂದಣಿಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದ 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ, 1961 ಮತದಾರರಿದ್ದಾರೆ. 73-ಹುಬ್ಬಳ್ಳಿಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 960 ಪುರುಷರು, 708 ಮಹಿಳೆಯರು, 1 ತೃತೀಯಲಿಂಗ ಸೇರಿ ಒಟ್ಟು 1,669 ಮತದಾರರಿದ್ದಾರೆ. 74- ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 912 ಪುರುಷರು, 722 ಮಹಿಳೆಯರು, ತೃತೀಯಲಿಂಗ ಸೇರಿ ಒಟ್ಟು 1,635 ಮತದಾರರಿದ್ದಾರೆ.

Related Post

Leave a Reply

Your email address will not be published. Required fields are marked *